ಮಾರ್ಗಸೂಚಿ ಪಾಲಿಸದಿದ್ದರೆ ನಿರ್ದಾಕ್ಷಿಣ್ಯ ಕ್ರಮ:ಡಿಸಿ ನಿತೇಶ
Team Udayavani, Dec 27, 2020, 1:45 PM IST
ಧಾರವಾಡ: ಜಿಲ್ಲೆಯ ಬಾರ್, ರೆಸ್ಟೋರೆಂಟ್, ಕ್ಲಬ್, ಜಿಮಾಖಾನಾ, ಹೋಟೆಲ್ ಸೇರಿದಂತೆ ಎಲ್ಲ ರೀತಿಯ ವಾಣಿಜ್ಯ ಸೇವಾ ಹಾಗೂಮನೋರಂಜನಾ ಕೇಂದ್ರಗಳು ಹೊಸ ವರ್ಷಾಚರಣೆ ಅಂಗವಾಗಿ ವಿಶೇಷ ಪಾರ್ಟಿ,ರಿಯಾಯಿತಿ ಪ್ಯಾಕೇಜ್, ಡಿಜೆ ಮ್ಯೂಜಿಕ್, ಡ್ಯಾನ್ಸ್ ಸೇರಿದಂತೆ ಎಲ್ಲ ತರಹದ ನಿಯೋಜಿತ ಕಾರ್ಯಕ್ರಮಗಳ ಆಯೋಜನೆಯನ್ನು 2020ರ ಡಿ.30ರಿಂದ 2021ರ ಜ.2 ರವರೆಗೆ ನಿರ್ಬಂಧಿಸಲಾಗಿದೆ ಎಂದು ಡಿಸಿ ನಿತೇಶ ಪಾಟೀಲ ಹೇಳಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಹೋಟೆಲ್, ರೆಸ್ಟೋರೆಂಟ್, ಬಾರ್ ಹಾಗೂ ಕ್ಲಬ್‌ಗಳು ಸೇರಿದಂತೆ ವಿವಿಧ ಮನರಂಜನೆ,ವಾಣಿಜ್ಯ ಸೇವೆಯ ಸಂಸ್ಥೆಗಳ ಮಾಲೀಕರ,ವ್ಯವಸ್ಥಾಪಕರೊಂದಿಗೆ ಜರುಗಿದ ಸಭೆಯಲ್ಲಿಮಾತನಾಡಿದ ಅವರು, ಈ ಮಾರ್ಗಸೂಚಿ ಪಾಲಿಸದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಜರುಗಿಸಿ ಪ್ರಕರಣ ದಾಖಲಿಸಲಾಗುವುದು. ಅವರ ಲೈಸನ್ಸ್ ತಕ್ಷಣ ರದ್ದುಗೊಳಿಸಲು ಕ್ರಮಕೈಗೊಳ್ಳಲಾಗುವುದೆಂದು ಎಚ್ಚರಿಸಿದರು.
ಪ್ರತಿಯೊಬ್ಬರು ತಮ್ಮ ಗ್ರಾಹಕರಿಗೆಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನರ್ ಬಳಸಬೇಕು. ಸಾಮಾಜಿಕ ಅಂತರ ಕಾಪಾಡುವಂತೆ ಮತ್ತು ಪ್ರತಿಯೊಬ್ಬರು ಮಾಸ್ಕಧರಿಸಿ ಒಳಬರುವಂತೆ ನಿಗಾ ವಹಿಸಬೇಕು. ನಿಗದಿತ ಸಮಯಕ್ಕೆ ಬಂದ್‌ಮಾಡಬೇಕು, 65 ವರ್ಷ ಮೇಲ್ಪಟ್ಟವರಿಗೆ, 10 ವರ್ಷದೊಳಗಿನ ಮಕ್ಕಳಿಗೆ ಪ್ರವೇಶಕ್ಕೆ ಅವಕಾಶ ನೀಡಬಾರದು. ಹಸಿರು ಪಟಾಕಿಗಳನ್ನು ಮಾತ್ರಉಪಯೋಗಿಸಬೇಕು. ಮಾಸ್ಕ್ ಧರಿಸದವರಿಗೆ ಉಚಿತವಾಗಿ ತಾವೇ ಮಾಸ್ಕ್ ನೀಡಿ, ಧರಿಸುವಂತೆ ಎಚ್ಚರಿಕೆ ವಹಿಸಬೇಕೆಂದು ಹೋಟೆಲ್, ರೆಸ್ಟೋರೆಂಟ್ ಮಾಲಿಕರಿಗೆ ಸೂಚಿಸಿದರು.
