ಪಾಲಿಕೆಯಿಂದಲೇ ಫಾಗಿಂಗ್‌!


Team Udayavani, Jun 28, 2018, 4:16 PM IST

28-june-15.jpg

ಹುಬ್ಬಳ್ಳಿ: ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಸಾಂಕ್ರಾಮಿಕ ರೋಗಗಳ ತಡೆ ಹಾಗೂ ನಿಯಂತ್ರಿಸುವ ನಿಟ್ಟಿನಲ್ಲಿ ಫಾಗಿಂಗ್‌ ಕಾರ್ಯವನ್ನು ಗುತ್ತಿಗೆ ನೀಡುವ ಬದಲು ಫಾಗಿಂಗ್‌ ಯಂತ್ರಗಳನ್ನೇ ಖರೀದಿಸಲು ಪಾಲಿಕೆ ಮುಂದಾಗಿದೆ. ಪಾಲಿಕೆ ಇಲ್ಲಿಯವರೆಗೆ ಟೆಂಡರ್‌ ಕರೆದು ಗುತ್ತಿಗೆ ನೀಡುತ್ತಿತ್ತು. ಇದರಿಂದ ಸಕಾಲದಲ್ಲಿ ತ್ವರಿತಗತಿಯಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಎಲ್ಲ ತಾಂತ್ರಿಕ ಕಾರಣಗಳನ್ನು ಮನಗಂಡ ಪಾಲಿಕೆ ಫಾಗಿಂಗ್‌ ಯಂತ್ರಗಳನ್ನು ಖರೀದಿಸಲು ಮುಂದಾಗಿದೆ. 

ಕಳೆದ ಮೂರ್‍ನಾಲ್ಕು ವರ್ಷಗಳಿಂದ ಗುತ್ತಿಗೆ ನೀಡಲಾಗುತ್ತಿತ್ತು. ಪ್ರತಿ ಮಳೆಗಾಲ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಸಾಮಾನ್ಯ ಸಭೆಯ ಚರ್ಚಾ ವಿಷಯ. ಫಾಗಿಂಗ್‌ ಯಂತ್ರಗಳು ತಮ್ಮ ವಾರ್ಡ್‌ಗೆ ಬರುವುದಿಲ್ಲ, ಸಾಮಾನ್ಯ ಕಾರ್ಯಕ್ರಮ ಮಾಡುವುದರಿಂದ ಸದುದ್ದೇಶ ಈಡೇರುವುದಿಲ್ಲ, ಪಾಲಿಕೆ ಸದಸ್ಯರು ಸೂಚಿಸಿದ ಪ್ರದೇಶದಲ್ಲಿ ಫಾಗಿಂಗ್‌ ಮಾಡುವುದಿಲ್ಲ ಎಂಬಿತ್ಯಾದಿ ಆರೋಪಗಳು ಪಾಲಿಕೆ ಸದಸ್ಯರಿಂದ ಕೇಳಿ ಬರುತ್ತಿದ್ದವು. ಅದೂ ಅಲ್ಲದೇ ಪಾಲಿಕೆ ಒಡೆತನದ ಎರಡು ವಾಹನ ಆಧಾರಿತ ಹಾಗೂ ಫಾಗಿಂಗ್‌ ಯಂತ್ರಗಳು ದುರಸ್ತಿಯಾಗದಂತಹ ಸ್ಥಿತಿಗೆ ತಲುಪಿವೆ. ಸುಸ್ಥಿಯಲ್ಲಿರುವ ಒಂದೆರೆಡು ಯಂತ್ರಗಳಿಂದ ಮಹಾನಗರದಲ್ಲಿ ಫಾಗಿಂಗ್‌ ಮಾಡುವುದು ಕಷ್ಟ ಸಾಧ್ಯವಾಗಿತ್ತು. ಈ ಎಲ್ಲ ಸಮಸ್ಯೆಗಳನ್ನು ಅರಿತ ಪಾಲಿಕೆ ಆಯುಕ್ತ ಶಕೀಲ್‌ ಅಹ್ಮದ್‌ ಈ ಬಾರಿ ಪಾಲಿಕೆಯಿಂದಲೇ ಫಾಗಿಂಗ್‌ ಯಂತ್ರಗಳ ಖರೀದಿಗೆ ಮುಂದಾಗಿದ್ದಾರೆ.

