ಒಲಿಂಪಿಕ್ಸ್‌ನಲ್ಲಿ ಜಾನಪದ ನೃತ್ಯ ವೈಭವ
Team Udayavani, Feb 4, 2017, 12:47 PM IST
ಧಾರವಾಡ: ಝೇಂಕರಿಸುತ್ತ ಶಬ್ದ ಮಾಡುವ ಕಹಳೆಗಳು… ಬುಡಕಟ್ಟು ಶೈಲಿಯಲ್ಲಿಯೇ ನಗಾರಿ ಬಡಿಯುವ ಯುವಕರು…, ತಲೆಯ ಮೇಲೆ ನಂದಿಕೋಲು ಇಟ್ಟುಕೊಂಡು ಕುಣಿಯುವ ಕಲಾವಿದರು…, ಎಲ್ಲದಕ್ಕೂ ಕಳಸವಿಟ್ಟಂತೆ ಧಾರವಾಡದ ಪ್ರಸಿದ್ಧ ಕಲೆ ಕೆಲಗೇರಿ ಜಗ್ಗಲಿಗೆ ಮೇಳದ ಕುಣಿತ…ಒಂದು ಜಾನಪದ ಲೋಕವೇ ಸೃಷ್ಟಿಯಾದ ಅನುಭವ…
ಇಲ್ಲಿನ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಶುಕ್ರವಾರ ಸಂಜೆ ನಡೆದ ಜಾನಪದ ಜಾತ್ರೆ ಕಾರ್ಯಕ್ರಮವು ಕ್ರೀಡಾಪಟುಗಳು ಮತ್ತು ನೆರೆದಿದ್ದ ವಿದ್ಯಾರ್ಥಿಗಳ ಎದುರು ಜಾನಪದ ದೃಶ್ಯಕಾವ್ಯ ವೈಭವವನ್ನೇ ತಂದು ನಿಲ್ಲಿಸಿಬಿಟ್ಟಿತು. ನಗಾರಿ, ಜಗ್ಗಲಗಿ, ಕಹಳೆ ಮತ್ತು ತಮಟೆ ಸದ್ದು ಇಡೀ ಕ್ರೀಡಾಂಗಣವನ್ನು ಆವರಿಸಿಕೊಂಡು ನೋಡುಗರ ಮೈ ನವಿರೇಳಿಸುವಂತೆ ಮಾಡಿತು. ಜಾನಪದ ಕಲಾವಿದರ ಕುಣಿತ, ವಾದ್ಯ ಬಾರಿಸುವ ಪರಿಗಳು, ಹಾಕುವ ಹೆಜ್ಜೆ, ಹೊರ ಹೊಮ್ಮುವ ಸದ್ದಿಗೆ ಎಲ್ಲರೂ ಬೆರಗಾಗಿದ್ದು ಮಾತ್ರ ಸತ್ಯ.
ನಾಗರಾಜಮೂರ್ತಿಗೆ ಜೈ: ಜಾನಪದ ಜಾತ್ರೆ ಮತ್ತು ಜಾನಪದ ಕಲಾ ಮೆರವಣಿಗೆ ಮಾಡಿ ರಾಜ್ಯಾದ್ಯಂತ ಹೆಸರು ಮಾಡಿರುವ ರಂಗಕರ್ಮಿ ನಾಗರಾಜಮೂರ್ತಿ ಅವರು, ಒಲಿಂಪಿಕ್ ಕ್ರೀಡಾಕೂಟದಲ್ಲಿ ಈ ಬಾರಿ 550 ಜಾನಪದ ಕಲಾವಿದರನ್ನು ಒಂದೇ ಸಮಯಕ್ಕೆ ಕುಣಿಸುವ ಮೂಲಕ ವಿಭಿನ್ನ ಜಾನಪದ ಲೋಕವನ್ನೇ ಧರೆಗೆ ಇಳಿಸಿದ್ದು ವಿಶೇಷವಾಗಿತ್ತು. ಅವರ ಈ ಜಾನಪದ ಕಾರ್ಯಕ್ರಮ ನೋಡಿದ ಜನರೆಲ್ಲರೂನಾಗರಾಜ ಮೂರ್ತಿ ಅವರಿಗೆ ಚಪ್ಪಾಳೆ ಮೂಲಕ ಅಭಿನಂದಿಸಿದರು.
ಒಲಿಂಪಿಕ್ಸ್ ಉದ್ಘಾಟನೆ-ಘೋಷಣೆ
ಧಾರವಾಡದಲ್ಲಿ ಆರಂಭಗೊಂಡ ರಾಜ್ಯ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾರಿವಾಳಗಳನ್ನು ಹಾರಿ ಬಿಡುವ ಮೂಲಕ ಉದ್ಘಾಟಿಸಿದರು. ಇದೇ ವೇಳೆ ಕೇಸರಿ ಬಿಳಿ ಹಸಿರು ಬಣ್ಣದ ಬಲೂನ್‌ಗಳನ್ನು ಹಾರಿ ಬಿಡಲಾಯಿತು.
ಮುಖ್ಯಮಂತ್ರಿಗಳು ಸಂಪ್ರದಾಯದಂತೆ, ರಾಜ್ಯ ಒಲಿಂಪಿಕ್ಸ್ ಕ್ರೀಡಾಕೂಟ-2017 ಉದ್ಘಾಟಿಸಲ್ಪಟ್ಟಿದೆ ಎಂದು ಘೋಷಿಸಿದರು. ರಾಜ್ಯ ಒಲಿಂಪಿಕ್ಸ್ ಧ್ವಜಾರೋಹಣ ನೆರವೇರಿಸಿದರು. 12 ಕ್ರೀಡಾ ತಂಡಗಳು ಪಥ ಸಂಚಲನ ನಡೆಸಿ, ಮುಖ್ಯಮಂತ್ರಿಗಳಿಗೆ ಕ್ರೀಡಾವಂದನೆ ಸಲ್ಲಿಸಿದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Arrested: ಹೊಯ್ಸಳ ಪೊಲೀಸ್ ಮೇಲೆ ಹಲ್ಲೆ; ಬಂಧನ
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.