ಸರ್ಕಾರಿ ಯೋಜನೆಗೆ ಖಾಸಗಿ ಸಹಭಾಗಿತ್ವ ಅವಶ್ಯ 

Team Udayavani, Jun 14, 2018, 5:19 PM IST

14-june-20.jpg

ಧಾರವಾಡ: ಸರ್ಕಾರಿ ಯೋಜನೆಗಳ ಪರಿಣಾಮಕಾರಿ ನೀತಿ ನಿರೂಪಣೆ ಹಾಗೂ ವ್ಯವಸ್ಥಿತ ರೀತಿ ಅನುಷ್ಠಾನಕ್ಕೆ ಖಾಸಗಿ
ಸಹಭಾಗಿತ್ವ ಮತ್ತು ಸಾಮುದಾಯಿಕ ಸಹಕಾರ ಅನಿವಾರ್ಯವಾಗಿದ್ದು, ಅರ್ಹ ಫಲಾನುಭವಿಗೆ ಯೋಜನೆಯ ಫಲ ಮುಟ್ಟುವ ಜವಾಬ್ದಾರಿ ಎಲ್ಲರ ಮೇಲೂ ಇದೆ ಎಂದು ಜಿಪಂ ಸಿಇಒ ಆರ್‌. ಸ್ನೇಹಲ್‌ ಹೇಳಿದರು.

ನಗರದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್‌ ಸಾಂಸ್ಕೃತಿಕ ಸಭಾಭವನದಲ್ಲಿ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ ಯೋಜಿಸಿದ ವಿವಿಧ ಶೈಕ್ಷಣಿಕ ಪ್ರಕಲ್ಪಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಧಾರವಾಡ ಜಿಲ್ಲೆಯ ಶೈಕ್ಷಣಿಕ ಫಲಿತಾಂಶ ರಾಜ್ಯದಲ್ಲೇ ಪ್ರಥಮ ಹಂತಕ್ಕೆ ಕೊಂಡೊಯ್ಯಲು ಯೋಜಿಸಲಾಗಿದ್ದು, ಟಾಪ್‌ 3 ಸ್ಥಾನಕ್ಕೆ ನಮ್ಮ ಪರಿಶ್ರಮ ಮೀಸಲಿದೆ. ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌, ಶಾಂತೇಶ ಎಜುಕೇಷನ್‌ ಸೊಸೈಟಿ, ಧಾರವಾಡ ಹಾಗೂ ಕೊಲ್ಕಾಮ್‌ ಆಕೃತಿ ಸಹಕಾರದಲ್ಲಿ ಮೂರು ಯೋಜನೆಗಳು ಕಾರ್ಯಗತಗೊಳ್ಳುತ್ತಿವೆ. ಸಾರ್ವಜನಿಕರು, ಖಾಸಗಿ ಸಂಸ್ಥೆಗಳು, ಸರ್ಕಾರದ ಇಲಾಖೆಗಳು ‘ಥ್ರಿ -ಪಿ’ ಮಾದರಿಯಲ್ಲಿ ಮಕ್ಕಳಿಗಾಗಿ ವಿನ್ಯಾಸಗೊಳಿಸಲಾದ ವೈಜ್ಞಾನಿಕ ಯೋಜನೆಗಳಿಗೆ ಬೆನ್ನೆಲುಬಾಗಿದ್ದು, ಜಿಲ್ಲಾಡಳಿತದ ನೆರವು ಈ ಸಂಸ್ಥೆಗಳಿಗೆ ನೀಡಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ರಾಜ್ಯದ ವಿಶ್ರಾಂತ ವಿಶೇಷ ಕಾರ್ಯದರ್ಶಿ ಬಿ.ವಿ. ಕುಲಕರ್ಣಿ ಮಾತನಾಡಿ, ಮುಂಬರುವ ವರ್ಷಗಳಲ್ಲಿ ಕೇವಲ ಹೆಣ್ಣು ಮಕ್ಕಳಿಗೆ ಮಾತ್ರವಲ್ಲ, 30 ಜನ ಗಂಡು ಮಕ್ಕಳಿಗೂ ವಿವೇಕ ಸ್ಕಾಲರ್‌ ಪ್ರೊ ಗ್ರಾಂ ಅಡಿ ಶಿಷ್ಯವೇತನ ದೊರಕಿಸಲು ಯೋಜಿಸಲಾಗುವುದು. ಉನ್ನತ ಶಿಕ್ಷಣ ಪಡೆಯುವ ಅರ್ಹತೆಗಳಿಸುವ 10 ಮಕ್ಕಳಿಗೂ ಈ ಶಿಷ್ಯವೇತನ ಮುಂದುವರಿಸಲಾಗುವುದು ಎಂದರು. ಎಸ್‌.ವಿ.ವೈ.ಎಂ. ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಡಾ|ಕುಮಾರ್‌ ಜಿ.ಎಸ್‌. ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿ ಓದಿ, ಎಸ್‌ಎಸ್‌ಎಲ್‌ಸಿ ಹಂತದಲ್ಲಿ ಗಮನಾರ್ಹ ಸಾಧನೆಗೈದ 30 ಮಕ್ಕಳ ಪೈಕಿ, ಹೆಬ್ಬಳ್ಳಿಯ ಸುಧಾ ಮಠಪತಿ, ರೇಣುಕಾ ದಿಂಡೂರ, ನರೇಂದ್ರದ ಯಶೋಧಾ ಪತ್ತಾರ, ಚಿಕ್ಕಮಲ್ಲಿಗವಾಡದ ಅಂಜಲಿ ನಡುವಿನಮನಿ, ಅಮ್ಮಿನಬಾವಿಯ ಬಷೀರಾ ಬಾಂಗಿ ಅವರಿಗೆ ಭಾರತ ಬುಕ್‌ ಡಿಪೋ ವತಿಯಿಂದ ಅಶೋಕ ಹುದ್ದಾರ ಅವರು ಉಚಿತವಾಗಿ ಕೊಡಮಾಡಿದ ಪಿಯುಸಿ ಪ್ರಥಮ ವರ್ಷದ ವಿಜ್ಞಾನ ಪಠ್ಯ ಪುಸ್ತಕಗಳನ್ನು ಐವರಿಗೆ ಸಾಂಕೇತಿಕವಾಗಿ ಕೊಡಲಾಯಿತು.

