ಸೆ.18ರಿಂದ “ನರಗುಂದ ಬಂಡಾಯ’ ಚಿತ್ರೀಕರಣ
Team Udayavani, Aug 15, 2017, 11:57 AM IST
ಹುಬ್ಬಳ್ಳಿ: “ನರಗುಂದ ಬಂಡಾಯ’ ಚಲನಚಿತ್ರ ಕಳಸಾ-ಬಂಡೂರಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಿದೆ ಎಂದು ಚಿತ್ರ ನಿರ್ದೇಶಕ ನಾಗೇಂದ್ರ ಮಾಗಡಿ ಹೇಳಿದರು. ಸೋಮವಾರ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಚಲನಚಿತ್ರ ರೈತರ ಹೋರಾಟವನ್ನು ಇನ್ನಷ್ಟು ಬಲಗೊಳಿಸುವುದು.
ನರಗುಂದ ಬಂಡಾಯ ಚಿತ್ರದ ಚಿತ್ರೀಕರಣ ಸೆಪ್ಟೆಂಬರ್ 18ರಿಂದ ಆರಂಭಗೊಳ್ಳಲಿದೆ. ನರಗುಂದ, ನವಲಗುಂದ ತಾಲೂಕಿನ ಗ್ರಾಮಗಳಲ್ಲಿ ಚಿತ್ರೀಕರಿಸಲಾಗುವುದು. ನವೆಂಬರ್ ಕೊನೆ ವಾರದಲ್ಲಿ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಚಿತ್ರ ಬಿಡುಗಡೆಗೊಳ್ಳಲಿದೆ ಎಂದರು.
ರೈತರು ಹೋರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಹುತಾತ್ಮನಾದ ವೀರಪ್ಪ ಕಡ್ಲಿಕೊಪ್ಪ ಎಂಬ ಯುವಕನ ಕಥೆಯನ್ನಾಧರಿಸಿ ಚಿತ್ರ ಮಾಡಲಾಗುವುದು. ಉತ್ತರ ಕರ್ನಾಟಕದ ಭಾಷೆಯಲ್ಲಿ ಚಿತ್ರ ಮಾಡಲಾಗುವುದು. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಯಶೋವರ್ಧನ್ ಸಂಗೀತ ನೀಡಿದ್ದಾರೆ ಎಂದು ತಿಳಿಸಿದರು.
ನಾನು ನವಲಗುಂದ ತಾಲೂಕಿನವನಾಗಿದ್ದರಿಂದ ಇಲ್ಲಿ ನಡೆದ ರೈತ ಹೋರಾಟದ ಬಗ್ಗೆ ನನಗೆ ಗೊತ್ತಿದೆ. ರೈತ ಮುಖಂಡರ ಅಭಿಪ್ರಾಯ ಪಡೆದು ಹೋರಾಟ ಕಟ್ಟಿಕೊಡಲಾಗುವುದು. ಚಿತ್ರವನ್ನು 2.60 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.
ನಾಯಕ ನಟನಾಗಿ ರಕ್ಷಿತ್, ನಟಿಯಾಗಿ ಶುಭಾ ಪೂಂಜಾ ಅಭಿನಯಿಸಲಿದ್ದಾರೆ ಎಂದು ತಿಳಿಸಿದರು. ನಟ ರಕ್ಷಿತ್ ಮಾತನಾಡಿ, ನನಗೆ ಇದೊಂದು ಒಳ್ಳೆ ಅವಕಾಶವಾಗಿದ್ದು, ಉತ್ತರ ಕರ್ನಾಟಕದ ಭಾಷೆಯಲ್ಲಿ ಮಾತನಾಡುವ ಮೂಲಕ ಪಾತ್ರಕ್ಕೆ ನ್ಯಾಯ ಒದಗಿಸುತ್ತೇನೆ ಎಂದರು.
ನಟಿ ಶುಭಾ ಪೂಂಜಾ ಮಾತನಾಡಿ, ಚಿತ್ರದಲ್ಲಿ ನಟಿಯೊಬ್ಬಳು ಬೇಕು ಎಂಬ ಕಾರಣಕ್ಕೆ ನನಗೆ ಅವಕಾಶ ನೀಡಿಲ್ಲ. ಚಿತ್ರದಲ್ಲಿ ನನ್ನ ಪಾತ್ರಕ್ಕೂ ಪ್ರಾಧಾನ್ಯತೆಯಿದೆ. ಮುಗª ಹೆಣ್ಣುಮಗಳು ಹೋರಾಟದ ಭಾಗವಾಗುವ ಪಾತ್ರ ಇದಾಗಿದೆ. ಒಳ್ಳೆ ಚಿತ್ರ ಇದಾಗಿದೆ ಎಂದು ತಿಳಿಸಿದರು. ನಿರ್ಮಾಪಕ ಸಿದ್ದೇಶ ವಿರಕ್ತಮಠ, ರೈತ ಹೋರಾಟಗಾರ ವಿಜಯ ಕುಲಕರ್ಣಿ, ಶಿವಾನಂದ ಮುತ್ತಣ್ಣವರ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.