ಸರಿಯಾಗಿ ಚಲಿಸುತಿಲ್ಲ ಉಚಿತ ಸೈಕಲ್‌


Team Udayavani, Nov 12, 2019, 10:16 AM IST

huballi-tdy-1

ಧಾರವಾಡ: ಪೆಡಲ್‌ ಇದ್ದರೆ ಟೈರ್‌ ಇಲ್ಲ, ಟೈರ್‌ ಸರಿ ಇದ್ದರೆ ಪೆಡಲ್‌ಗ‌ಳೇ ಇಲ್ಲ. ಇವೆರಡೂ ಸರಿ ಇದ್ದರೆ ಟೈರ್‌ ಒಳಗಡೆಯ ಟ್ಯೂಬ್‌ಗಳೇ ಮಾಯ. ಇನ್ನು ಹ್ಯಾಂಡಲ್‌ ಸ್ಥಿತಿಯಂತೂ ಅಷ್ಟಕಷ್ಟೆ. ಒಂದಿಷ್ಟಕ್ಕೆ ಬುಟ್ಟಿಗಳನ್ನು ಜೋಡಿಸಿಯೇ ಇಲ್ಲ. ಬೈಸಿಕಲ್‌ಗ‌ಳ ಕಿಟ್‌ ಅಂತೂ ಕೇಳ್ಳೋದೇ ಬೇಡ. ಜಿಲ್ಲೆಯ ಗ್ರಾಮೀಣ ಭಾಗದ ಸರಕಾರಿ ಪ್ರೌಢಶಾಲೆಗಳ 8ನೇ ತರಗತಿಯ ಅರ್ಹ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ವಿತರಿಸುವ ಉಚಿತ ಬೈಸಿಕಲ್‌ಗ‌ಳ ದುಸ್ಥಿತಿಯಿದು.

ಗುಣಮಟ್ಟದ ಕೊರತೆ ಜತೆಗೆ ತಕ್ಕಮಟ್ಟಿಗೆ ಸರಿಯಾಗಿ ಜೋಡಣೆ ಮಾಡದೇ ಹಾಗೆ ಪೂರೈಸಿರುವ ಬಗ್ಗೆ ಪೋಷಕರು, ವಿದ್ಯಾರ್ಥಿಗಳಿಂದ ದೂರುಗಳು ಕೇಳಿ ಬಂದಿವೆ. ಈ ಬಗ್ಗೆ ಕೆಲ ಪ್ರೌಢಶಾಲೆಗಳ ಎಸ್‌ಡಿಎಂಸಿಗಳು ಠರಾವು ಪಾಸ್‌ ಮಾಡಿ ದೂರು ನೀಡಿದ್ದರೆ ಕೆಲವೊಂದಿಷ್ಟು ಎಸ್‌ ಡಿಎಂಸಿಗಳು ಮೌನಕ್ಕೆ ಶರಣಾಗಿವೆ.

ಶಾಸಕರದ್ದೇ ಪ್ರೌಢಶಾಲೆ: ಕಲಘಟಗಿ ತಾಲೂಕಿನ ವೀರಾಪುರ ಗ್ರಾಮದ ಸರಕಾರಿ ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು ಆ ಭಾಗದ ಶಾಸಕರಾದ ಸಿ.ಎಂ.ನಿಂಬಣ್ಣವರ. ಅವರೇ ಅಧ್ಯಕ್ಷರಾಗಿರುವ ಈ ಶಾಲೆಗೆ ಪೂರೈಸಿರುವ 55 ಬೈಸಿಕಲ್‌ಗ‌ಳ ಪೈಕಿ ಅರ್ಧ ಬೈಸಿಕಲ್‌ಗ‌ಳ ಕೆಲ ಬಿಡಿ ಭಾಗಗಳೇ ಇಲ್ಲದಂತಾಗಿವೆ. ವಿತರಿಸಿರುವ ಕೆಲ ಸೈಕಲ್‌ ಗಳ ಬಿಡಿ ಭಾಗಗಳನ್ನು ವಿದ್ಯಾರ್ಥಿಗಳೇ ಹಾಕಿಸಿಕೊಂಡಿದ್ದರೆ, ಇನ್ನರ್ಧ ಬೈಸಿಕಲ್‌ಗ‌ಳು ಆ ಶಾಲೆಯ ಕೊಠಡಿ ಸೇರಿವೆ. ಈ ಬಗ್ಗೆ ಪ್ರೌಢಶಾಲೆ ಎಸ್‌ಡಿಎಂಸಿ ಸದಸ್ಯರು ತಕರಾರು ಎತ್ತಿದ್ದಾರೆ. ಹೀಗಾಗಿ ಬೈಸಿಕಲ್‌ ವಿತರಣೆ ನಿಲ್ಲಿಸಿ, ಗುಣಮಟ್ಟದ ಬೈಸಿಕಲ್‌ ವಿತರಿಸುವಂತೆ ಠರಾವು ಪಾಸ್‌ ಮಾಡಿ ನ.2ರಂದೇ ಬಿಇಒ ಅವರಿಗೆ ಪತ್ರ ಬರೆದಿದ್ದಾರೆ. ಆದರೆ ಈವರೆಗೂ ಪ್ರಯೋಜನವಾಗಿಲ್ಲ. ಇದು ಈ ಪ್ರೌಢಶಾಲೆಯೊಂದರ ಕಥೆಯಲ್ಲ. ಜಿಲ್ಲೆಯಲ್ಲಿ ಪೂರೈಕೆಯಾಗಿರುವ ಬಹುತೇಕ ಬೈಸಿಕಲ್‌ಗ‌ಳ ದುಸ್ಥಿತಿ. ಇದಲ್ಲದೇ ಬಳಸಲು ಯೋಗ್ಯವಲ್ಲದ ಬೈಸಿಕಲ್‌ ಪಡೆದ ವಿದ್ಯಾರ್ಥಿಗಳು ನಿಯಂತ್ರಣ ತಪ್ಪಿ ಬೈಸಿಕಲ್‌ನಿಂದ ಬಿದ್ದು ಗಾಯಗೊಂಡ ಘಟನೆಗಳು ವರದಿ ಆಗುತ್ತಲಿವೆ. ಸದ್ಯ ಶಾಸಕರೇ ಅಧ್ಯಕ್ಷರಾಗಿರುವ ಶಾಲೆಯ ಬೈಸಿಕಲ್‌ ಸ್ಥಿತಿಯೇ ಹೀಗಿರುವಾಗ ಉಳಿದ ಶಾಲೆಗಳ ಬೈಸಿಕಲ್‌ ಸ್ಥಿತಿಯಂತೂ ಆ ದೇವರಿಗೆ ಪ್ರೀತಿ.

