ಸುಸ್ಥಿರ ಸಮಾಜದ ನಿರ್ಮಾಣಕ್ಕೆ ಮುಂದಾಗಿ: ನಾಯ್ಕ್
Team Udayavani, Aug 16, 2018, 5:20 PM IST
ಲಕ್ಷ್ಮೇಶ್ವರ: ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದ ಮಹಾನ್ ನಾಯಕ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸುಸ್ಥಿರ ಸಮಾಜದ ನಿರ್ಮಾಣಕ್ಕೆ ಯುವ ಸಮುದಾಯ ಮುಂದಾಗಬೇಕು ಎಂದು ತಹಶೀಲ್ದಾರ್ ಡಾ| ವೆಂಕಟೇಶ ನಾಯ್ಕ ಹೇಳಿದರು.
ತಾಲೂಕು ಆಡಳಿತದಿಂದ ಬುಧವಾರ ಪಟ್ಟಣದ ಉಮಾವಿದ್ಯಾಲಯ ಹೈಸ್ಕೂಲ್ ಮೈದಾನದಲ್ಲಿ ನೂತನ ತಾಲೂಕಿನ ಪ್ರಥಮ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯ ದೊರೆತು 72 ವರ್ಷ ಗತಿಸಿದರೂ ದೇಶದಲ್ಲಿ ಬಡತನ, ಅನಕ್ಷರತೆ ನಿರುದ್ಯೋಗದಂತಹ ಹತ್ತಾರು ಸಮಸ್ಯೆಗಳು ಕಾಡುತ್ತಿವೆ. ಶಿಕ್ಷಣವೇ ಇದಕ್ಕೆ ಪರಿಹಾರವಾಗಿದ್ದು ಸುಶಿಕ್ಷಿತ ಸಮುದಾಯ ಈ ನಿಟ್ಟಿನಲ್ಲಿ ಉತ್ತಮ ಪರಿಹಾರ ಕಂಡುಕೊಳ್ಳಬೇಕು. ಪೋಷಕರು ಮಕ್ಕಳಿಗೆ ತಪ್ಪದೇ ಶಿಕ್ಷಕಣ ಕೊಡಿಸಬೇಕು ಎಂದರು.
ಸ್ವಾತಂತ್ರೋತ್ಸವ ನಿಮಿತ್ತ ವಿವಿಧ ಶಾಲೆಯ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚನ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಪಥಸಂಚಲನ: ಎಎಸ್‌ಐ ಎನ್.ಎಂ. ನಿಂಗೋಜಿ ನೇತೃತ್ವದಲ್ಲಿ ಪೊಲೀಸ್ ಪಡೆ, ಎಂ.ಎ. ಕಾಲೇಜಿನ ಕುಮಾರಸ್ವಾಮಿ ಸ್ಥಾವರಮಠ ನೇತೃತ್ವದಲ್ಲಿ ಎನ್‌ಸಿಸಿ ಪಡೆ, ಸರ್ಕಾರಿ ಪ್ರೌಢಶಾಲೆಯ ಹನಮಂತ ಮುಳಗುಂದ, ಎಕ್ಸ್‌ಲಂಟ್ ಶಾಲೆಯ ಸುಕನ್ಯಾ ಮಾದರ, ಆಕ್ಸಫರ್ಡ್ ಶಾಲೆಯ ಪ್ರತೀಕ ಕನೋಜ್, ಉಮಾ ವಿದ್ಯಾಲಯದ ನಾಗಮ್ಮ ಗಡದವರ, ಎಸ್‌ಟಿಪಿಎಂಬಿಯ ಮನೋಜನೆಗಳೂರ, ಬಿಸಿಎನ್ ಶಾಲೆಯ ಕಾರ್ತಿಕ ಮಾಂಡ್ರೆ, ಚಂದನ ಶಾಲೆಯ ವಿದ್ಯಾಶ್ರೀ ಚೋಳಮ್ಮನವರ, ಸೆವೆಂಥ್ ಡೇ ಶಾಲೆಯ ರಾಜೇಸಾಬನಧಾಪ್, ದಿ.ಯುನಿಕ್ ಶಾಲೆಯ ಶ್ವೇತಾ ಬದಿ ನೇತೃತ್ವದ ತಂಡಗಳಿಂದ ಪಥಸಂಚನ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮ: ಪಟ್ಟಣದ ಫಿನಿಕ್ಸ್ ಶಾಲೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಥಮ ಮತ್ತು ಎಸ್‌ಟಿಪಿಎಂಬಿ ಇಂಗ್ಲಿಷ್ ಮಾಧ್ಯಮ ದ್ವಿತೀಯ ಸ್ಥಾನ ಪಡೆಯಿತು. ಬಿಸಿಎನ್ ಪ್ರೌಢಶಾಲೆ ವಿದ್ಯಾರ್ಥಿಗಳು, ಸರ್ಕಾರಿ ಹೆಣ್ಣು ಮಕ್ಕಳ ಶಾಲೆ, ಆಕ್ಸ್‌ಫ ರ್ಡ್ ಶಾಲೆಯ ಕಾರ್ಯಕ್ರಮ ಮೆಚ್ಚುಗೆ ಪಡೆದವು. ಕಾರ್ಯಕ್ರಮದಲ್ಲಿ ಕಳೆದ ಸಾಲಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಗಳಿಸಿ ವಿದ್ಯಾರ್ತಿಗಳನ್ನು ಸನ್ಮಾನಿಸಲಾಯಿತು. ಸ್ವಾತಂತ್ರ್ಯ ಕುರಿತು ವಿವಿಧ ಶಾಲೆಯ ವಿದ್ಯಾರ್ಥಿಗಳು ಭಾಷಣ ಮಾಡಿದರು.
ಹಸಿರು ಕರ್ನಾಟಕ ಆಂದೋಲನ ಕಾರ್ಯಕ್ರಮಕ್ಕೆ ಪುರಸಭೆ ಮುಖ್ಯಾಧಿ ಕಾರಿ ರವೀಂದ್ರ ಬಾಗಲಕೋಟ ಚಾಲನೆ ನೀಡಿದರು. ವಕೀಲ ಬಿ.ಎಸ್. ಬಾಳೇಶ್ವರಮಠ, ಶಿಕ್ಷಕ ಈಶ್ವರ ಮೆಡ್ಲೆàರಿ, ಪಿಎಸ್‌ಐ ವಿಶ್ವನಾಥ ಚೌಗುಲೆ, ಪುರಸಭೆ ಅಧ್ಯಕ್ಷ ಎಂ.ಆರ್. ಪಾಟೀಲ ಹಾಗೂ ಸದಸ್ಯರು, ಸಿಪಿಐ ಬಾಲಚಂದ್ರ ಲಕ್ಕಂ, ಎಪಿಎಂಸಿ ಕಾರ್ಯದರ್ಶಿ ಎನ್.ಐ. ಲಕ್ಕುಂಡಿ, ಉಪನೋಂದಣಾಧಿಕಾರಿ ಶ್ರೀಕಾಂತಭಟ್, ದೈಹಿಕ ಶಿಕ್ಷಣಾಧಿಕಾರಿ ಜಿ.ಡಿ. ಕಲ್ಲಣ್ಣವರ, ಎನ್.ಎನ್. ಶಿಗ್ಲಿ, ಲೋಹಿತ್ ನೆಲವಿಗಿ, ಕಂದಾಯ ಎಸ್.ಎಸ್. ಪಾಟೀಲ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.