ಅಲ್ಲದೇ ಈ ಬಾರಿ ಅವಳಿ ನಗರದಲ್ಲಿ ಸಾಕಷ್ಟು ಸಾಂಕ್ರಾಮಿಕ ರೋಗಗಳು ಪತ್ತೆಯಾಗಿರುವುದು ಕೂಡ ಈ ನಿರ್ಧಾರಕ್ಕೆ ಪ್ರಮುಖ ಕಾರಣವಾಗಿದೆ. ಸಾಂಕ್ರಾಮಿಕ ಪ್ರಕರಣಗಳು ಹೆಚ್ಚಾಗಿ ಕಂಡು ಬರುವ ಭಾಗದಲ್ಲಿ ಈ ಫಾಗಿಂಗ್‌ ಯಂತ್ರಗಳು ಬಳಕೆಯಾಗಲಿವೆ. ಫಾಗಿಂಗ್‌ ಯಂತ್ರಗಳ ದರ ಸುಮಾರು 15 ಸಾವಿರ ರೂಪಾಯಿಯಿಂದ 60 ಸಾವಿರ ರೂಪಾಯಿವರೆಗೆ ಇದ್ದು, ಕೊಟೇಶನ್‌ ಪಡೆದು 12 ವಲಯಗಳಿಗೆ ತಲಾ ಒಂದರಂತೆ ಉತ್ತಮ ಗುಣಮಟ್ಟದ ಯಂತ್ರ ಖರೀದಿಸಲು ವಲಯ ಆಯುಕ್ತರಿಗೆ ಸೂಚನೆ ನೀಡಿದೆ. ಅವಶ್ಯ ಬಿದ್ದಲ್ಲಿ ಹೆಚ್ಚಿನ ಯಂತ್ರಗಳನ್ನು ಖರೀದಿಸುವ ಚಿಂತನೆ ಪಾಲಿಕೆಗಿದೆ.

ಗುತ್ತಿಗೆ ದುಬಾರಿ:
 ಫಾಗಿಂಗ್‌ ಮಾಡುವ ಕಾರ್ಯಕ್ಕೆ ಗುತ್ತಿಗೆ ಕರೆದು ಗುತ್ತಿಗೆದಾರರನ್ನು ಅಂತಿಮಗೊಳಿಸಿ ಕಡಿಮೆ ದರ ನಿಗದಿ ಮಾಡಿದ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲು ಒಂದಿಷ್ಟು ದಿನಗಳು ಹಿಡಿಯುವುದು ಸಾಮಾನ್ಯ. ಇದರಿಂದ ಸಕಾಲಕ್ಕೆ ಕಾರ್ಯಾರಂಭ ಮಾಡಲು ಸಾಧ್ಯವಾಗುತ್ತಿರಲಿಲ್ಲ. ತುರ್ತು ಸಂದರ್ಭದಲ್ಲಿ ಇದು ಕಷ್ಟ ಸಾಧ್ಯ. ಹೀಗಾಗಿ ತ್ವರಿತಗತಿಯಲ್ಲಿ ಕೆಲಸ ನಿರ್ವಹಣೆ ಸಾಧ್ಯವಿರಲಿಲ್ಲ. ವಿಳಂಬ ಒಂದು ಕಾರಣವಾದರೆ ಪ್ರತಿ ದಿನಕ್ಕೆ ಒಂದು ಯಂತ್ರಕ್ಕೆ ಸುಮಾರು 2500 ರೂ. ಪಾಲಿಕೆಯಿಂದ ಪಾವತಿ ಮಾಡಬೇಕಿತ್ತು. ಇದರಿಂದ ಪಾಲಿಕೆಗೆ ಸಾಕಷ್ಟು ಹೊರೆಯಾಗುತ್ತಿದೆ.

