20ರಿಂದ ಕವಿಸಂ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ
Team Udayavani, Jul 18, 2018, 4:33 PM IST
ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘದ 129ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಜು. 20ರಿಂದ ಏಳು ದಿನಗಳ ಕಾಲ ನಾಟ್ಯ, ಸಂಗೀತ, ಹಾಸ್ಯ, ಜಾನಪದ, ನೃತ್ಯ, ಸಾಂಸ್ಕೃತಿಕ, ನಾಟಕ, ಗೀತ ಗಾಯನ ಸಂಜೆ ಹಾಗೂ ಹಿರಿಯ
ಸದಸ್ಯರಿಗೆ ಗೌರವಾರ್ಪಣೆ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಉಡಿಕೇರಿ ಹೇಳಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿದಿನ ಸಂಜೆ 5:30ರಿಂದ ಕಾರ್ಯಕ್ರಮಗಳು ಶುರುವಾಗಲಿದ್ದು, ಎಲ್ಲ ಕಾರ್ಯಕ್ರಮಗಳಿಗೆ ನಾಡೋಜ ಡಾ|ಪಾಟೀಲ ಪುಟ್ಟಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಜು. 20ರ ಸಂಜೆ 5:30 ಗಂಟೆಗೆ ಸಂಸ್ಥಾಪನಾ ದಿನವನ್ನು ತೋಂಟದಾರ್ಯ ಮಠದ ಸಿದ್ಧಲಿಂಗ ಶ್ರೀಗಳು ಉದ್ಘಾಟಿಸಲಿದ್ದಾರೆ. ಅಂದು ನಾಟ್ಯ-ಸಂಗೀತ ಸಂಜೆಯನ್ನು ಲಕ್ಷ್ಮೀ ಜಾಧವ, ಮೇಘಾ ಹುಕ್ಕೇರಿ ಹಾಗೂ ಸಾಕ್ಷಿ ಹುಕ್ಕೇರಿ ನಡೆಸಿಕೊಡುತ್ತಾರೆ. ಎಸ್.ಬಿ. ಗುತ್ತಲ, ಉಷಾಮೂರ್ತಿ, ರಮಾಕಾಂತ ಜೋಶಿ, ಕೃಷ್ಣ ಜೋಶಿ ಹಾಗೂ ಸಿ.ಜಿ. ಹಿರೇಮಠ ಅವರನ್ನು ಸನ್ಮಾನಿಸಲಾಗುವುದು ಎಂದರು.
21ರಂದು ಹಿರಿಯ ವಿದ್ವಾಂಸ ಡಾ|ಗುರುಲಿಂಗ ಕಾಪಸೆ ಹಾಗೂ ವಿಶ್ರಾಂತ ಪ್ರಾಧ್ಯಾಪಕ ಪ್ರೊ|ಸಿ.ವಿ. ಕೆರೆಮನಿ ತಮ್ಮ ಅನಿಸಿಕೆ ಹಂಚಿಕೊಳ್ಳಲಿದ್ದಾರೆ. ನಂತರ ಮಹಾದೇವ ಸತ್ತಿಗೇರಿ, ಮಲ್ಲಪ್ಪ ಹೊಂಗಲ ಹಾಗೂ ಡಾ|ರಾಜಶೇಖರ ಬಶೆಟ್ಟಿ ಅವರಿಂದ ಹಾಸ್ಯ ಸಂಜೆ ನಡೆಯಲಿದೆ. ಡಾ|ಬಿ.ವಿ. ಮಲ್ಲಾಪುರ, ಶಿವಶಂಕರ ಹಿರೇಮಠ, ಎಂ.ಸಿ. ಬಂಡಿ, ಎಂ.ಆರ್. ಸತ್ಯನಾರಾಯಣ ಹಾಗೂ ಡಾ|ಸುಲೋಚನಾ ಮಟ್ಟಿ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
