ಜಾನಪದ ಸಮ್ಮೇಳನಾಧ್ಯಕ್ಷರಾಗಿ ಡಾ| ಶಾಲಿನಿ ಭಟ್ ಆಯ್ಕೆ
Team Udayavani, Mar 11, 2017, 1:33 PM IST
ಧಾರವಾಡ: ನಗರದ ಕೆ.ಇ.ಬೋರ್ಡ್ ಕಾಲೇಜು ಆವರಣದಲ್ಲಿ ಮಾ.17 ಮತ್ತು 18 ರಂದು ನಡೆಯಲಿರುವ ಅಖೀಲ ಭಾರತ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಜಾನಪದ ತಜ್ಞರಾದ ಡಾ|ಶಾಲಿನಿ ರಘುನಾಥ ಭಟ್ ಆಯ್ಕೆಗೊಂಡಿದ್ದಾರೆ.
ಡಾ| ಶಾಲಿನಿ ಅವರ ಬಗ್ಗೆ ಒಂದಿಷ್ಟು: ಜಾನಪದ, ಭಾಷಾ ವಿಜ್ಞಾನ, ಸಾಹಿತ್ಯ ಹಾಗೂ ಮಹಿಳಾ ಅಧ್ಯಯನಗಳಲ್ಲಿ ಸಂಶೋಧನೆ ಮಾಡಿರುವ ಡಾ| ಶಾಲಿನಿ ಅವರು ಮೂಲತಃ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು.
ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ.ಪದವಿಯನ್ನು ಬಂಗಾರದ ಪದಕದೊಂದಿಗೆ ಪ್ರಥಮ ವರ್ಗದಲ್ಲಿ ಪೂರೈಸಿ, ಶಿರಸಿ-ಮೈಸೂರುಗಳಲ್ಲಿ ಕನ್ನಡ ಅಧ್ಯಾಪಕ ವೃತ್ತಿ ಕೈಕೊಂಡ ಅವರು, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಮತ್ತು ಜಾನಪದ ಅಧ್ಯಯನ ವಿಭಾಗಗಳೆರಡರಲ್ಲಿಯೂ ಬೋಧನೆ ಮಾಡಿದ್ದಾರೆ.
ಅಲ್ಲದೆ ಜಾನಪದಅಧ್ಯಯನ ವಿಭಾಗದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹವ್ಯಕ ಭಾಷೆಯ ಸಮಾಜೋ-ಭಾಷಿಕ ಅಧ್ಯಯನ ಎಂಬ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯವು ಡಾ|ಶಾಲಿನಿ ಅವರಿಗೆ 1995ರಲ್ಲಿ ಪಿಎಚ್‌ಡಿ ಪದವಿ ನೀಡಿದೆ.
ಡಾ| ಶಾಲಿನಿ ಅವರು 150ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ರಚಿಸಿದ್ದು, ವಿವಿಧ ಗ್ರಂಥಗಳಲ್ಲಿ ಸಂಗ್ರಹಿತಗೊಂಡಿವೆ. ಇವರ ಹೆಸರಿನಲ್ಲಿ 28ಕ್ಕೂ ಹೆಚ್ಚು ಗ್ರಂಥಗಳು ಪ್ರಕಟವಾಗಿದ್ದು, ಅವುಗಳಲ್ಲಿ 11 ಸಂಪಾದನೆಗಳಾಗಿವೆ.
ಅವರ ಮಾರ್ಗದರ್ಶನದಲ್ಲಿ 22 ವಿದ್ಯಾರ್ಥಿಗಳು ಸಂಶೋಧನೆಯನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ್ದಾರೆ. ಡಾ|ಶಾಲಿನಿ ರಘುನಾಥ ಅವರು 13 ವರ್ಷ ಕವಿವಿ ಜಾನಪದ ಅಧ್ಯಯನ ವಿಭಾಗದ ಅಧ್ಯಕ್ಷರಾಗಿದ್ದರು. ಅವರ ಈ ಸಾಧನೆಯೇ ಈಗ ಅವರನ್ನು ಜಾನಪದ ಸಮ್ಮೇಳನಕ್ಕೆ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್ ಲಾಡ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.