ಕಿತ್ತು ಹೋದ ಶಾಲಾ ಕೊಠಡಿ ಚಾವಣಿಗೆ ಮೊದ್ಲು ಸಿಮೆಂಟ್ ಹಾಕ್ರಿ..!
Team Udayavani, Jul 1, 2018, 4:58 PM IST
ಬೀಳಗಿ: ಜಿಪಂ ಅನುದಾನದಲ್ಲಿ ನಿರ್ಮಿತ ಕೇಂದ್ರ ಅಧಿಕಾರಿಗಳು ಪಟ್ಟಣದ ಬಾಲಕಿಯರ ಸರಕಾರಿ ಪ್ರಾಥಮಿಕ ಶಾಲೆಯ ಆರು ಕೊಠಡಿಗಳ ರಿಪೇರಿಯನ್ನು 6 ಲಕ್ಷ, ವೆಚ್ಚದಲ್ಲಿ ಕೈಗೆತ್ತಿಕೊಂಡಿದ್ದಾರೆ. ಆದರೆ, ದುರಸ್ತಿ ಮಾಡಬೇಕಾದ ಕೊಠಡಿಯ ಛಾವಣಿಯ ಕೆಳ ಭಾಗದ ಸಿಮೆಂಟ್ ಕಿತ್ತುಹೋಗಿ
ಚಾವಣಿಯ ಕಬ್ಬಿಣ ಕಾಣಿಸುತ್ತಿವೆ. ಕೊಠಡಿಯ ಸಂಪೂರ್ಣ ಚಾವಣಿ ದುರಸ್ತಿ ತಲೆ ಕೆಡಿಸಿಕೊಳ್ಳದ ಅಧಿಕಾರಿಗಳು ಚಾವಣಿ ಮೇಲೆ ಮಾತ್ರ ಕಾಂಕ್ರೀಟ್ ಹಾಕಲು ಮುಂದಾಗಿರುವುದಕ್ಕೆ ಸ್ಥಳೀಯ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಪಂನ 6 ಲಕ್ಷ ಅನುದಾನದಲ್ಲಿ 6 ಕೊಠಡಿಗಳ ದುರಸ್ತಿ ಕಾಮಗಾರಿಯನ್ನು ನಿರ್ಮಿತ ಕೇಂದ್ರಕ್ಕೆ ವಹಿಸಿ ಹಣ ಕೂಡ ಬಿಡುಗಡೆಯಾಗಿದೆ. ಶಾಲೆಯ ಕೊಠಡಿಗಳ ದುರಸ್ತಿ ಕಾಮಗಾರಿ ಪ್ರಾರಂಭವಾಗಿ ತಿಂಗಳು ಗತಿಸಿದೆ. ಆದರೆ, ಈವರೆಗೆ ಕಾಮಗಾರಿ ವಹಿಸಿಕೊಂಡ ನಿರ್ಮಿತ ಕೇಂದ್ರದ ಅ ಧಿಕಾರಿಗಳು ಸಂಬಂ ಧಿಸಿದ ಶಾಲೆಯ ಮುಖ್ಯೋಪಾಧ್ಯಾಯರಿಗೆ ಕಾಮಗಾರಿಯ ಅಂದಾಜು ಪತ್ರಿಕೆ ಕೊಡದೆ ಕಾಮಗಾರಿ ಪ್ರಾರಂಭಿಸಿದ್ದಾರೆ. ಅಂದಾಜು ಪತ್ರಿಕೆ ಕೇಳಿದರೂ ಕೂಡ ಅಧಿ ಕಾರಿಗಳು ಕೊಡುತ್ತಿಲ್ಲ ಎಂದು ಶಾಲಾ ಮುಖ್ಯೋಪಾಧ್ಯಾಯರು ದೂರಿದ್ದಾರೆ. ಶಾಲಾ ಕೊಠಡಿಗಳ ಚಾವಣಿ ಕೆಳ ಭಾಗದ ಕಾಂಕ್ರೀಟ್ ಬಿಚ್ಚಿ ಬೀಳುತ್ತಿದೆ. ಮೊದಲು ಕೆಳ ಭಾಗದಲ್ಲಿ ರಿಪೇರಿ ಮಾಡಿ ಎಂದು ಕೇಳಿಕೊಂಡರು, ನಿರ್ಮಿತ ಕೇಂದ್ರದ ಅಧಿಕಾರಿಗಳು ಮನವಿ ಲೆಕ್ಕಿಸದೆ ಕೇವಲ ಚಾವಣಿ ಮೇಲೆ ಅದೂ ಮಣ್ಣು ಮಿಶ್ರಿತ ಮರಳು ಬಳಸಿ ಕಳಪೆ ಕಾಂಕ್ರೀಟ್ ಹಾಕುತ್ತಿದ್ದಾರೆ. ಇದು ಇನ್ನೂ ಅಪಾಯದ ಕೆಲಸ ಎಂದು ಮುಖ್ಯೋಪಾಧ್ಯಾಯ ಎಸ್.