ಜೋಡಣೆ ವಿಳಂಬ: ಧಾರವಾಡ ಮತ್ತು ಹುಬ್ಬಳ್ಳಿ ಗ್ರಾಮೀಣ, ನವಲಗುಂದ, ಕುಂದಗೋಳ, ಕಲಘಟಗಿ ಒಳಗೊಂಡಂತೆ 6030 ಹೆಣ್ಣು, 5816 ಗಂಡು ಮಕ್ಕಳು ಸೇರಿದಂತೆ ಒಟ್ಟು 11,846 ಬೈಸಿಕಲ್‌ ಅಗತ್ಯವಿರುವ ಬಗ್ಗೆ ಮಾಹಿತಿ ಸಲ್ಲಿಸಲಾಗಿತ್ತು. ಈ ಪೈಕಿ 5370 ಹೆಣ್ಣು, 5293 ಗಂಡು ಮಕ್ಕಳಿಗೆ ಒಟ್ಟು 10,663 ಬೈಸಿಕಲ್‌ಗ‌ಳು ಜಿಲ್ಲೆಗೆ ಪೂರೈಕೆಯಾಗಿದೆ. ಬೈಸಿಕಲ್‌ಗ‌ಳ ಭಾಗಗಳು ತಡವಾಗಿ ಪೂರೈಕೆಯಾಗಿರುವ ಕಾರಣ ಜೋಡಣೆ ಕಾರ್ಯವೂ ವಿಳಂಬವಾಗಿ ಪೂರೈಕೆಯಲ್ಲೂ ವಿಳಂಬ ಆಗಿದೆ. ಸದ್ಯ ಬಹುತೇಕ ವಿತರಣೆ ಕಾರ್ಯ ಮುಕ್ತಾಯ ಹಂತದಲ್ಲಿದೆ. ಆದರೆ ವಿತರಿಸಿರುವ ಬೈಸಿಕಲ್‌ ಗುಣಮಟ್ಟ ಕೊರತೆ ಜತೆಗೆ ಕೆಲವೊಂದಿಷ್ಟು ಬೈಸಿಕಲ್‌ ಭಾಗಗಳೇ ಇಲ್ಲದೆಯೇ ವಿತರಿಸಿದ್ದು, ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಿ ಗುಣಮಟ್ಟದ ಬೈಸಿಕಲ್‌ ವಿತರಿಸುವಂತೆ ಮಾಡಬೇಕಿದೆ.

