ಆಲ್ಪೋನ್ಸೋ ತೋಟಗಳಲ್ಲಿ ಚಿಗುರಿದ ಕನಸು
ಧಾರವಾಡ ಜಿಲ್ಲೆ ರಾಜ್ಯದಲ್ಲಿಯೇ ಅತೀ ಹೆಚ್ಚು ಆಲ್ಪೋನ್ಸೋ ಮಾವಿನ ಹಣ್ಣು ಉತ್ಪಾದಿಸುವ ಜಿಲ್ಲೆ
Team Udayavani, Nov 15, 2021, 1:35 PM IST
ಧಾರವಾಡ: ಆಲ್ಪೋನ್ಸೋ ತೋಟಗಳನ್ನು ಕೊಳ್ಳಲು ಮುಗಿಬಿದ್ದ ದಲ್ಲಾಳಿಗಳು.. ಉತ್ತಮ ಬೆಳೆಗೆ ವಾತಾವರಣ ಸಾಥ್ ನೀಡುತ್ತದೆ ಎಂಬ ವಿಶ್ವಾಸ.. ತಿಂಗಳು ಮುಂಚೆಯೇ ಹಚ್ಚಹಸಿರಾಗಿ ಚಿಗುರೊಡೆದಆಲ್ಪೋನ್ಸೋ ಮಾವಿನ ತೋಟಗಳು.. ಆದರೆ ಇಬ್ಬನಿ ಮತ್ತು ಮಳೆಯ ಕಾಟದ ಆತಂಕ.
ಹೌದು, ಅಂದುಕೊಂಡಂತೆ ನಡೆದರೆ ನವೆಂಬರ್ ತಿಂಗಳಿನ ಕೊನೆ ವಾರದಿಂದ ಡಿಸೆಂಬರ್ ತಿಂಗಳಿನ ಕೊನೆವರೆಗೂ ಜಿಲ್ಲೆಯ ಆಲೊ³àನ್ಸೋ ಮಾವು ತೋಟಗಳು ಚೆನ್ನಾಗಿ ಚಿಗುರೊಡೆದು ಹೂವು ಕಟ್ಟಬೇಕು. ಈ ಹಿಂದಿನ ಸತತ ಮೂರು ವರ್ಷಗಳ ಕಾಲ ಆಲ್ಪೋನ್ಸೋ ಮಾವು ಬೆಳೆಗಾರರು ಮಳೆ, ಇಬ್ಬನಿ, ಜಿಗಿ ರೋಗ ಮತ್ತು ಕೊರೊನಾ ಲಾಕ್‌ಡೌನ್‌ನಿಂದ ಮಾರುಕಟ್ಟೆ ಸಮಸ್ಯೆ ಎದುರಿಸಿ ನಷ್ಟ ಅನುಭವಿಸಿದ್ದಾರೆ. ಈ ವರ್ಷವಾದರೂ ಮಾವಿನ ತೋಟಗಳು ರೈತರ ಕೈ ಹಿಡಿಯಬಹುದು ಎನ್ನುವ ನಿರೀಕ್ಷೆ ಮಾವಿನ ಚಿಗುರಿನಷ್ಟೇ ಅಚಲವಾಗಿದೆ. ಅಂದ ಹಾಗೆ ಪ್ರತಿವರ್ಷ ಡಿಸೆಂಬರ್ ತಿಂಗಳಿನಲ್ಲಿ ಚಿಗುರೊಡೆಯುತ್ತಿದ್ದ ಮಾವಿನ ತೋಟಗಳು ಈ ಬಾರಿ ಒಂದು ತಿಂಗಳು ಮುಂಚಿತವಾಗಿಯೇ ಹಚ್ಚಹಸಿರಿನ ಚಿಗುರು ಹೊದ್ದು ನಿಂತಿದ್ದು, ಇದರಿಂದ ಹೂವು ಕಟ್ಟಲು ಕೂಡ ಹೆಚ್ಚು ಅನುಕೂಲವೇ ಆಗಲಿದೆ. ಹೀಗಾಗಿ ರೈತರು ಮಾವಿನ ತೋಟ ನೋಡಿ ಮಂದಹಾಸ ಬೀರಿದ್ದಾರೆ.