ಎಂ. ಬಾವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚಾವಣಿ ಮೇಲಿನ ಹಳೆಯ ಕಾಂಕ್ರೀಟ್ ಬಿಚ್ಚದೆ ಹಾಗೆ ಸಿಮೆಂಟ್ ಹಾಕುತ್ತಿರುವುದಾದರೂ ಎಷ್ಟು ಸರಿ? ಚಾವಣಿಯ ಮೇಲ್ಭಾಗ ಅರ್ಧದಷ್ಟು ಕಾಂಕ್ರೀಟ್ ಈಗಾಗಲೇ ಹಾಕಲಾಗಿದೆ. ಕಾಮಗಾರಿಯನ್ನು ಯೋಜನಾ ವರದಿಯಂತೆ ಮಾಡಬೇಕು. ಅವೈಜ್ಞಾನಿಕ ಕಾಮಗಾರಿಗೆ ನಮ್ಮ ಸಮ್ಮತಿಯಿಲ್ಲ. ಇಲ್ಲಿ ನೂರಾರು ಮಕ್ಕಳು ಓದುತ್ತಾರೆ. ನಾಳೆ ಏನಾದರೂ ಹೆಚ್ಚು ಕಮ್ಮಿಯಾದರೆ ಯಾರು ಹೊಣೆ? ಕೂಡಲೇ ಕಾಮಗಾರಿ ಮರಳಿ ಸರಿಪಡಿಸಬೇಕೆಂದು ದೂರವಾಣಿ ಮೂಲಕ ನಿರ್ಮಿತ ಕೇಂದ್ರದ ಅಧಿಕಾರಿಗಳಿಗೆ ಒತ್ತಾಯಿಸಿದ್ದೇವೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೂ ತಂದಿದ್ದೇವೆ ಎಂದು ಮುಖ್ಯೋಪಾಧ್ಯಾಯ ಎಸ್.ಎಂ.ಬಾವಿ ಹೇಳಿದರು.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿರುವೆ. ಸ್ಲ್ಯಾಬ್ ಎರಡೂ ಭಾಗ ದುರಸ್ತಿಯಾಗಬೇಕು. ಕೇವಲ ಮೇಲ್ಭಾಗದ ಕಾಂಕ್ರೀಟ್‌ನಿಂದ ಉಪಯೋಗವಿಲ್ಲ. ಈ ಕುರಿತು ತಿಳಿ ಹೇಳಿದರೂ ಉಪ ಗುತ್ತಿಗೆದಾರ ಮಾತು ಕೇಳಲಿಲ್ಲ. ಹಾಗಾಗಿ ಕಾಮಗಾರಿ ಸ್ಥಗಿತಗೊಳಿಸಲು ಸೂಚಿಸಿರುವೆ.
ಎಸ್.ಎಸ್.ಕೆಳದಿಮಠ, ಬಿಇಒ ಬೀಳಗಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್ ನಿಂದ ಹಲ್ಲೆ
Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ
By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್ ವೈ
MUST WATCH
ಹೊಸ ಸೇರ್ಪಡೆ
New Zealand: ತವರಿನಂಗಳದಲ್ಲೇ ಟೆಸ್ಟ್ ನಿವೃತ್ತಿಗೆ ಸೌಥಿ ನಿರ್ಧಾರ
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.