ಪ್ರಹಸನ ಆಗದಿರಲಿ ಫ‌ುಟ್‌ಪಾತ್‌ ತೆರವು

| ಇಲ್ಲಿ ಹೇಳ್ಳೋರಿಲ್ಲ..ಕೇಳ್ಳೋರಿಲ್ಲ.. | ನಿಯಮಗಳಿಗೆ ಬೆಲೆ ಇಲ್ಲ | ಪಾಲಿಕೆಯ ಚರ್ಚೆಗಳಿಗೆ ಲೆಕ್ಕವೇ ಇಲ್ಲ

Team Udayavani, Dec 30, 2020, 3:27 PM IST

ಪ್ರಹಸನ ಆಗದಿರಲಿ ಫ‌ುಟ್‌ಪಾತ್‌ ತೆರವು

ಹುಬ್ಬಳ್ಳಿ: ಅವಳಿನಗರದಲ್ಲಿ ಕೈಗೊಂಡಿರುವ ಫ‌ುಟ್‌ಪಾತ್‌ ತೆರವು ಮತ್ತೂಂದು ಪ್ರಹಸನವೋ ಇಲ್ಲವೆ ಎಂಟು ದಿನದಲ್ಲಿ ಮೊದಲಿದ್ದ ಸ್ಥಿತಿಯ ಚಿತ್ರಣ ಗೋಚರಿಸುವಂತೆ ಆಗದಿರಲಿ ಎಂಬುದು ಮಹಾನಗರ ಜನತೆ ಆಶಯ.

ಈ ಹಿಂದೆ ನಡೆದ ಫ‌ುಟ್‌ಪಾತ್‌ ಹಾಗೂ ಪಾರ್ಕಿಂಗ್‌ ಸ್ಥಳ ಅತಿಕ್ರಮಣತೆರವು ಕಾರ್ಯಾಚರಣೆ ಅನಂತರದ ಸ್ಥಿತಿ ಗಮನಿಸಿದರೆ ಜನತೆಗೆ ಇಂತಹ ಅನುಮಾನ ಬರುವುದು ಸಹಜ.

ಫ‌ುಟ್‌ಪಾತ್‌, ಪಾರ್ಕಿಂಗ್‌ ತೆರವು ಕಾರ್ಯಾಚರಣೆಯೇ ಇರಲಿ, ಹಂದಿ-ಬಿಡಾಡಿ ಜಾನುವಾರುಗಳ ಸೆರೆಯೇ ಆಗಲಿಎಲ್ಲವೂ ಇಲ್ಲಿಯವರೆಗೆ ಆರಂಭಶೂರತನಪ್ರದರ್ಶನವಾಗಿದ್ದು ಬಿಟ್ಟರೆ ಹೆಚ್ಚಿನಫ‌ಲಿತಾಂಶ ನೀಡಿಲ್ಲ ಎಂಬುದನ್ನು ವಾಸ್ತವದ ಸ್ಥಿತಿ ಸಾಕ್ಷಿ ಹೇಳುತ್ತಿದೆ.

ಹೇಳ್ಳೋರು- ಕೇಳ್ಳೋರಿಲ್ಲದ ಸ್ಥಿತಿ:ಅವಳಿನಗರದ ಕೆಲ ಪ್ರದೇಶಗಳಲ್ಲಿನಪಾದಚಾರಿ ಮಾರ್ಗ ಗಮನಿಸಿದರೆ ಈ ನಗರಕ್ಕೆಹೇಳುವವರು, ಕೇಳುವವರು ಯಾರುಇಲ್ಲವೇ ಎಂಬ ಶಂಕೆ ಮೂಡದಿರದು. ಅಂಗಡಿಕಾರರು ರಾಜಾರೋಷವಾಗಿ ಪಾದಚಾರಿ ಮಾರ್ಗದಲ್ಲೇ ತಮ್ಮಮಾರಾಟ ವಸ್ತುಗಳನ್ನು ಇರಿಸಿದ್ದರೆ, ಡಬ್ಟಾಅಂಗಡಿಗಳವರು, ಬೀದಿಬದಿ ವ್ಯಾಪಾರಿಗಳು ನಿಯಮಗಳಿರುವುದು ನಮಗಲ್ಲ ಎಂಬ ಗತ್ತಿನಲ್ಲಿರುತ್ತಾರೆ.