ಸಂಯೋಜಕ ಜಯಂತ್‌ ಸ್ವಾಗತಿಸಿದರು. ಪಾಲಕರ ಪರ ದುರ್ಗಪ್ಪ ನಡುವಿನಮನಿ, ವಿದ್ಯಾರ್ಥಿನಿಯರ ಪರ ಮಂಜುಳಾ ಹೊಸಮನಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಹರ್ಷವರ್ಧನ ಶೀಲವಂತ ನಿರೂಪಿಸಿದರು. ಡಾ|ಎಸ್‌.ಎನ್‌ ಹೆಗಡೆ ವಂದಿಸಿದರು.

ಟಾಪ್ ನ್ಯೂಸ್

INDvAUS; ಕೊನೆಗೂ ನಿವೃತ್ತಿ ಸುದ್ದಿಯ ಬಗ್ಗೆ ಮೌನ ಮುರಿದ ರೋಹಿತ್‌ ಶರ್ಮಾ; ವಿಡಿಯೋ ನೋಡಿ

INDvAUS; ಕೊನೆಗೂ ನಿವೃತ್ತಿ ಸುದ್ದಿಯ ಬಗ್ಗೆ ಮೌನ ಮುರಿದ ರೋಹಿತ್‌ ಶರ್ಮಾ; ವಿಡಿಯೋ ನೋಡಿ

Gadag: ಡಿವೈಡರ್ ಗೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರು ಯುವಕರ ಸಾವು

Gadag: ಡಿವೈಡರ್ ಗೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರು ಯುವಕರ ಸಾವು

