ಎಚ್ಚರ: ರಾಜ್ಯಕ್ಕೂ ಕಾಲಿಟ್ಟಿದೆ ಬ್ಲೂವೇಲ್ , ಕೈ ಕುಯ್ದುಕೊಂಡ ಪೋರಿ!
Team Udayavani, Aug 25, 2017, 11:01 AM IST
ಹುಬ್ಬಳ್ಳಿ: ಸಾಮಾಜಿಕ ಜಾಲತಾಣಗಳ ನೆರವಿನಿಂದ ಆಡುವ ಬ್ಲೂವೇಲ್ ಸೂಸೈಡ್ ಚಾಲೆಂಜ್ ಗೇಮ್ ಇದೀಗ ರಾಜ್ಯಕ್ಕೂ ಕಾಲಿಟ್ಟಿದೆ. ಈಗಾಗಲೇ ಜಗತ್ತಿನಾದ್ಯಂತ ಹಲವು ಜೀವಗಳನ್ನು ಬಲಿ ಪಡೆದಿರುವ ಈ ಡೆಡ್ಲಿ ಚಾಲೆಂಜ್ ಗೇಮ್ ರಾಜ್ಯಕ್ಕೂ ಕಾಲಿಟ್ಟಿರುವುದು ಕಳವಳಕಾರಿ.
ಹುಬ್ಬಳ್ಳಿಯಲ್ಲಿ 11 ವರ್ಷದ ಬಾಲಕಿಯೊಬ್ಬಳು ಬ್ಲೂವೇಲ್ ಗೇಮ್ ಆಡುತ್ತಾ ಬೆರಳು ಕುಯ್ದುಕೊಂಡ ಘಟನೆ ರಾಜನಗರದಲ್ಲಿ ನಡೆದಿರುವುದಾಗಿ ಮಾಧ್ಯಮಗಳ ವರದಿ ತಿಳಿಸಿದೆ. ಈಕೆ ಮನೆಯಲ್ಲಿಯೇ ಬೆರಳನ್ನು ಕುಯ್ದುಕೊಂಡು ನೇರ ಶಾಲೆಗೆ ಬಂದಿದ್ದು, ಇದನ್ನು ಸಹಪಾಠಿಗಳು, ಶಿಕ್ಷಕರ ಗಮನಕ್ಕೆ ತಂದಿರುವುದಾಗಿ ವರದಿ ವಿವರಿಸಿದೆ.
ಬಳಿಕ ಶಿಕ್ಷಕರು ವಿದ್ಯಾರ್ಥಿನಿಯನ್ನು ಕರೆದು ವಿಚಾರಿಸಿದಾಗ ಬ್ಲೂವೇಲ್ ಗೇಮ್ ವಿಷಯ ಬಾಯ್ಬಿಟ್ಟಿದ್ದಾಳೆ. ತದನಂತರ ಶಿಕ್ಷಕರು ವಿದ್ಯಾರ್ಥಿನಿಯ ಪೋಷಕರನ್ನು ಕರೆಯಿಸಿ ಪ್ರಾಣಕ್ಕೆ ಕುತ್ತು ತರುವ ಬ್ಲೂವೇಲ್ ಸೂಸೈಡ್ ಚಾಲೆಂಜ್ ಗೇಮ್ ಬಗ್ಗೆ ಮಾಹಿತಿ ನೀಡಿರುವುದಾಗಿ ವರದಿ ತಿಳಿಸಿದೆ. ಅಲ್ಲದೇ ಕೂಡಲೇ ಪೋಷಕರ ಸಭೆ ಕರೆದು ಬ್ಲೂವೇಲ್ ಗೇಮ್ ಕುರಿತು ಜಾಗೃತಿ ಮೂಡಿಸಲು ನಿರ್ಧರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Hubli: ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
Weather: ರಾಜ್ಯದ ಮೂರು ನಗರದಲ್ಲಿ ಹವಾಮಾನ ರಾಡಾರ್ ಸ್ಥಾಪನೆ: ಕೇಂದ್ರ ಸಚಿವ ಜೋಶಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.