ಅವಳಿನಗರದ ಕೊಪ್ಪಿಕರ ರಸ್ತೆ, ದುರ್ಗದಬಯಲು ವೃತ್ತ, ಮರಾಠಗಲ್ಲಿ, ದಾಜೀಬಾನ ಪೇಟೆ, ಸರಾಫ್ ಗಟ್ಟಿ, ಕೇಶ್ವಾಪುರ, ಪಿ.ಬಿ.ರಸ್ತೆ,ಗೋಕುಲರಸ್ತೆ, ಹಳೆ ಬಸ್‌ನಿಲ್ದಾಣ ಮುಂದೆ,ಬಸವವನ, ಹಳೇ ಹುಬ್ಬಳ್ಳಿ ವೃತ್ತ, ಕೋರ್ಟ್‌ವೃತ್ತ, ಸೂಪರ್‌ ಮಾರ್ಕೆಟ್‌, ಆಜಾದ್‌ಪಾರ್ಕ್‌ ರೋಡ್‌, ಸಿವಿಲ್‌ ಆಸ್ಪತ್ರೆ ರಸ್ತೆ,ಶ್ರೀನಗರ ಇನ್ನಿತರೆ ಕಡೆಗಳಲ್ಲಿ ಫ‌ುಟ್‌ಪಾತ್‌ ಗಳನ್ನು ಹುಡುಕಬೇಕಾದ ಸ್ಥಿತಿ ಇದೆ. ಫ‌ುಟ್‌ಪಾತ್‌ಗಳನ್ನು ಅತಿಕ್ರಮಿಸಿಕೊಂಡುವ್ಯಾಪಾರ- ವಹಿವಾಟು ಮಾಡುವುದುಒಂದು ಕಡೆಯಾದರೆ, ಫ‌ುಟ್‌ಪಾತ್‌ನಲ್ಲಿ ತಿಂಡಿ-ತಿನಿಸು ಸೇವನೆಗೆಂದು ಬರುವವರುದ್ವಿಚಕ್ರ ವಾಹನಗಳನ್ನು ರಸ್ತೆಯಲ್ಲೇ ನಿಲ್ಲಿಸುವುದರಿಂದ ಸುಗಮ ಸಂಚಾರಕ್ಕೆ ತೊಂದರೆ ಆಗುತ್ತಿದೆ.

ಇದು ಮೊದಲಲ್ಲ-ಕೊನೆಯಲ್ಲ: ಅವಳಿನಗರದಲ್ಲಿ ಫ‌ುಟ್‌ಪಾತ್‌ ತೆರವುಕಾರ್ಯಾಚರಣೆ ಇದು ಮೊದಲಲ್ಲ,ಕೊನೆಯಂತೂ ಅಲ್ಲವೇ ಅಲ್ಲ. ಫ‌ುಟ್‌ಪಾತ್‌ಹಾಗೂ ಪಾರ್ಕಿಂಗ್‌ ಅತಿಕ್ರಮಣ ಬಗ್ಗೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಚರ್ಚೆಆಗಿರುವುದಕ್ಕೆ ಲೆಕ್ಕವೇ ಇಲ್ಲ. ಜನಪ್ರತಿನಿಧಿಗಳ ಸಭೆಯಲ್ಲಿ ನೀಡಿದ ಸೂಚನೆಗಳು ಸಾಕಷ್ಟುಆದರೂ ನಿರೀಕ್ಷಿತ ಫ‌ಲ ಮಾತ್ರ ದೊರಕಿಲ್ಲ ಎನ್ನಬಹುದು.