22ರಂದು ಪದ್ಮಭೂಷಣ ಡಾ|ಎಂ. ಮಹದೇವಪ್ಪ ಹಾಗೂ ಜಾನಪದ ವಿವಿ ಕುಲಪತಿ ಡಾ|ಡಿ.ಬಿ. ನಾಯಕ ಅನಿಸಿಕೆ ಹಂಚಿಕೊಳ್ಳಲಿದ್ದಾರೆ. ಜಾನಪದ ಸಂಜೆಯಲ್ಲಿ ಮಹಾಂತೇಶ ವಾಲಿ ಹಾಗೂ ಯಕ್ಕೇರಪ್ಪ ನಡುವಿನಮನಿ ಪಾಲ್ಗೊಳ್ಳಲಿದ್ದಾರೆ. ಪ್ರೊ| ಕೆ.ಎಸ್. ಶರ್ಮಾ, ವಿ.ಜಿ. ದೀಕ್ಷಿತ, ಗಿರೀಶ ಕುಲಕರ್ಣಿ, ಈಶ್ವರ ಕಮ್ಮಾರ ಹಾಗೂ ಜಯಶೀಲಾ ಬೆಳಲದವರ ಅವರನ್ನು ಗೌರವಿಸಲಾಗುವುದು ಎಂದರು.
23ರಂದು ಕೇಂದ್ರೀಯ ವಿವಿ ಕುಲಪತಿ ಡಾ|ಎಚ್.ಎಂ. ಮಹೇಶ್ವರಯ್ಯ ಹಾಗೂ ಛಾಯಾಗ್ರಾಹಕ ಶಶಿ ಸಾಲಿ ಅಭಿಪ್ರಾಯ ಮಂಡಿಸುತ್ತಾರೆ. ನೃತ್ಯ ಸಂಜೆಯಲ್ಲಿ ಭಾರತೀಯ ನೃತ್ಯ ಅಕಾಡೆಮಿಯ ರಾಜು ಟೊಣಪಿ ಹಾಗೂ ಕಲಾವಿದರಾದ ಅಂಕಿತಾ ರಾವ್ ಪಾಲ್ಗೊಳ್ಳಲಿದ್ದಾರೆ. ಡಾ| ಎನ್.ಎಸ್. ಹಿರೇಮಠ, ಜ್ಯೋತಿ ಹೂಸೂರ, ಪ್ರೊ|ಸಿ.ಆರ್. ಯರವಿನತಲಿಮಠ, ರಂಜನಾ ನಾಯಕ ಹಾಗೂ ಡಾ|ಅಜಿತ ಪ್ರಸಾದ ಅವರನ್ನು ಗೌರವಿಸಲಾಗುವುದು ಎಂದು ತಿಳಿಸಿದರು.
24ರಂದು ಅನೇಕ ಕಾರ್ಯಕ್ರಮಗಳು ನಡೆಯಲಿದ್ದು, 25ರಂದು ವಿಶ್ರಾಂತ ಕುಲಪತಿ ಡಾ|ಎ. ಮುರಿಗೆಪ್ಪ ಹಾಗೂ ಭಾರತದ ಸಹಾಯಕ ಸಾಲಿಸಿಟರ್ ಜನರಲ್ ಕೆ.ಬಿ. ನಾವಲಗಿಮಠ ಅನಿಸಿಕೆ ಹಂಚಿಕೊಳ್ಳುವರು. ನಂತರ ನಡೆಯಲಿರುವ ನಾಟಕ ಸಂಜೆಯಲ್ಲಿ ಡಾ| ಗೋವಿಂದ ಮಣ್ಣೂರ ರಚಿಸಿದ ಚನ್ನಬಸಪ್ಪ ಕಾಳೆ ನಿರ್ದೇಶನದಲ್ಲಿ ಕಳ್ಳರು ಮಹಾಕಳ್ಳರು ನಾಟಕವಿದೆ. ಎಸ್.ಬಿ. ಮಾದನಬಾವಿ, ಸುರೇಶ ಹಾಲಭಾವಿ, ಎಸ್.ಜಿ. ಪಾಟೀಲ, ಪಾರ್ವತಿ ಆರಟ್ಟಿ ಹಾಗೂ ಎಂ.ಎಲ್. ಟೊಣಪಿ ಅವರನ್ನು ಸನ್ಮಾನಿಸಲಾಗುವುದು ಎಂದರು.
