ಫುಟ್‌ಬಾಲ್‌: ಧಾರವಾಡಕ್ಕೆ ರನ್ನರ್ ಅಪ್‌ ಪ್ರಶಸ್ತಿ

Team Udayavani, Feb 11, 2017, 1:03 PM IST

hub3.jpg

ಧಾರವಾಡ: ರಾಜ್ಯ ಒಲಿಂಪಿಕ್ಸ್‌ ಕ್ರೀಡಾಕೂಟದ ಫುಟ್‌ಬಾಲ್‌ ಪಂದ್ಯಾವಳಿಯಲ್ಲಿ ಬೆಳಗಾವಿ ತಂಡ ಫೈನಲ್‌ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಚಾಂಪಿಯನ್‌ ಆಗಿ ಹೊರ ಹೊಮ್ಮಿದೆ. ಇಲ್ಲಿನ ಕೆಸಿಡಿ ವಿಜ್ಞಾನ ಮಹಾವಿದ್ಯಾಲಯದ ಕಾಲೇಜು ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಧಾರವಾಡ ಮತ್ತು ಬೆಳಗಾವಿ ಮಧ್ಯದ ಫೈನಲ್‌ ಪಂದ್ಯ ರೋಚಕ ತಿರುವು ಪಡೆದುಕೊಂಡು ಅಂತಿಮವಾಗಿ ಬೆಳಗಾವಿ 2-1 ಗೋಲುಗಳಿಂದ ಚಿನ್ನದ ಪದಕ ತನ್ನದಾಗಿಸಿಕೊಂಡಿತು. 

ಪಂದ್ಯದಲ್ಲಿ ಬೆಳಗಾವಿ ಪರ ಸುನೀಲ 14 ನಿಮಿಷದಲ್ಲಿ 1 ಗೋಲು ಬಾರಿಸಿದರೆ, ಜ್ಞಾನೇಶ 21 ನಿಮಿಷದಲ್ಲಿ ಇನ್ನೊಂದು ಗೋಲು ಬಾರಿಸಿದ್ದು, ತಂಡವನ್ನು ವಿಜಯದ ಹೊಸ್ತಿಲಲ್ಲಿ ತಂದು ನಿಲ್ಲಿಸಿತು. ಚಾಕಚಕ್ಯತೆ ಮತ್ತು ಅಚ್ಚುಕಟ್ಟಿನ ಆಟ ಪ್ರದರ್ಶಿಸಿದ ಬೆಳಗಾವಿ ತಂಡವನ್ನು ಕಟ್ಟಿ ಹಾಕಲು ಧಾರವಾಡ ತಂಡ ಹರ ಸಾಹಸ ಪಟ್ಟಿತಾದರೂ ಅಂತಿಮವಾಗಿ 25 ನಿಮಿಷದಲ್ಲಿ ಎಂ.ಪಿ.ಥಾಮಸ್‌ ಬಾರಿಸಿದ ಒಂದು ಗೋಲು ಮಾತ್ರ ತಂಡಕ್ಕೆ ಲಭಿಸಿತು. ಹೀಗಾಗಿ ಧಾರವಾಡ ಬೆಳ್ಳಿ ಪದಕ ಪಡೆಯುವ ಮೂಲಕ ಒಲಿಂಪಿಕ್ಸ್‌ನ ಫುಟ್‌ಬಾಲ್‌ ರನ್ನರ್ ಅಪ್‌ಗೆ ತೃಪ್ತಿ ಪಡೆಯಿತು. 

ಬೆಂಗಳೂರಿಗೆ ಕಂಚು: ಕೆಸಿಡಿ ಕ್ರೀಡಾಂಗಣದಲ್ಲಿ ಬೆಳಗ್ಗೆ ಕಂಚಿನ ಪದಕಕ್ಕಾಗಿ ಬೆಂಗಳೂರು ಮತ್ತು ಮಂಗಳೂರು ತಂಡದ ಮಧ್ಯೆ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡ 4-1 ಗೋಲುಗಳಿಂದ ಜಯ ಗಳಿಸಿ, ಕಂಚಿನ ಪದಕ ಪಡೆಯಿತು. 