ಈ ಹಿಂದೆ ಮಣಿವಣ್ಣನ್‌ ಅವರು ಪಾಲಿಕೆ ಆಯುಕ್ತರಾಗಿದ್ದಾಗ ರಸ್ತೆ ಅಗಲೀಕರಣ,ಫ‌ುಟ್‌ಪಾತ್‌ ತೆರವು ಕಾರ್ಯಾಚರಣೆ ದೊಡ್ಡಸದ್ದು ಮಾಡಿತ್ತು. ಅದಾದ ಕೆಲ ದಿನಗಳಲ್ಲಿ ಮತ್ತದೇ ಯಥಾಸ್ಥಿತಿ ರೂಪುಗೊಂಡಿತ್ತು. ಡಾ|ಅಜಯ ನಾಗಭೂಷಣ ಅವರು ಆಯುಕ್ತರಾಗಿದ್ದಾಗಲೂ ಫ‌ುಟ್‌ಪಾತ್‌ತೆರವು ಕಾರ್ಯಾಚರಣೆ ನಡೆದಿತ್ತು. ಡಾ| ತ್ರಿಲೋಕಚಂದ್ರ ಅವರು ಆಯುಕ್ತರಾಗಿದ್ದಾಗಫ‌ುಟ್‌ಪಾತ್‌ ಹಾಗೂ ಪಾರ್ಕಿಂಗ್‌ ಅತಿಕ್ರಮಣತೆರವು ಅಭಿಯಾನ ಕೈಗೊಳ್ಳಲಾಗಿತ್ತು.ಅನೇಕ ಒತ್ತಡ, ಅಡೆತಡೆಗಳ ನಡುವೆಯೂ ಕಟ್ಟಡಗಳಲ್ಲಿ ವಾಹನ ನಿಲುಗಡೆಗೆಂದು ಇದ್ದ ಜಾಗವನ್ನು ಕಟ್ಟಡ ಮಾಲಿಕರು ವಾಣಿಜ್ಯಮಳಿಗೆಗಳಾಗಿಸಿ ಬಾಡಿಗೆ ನೀಡುವ, ಮಾರಾಟ ಮಾಡುವ ಕಾರ್ಯ ಮಾಡಿದ್ದರು.

ಅವುಗಳ ತೆರವು ಕಾರ್ಯ ನಡೆದಿತ್ತಾದರೂ ಅನಂತರದಲ್ಲಿ ಬಂದ ಆಯುಕ್ತರು ಅದಕ್ಕೆ ಹೆಚ್ಚು ಗಮನ ನೀಡದ್ದರಿಂದ ಅದೆಷ್ಟೋ ಕಟ್ಟಡಗಳ ಪಾರ್ಕಿಂಗ್‌ ಜಾಗ ಮತ್ತದೇ ಹಳೇ ಸ್ಥಿತಿಗೆ ಮರಳಿದೆ.

ಅವಳಿನಗರದ ಅನೇಕ ಕಲ್ಯಾಣ ಮಂಟಪಗಳಿಗೆ ಪಾರ್ಕಿಂಗ್‌ ವ್ಯವಸ್ಥೆಯೇಇಲ್ಲವಾಗಿದೆ. ಮದುವೆ ಸಂದರ್ಭದಲ್ಲಿರಸ್ತೆಯಲ್ಲಿಯೇ ವಾಹನಗಳ ನಿಲುಗಡೆಸಂಚಾರಕ್ಕೆ ತೊಂದರೆ ಉಂಟುಮಾಡುತ್ತಿದ್ದರೂ ಹೇಳುವವರು-ಕೇಳುವವರು ಇಲ್ಲದ ಸ್ಥಿತಿ ಇದೆ.ಇನ್ನು ರಸ್ತೆಗಳಲ್ಲಿ ಪಾದಚಾರಿಮಾರ್ಗಗಳನ್ನು ವ್ಯಾಪಾರಸ್ಥರು,ಮಾರಾಟಗಾರರು ಅತಿಕ್ರಮಿಸಿದ್ದರೆ,ರಸ್ತೆ ಬದಿಯಲ್ಲಿ ಆಟೋರಿಕ್ಷಾದವರು ತಿರುವು, ವೃತ್ತ, ವಾಹನ ದಟ್ಟಣೆ ಇದ್ದರೂನಮಗೇನು ಸಂಬಂಧವಿಲ್ಲ ಎನ್ನುವಂತೆ ಗಾಂಭೀರ್ಯದಿಂದ ನಿಂತಿರುತ್ತಾರೆ.