26ರಂದು ಸಮಾರೋಪ ನಡೆಯಲಿದ್ದು, ಡಾ|ಪಾಟೀಲ ಪುಟ್ಟಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶ್ರಾಂತ ಕುಲಪತಿ ಡಾ|ಎಂ.ಐ. ಸವದತ್ತಿ ಪಾಲ್ಗೊಳ್ಳಲಿದ್ದು, ಅಂದು ಗೀತ ಗಾಯನ ಸಂಜೆಯನ್ನು ಬಿ.ಐ. ಈಳಿಗೇರ ನಡೆಸಿಕೊಡಲಿದ್ದಾರೆ. ಸಂಘದ ನೂತನ ಗೌರವ ಉಪಾಧ್ಯಕ್ಷರನ್ನು ಗೌರವಿಸಲಾಗುವುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದಕ್ಷಿಣ ಭಾರತದ ಕುಸ್ತಿ ಚಾಂಪಿಯನ್‌ಶಿಪ್: ಚಿನ್ನ ಗೆದ್ದ ಧಾರವಾಡದ ಹಳ್ಳಿ ಪೈಲ್ವಾನ್
Dharwad; ನಾಲಿಗೆ ಹರಿಬಿಡುವ ನಾಯಕರ ಮೇಲೆ ಕ್ರಮ ಆಗಬೇಕು: ಶಾಸಕ ಬೆಲ್ಲದ್
Hubli; ಹಂದಿ ಸಾಕಾಣಿಕೆದಾರ ಕೊಲೆ ಪ್ರಕರಣ; ಮೃತನ ಅಕ್ಕನ ಗಂಡ ಸೇರಿ ನಾಲ್ವರ ಬಂಧನ
Hubli; ಅಯ್ಯಪ್ಪ ಶಿಬಿರ ಅಗ್ನಿ ಆಕಸ್ಮಿಕ ಪ್ರಕರಣ; ಆರಕ್ಕೇರಿದ ಸಾವಿನ ಸಂಖ್ಯೆ
Hubli: ಮನೆ ದರೋಡೆಗೆ ಯತ್ನಿಸಿದ ದರೋಡಕೋರನ ಕಾಲಿಗೆ ಗುಂಡೇಟು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
America: ಎಚ್-1ಬಿ ವೀಸಾ ವ್ಯವಸ್ಥೆ ಸುಧಾರಣೆ ಬೇಕು: ಒಂದೇ ದಿನದಲ್ಲಿ ಮಸ್ಕ್ ಉಲ್ಟಾ!
Authortiy: ವರ್ಷದಲ್ಲಿ ದಾಖಲೆಯ 17 ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸಿದ ಕೆಇಎ
ಫ್ರಾನ್ಸ್ ಮೂಲದ ಸಂಸ್ಕೃತ ವಿದ್ವಾಂಸ ಪಿಯರಿ ಸಿಲ್ವೇನ್ ಫಿಲಿಯೋಜಾ ನಿಧನ
ಸಿ.ಟಿ.ರವಿ ಪ್ರಕರಣದ ತನಿಖೆ ಸಭಾಪತಿಯೇ ನಡೆಸಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್
Mangaluru; ಪ್ರತ್ಯೇಕ ಚೆಕ್‌ಬೌನ್ಸ್ ಪ್ರಕರಣ: ಇಬ್ಬರು ಖುಲಾಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.