ಬೆಂಗಳೂರು ಪರ ಮುನೆರುದ್ಧಿನ್‌ 21 ನಿಮಿಷದಲ್ಲಿ 1 ಗೋಲು ಬಾರಿಸಿದರೆ, ಸಂತೋಷ 46 ನಿಮಿಷದಲ್ಲಿ 1ಗೋಲು, ಹೆಲನ್‌ 49 ನಿಮಿಷದಲ್ಲಿ 1ಗೋಲು ಹಾಗೂ ಸಂತೋಷ 77 ನಿಮಿಷದಲ್ಲಿ ಮತ್ತೂಂದು  ಗೋಲು ಬಾರಿಸಿದ್ದು ಪಂದ್ಯವನ್ನು ಗೆಲ್ಲಿಸುವುದಕ್ಕೆ ಸಹಕಾರಿಯಾಯಿತು. ಇನ್ನು ಮಂಗಳೂರು ಪರ ಸಫಾನ್‌ 6ನೇ ನಿಮಿಷದಲ್ಲಿ ಒಂದು ಗೋಲು ಬಾರಿಸಿದ್ದು ಬಿಟ್ಟರೆ, ಬೇರೆ ಆಟಗಾರರ ಕಳಪೆ ಪ್ರದರ್ಶನದಿಂದ ಮಂಗಳೂರು 4ನೇ ಸ್ಥಾನಕ್ಕೆ ಕುಸಿಯಿತು. 

ಚಾಂಪಿಯನ್‌ ಟ್ರೋಫಿ ನೀಡಿದ ಜಿಲ್ಲಾಧಿಕಾರಿ: ಸಮಗ್ರ ವೀರಾಗ್ರಣಿ ಪಡೆದ ಬೆಳಗಾವಿ ತಂಡದ ಆಟಗಾರರನ್ನು ಫುಟ್‌ಬಾಲ್‌ ಪಂದ್ಯಾವಳಿ ನಡೆದ ಕೆಸಿಡಿ ಮೈದಾನದಲ್ಲೇ ಧಾರವಾಡ ಜಿಲ್ಲಾಧಿಕಾರಿ ಎಸ್‌.ಬಿ.ಬೊಮ್ಮನಹಳ್ಳಿ ಚಿನ್ನದ ಪದಕ ಮತ್ತು ಚಾಂಪಿಯನ್‌ ಟ್ರೋಫಿ ನೀಡಿ ಅಭಿನಂದಿಸಿದರು. ಅದೇ ರೀತಿ ರನ್ನರ್ ಅಪ್‌ ಆದ ಧಾರವಾಡ ತಂಡದ ಆಟಗಾರರಿಗೆ ಬೆಳ್ಳಿ ಪದಕ ಮತ್ತು ಟ್ರೋಫಿ ನೀಡಿದರೆ, ಬೆಂಗಳೂರು ತಂಡದ ಆಟಗಾರರಿಗೆ ಕಂಚಿನ ಪದಕ ನೀಡಿ ಅಭಿನಂದಿಸಿದರು.