ಮಹಾನಗರ, ಪಟ್ಟಣಗಳು ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಸರಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸ ಲಾಗಿದೆ. ಹೊಸ ವರ್ಷಾಚರಣೆ ಸಲುವಾಗಿ ಗುಂಪು ಗೂಡುವುದು, ಬೈಕ್ ರ್ಯಾಲಿ,ಪಾರ್ಟಿ ಮಾಡುವುದು, ಪಟಾಕಿ(ಹಸಿರುಪಟಾಕಿ ಅಲ್ಲದ) ಸಿಡಿಸುವುದು ಮಂತಾದ ಯೋಜಿತ ಕಾರ್ಯಗಳನ್ನು ಜಿಲ್ಲೆಯಾದ್ಯಂತ ನಿರ್ಬಂಧಿ ಸಲಾಗಿದ್ದು, ಅಬಕಾರಿ, ಪೊಲೀಸ್ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಇದನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಿದ್ದಾರೆ ಎಂದರು.
ಮಹಾನಗರ ಪೊಲೀಸ್ ಆಯುಕ್ತ ಲಾಭೂರಾಮ ಮಾತನಾಡಿ, ಜಿಲ್ಲಾಧಿಕಾರಿಗಳ ಆದೇಶ ಹಾಗೂ ಸರಕಾರದ ನಿರ್ದೇಶನವನ್ನು ಹೊಸ ವರ್ಷಾಚರಣೆ ಸಂದರ್ಭದಲ್ಲಿ ಉಲ್ಲಂಘಿಸುವವರ ವಿರುದ್ಧ ಮುಲಾಜಿಲ್ಲದೆ ಕ್ರಮಕೈಗೊಳ್ಳಲಾಗುವುದು. ಫ್ಯಾಮಿಲಿ, ಪ್ರಂಡ್ಸ್ ನೆಪದಲ್ಲಿ ಯಾವುದೇ ರೀತಿಯ ಡಿಜೆ ಮ್ಯೂಜಿಕ್ ಕೇಳಿ ಬಂದರೆ ಮತ್ತು ಸಮಯ ಮೀರಿ ವ್ಯವಹಾರ ನಡೆಸಿದರೆ ಸ್ಥಳದಲ್ಲಿಯೇ ಪೊಲೀಸ್ ಅಧಿಕಾರಿಗಳಿಗೆ ಹೋಟೆಲ್ ಮ್ಯಾನೇಜರ್ ಮತ್ತು ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ, ಸೀಜ್ ಮಾಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಮಾತನಾಡಿ, ಪ್ರತಿ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಸಿಬ್ಬಂದಿ ಸನದ್ದುದಾರರಿಗೆ ಹೊಸ ವರ್ಷಾಚರಣೆ ನೆಪದಲ್ಲಿ ನಿಯಮಗಳ ಉಲ್ಲಂಘನೆ ಆಗದಂತೆಎಚ್ಚರಿಕೆ ವಹಿಸಲು ಸೂಚಿಸಿದ್ದಾರೆ. ಡಿ.30ರಿಂದ ಜನವರಿ 2ರವರೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಎಲ್ಲ ಹಂತದ ಪೊಲೀಸ್ ಸಿಬ್ಬಂದಿ ಗ್ರಾಮೀಣ ಪ್ರದೇಶದ ನಗರ, ಪಟ್ಟಣ, ಹೆಚ್ಚು ಜನ ಸಂಖ್ಯೆ ಇರುವ ಗ್ರಾಮಗಳು ಸೇರಿದಂತೆ ಎಲ್ಲ ಕಡೆಗೆ ಸಂಚರಿಸಿ, ನಿಗಾವಹಿಸಲಿದ್ದಾರೆ. ಉಲ್ಲಂಘನೆ ಕಂಡು ಬಂದಲ್ಲಿ ತಕ್ಷಣ ಕ್ರಮ ಕೈಗೊಳ್ಳಲಿದ್ದಾರೆ. ಸಾರ್ವಜನಿಕರು, ಸನದ್ದುದಾರರು ಸರಕಾರದ ಮಾರ್ಗಸೂಚಿಗಳ ಪಾಲನೆಗೆ ಸಹಕರಿಸಬೇಕು ಎಂದರು.
ಮಹಾನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪ ಪೊಲೀಸ್ ಆಯುಕ್ತರಾಮರಾಜನ್.ಕೆ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಮಾತನಾಡಿದರು. ಎಸಿ ಡಾ| ಗೋಪಾಲಕೃಷ್ಣ.ಬಿ, ಮಹಾನಗರದ ಅಪರಾಧಮತ್ತು ಸಂಚಾರಿ ವಿಭಾಗದ ಉಪ ಪೊಲೀಸ್ ಆಯುಕ್ತ ಆರ್.ಬಿ.ಬಸರಗಿ, ಅಬಕಾರಿ ಇಲಾಖೆ ಜಿಲ್ಲಾ ಆಯುಕ್ತ ಶಿವನಗೌಡ ಪಾಟೀಲ, ಮಹಾನಗರ ಪಾಲಿಕೆ ಆಯುಕ್ತ ಡಾ|ಸುರೇಶ ಇಟ್ನಾಳ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ಯಶವಂತ ಮದೀನಕರ, ತಹಶೀಲ್ದಾರ್‌ರಾದ ಡಾ| ಸಂತೋಷ ಬಿರಾದಾರ, ಶಶಿಧರಮಾಡ್ಯಾಳ ಸೇರಿದಂತೆ ಅಗ್ನಿಶಾಮಕ, ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಪುರಸಭೆ, ಪಪಂ ಮುಖ್ಯಾಧಿಕಾರಿಗಳು, ಜಿಲ್ಲೆಯ ಹೋಟೆಲ್, ಬಾರ್,ರೆಸ್ಟೋರೆಂಟ್, ಕ್ಲಬ್, ಜಿಮಾಖಾನಾ ಸೇರಿದಂತೆ ವಿವಿಧ ಸನದ್ದುಗಳ ಮಾಲೀಕರು ಇದ್ದರು.
ಪ್ರತಿಸಲದಂತೆ ಹೊಸ ವರ್ಷಾಚರಣೆಗೆ ಯಾವುದೇ ಹೋಟೆಲ್, ಕ್ಲಬ್, ಬಾರ್, ಪಬ್ ರೆಸ್ಟೋರೆಂಟ್‌ಗಳು ರಿಯಾಯಿತಿಯಲ್ಲಿ ಊಟ, ಮದ್ಯ ಸರಬರಾಜುಗಳಿಗೆ ವಿಶೇಷ ಪ್ಯಾಕೇಜ್ ನೀಡುವುದು, ಫ್ಯಾಮಿಲಿ ಪ್ಯಾಕೆಜ್, ಸಂಗೀತ ಕಾರ್ಯಕ್ರಮ, ಡಿಜೆ ನೃತ್ಯ, ಆಯೋಜನೆ ಮುಂತಾದವುಗಳನ್ನುಸಂಪೂರ್ಣ ನಿಷೇಧಿಸಲಾಗಿದೆ. ಆದರೆ ಅಬಕಾರಿ, ಪೊಲೀಸ್, ಮಹಾನಗರಪಾಲಿಕೆಯಿಂದ ಲೈಸೆನ್ಸ್ ಪಡೆದಿರುವವರು ಅದರಲ್ಲಿ ಸೂಚಿಸಿರುವ ನಿಯಮಗಳಂತೆ ಮತ್ತು ಪ್ರತಿ ನಿತ್ಯದಂತೆ ತಮ್ಮ ವ್ಯವಹಾರ ನಿರ್ವಹಿಸಬಹುದು. – ನಿತೇಶ ಪಾಟೀಲ, ಡಿಸಿ, ಧಾರವಾಡ
ಹುಬ್ಬಳ್ಳಿ ಹಾಗೂ ಧಾರವಾಡ ನಗರ ಮತ್ತು ಹೊರ ವಲಯದ ಕೆಲವುರೆಸ್ಟೋರೆಂಟ್, ಬಾರ್, ಕ್ಲಬ್‌ಗಳು ಹೊಸವರ್ಷಾಚರಣೆ ಅಂಗವಾಗಿ ವಿಶೇಷಪ್ಯಾಕೇಜ್, ಕಾರ್ಯಕ್ರಮ ಆಯೋಜನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿಗ್ರಾಹಕರಿಗೆ, ಸಾರ್ವಜನಿಕರಿಗೆ ಆಹ್ವಾನನೀಡುತ್ತಿರುವ ಮಾಹಿತಿ ಬಂದಿದೆ.ದಯವಿಟ್ಟು ಅಂತ ಯೋಜನೆ, ಯೋಚನೆ,ಕಾರ್ಯಕ್ರಮಗಳ ತಯ್ನಾರಿ ಇದ್ದರೆಈಗಲೇ ಕೈಬಿಡಿ, ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಲಾಭೂರಾಮ, ಹು-ಧಾ ಪೊಲೀಸ್ ಆಯುಕ್ತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.