ದೀಪಾವಳಿ ಉಡುಗೊರೆ: ಕಳೆದ ಮೂರು ವರ್ಷ ಮಾವು ಬೆಳೆಗಾರರು ಮಳೆ, ಇಬ್ಬನಿ, ಮ್ಯಾಂಗೋ ಹ್ಯಾಪರ್ ಮತ್ತು ಹಳದಿ ನೋಣದ ರೋಗದ ಸುಳಿಗೆ ಸಿಲುಕಿ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಅದೂ ಅಲ್ಲದೇ ಕಳೆದ ವರ್ಷ ಕೊರೊನಾ ಲಾಕ್‌ಡೌನ್‌ನಿಂದ ತೋಟಗಳನ್ನು ಕೊಳ್ಳಲು ದಲ್ಲಾಳಿಗಳು ಮುಂದೆ ಬಂದಿರಲೇ ಇಲ್ಲ. ಆದರೆ ಈ ವರ್ಷ ದಲ್ಲಾಳಿಗಳೂ ದೀಪಾವಳಿಗೆ ತೋಟಗಳಿಗೆ ಮುಂಗಡ ಕೊಟ್ಟು ಬುಕ್ಕಿಂಗ್ ಮಾಡಿದ್ದಾರೆ. 2021-22ರ ಮಾವು ಸುಗ್ಗಿಗೆ ಅನ್ವಯವಾಗುವಂತೆ 100 ಮಾವಿನ ಗಿಡ ಇರುವ ತೋಟಕ್ಕೆ ವರ್ಷಕ್ಕೆ 50 ಸಾವಿರದಿಂದ 80 ಸಾವಿರ ರೂ.ವರೆಗೂ ಹಣ ನೀಡಿ ದಲ್ಲಾಳಿಗಳು ಮಾವಿನ ತೋಟಗಳನ್ನು ಕೊಳ್ಳುತ್ತಿದ್ದಾರೆ.
ಈ ಭಾಗದ ಮಾವಿನ ತೋಪುಗಳನ್ನು ಗೋವಾ, ಮುಂಬೈ, ಅಹಮದಾಬಾದ್‌ಗಳಿಂದ ಬಂದ ಮಾವು ವ್ಯಾಪಾರಿ ಗುತ್ತಿಗೆದಾರರು ಕೊಳ್ಳುವುದು ಸಾಮಾನ್ಯ. ಸಂಕ್ರಾಂತಿ ಸಮಯಕ್ಕೆ ಗಿಡಗಳು ಹಿಡಿದ ಹೂವು ಮತ್ತು ಹೀಚಿನ ಮೇಲೆ ತೋಟಕ್ಕೆ ಬೆಲೆ ಕಟ್ಟುವ ವ್ಯಾಪಾರಿಗಳು ಅರ್ಧದಷ್ಟು ಮಾತ್ರ ಹಣ ಕೊಟ್ಟು, ಇನ್ನುಳಿದದ್ದನ್ನು ಮಾವಿನ ಫಸಲನ್ನು ಕೀಳುವಾಗ ಬೆಳೆಗಾರರಿಗೆ ಕೊಡುವ ಕರಾರು ಮಾಡುತ್ತಿದ್ದರು. ಆದರೆ ಈ ವರ್ಷ ಧೈರ್ಯದಿಂದ ಮುಂಗಡವೇ ಹಣ ನೀಡುವ ಧಾವಂತದಲ್ಲಿದ್ದಾರೆ.
ಸಿಂಹಪಾಲು ಉತ್ಪಾದನೆ
ಧಾರವಾಡ ಜಿಲ್ಲೆ ರಾಜ್ಯದಲ್ಲಿಯೇ ಅತೀ ಹೆಚ್ಚು ಆಲ್ಪೋನ್ಸೋ ಮಾವಿನ ಹಣ್ಣು ಉತ್ಪಾದಿಸುವ ಜಿಲ್ಲೆ. ಇಲ್ಲಿ 10,568 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, ಉತ್ತಮ ಫಸಲು ಬಂದರೆ 87ರಿಂದ 98 ಸಾವಿರ ಟನ್ ಮಾವು ಉತ್ಪಾದನೆಯಾಗುತ್ತಿತ್ತು. ಇನ್ನು ಬೆಳಗಾವಿ ಜಿಲ್ಲೆಯಲ್ಲಿ 5465 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದ್ದು, 76980 ಟನ್ ಉತ್ಪಾದನೆ ನಿರೀಕ್ಷೆ ಮಾಡಲಾಗಿದೆ. ಉತ್ತರ ಕರ್ನಾಟಕದ ಶೇ.92 ಪ್ರಮಾಣದ ಮಾವು ಉತ್ಪಾದನೆ ಈ ಎರಡೇ ಜಿಲ್ಲೆಗಳಲ್ಲಿ ಆಗುತ್ತಿದ್ದು, ಇನ್ನುಳಿದ ಶೇ.8ರಲ್ಲಿ ವಿಜಯಪುರ, ಬಾಗಲಕೋಟೆ, ಬೀದರ, ಬಳ್ಳಾರಿ ಇತರ ಜಿಲ್ಲೆಗಳು ಸೇರುತ್ತವೆ. ಇನ್ನು ರಾಜ್ಯದ ಲೆಕ್ಕದಲ್ಲಿ ಶೇ.50 ಮಾವು ಈ ಎರಡೇ ಜಿಲ್ಲೆಗಳಲ್ಲಿ ಉತ್ಪಾದನೆಯಾಗುತ್ತಿದೆ.
