ಹುಬ್ಬಳ್ಳಿ ಬೆಣ್ಣೆಹಳ್ಳದ ಪ್ರವಾಹ;ಕೊಚ್ಚಿ ಹೋದ ಯುವಕ; ಸಿಲುಕಿಕೊಂಡ ಹಲವರು
Team Udayavani, Aug 29, 2022, 5:52 PM IST
ಹುಬ್ಬಳ್ಳಿ: ತಾಲೂಕಿನ ಇಂಗಳಹಳ್ಳಿ ಗ್ರಾಮದ ಬೆಣ್ಣೆಹಳ್ಳದ ಪ್ರವಾಹದಲ್ಲಿ 32 ಜನ ಸಿಲುಕಿಕೊಂಡಿದ್ದು , ಯುವಕನೊಬ್ಬ ಕೊಚ್ಚಿಕೊಂಡು ಹೋಗಿದ್ದಾನೆ. 20 ಜನರನ್ನು ರಕ್ಷಿಸಲಾಗಿದ್ದು, ಉಳಿದವರನ್ನು ಸುರಕ್ಷಿತವಾಗಿ ಕರೆ ತರುವ ರಕ್ಷಣಾ ಕಾರ್ಯ ಮುಂದುವರೆದಿದೆ.
ಮೇಲ್ಭಾಗದಲ್ಲಿ ರಭಸದ ಮಳೆಯಾಗುತ್ತಿರುವುದರಿಂದ ಇಂಗಳಹಳ್ಳಿ ಗ್ರಾಮದ ಬಳಿ ಬರುವ ಬೆಣ್ಣೆಹಳ್ಳ ತುಂಬಿ ಹರಿಯುತ್ತಿದೆ. ಈ ಸಮಯದಲ್ಲಿ ಕುಸ್ತಿ ಪಂದ್ಯಾವಳಿ ವೀಕ್ಷಣೆಗೆ ಆಗಮಿಸಿದ ನಾಲ್ವರು ಹಳ್ಳ ದಾಟಲು ಮುಂದಾಗಿದ್ದಾರೆ. ಈ ಸಮಯದಲ್ಲಿ ಇಂತಹ ಹಳ್ಳ ಬಹಳಷ್ಟು ನೋಡಿದ್ದೇವೆ ಎಂದ ನಾಲ್ವರು ಹಳ್ಳ ದಾಟಲು ಮುಂದಾಗಿದ್ದಾರೆ. ಅದರಲ್ಲಿ ನಾಲ್ವರು ಕೂಡಾ ನೀರಿನಲ್ಲಿ ಆಯ ತಪ್ಪಿದ್ದು ಕೂಡಲೇ ಎಚ್ಚೆತ್ತ ಇಬ್ಬರು ನೀರಿನಿಂದ ಪಾರಾಗಿದ್ದಾರೆ. ಇನ್ನುಳಿದ ಇಬ್ಬರು ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದು, ಅದರಲ್ಲಿ ಮತ್ತೊಬ್ಬ ಸ್ವಲ್ಪದೂರ ನೀರಿನಲ್ಲೇ ಹೋಗಿ ಗಿಡದ ಕಂಟೆ ಹಿಡಿದುಕೊಂಡು ಅಲ್ಲಿಂದ ಪಾರಾಗಿದ್ದಾನೆ. ಕೊಚ್ಚಿ ಹೋಗಿರುವವನ ಹುಡುಕಾಟದಲ್ಲಿ ತಾಲೂಕು ಆಡಳಿತ ನಿರತವಾಗಿದೆ.
ಬೆಳಗ್ಗೆ ಕೃಷಿ ಕಾರ್ಯಕ್ಕೆ ತೆರಳಿದ್ದ 28 ಜನರ ತಂಡ ಹಳ್ಳದಲ್ಲಿ ಸಿಲುಕಿಕೊಂಡಿದ್ದು ಈಗಾಗಲೇ 20 ಜನರನ್ನು ರಕ್ಷಣೆ ಮಾಡಿದ್ದಾರೆ. ಇನ್ನುಳಿದವರ ರಕ್ಷಣೆ ಮಾಡಲಾಗುತ್ತಿದೆ.
ಸ್ಥಳದಲ್ಲಿ ಗ್ರಾಮೀಣ ತಹಶೀಲ್ದಾರ್ ಪ್ರಕಾಶ ನಾಶಿ, ಗ್ರಾಮೀಣ ಪೊಲೀಸ್ ಠಾಣಾಧಿಕಾರಿ ಗೋಕಾಕ, ಅಗ್ನಿಶಾಮಕ ದಳದ ಸಿಬಂದಿ ಸೇರಿದಂತೆ ಮೊದಲಾದವರು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
MUDA case; ಸಿಎಂ ಸಿದ್ದರಾಮಯ್ಯ ವಿಚಾರಣೆಗೆ ಕರೆದ ಲೋಕಾಯುಕ್ತ ಪೊಲೀಸರು
Waqf Notice: ʼವಕ್ಫ್ ಬೋರ್ಡ್‌ಗೆ ಆಸ್ತಿ ನೋಂದಣಿ ತಕ್ಷಣ ಸ್ಥಗಿತಗೊಳಿಸಲು ಸಿಎಸ್‌ಗೆ ಸೂಚಿಸಿʼ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.