ರೈತಪರ ಕೃಷಿ ಸಂಶೋಧನೆ ಹೆಚ್ಚಲಿ: ಡಾ|ಮಹಾಪಾತ್ರ
•ಧಾರವಾಡ ಕೃಷಿ ವಿವಿ 32ನೇ ಘಟಿಕೋತ್ಸವ •1029 ವಿದ್ಯಾರ್ಥಿಗಳಿಗೆ ವಿವಿಧ ಪದವಿ ಪ್ರದಾನ•43 ಬಂಗಾರದ ಪದಕಕ್ಕೆ ಭಾಜನ
Team Udayavani, Jun 18, 2019, 7:16 AM IST
ಧಾರವಾಡ: ಕೃಷಿ ವಿವಿ ಘಟಿಕೋತ್ಸವದಲ್ಲಿ ದೆಹಲಿಯ ಕೃಷಿ ಅನುಸಂಧಾನ ಪರಿಷತ್ ಮಹಾನಿರ್ದೇಶಕ ಡಾ| ತ್ರಿಲೋಚನ ಮಹಾಪಾತ್ರ ಮಾತನಾಡಿದರು.
ಧಾರವಾಡ: ಹಳ್ಳಿಯಲ್ಲಿರುವ ಸಣ್ಣ ರೈತರಿಗೆ ಅನುಕೂಲವಾಗುವ ಕೃಷಿ ಸಂಶೋಧನೆಗಳನ್ನು ನಡೆಸುವ ಮೂಲಕ ಕೃಷಿ ವಿಜ್ಞಾನಿಗಳು ಮತ್ತು ಪದವೀಧರರು ರೈತರ ಬೆಳವಣಿಗೆಗೆ ಶ್ರಮಿಸಬೇಕು ಎಂದು ಭಾರತ ಸರ್ಕಾರದ ಕೃಷಿ ಸಂಶೋಧನೆ ಹಾಗೂ ಶಿಕ್ಷಣ ವಿಭಾಗದ ಕಾರ್ಯದರ್ಶಿ ಮತ್ತು ದೆಹಲಿಯ ಕೃಷಿ ಅನುಸಂಧಾನ ಪರಿಷತ್ ಮಹಾನಿರ್ದೇಶಕ ಡಾ|ತ್ರಿಲೋಚನ ಮಹಾಪಾತ್ರ ಹೇಳಿದರು.
ಇಲ್ಲಿನ ಕೃಷಿ ವಿವಿ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಸೋಮವಾರ ನಡೆದ 32ನೇ ಘಟಿಕೋತ್ಸವದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಅವರು, ಕೃಷಿಯಲ್ಲಿ ಪಡೆದ ಉತ್ತಮ ಶಿಕ್ಷಣದಿಂದ ಪ್ರತಿಭಾವಂತರು ದೇಶಕ್ಕೆ, ಜಗತ್ತಿಗೆ ಹೊಸ ಕೃಷಿ ತಳಿಗಳನ್ನು ಸಂಶೋಧಿಸಿ ಪರಿಚಯಿಸಬೇಕು. 2017ರಲ್ಲಿ ಧಾರವಾಡ ಕೃಷಿ ವಿವಿಗೆ ದೇಶದ ಉತ್ತಮ ಕೃಷಿ ವಿವಿ ಎಂಬ ಪ್ರಶಸ್ತಿ ಬಂದಿದೆ. ಇಂತಹ ಪ್ರತಿಷ್ಠಿತ ಸಂಸ್ಥೆಯಲ್ಲಿ ದೇಶದ ರೈತರಿಗೆ ಒಳಿತು ಮಾಡುವ ಸಂಶೋಧನೆಗಳು ಪರಿಣಾಮಕಾರಿಯಾಗಿ ನಡೆಯಬೇಕು ಎಂದು ಹೇಳಿದರು.
ಎಲ್ಲ ಕೃಷಿ ವಿಜ್ಞಾನಿಗಳು ಒಗ್ಗಟ್ಟಿನಿಂದ ವೈವಿಧ್ಯಮಯ ಆಹಾರ ಸಂಸ್ಕೃತಿಯನ್ನು ಉತ್ತಮ ಪಡಿಸಬೇಕು. ಅವುಗಳಲ್ಲಿ ಮಾರುಕಟ್ಟೆಗಳ ವ್ಯವಸ್ಥೆ ಹೆಚ್ಚಾಗಬೇಕು. ನಮ್ಮಲ್ಲಿ ಸಾಕಷ್ಟು ಮಾನವ ಸಂಪನ್ಮೂಲಗಳಿವೆ. ಕೊಯ್ಲೋತ್ತರ ಕೃಷಿ ಚಟುವಟಿಕೆಗಳಿಗೆ ಪರಿಸರ ಸ್ನೇಹಿ ತಂತ್ರಜ್ಞಾನವನ್ನು ಕೂಡ ಅಳವಡಿಸಿಕೊಳ್ಳಬೇಕೆಂದರು.