ಲಾಕ್‌ಡೌನ್‌ಗೆ ನಲುಗಿದ್ದ ರೈತರು
ಆಲ್ಪೋನ್ಸೋ ಮಾವು ಮಲ್ಲಿಗೆ ಹೂವಿನಷ್ಟೇ ನಾಜೂಕು ಫಲ. ಅದನ್ನು ತುಂಬಾ ಜಾಗೃತಿಯಿಂದಲೇ ಬೆಳೆದು ನಿರ್ವಹಣೆ ಮಾಡಿ ರಫ್ತು ಮಾಡಿದಾಗ ಮಾತ್ರ ರೈತರು ಮತ್ತು ದಲ್ಲಾಳಿಗಳು ಲಾಭ ಪಡೆಯಬಹುದು. ಕಳೆದ ವರ್ಷದಂತೆ ಈ ವರ್ಷವೂ ಸವಾಲುಗಳಿಗೆ
ಮಾವು ಹೊರತಾಗಿಲ್ಲ. ಕಳೆದ ವರ್ಷ 50 ಸಾವಿರ ರೂ. ಬೆಲೆಯ ತೋಟಗಳನ್ನು ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೇವಲ 5-10 ಸಾವಿರ ರೂ.ಗೆ ಮಾತ್ರ ರೈತರು ಮಾರಾಟ ಮಾಡಿಕೊಳ್ಳುವಂತಾಗಿತ್ತು. ಕೊರೊನಾದಿಂದ ಮಕಾಡೆ ಮಲಗಿ ಹೋಗಿದ್ದ ಮಾವು ಉದ್ಯಮಕ್ಕೆ ಮತ್ತೆ ಉತ್ಸಾಹ ಬಂದಿದ್ದು, ದಲ್ಲಾಳಿಗಳು ಹಣ ಹಾಕಿ ತೋಟ ಖರೀದಿಸುತ್ತಿರುವುದು ರೈತರಿಗೆ ಕೊಂಚ ನೆಮ್ಮದಿ ತಂದಿದೆ.
ಮಳೆ ಮತ್ತು ಇಬ್ಬನಿ ಆಲೊ³àನ್ಸೋ ಮಾವಿಗೆ ಶತ್ರುಗಳಿದ್ದಂತೆ. ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಮಳೆ ಯಾವುದೇ ಕಾರಣಕ್ಕೂ ಆಗಬಾರದು. ಒಂದು ವೇಳೆ ಮಳೆಯಾದರೆ ಮಾವಿಗೆ ಕಂಟಕ.
ಡಾ| ಗೋಪಾಲ, ಮಾವು ತಜ್ಞರು,
ಕುಂಭಾಪುರ ತೋಟಗಾರಿಕೆ ಸಂಶೋಧನಾ ಕೇಂದ್ರ
ಬಸವರಾಜ ಹೊಂಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
ಹೊಸ ವರ್ಷದ ಕೊಡುಗೆ: ಬೈಸಿಕಲ್ ಉತ್ತೇಜನಕ್ಕೆ ಉಚಿತ ರೈಡ್
Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ
Hubballi: ಹಳೇ ವೈಷಮ್ಯದಿಂದ ಸಹಚರರೊಂದಿಗೆ ಸೇರಿ ಹಲ್ಲೆ; ವ್ಯಕ್ತಿ ಮೃತ್ಯು
Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
State Budget Meeting: ಇಂದಿನಿಂದ ಸಿಎಂ ಬಜೆಟ್ ಪೂರ್ವಭಾವಿ ಸರಣಿ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.