ಗಡಿ ಭಾಗದಲ್ಲಿ ಕಮಲ ಅರಳಿಸಿ
Team Udayavani, May 10, 2018, 5:34 PM IST
ಚಿಕ್ಕೋಡಿ: ಇಡೀ ರಾಜ್ಯದಲ್ಲಿ ಪರಿವರ್ತನೆಯ ಅಲೆ ಪ್ರಾರಂಭವಾಗಿದೆ. ಕೊನೆಯ ಬಾರಿ ಕಾಂಗ್ರೆಸ್ ಕೇವಲ 17 ರಾಜ್ಯಗಳಲ್ಲಿ ತನ್ನ ಆಡಳಿತದ ಅಧಿಪತ್ಯ ಸಾಧಿಸಿತ್ತು. ಆದರೆ ಇಂದು ಬಿಜೆಪಿ ದೇಶದ ಸುಮಾರು 22 ರಾಜ್ಯಗಳೊಟ್ಟಿಗೆ 23 ಸ್ಥಾನವನ್ನು ಕರ್ನಾಟಕದಿಂದ ಪಡೆದುಕೊಳ್ಳಲಿದ್ದು, ರಾಜ್ಯದಲ್ಲಿ ಹಾಗೂ ಕ್ಷೇತ್ರದಲ್ಲಿ ಕಾಂಗ್ರೆಸನ್ನು ಕಿತ್ತೂಗೆದು ಕಮಲವನ್ನು ಅರಳಿಸಲು ತಾವೆಲ್ಲರೂ ಬಿಜೆಪಿಗೆ ಬೆಂಬಲ ನೀಡಬೇಕು ಎಂದು ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಬುಧವಾರ ಯಕ್ಸಂಬಾ ಪಟ್ಟಣದ ಪ್ರತಿ ಮನೆ ಮನೆಗೂ ತೆರಳಿ ಮತಯಾಚಿಸಿ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೃಹತ್ ರ್ಯಾಲಿ ಮೂಲಕ ಚುನಾವಣಾ ಪ್ರಚಾರ ಕೈಗೊಂಡು ಮಾತನಾಡಿದ ಅವರು, ಕ್ಷೇತ್ರದ ಜನ 30 ವರ್ಷಗಳಿಂದ ಅಭಿವೃದ್ಧಿ ಕಾಣದ ಕಾಂಗ್ರೆಸ್ ಆಡಳಿತದಿಂದ ಬೇಸತ್ತಿದ್ದು, ಬಿಜೆಪಿಗೆ ಸ್ವ-ಇಚ್ಛೆಯಿಂದ ಸೇರ್ಪಡೆಗೊಂಡು ಪಕ್ಷದ ಬಲ ಹಾಗೂ ನಮ್ಮ ಬಹುಮತಗಳ ಗೆಲುವಿಗೆ ಕಹಳೆ ಊದಲು ಸಜ್ಜಾಗಿದ್ದಾರೆ ಎಂದರು.
ಕಾಂಗ್ರೆಸ್ ನಾಯಕರು ಪಕ್ಷದ ಕಾರ್ಯಕರ್ತರನ್ನು ಕೇವಲ ಮತದಾನದ ಸಂದರ್ಭದಲ್ಲಿ ಮಾತ್ರ ಹಿತೈಷಿಗಳಂತೆ ಕಾಣುತ್ತಾರೆ. ಅದೇ ಬಿಜೆಪಿಯ ನಾಯಕರು ಪ್ರತಿ ಕಾರ್ಯಕರ್ತರನ್ನು ನಾಯಕನಂತೆ ನೋಡುತ್ತಾ, ಅವರಿಗೆ ಅ ಧಿಕಾರ ಹಾಗೂ ಜವಾಬ್ದಾರಿ ವಹಿಸಿ ಸಮಾಜಸೇವೆಗೆ ಪ್ರೇರೆಪಿಸುವ ಪಕ್ಷ ಬಿಜೆಪಿಯದಾಗಿದೆ ಎಂದರು. ಯುವ ಧುರೀಣ ಬಸವಪ್ರಸಾದ ಜೊಲ್ಲೆ, ಶಿವರಾಜ ಜೊಲ್ಲೆ, ರಾಜು ಬಾಕಳೆ, ಸುನೀಲ ಅಕ್ಕೋಳೆ, ಸುಧೀರ ಮಾಳಿ, ಉಮೇಶ ಪೋತದಾರ, ದಯಾನಂದ ಮಾಳಿ, ರಜನಿಕಾಂತ ಪಾಂಗಮ, ಅಪ್ಪಾಸಾಬ ಬಾಕಳೆ, ಶಂಕರ ಬಾಕಳೆ, ಪ್ರಶಾಂತ ವಸ್ತ್ರದ, ಮಹೇಶ ಬಾಕಳೆ, ಉದಯ ರಾಯಜಾಧವ, ಮಂದಾರ ರಾಯಜಾಧವ, ಅಮರ ಪರೀಟ ಇತರರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
ಹೊಸ ವರ್ಷದ ಕೊಡುಗೆ: ಬೈಸಿಕಲ್ ಉತ್ತೇಜನಕ್ಕೆ ಉಚಿತ ರೈಡ್
Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ
Hubballi: ಹಳೇ ವೈಷಮ್ಯದಿಂದ ಸಹಚರರೊಂದಿಗೆ ಸೇರಿ ಹಲ್ಲೆ; ವ್ಯಕ್ತಿ ಮೃತ್ಯು
Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI: ಶ್ರೀಲಂಕಾ ಬ್ಯಾಟಿಂಗ್ ಕುಸಿತ; ನ್ಯೂಜಿಲ್ಯಾಂಡ್‌ಗೆ ಸುಲಭ ಜಯ
BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್
Kundapura: ಗುಲ್ವಾಡಿ; ಗಾಯಾಳು ಸಾವು
RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್ ಕುಮಾರ್
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.