JDS leader hits at Chikkaballapura

Chikkaballapura: ಮಾರಕಾಯುಧಗಳಿಂದ ಜೆಡಿಎಸ್ ಮುಖಂಡನ ಭೀಕರ ಕೊಲೆ

Horoscope new-1

Horoscope: ಹೆಚ್ಚಿನ ಜವಾಬ್ದಾರಿಗಳಿಗೆ ಸಿದ್ಧತೆ, ಗೃಹಿಣಿಯರ ಸ್ವಂತ ಆದಾಯ ಗಳಿಕೆ ವೃದ್ಧಿ

Syria ಕ್ಷಿಪಣಿ ಘಟಕ ಉಡಾಯಿಸಿದ ಇಸ್ರೇಲ್‌!120 ಕಮಾಂಡೋಗಳ 3 ಗಂಟೆ ಕಾರ್ಯಾಚರಣೆ

Syria ಕ್ಷಿಪಣಿ ಘಟಕ ಉಡಾಯಿಸಿದ ಇಸ್ರೇಲ್‌!120 ಕಮಾಂಡೋಗಳ 3 ಗಂಟೆ ಕಾರ್ಯಾಚರಣೆ

US Satellite: ಅಮೆರಿಕದ ಸಂವಹನ ಉಪಗ್ರಹ ಭಾರತದ ರಾಕೆಟ್‌ನಿಂದ ಲಾಂಚ್‌

US Satellite: ಅಮೆರಿಕದ ಸಂವಹನ ಉಪಗ್ರಹ ಭಾರತದ ರಾಕೆಟ್‌ನಿಂದ ಲಾಂಚ್‌

PM Modi Gifts: 2023ರಲ್ಲಿ ಬೈಡನ್‌ ಪತ್ನಿ ಜಿಲ್‌ ಅವರಿಗೆ ಮೋದಿ 17 ಲಕ್ಷದ ಉಡುಗೊರೆ

PM Modi Gifts: 2023ರಲ್ಲಿ ಬೈಡನ್‌ ಪತ್ನಿ ಜಿಲ್‌ ಅವರಿಗೆ ಮೋದಿ 17 ಲಕ್ಷದ ಉಡುಗೊರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

prahlad jo shi

Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು‌ ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ

ಹೊಸ ವರ್ಷದ ಕೊಡುಗೆ: ಬೈಸಿಕಲ್‌ ಉತ್ತೇಜನಕ್ಕೆ ಉಚಿತ ರೈಡ್‌

ಹೊಸ ವರ್ಷದ ಕೊಡುಗೆ: ಬೈಸಿಕಲ್‌ ಉತ್ತೇಜನಕ್ಕೆ ಉಚಿತ ರೈಡ್‌

Laxmi Hebbalkar  ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ

Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ

Hubballi

Hubballi: ಹಳೇ ವೈಷಮ್ಯದಿಂದ ಸಹಚರರೊಂದಿಗೆ ಸೇರಿ ಹಲ್ಲೆ; ವ್ಯಕ್ತಿ ಮೃತ್ಯು

Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ

Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

INDvAUS; ಕೊನೆಗೂ ನಿವೃತ್ತಿ ಸುದ್ದಿಯ ಬಗ್ಗೆ ಮೌನ ಮುರಿದ ರೋಹಿತ್‌ ಶರ್ಮಾ; ವಿಡಿಯೋ ನೋಡಿ

INDvAUS; ಕೊನೆಗೂ ನಿವೃತ್ತಿ ಸುದ್ದಿಯ ಬಗ್ಗೆ ಮೌನ ಮುರಿದ ರೋಹಿತ್‌ ಶರ್ಮಾ; ವಿಡಿಯೋ ನೋಡಿ

Gadag: ಡಿವೈಡರ್ ಗೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರು ಯುವಕರ ಸಾವು

Gadag: ಡಿವೈಡರ್ ಗೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರು ಯುವಕರ ಸಾವು

JDS leader hits at Chikkaballapura

Chikkaballapura: ಮಾರಕಾಯುಧಗಳಿಂದ ಜೆಡಿಎಸ್ ಮುಖಂಡನ ಭೀಕರ ಕೊಲೆ

Horoscope new-1

Horoscope: ಹೆಚ್ಚಿನ ಜವಾಬ್ದಾರಿಗಳಿಗೆ ಸಿದ್ಧತೆ, ಗೃಹಿಣಿಯರ ಸ್ವಂತ ಆದಾಯ ಗಳಿಕೆ ವೃದ್ಧಿ

Syria ಕ್ಷಿಪಣಿ ಘಟಕ ಉಡಾಯಿಸಿದ ಇಸ್ರೇಲ್‌!120 ಕಮಾಂಡೋಗಳ 3 ಗಂಟೆ ಕಾರ್ಯಾಚರಣೆ

Syria ಕ್ಷಿಪಣಿ ಘಟಕ ಉಡಾಯಿಸಿದ ಇಸ್ರೇಲ್‌!120 ಕಮಾಂಡೋಗಳ 3 ಗಂಟೆ ಕಾರ್ಯಾಚರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.