ಮಹದಾಯಿ ಪಾದಯಾತ್ರೆ ಸಂಪನ್ನ
Team Udayavani, Mar 11, 2017, 1:26 PM IST
ಧಾರವಾಡ: ಮಹದಾಯಿ, ಕಳಸಾ-ಬಂಡೂರಿ ನಾಲಾ ಜೋಡಣೆ ಅನುಷ್ಠಾನ, ರೈತರ ಸಂಪೂರ್ಣ ಸಾಲಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನವಲಗುಂದ ಪಟ್ಟಣದಿಂದ ಮೂರು ದಿನಗಳ ಹಿಂದೆಯೇ (ಮಾ.8ಕ್ಕೆ ) ಆರಂಭಗೊಂಡ ಮಲಪ್ರಭಾ ಮಹದಾಯಿ, ಕಳಸಾ-ಬಂಡೂರಿ ರೈತ ಹೋರಾಟ ಒಕ್ಕೂಟ ಕೇಂದ್ರ ಸಮಿತಿಯ ಪಾದಯಾತ್ರೆಗೆ ಶುಕ್ರವಾರ ನಗರದ ಡಿಸಿ ಕಚೇರಿಗೆ ತಲುಪಿ ಅಂತ್ಯಗೊಂಡಿತು.
ಈ ಪಾದಯಾತ್ರೆಗೆ ಧಾರವಾಡ ವಕೀಲರ ಸಂಘ ಹಾಗೂ ಕಡನ್ನಪರ ಸಂಘಟನೆಗಳು ಸ್ವಾಗತ ಕೋರಿದ್ದು ಅಲ್ಲದೇ ಪಾದಯಾತ್ರೆಗೆ ಸಾಥ್ ನೀಡಿದವು. ನಂತರ ಕಲಾಭವನದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ನೂರಾರು ರೈತರು, ವಿವಿಧ ಸಂಘಟನೆಗಳ ಮುಖಂಡರು ಜ್ಯುಬ್ಲಿ ವೃತ್ತ, ಕೋರ್ಟ್ ಸರ್ಕಲ್ ಮಾರ್ಗವಾಗಿ ಸಾಗಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ಸಮಾವೇಶವಾಗಿ ಮಾರ್ಪಟ್ಟಿತು.
ಮೆರವಣಿಗೆಯುದ್ಧಕ್ಕೂ ಜಗ್ಗಲಗಿ ಮೇಳದ ಮೂಲಕ ಆಗಮಿಸಿದ ರೈತರು, ಶುಕ್ರವಾರ ಸಂಜೆ ವರೆಗೂ ಡಿಸಿ ಕಚೇರಿ ಎದುರು ಪ್ರತಿಭಟನಾ ಧರಣಿ ಕೈಗೊಂಡರು. ನಂತರ ಮನವಿ ಸ್ವೀಕರಿಸಿ ಪ್ರತಿಭಟನೆ ಕೈಬಿಡುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದರೂ ಅದಕ್ಕೆ ಮಣಿಯದ ಪ್ರತಿಭಟನಾಕಾರರು, ಮೂರು ದಿನಗಳಿಂದ ನವಲಗುಂದದಿಂದ ಧಾರವಾಡವರೆಗೂ ಪಾದಯಾತ್ರೆ ಕೈಗೊಂಡರೂ ಯಾವ ಜನಪ್ರತಿನಿಧಿ ಧಿಗಳು ಬಂದಿಲ್ಲ.
ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಬರುವವರೆಗೂ ಪ್ರತಿಭಟನೆ ಹಿಂಪಡೆಯಲ್ಲ ಎಂದು ಪಟ್ಟು ಹಿಡಿದರು. ಜಿಲ್ಲಾಧಿಕಾರಿ ಉಸ್ತವಾರಿ ಸಚಿವರ ಗಮನಕ್ಕೆ ತರುವುದಾಗಿ ಹೇಳಿ ಅಲ್ಲಿಂದ ತೆರಳಿದರು. ರೈತ ಮುಖಂಡ ಲೋಕನಾಥ ಹೆಬಸೂರ ಮಾತನಾಡಿ, 590 ದಿನ ನವಲಗುಂದದಲ್ಲಿ ಹೋರಾಟ ನಡೆಸಿದರೂ ರಾಜ್ಯ ಹಾಗೂ ಕೇಂದ್ರ ಸರ್ಕಾರ ಕಣ್ಣು ತೆರೆದು ನೋಡುತ್ತಿಲ್ಲ. ಕುಡಿಯುವ ನೀರಿಗಾಗಿ ರಾಜಕಾರಣ ಮಾಡುತ್ತಿರುವ ಉಭಯ ಸರ್ಕಾರಗಳ ಕಣ್ಣು ತೆರೆಸುವಂತ ಕೆಲಸಕ್ಕೆ ರೈತರೇ ಮುಂದಾಗಬೇಕಿದೆ.
ಸಾಲದ ಸುಳಿಗೆ ಸಿಲುಕಿರುವ ಸಾಕಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೋವಾ ಚುನಾವಣೆ ನಂತರ ಸಮಸ್ಯೆ ಬಗೆಹರಿಯಲಿದೆ ಎಂಬ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಸಂಸದ ಪ್ರಹ್ಲಾದ್ ಜೋಶಿ ಹೇಳಿಕೆ ನೀಡುತ್ತಿದ್ದಾರೆ. ಸಮಸ್ಯೆ ಬಗೆಹರಿಯದಿದ್ದಲ್ಲಿ ತಕ್ಕಪಾಠ ಕಲಿಸುವುದಾಗಿ ಎಚ್ಚರಿಸಿದರು. ಹೋರಾಟದಲ್ಲಿ ಪೊಲೀಸ್ ದೌರ್ಜನ್ಯಕ್ಕೆ ಒಳಗಾದ ಪ್ರತಿಯೊಬ್ಬರಿಗೂ ಒಂದು ಲಕ್ಷ ಪರಿಹಾರನೀಡಬೇಕು.
ಅಧಿಕಾರ ದುರ್ಬಳಕೆ ಮಾಡಿದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಬೇಕು. ದುಡಿಯುವ ಕೂಲಿ ಕಾರ್ಮಿಕರಿಗೆ ನೀಡಬೇಕು. ಮಾ.19ರೊಳಗೆ ಈ ಬೇಡಿಕೆ ಈಡೇರಿಸದಿದ್ದಲ್ಲಿ ಕಳಸಾ ಹೋರಾಟದಲ್ಲಿ ಸಂಭವಿಸುವ ಅವಘಡಗಳಿಗೆ ಕೇಂದ್ರ-ರಾಜ್ಯ ಸರ್ಕಾರ ಹೊಣೆ ಎಂದರು. ನಂತರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ನೂರಾರ ರೈತರ ಮಹಿಳೆಯರು, ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್ ಲಾಡ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Ajekar: ಎಣ್ಣೆಹೊಳೆ ಏತ ನೀರಾವರಿ ಪವರ್ ಕಟ್!
Tollywood: ʼಪುಷ್ಪ-2ʼ ಟ್ರೇಲರ್ನಲ್ಲಿ ಕಾಣುವ ಅರ್ಧ ತಲೆ ಬೋಳಿಸಿರುವ ಈ ನಟ ಯಾರು?
Sagara: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪರನ್ನು ತಕ್ಷಣ ಬಂಧಿಸಿ; ಕಾಂಗ್ರೆಸ್ ಆಗ್ರಹ
Ullal: ನ್ಯೂಪಡ್ಪುವಿನಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಉದ್ಘಾಟನೆ
Hosanagara: ನಗರದ ಹೋಬಳಿ ಆಸ್ಪತ್ರೆಯಲ್ಲಿ ಅವ್ಯವಸ್ಥೆ: ಬಿಜೆಪಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.