ಅನುಕೂಲವೇನು?
ಫಾಗಿಂಗ್‌ ಸಾಕಷ್ಟು ವೆಚ್ಚದಾಯಕವಾಗಿದ್ದು, ಪ್ರತಿದಿನ ಒಂದು ಯಂತ್ರದ ಬಳಕೆಗೆ ಸುಮಾರು 2500ರೂ. ಗುತ್ತಿಗೆದಾರರಿಗೆ ಪಾವತಿಸಬೇಕಾಗುತ್ತದೆ. ಇದೀಗ ಪಾಲಿಕೆಯಿಂದಲೇ ಫಾಗಿಂಗ್‌ ಕಾರ್ಯ ನಿರ್ವಹಿಸುವುದರಿಂದ ಪಾಲಿಕೆಗೆ ಒಂದಿಷ್ಟು ಹಣ ಉಳಿತಾಯವಾಗುತ್ತದೆ. ಪ್ರತಿ ವರ್ಷ ಈ ಕಾರ್ಯಕ್ಕೆ ಸುಮಾರು 6-7 ಲಕ್ಷ ರೂ.ಗಳನ್ನು ಗುತ್ತಿಗೆದಾರರಿಗೆ ಪಾವತಿಸುತ್ತಿದ್ದರು. ಇದೀಗ ಖರೀದಿ ಮಾಡಿ ಪಾಲಿಕೆಯಿಂದಲೇ ನಿರ್ವಹಿಸುತ್ತಿರುವುದರಿಂದ ಒಂದು ಯಂತ್ರದಿಂದ ಕನಿಷ್ಠ 1000 ರೂ. ಉಳಿತಾಯವಾಗಲಿದೆ. ಸಾಂಕ್ರಾಮಿಕ ರೋಗದ ಲಕ್ಷಣಗಳು ಕಂಡು ಬರುವ ಪ್ರದೇಶಕ್ಕೆ ಹೆಚ್ಚು ಒತ್ತು ನೀಡಬಹುದಾಗಿದೆ. ಸಕಾಲಕ್ಕೆ ಸಮರ್ಪಕವಾಗಿ ಯಂತ್ರಗಳ ಬಳಕೆ ಸಾಧ್ಯವಾಗಲಿದೆ ಎನ್ನುವುದು ಪಾಲಿಕೆ ಅಧಿಕಾರಿಗಳ ಅಭಿಪ್ರಾಯ.

ತ್ವರಿತಗತಿಯಲ್ಲಿ ಕಾರ್ಯ ನಿರ್ವಹಿಸುವ ನಿಟ್ಟಿನಲ್ಲಿ ವಲಯವಾರು ಫಾಗಿಂಗ್‌ ಯಂತ್ರಗಳನ್ನು ಖರೀದಿಸುವಂತೆ ಸೂಚಿಸಿದ್ದೇನೆ. ಸಂಬಂಧಿಸಿದ ಕಂಪನಿಗಳಿಂದ ಕೊಟೇಶನ್‌ ಪಡೆದು ಉತ್ತಮ ಗುಣಮಟ್ಟದ ಯಂತ್ರ ಖರೀದಿಸಿ ವಲಯ ಕಚೇರಿಗಳಿಂದಲೇ ನಿರ್ವಹಿಸಬೇಕು. ಗುತ್ತಿಗೆ ನೀಡುವುದರಿಂದ ಒಂದಿಷ್ಟು ದುಬಾರಿ ಆಗುತ್ತಿತ್ತು. ತುರ್ತು ಸಂದರ್ಭದಲ್ಲಿ ಇದು ಕಷ್ಟ ಸಾಧ್ಯವಾದ ಹಿನ್ನೆಲೆಯಲ್ಲಿ ಫಾಗಿಂಗ್‌ ಯಂತ್ರ ಖರೀದಿಸಲು ಮುಂದಾಗಿದ್ದೇವೆ.
 ಶಕೀಲ್‌ ಅಹ್ಮದ್‌, ಪಾಲಿಕೆ ಆಯುಕ್ತ 