ಟಾಪ್ ನ್ಯೂಸ್

HDK (3)

MUDA ಮಾತ್ರವಲ್ಲ ಸಿದ್ದರಾಮಯ್ಯ ಇನಕಲ್ ನಿವೇಶನವೂ ಅಕ್ರಮ: ಎಚ್ ಡಿಕೆ ಮತ್ತೊಂದು ಬಾಂಬ್

INDvsNZ: ಟೆಸ್ಟ್‌ ಕ್ರಿಕೆಟ್‌ ನಲ್ಲಿ 9000 ರನ್‌ ಪೂರೈಸಿದ ವಿರಾಟ್‌ ಕೊಹ್ಲಿ

INDvsNZ: ಟೆಸ್ಟ್‌ ಕ್ರಿಕೆಟ್‌ ನಲ್ಲಿ 9000 ರನ್‌ ಪೂರೈಸಿದ ವಿರಾಟ್‌ ಕೊಹ್ಲಿ

1-satyendrar

ED ಯಿಂದ ಬಂಧನಕ್ಕೊಳಗಾಗಿದ್ದ ಆಪ್ ನಾಯಕ ಸತ್ಯೇಂದ್ರ ಜೈನ್‌ ಗೆ ಜಾಮೀನು

INDvsNZ: 12ನೇ ತರಗತಿ ಪರೀಕ್ಷೆಗಾಗಿ ನ್ಯೂಜಿಲ್ಯಾಂಡ್‌ ವಿರುದ್ದ ಸರಣಿ ಕೈಬಿಟ್ಟ ಕ್ರಿಕೆಟರ್

INDvsNZ: 12ನೇ ತರಗತಿ ಪರೀಕ್ಷೆಗಾಗಿ ನ್ಯೂಜಿಲ್ಯಾಂಡ್‌ ವಿರುದ್ದ ಸರಣಿ ಕೈಬಿಟ್ಟ ಕ್ರಿಕೆಟರ್

sanjay-raut

Maharashtra; ಕೈ ನಾಯಕರಿಗೆ ಸಾಮರ್ಥ್ಯವಿಲ್ಲ..: ಸೀಟು ಹಂಚಿಕೆ ಕುರಿತು ರಾವತ್ ಅಸಮಾಧಾನ

UP: ಟೊಮ್ಯಾಟೋ ಸಾಗಿಸುತ್ತಿದ್ದ ಟ್ರಕ್ ಪಲ್ಟಿ… ರಾತ್ರಿಯಿಡೀ ಟೊಮ್ಯಾಟೋ ಕಾದು ಕೂತ ಪೊಲೀಸರು

UP: ಟೊಮ್ಯಾಟೊ ಸಾಗಿಸುತ್ತಿದ್ದ ಟ್ರಕ್ ಪಲ್ಟಿ… ರಾತ್ರಿಯಿಡೀ ಟೊಮ್ಯಾಟೊ ಕಾದು ಕೂತ ಪೊಲೀಸರು

Explainer: FBI ವಾಂಟೆಡ್‌ ಲಿಸ್ಟ್‌ ನಲ್ಲಿ ಭಾರತದ ಮಾಜಿ ರಾ ಅಧಿಕಾರಿ;ಯಾರು ವಿಕಾಸ್‌ ಯಾದವ್?

Explainer: FBI ವಾಂಟೆಡ್‌ ಲಿಸ್ಟ್‌ ನಲ್ಲಿ ಭಾರತದ ಮಾಜಿ ರಾ ಅಧಿಕಾರಿ;ಯಾರು ವಿಕಾಸ್‌ ಯಾದವ್?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Victory is possible if CP Yogeshwar becomes candidate for Channapatna: Arvind Bellad