ಜನಪ್ರತಿನಿಧಿಗಳ ಗಟ್ಟಿ ನಿಲುವು ಅವಶ್ಯ: ಫ‌ುಟ್‌ಪಾತ್‌, ಪಾರ್ಕಿಂಗ್‌ ಜಾಗ ಅತಿಕ್ರಮಣ ತೆರವು ವಿಚಾರದಲ್ಲಿ ಅವಳಿನಗರದಜನಪ್ರತಿನಿಧಿಗಳು ಪಕ್ಷಭೇದ ಮರೆತು ಗಟ್ಟಿ ನಿಲುವು ತಾಳಬೇಕಿದೆ. ಅಧಿಕಾರಿಗಳು ತೆರವು ಕಾರ್ಯಾರಣೆಗೆಮುಂದಾಗುತ್ತಿದ್ದಂತೆಯೇ ಯಾರಧ್ದೋಒತ್ತಡ ಬರುತ್ತದೆ. ಇರಿಸಿದ ಹೆಜ್ಜೆ ಹಿಂದೆಸರಿಯುತ್ತದೆ. ಜನಪ್ರತಿನಿಧಿಗಳ ಪರೋಕ್ಷಬೆಂಬಲ ಪ್ರತಿಭಟನೆ ರೂಪ ತಾಳುತ್ತದೆ.ಅಲ್ಲಿಗೆ ಉದ್ದೇಶಿತ ಕಾರ್ಯಾಚರಣೆಯೇಅರ್ಥ ಕಳೆದುಕೊಳ್ಳುವಂತಾಗುತ್ತದೆ. ಸರಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಕೋಟ್ಯಂತರ ರೂಪಾಯಿ ತಂದು ನಗರ ಸುಂದರೀಕರಣ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ಯೋಜನೆ ಅನುಷ್ಠಾನಗೊಂಡ ಕೆಲವೇ ತಿಂಗಳಲ್ಲಿ ಅವಮಾನಿಸುವ ರೀತಿಯಲ್ಲಿ ಜಾಗದ ಅತಿಕ್ರಮಣ ಆಗಿರುತ್ತದೆ. ಸುಂದರನಗರ ನಿರ್ಮಾಣ ನಿಟ್ಟಿನಲ್ಲಿ ಇಂತಹದ್ದನ್ನುತಡೆಯುವ ನಿಟ್ಟಿನಲ್ಲಿ ಜನಪ್ರತಿನಿಧಿಗಳುರಾಜಕೀಯ ಲೆಕ್ಕಾಚಾರ ಬದಿಗಿರಿಸಿ ಅಭಿವೃದ್ಧಿಗೆ ಪಕ್ಷಾತೀತ ನಿಲುವು ತಾಳಬೇಕಿದೆ.

ಜನರಿಗೆ ತಿಳಿವಳಿಕೆ ಮೂಡಿಸಬೇಕಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಆಯಾ ಪ್ರದೇಶದಲ್ಲಿ ಒಂದು ಜಾಗ ಗುರುತಿಸಿ ಅಲ್ಲಿಯೇ ಅವರೆಲ್ಲರೂ ವ್ಯಾಪಾರಕ್ಕೆ ಮುಂದಾಗುವ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಬೇಕಿದೆ. ಜನರಿಗೂ ದೂರವಾಗದಂತೆ, ವ್ಯಾಪಾರಿ ಗಳಿಗೂ ತೊಂದರೆ ಆಗದಂತೆ ಒಂದಡೆ ಬೀದಿ ಬದಿ ವ್ಯಾಪಾರಿಗಳಿಗೆವ್ಯವಸ್ಥಿತ ರೀತಿಯ ಸೌಲಭ್ಯ  ನೀಡುವ ನಿಟ್ಟಿನಲ್ಲಿ ಚಿಂತಿಸಬೇಕಿದೆ.