ಸರ್ಕಾರ ರೈತರ ಬೆನ್ನಿಗಿದೆ: ಬರಗಾಲ, ಅಂತರ್ಜಲ ಕುಸಿತ ರೈತ ಸಮುದಾಯದಲ್ಲಿ ತಳಮಳ ಸೃಷ್ಟಿಸಿದೆ. ಇದೆಲ್ಲವನ್ನು ಪರಿಗಣಿಸಿಯೇ ಭಾರತ ಸರ್ಕಾರ ರೈತರಿಗೆ ಅನೇಕ ಯೋಜನೆಗಳ ಮೂಲಕ ಅವರ ಆದಾಯವನ್ನು 2022ರ ಒಳಗಾಗಿ ದ್ವಿಗುಣಗೊಳ್ಳುವಂತೆ ಯೋಜಿಸಿದೆ. ಕೃಷಿಯಲ್ಲಿ ಕಡಿಮೆ ಜಾಗದಲ್ಲಿ ಹೆಚ್ಚಿನ ಇಳುವರಿ ಬರುವ ತಳಿಗಳು ಮತ್ತು ತಂತ್ರಜ್ಞಾನಗಳನ್ನು ಕೃಷಿ ವಿಜ್ಞಾನಿಗಳು ಕೊಡುಗೆಯಾಗಿ ನೀಡಬೇಕಿದೆ ಎಂದು ಮಹಾಪಾತ್ರ ಹೇಳಿದರು.
ನೀರಿನ ಮಿತಬಳಕೆ ಅಗತ್ಯ: ಹನಿ ಹನಿ ನೀರು ಕೂಡ ಮುಖ್ಯ ಎನಿಸುತ್ತಿದೆ. ಹೀಗಾಗಿ ಕೃಷಿಯಲ್ಲಿ ಹನಿ ನೀರಾವರಿ ಮತ್ತು ಅದರ ಬಳಕೆ ತಂತ್ರಗಳಲ್ಲಿ ಸಾಕಷ್ಟು ಅನ್ವೇಷಣೆಗಳು ನಡೆಯಬೇಕಿದೆ. 2050ಕ್ಕೆ ಕೃಷಿಗೆ ಪೂರೈಕೆಯಾಗುತ್ತಿರುವ ನೀರಿನ ಪ್ರಮಾಣದಲ್ಲಿ ಸಾಕಷ್ಟು ಕುಸಿತ ಉಂಟಾಗಲಿದ್ದು, ರೈತರು ಈಗಿನಿಂದಲೇ ಎಚ್ಚರಿಕೆ ವಹಿಸಬೇಕಿದೆ. ಸದ್ಯಕ್ಕೆ ಕೈಗಾರಿಕೆ, ನಗರಗಳು ಮತ್ತು ಕೊಳಚೆ ಪ್ರದೇಶಗಳಿಂದ ಹೊರಬರುವ ಕೊಳಚೆ ನೀರನ್ನೇ ಶುದ್ಧೀಕರಿಸಿ ಮರುಬಳಕೆ ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಇದನ್ನು ಪರಿಪೂರ್ಣವಾಗಿ ಬಳಸಿಕೊಂಡಲ್ಲಿ ಕೃಷಿಯ ಶೇ.30 ಭೂಮಿಗೆ ಇದೇ ನೀರನ್ನು ಬಳಸಿಕೊಳ್ಳಲು ಸಾಧ್ಯವಿದೆ ಎಂದು ಡಾ| ಮಹಾಪಾತ್ರ ಸಲಹೆ ನೀಡಿದರು.
ಕೃಷಿ ಸಚಿವ ಎನ್.ಎಚ್. ಶಿವಶಂಕರರೆಡ್ಡಿ ಅವರು ಪದವೀಧರರಿಗೆ ಪ್ರತಿಜ್ಞಾವಿಧಿ ಬೋಧಿಸಿ, ಪದವಿಗಳ ಘನತೆಗೆ ತಕ್ಕಂತೆ ವರ್ತಿಸುವ ಸಲಹೆ ನೀಡಿದರು. ವಿವಿ ಕುಲಪತಿ ಡಾ| ಮಹದೇವ ಬಿ. ಚೆಟ್ಟಿ ವಾರ್ಷಿಕ ವರದಿ ವಾಚಿಸಿ, ವಿವಿಯ ಸಾಧನೆಗಳನ್ನು ವಿವರಿಸಿದರು. ಶಾಸಕ ಪ್ರಸಾದ ಅಬ್ಬಯ್ಯ, ಕುಲಸಚಿವ ಪಿ.ಯು. ಕೃಷ್ಣರಾಜ, ಸಂಶೋಧನಾ ನಿರ್ದೇಶಕ ಡಾ| ಎಚ್.ಎಲ್. ನದಾಫ್, ವಿಸ್ತರಣಾ ನಿರ್ದೇಶಕ ಎಚ್. ವೆಂಕಟೇಶ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು, ವಿವಿಧ ನಿಖಾಯಗಳ ಡೀನ್‌ಗಳು ವೇದಿಕೆಯಲ್ಲಿದ್ದರು.
ಪಶ್ಚಿಮಘಟ್ಟ ಆಧರಿಸಿ ಕೃಷಿ ಸಂಶೋಧನೆ ನಡೆಸಿ:
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.