BJP: ಚನ್ನಪಟ್ಟಣಕ್ಕೆ ಸಿಪಿ ಯೋಗೇಶ್ವರ್ ಅಭ್ಯರ್ಥಿಯಾದರೆ ಗೆಲುವು ಸಾಧ್ಯ: ಅರವಿಂದ ಬೆಲ್ಲದ್

Rain: ಹಿಂಗಾರು ಮಳೆಯಬ್ಬರಕ್ಕೆ ಇಬ್ಬರು ಸಾವು, ಬೆಳೆ ಹಾನಿ

Rain: ಹಿಂಗಾರು ಮಳೆಯಬ್ಬರಕ್ಕೆ ಇಬ್ಬರು ಸಾವು, ಬೆಳೆ ಹಾನಿ

Flight: ಹುಬ್ಬಳ್ಳಿ-ಅಹ್ಮದಾಬಾದ್‌ ವಿಮಾನ ಸೇವೆ ಆರಂಭಕ್ಕೆ ಜೋಶಿ,ನಾಯ್ಡು ಚರ್ಚೆ

Flight: ಹುಬ್ಬಳ್ಳಿ-ಅಹ್ಮದಾಬಾದ್‌ ವಿಮಾನ ಸೇವೆ ಆರಂಭಕ್ಕೆ ಜೋಶಿ,ನಾಯ್ಡು ಚರ್ಚೆ

Pralhad Joshi: ಬೆಂಬಲ ಬೆಲೆ ಹೆಚ್ಚಳದೊಂದಿಗೆ ಅನ್ನದಾತರಿಗೆ ನೆರವು

Pralhad Joshi: ಬೆಂಬಲ ಬೆಲೆ ಹೆಚ್ಚಳದೊಂದಿಗೆ ಅನ್ನದಾತರಿಗೆ ನೆರವು

1-rss

Hubli; ಗಲಭೆ ಪ್ರಕರಣ ವಾಪಸ್ ಖಂಡಿಸಿ ಠಾಣೆ ಮುಂಭಾಗ ಶ್ರೀರಾಮ ಸೇನೆ ಪ್ರತಿಭಟನೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

ಟಿಕೆಟ್‌ ಕೊಡಿಸದೆ ವಂಚನೆ: ಸಚಿವ ಜೋಶಿ ಸೋದರ, ಸೋದರಿ, ಅಳಿಯನ ವಿರುದ್ಧ ಕೇಸ್‌

ಟಿಕೆಟ್‌ ಕೊಡಿಸದೆ ವಂಚನೆ: ಸಚಿವ ಜೋಶಿ ಸೋದರ, ಸೋದರಿ, ಅಳಿಯನ ವಿರುದ್ಧ ಕೇಸ್‌

HDK (3)

MUDA ಮಾತ್ರವಲ್ಲ ಸಿದ್ದರಾಮಯ್ಯ ಇನಕಲ್ ನಿವೇಶನವೂ ಅಕ್ರಮ: ಎಚ್ ಡಿಕೆ ಮತ್ತೊಂದು ಬಾಂಬ್

INDvsNZ: ಟೆಸ್ಟ್‌ ಕ್ರಿಕೆಟ್‌ ನಲ್ಲಿ 9000 ರನ್‌ ಪೂರೈಸಿದ ವಿರಾಟ್‌ ಕೊಹ್ಲಿ

INDvsNZ: ಟೆಸ್ಟ್‌ ಕ್ರಿಕೆಟ್‌ ನಲ್ಲಿ 9000 ರನ್‌ ಪೂರೈಸಿದ ವಿರಾಟ್‌ ಕೊಹ್ಲಿ

1-satyendrar

ED ಯಿಂದ ಬಂಧನಕ್ಕೊಳಗಾಗಿದ್ದ ಆಪ್ ನಾಯಕ ಸತ್ಯೇಂದ್ರ ಜೈನ್‌ ಗೆ ಜಾಮೀನು

INDvsNZ: 12ನೇ ತರಗತಿ ಪರೀಕ್ಷೆಗಾಗಿ ನ್ಯೂಜಿಲ್ಯಾಂಡ್‌ ವಿರುದ್ದ ಸರಣಿ ಕೈಬಿಟ್ಟ ಕ್ರಿಕೆಟರ್

INDvsNZ: 12ನೇ ತರಗತಿ ಪರೀಕ್ಷೆಗಾಗಿ ನ್ಯೂಜಿಲ್ಯಾಂಡ್‌ ವಿರುದ್ದ ಸರಣಿ ಕೈಬಿಟ್ಟ ಕ್ರಿಕೆಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.