ಹೇಮರಡ್ಡಿ ಸೈದಾಪುರ

ಟಾಪ್ ನ್ಯೂಸ್

Tamilnadu: ಫೆಂಗಲ್‌ ಚಂಡಮಾರುತದ ಅಬ್ಬರ-ಚೆನ್ನೈ ವಿಮಾನ ನಿಲ್ದಾಣ ಬಂದ್‌, ರೆಡ್‌ ಅಲರ್ಟ್

Tamilnadu: ಫೆಂಗಲ್‌ ಚಂಡಮಾರುತದ ಅಬ್ಬರ-ಚೆನ್ನೈ ವಿಮಾನ ನಿಲ್ದಾಣ ಬಂದ್‌, ರೆಡ್‌ ಅಲರ್ಟ್

12-uv-fusion

UV Fusion: ಕಳಿಯಾಟಂ – ದೈವಗಳ ಆಂತರಿಕ ಶಕ್ತಿ ರೂಪ

One man is the reason I left Congress: Ramesh Jarkiholi taunts DK Shivakumar

Belagavi: ನಾನು ಕಾಂಗ್ರೆಸ್ ಬಿಡಲು ಒಬ್ಬ ಮನುಷ್ಯ ಕಾರಣ: ರಮೇಶ್‌ ಜಾರಕಿಹೊಳಿ

Bangladesh: ಚಿನ್ಮಯ್ ಕೃಷ್ಣ ದಾಸ್ ಸೇರಿ 17 ಮಂದಿಯ ಬ್ಯಾಂಕ್ ಖಾತೆ ಸ್ಥಗಿತಕ್ಕೆ ಆದೇಶ

Bangladesh: ಚಿನ್ಮಯ್ ಕೃಷ್ಣ ದಾಸ್ ಸೇರಿ 17 ಮಂದಿಯ ಬ್ಯಾಂಕ್ ಖಾತೆ ಸ್ಥಗಿತಕ್ಕೆ ಆದೇಶ

Moral Story: ಸೋಮಾರಿ ಅರಿತ ಸಮಯದ ಬೆಲೆ

Moral Story: ಸೋಮಾರಿ ಅರಿತ ಸಮಯದ ಬೆಲೆ

ನಮ್ಮ ನಾಯಕರ ತೇಜೋವಧೆಗೆ ಯತ್ನಿಸಿದರೆ ಒಟ್ಟಾಗಿ ಎದುರಿಸುತ್ತೇವೆ: ಎಚ್.ಕೆ.ಪಾಟೀಲ

Hubli: ನಮ್ಮ ನಾಯಕರ ತೇಜೋವಧೆಗೆ ಯತ್ನಿಸಿದರೆ ಒಟ್ಟಾಗಿ ಎದುರಿಸುತ್ತೇವೆ: ಎಚ್.ಕೆ.ಪಾಟೀಲ

Desi Swara: ಅವ – ಇವ ಎಂಬ ಮಾತುಗಳ ಅವಯವ : ಪದಗಳ ವನ್ಯಲೋಕದಲ್ಲಿ

Desi Swara: ಅವ – ಇವ ಎಂಬ ಮಾತುಗಳ ಅವಯವ : ಪದಗಳ ವನ್ಯಲೋಕದಲ್ಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ನಾಯಕರ ತೇಜೋವಧೆಗೆ ಯತ್ನಿಸಿದರೆ ಒಟ್ಟಾಗಿ ಎದುರಿಸುತ್ತೇವೆ: ಎಚ್.ಕೆ.ಪಾಟೀಲ

Hubli: ನಮ್ಮ ನಾಯಕರ ತೇಜೋವಧೆಗೆ ಯತ್ನಿಸಿದರೆ ಒಟ್ಟಾಗಿ ಎದುರಿಸುತ್ತೇವೆ: ಎಚ್.ಕೆ.ಪಾಟೀಲ

Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!

Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

bellad

Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನ‌ಪ್ಪನವರ ವಿರುದ್ದ ಬೆಲ್ಲದ್‌ ಟೀಕೆ

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

15-uv-fusion

UV Fusion: ಬಾಂಧವ್ಯ ಬೆಸೆಯುವ ಹಬ್ಬಗಳ ಆಚರಣೆ

Tamilnadu: ಫೆಂಗಲ್‌ ಚಂಡಮಾರುತದ ಅಬ್ಬರ-ಚೆನ್ನೈ ವಿಮಾನ ನಿಲ್ದಾಣ ಬಂದ್‌, ರೆಡ್‌ ಅಲರ್ಟ್

Tamilnadu: ಫೆಂಗಲ್‌ ಚಂಡಮಾರುತದ ಅಬ್ಬರ-ಚೆನ್ನೈ ವಿಮಾನ ನಿಲ್ದಾಣ ಬಂದ್‌, ರೆಡ್‌ ಅಲರ್ಟ್

14-uv-fusion

UV Fusion: ಮೊದಲು ನಾವು ಕನ್ನಡಿಗರಾಗೋಣ..!

13-tulsi

Tulsi Pooja: ತುಳಸಿ ಪೂಜೆ ಹಿನ್ನೆಲೆ ಏನು ಗೊತ್ತಾ?

12-uv-fusion

UV Fusion: ಕಳಿಯಾಟಂ – ದೈವಗಳ ಆಂತರಿಕ ಶಕ್ತಿ ರೂಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.