ಅಧಿಕಾರಿಗಳು ಮೂರು ವರ್ಷಕ್ಕೊಮ್ಮೆ, ಆರು ವರ್ಷಕ್ಕೊಮ್ಮೆ ತೆರವು ಕಾರ್ಯಾಚರಣೆ ಮಾಡುವ ಬದಲು ಕನಿಷ್ಠ ತಿಂಗಳಲ್ಲಿ ಒಂದು ಬಾರಿಯಾದರೂ ಒಂದು ದಿನ ನಿಗದಿಗೊಳಿಸಿ ಎಲ್ಲ ಕಡೆಗೂ ಏಕಕಾಲಕ್ಕೆ ಕಾರ್ಯಾಚರಣೆ ಕೈಗೊಳ್ಳಬೇಕಿದೆ. ಮುಖ್ಯವಾಗಿ ಆಯಾ ವಲಯಗಳಲ್ಲಿ ಅತಿಕ್ರಮಣಕ್ಕೆವಲಯ ಅಧಿಕಾರಿ-ಸಿಬ್ಬಂದಿಯನ್ನುಜವಾಬ್ದಾರರನ್ನಾಗಿಸಿದರೆ, ಅತಿಕ್ರಮಣ ಹಾವಳಿಗೆ ಒಂದಿಷ್ಟು ಕಡಿವಾಣ ಹಾಕಬಹುದಾಗಿದೆ ಎಂಬುದು ಅನೇಕರ ಅನಿಸಿಕೆ.

ಕಟ್ಟುನಿಟ್ಟಿನ ಕ್ರಮ ಮುಂದುವರಿಯಲಿ.. :

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯಲ್ಲಿಅತ್ರಿಕಮಣ ತೆರವು ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು. ಜತೆಗೆಸೋಮವಾರಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಅಧಿಕಾರಿಗಳ ಸಭೆ ನಡೆಸಿ ಅವಳಿನಗರದಲ್ಲಿ ಏಕಕಾಲಕ್ಕೆ ಫ‌ುಟ್‌ಪಾತ್‌ ತೆರವು ಕಾರ್ಯಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಫ‌ುಟ್‌ ಪಾತ್‌ ತೆರವು ಜತೆಗೆ ಕನ್ನಡಕ್ಕೆ ಆದ್ಯತೆ ನೀಡದ ಬೋರ್ಡ್‌ಗಳ ತೆರವು ಕಾರ್ಯವನ್ನು ಕನ್ನಡ ಜಾಗೃತಿ ಸಮಿತಿ ಕೈಗೊಂಡಿದೆ.

 

ಅಮರೇಗೌಡ ಗೋನವಾರ

ಟಾಪ್ ನ್ಯೂಸ್

12-gundya

Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು

ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಲ್ಕರ್ ಹತ್ಯೆ ಆರೋಪಿ: ಮೂಲಗಳು

Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ

Kiwi player will be away from Test cricket after the England series

Test: ಇಂಗ್ಲೆಂಡ್‌ ಸರಣಿಯ ಬಳಿಕ ಟೆಸ್ಟ್‌ ಕ್ರಿಕೆಟ್‌ ನಿಂದ ದೂರವಾಗಲಿದ್ದಾರೆ ಕಿವೀಸ್‌ ಆಟಗಾರ

Shimoga; Congress – Statement against Muslims: Sumoto case against KS Eshwarappa

Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-

NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ

4-

ಸಿಎಂ ಆಗಿದ್ದವರು ಈ‌ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ

ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್‌ ನಿಂದ ಹಲ್ಲೆ

dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್‌ ನಿಂದ ಹಲ್ಲೆ

CM-siddu

Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ

b s yediyurappa

By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್‌ ವೈ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Daali dhananjay starrer Zebra movie

Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್‌ ಸಾಥ್‌

12-gundya

Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು

ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಲ್ಕರ್ ಹತ್ಯೆ ಆರೋಪಿ: ಮೂಲಗಳು

Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ

Kiwi player will be away from Test cricket after the England series

Test: ಇಂಗ್ಲೆಂಡ್‌ ಸರಣಿಯ ಬಳಿಕ ಟೆಸ್ಟ್‌ ಕ್ರಿಕೆಟ್‌ ನಿಂದ ದೂರವಾಗಲಿದ್ದಾರೆ ಕಿವೀಸ್‌ ಆಟಗಾರ

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.