ಬಸ್‌ಪಾಸ್‌-ಬೈಸಿಕಲ್‌ ಎರಡೂ ಬೇಕು ಈಗ!:  ಗ್ರಾಮೀಣದಲ್ಲಿ ಕಲಿಯುವ ವಿದ್ಯಾರ್ಥಿಗಳಲ್ಲಿ ಬಸ್‌ ಪಾಸ್‌ ಪಡೆದವರಿಗೆ ಬೈಸಿಕಲ್‌ ಇಲ್ಲ. ಬೈಸಿಕಲ್‌ ಪಡೆದವರಿಗೆ ಬಸ್‌ ಪಾಸ್‌ ಸಿಗಲ್ಲ. ಆದರೆ ಗ್ರಾಮೀಣ ಭಾಗದ ಕೆಲ ವಿದ್ಯಾರ್ಥಿಗಳು ಬಸ್‌ ಪಾಸ್‌ ಪಡೆದು ಬೈಸಿಕಲ್‌ ಪಡೆದಿಲ್ಲ. ಇಂತಹ ವಿದ್ಯಾರ್ಥಿಗಳಿಗೆ ಸೋಮವಾರದಿಂದ ಶುಕ್ರವಾರದವರೆಗೆ ಬಸ್‌ ವ್ಯವಸ್ಥೆ ಇದ್ದರೆ ಶನಿವಾರ ಒಂದು ದಿನ ಬೆಳಿಗ್ಗೆ ಸಾರಿಗೆ ಬಸ್‌ ಸರಿಯಾಗಿ ಇಲ್ಲದ ಕಾರಣ ವಾರದಲ್ಲಿ ಈ ಒಂದು ದಿನ ಶಾಲೆಗೆ ಹಾಜರಾಗಲು ಹರಸಾಹಸ ಪಡುವಂತಾಗಿದೆ. ಇಂತಹ ಪ್ರಕರಣಗಳಿಗಾಗಿಯೇ ಗುಡ್ಡಗಾಡು ಪ್ರದೇಶ ಮಕ್ಕಳಿಗೆ ಬಸ್‌ ಪಾಸ್‌ ಜತೆಗೆ ಬೈಸಿಕಲ್‌ ವಿತರಿಸುವಂತೆ ಸರಕಾರದ ಸುತ್ತೋಲೆ ಇದ್ದರೂ ಕಲಘಟಗಿ ಭಾಗದ ಪ್ರದೇಶಗಳಲ್ಲಿ ಇದು ಅನುಷ್ಠಾನವಾಗದೇ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.

ಗುಣಮಟ್ಟದ ಕೊರತೆ:  ವಿದ್ಯಾರ್ಥಿಗಳಿಗೆ ಪೂರೈಸಿರುವ ಬೈಸಿಕಲ್‌ ಗಳ ಪೈಕಿ ಕೆಲವೊಂದಿಷ್ಟಕ್ಕೆ ಬ್ರೇಕ್‌,  ಸ್ಟ್ಯಾಂಡ್ ಬ್ರೇಕ್ , ಬೀಗ, ಟಾಯರ್‌ಗಳ ಒಳ ಟ್ಯೂಬ್‌, ಪೆಡಲ್‌ಗ‌ಳೇ ಇಲ್ಲವಾಗಿವೆ. ವಿದ್ಯಾರ್ಥಿಗಳೇ ಬ್ರೇಕ್‌, ಒಳ ಟೂಬ್‌ ಹಾಕಿಸಿಕೊಂಡು ಸರಿ ಮಾಡಿಕೊಳ್ಳುತ್ತಿದ್ದು, ಇನ್ನೂ ಬೈಸಿಕಲ್‌ಗ‌ಳಿಗೆ ಕಿಟ್‌ಗಳನ್ನು ನೀಡಿಲ್ಲ. ಹೆಣ್ಣು ಮಕ್ಕಳ ಬೈಸಿಕಲ್‌ ಗೆ ಬುಟ್ಟಿ ಜೋಡಿಸದೆ ಹಾಗೇ ಬಿಡಿ ಭಾಗಗಳನ್ನು ನೀಡಿದ್ದು, ಬೈಸಿಕಲ್‌ಗ‌ಳ ಒಳ ಬಾರ್‌, ಬೇರಿಂಗ್‌ ಗಳೂ ಹಾಳಾಗಿವೆ. ಹೀಗಾಗಿ ಸದ್ಯ ಬೈಸಿಕಲ್‌ ಗಳನ್ನು ಪಡೆದಿರುವ ವಿದ್ಯಾರ್ಥಿಗಳು ತಾವೇ ರಿಪೇರಿ ಮಾಡಿಕೊಳ್ಳುವಂತಾಗಿದೆ. ಇಂತಹ ಆರೋಪಗಳು ಜಿಲ್ಲೆಯ ವಿವಿಧ ಗ್ರಾಮೀಣ ಭಾಗಗಳ ಪ್ರೌಢಶಾಲೆಗಳಿಂದ ಕೇಳಿ ಬರುತ್ತಲಿವೆ.

ಜಿಲ್ಲೆಯ ಕಲಘಟಗಿ ತಾಲೂಕಿನಲ್ಲಿ ವಿಳಂಬ ಆಗಿದ್ದು ಹೊರತುಪಡಿಸಿದರೆ ಬೈಸಿಕಲ್‌ ವಿತರಣೆ ಬಹುತೇಕ ಮುಗಿದಿದೆ. ಪೂರೈಕೆ ಆಗುವ ಬೈಸಿಕಲ್‌ಗ‌ಳನ್ನು ಸಂಪೂರ್ಣ ಪರಿಶೀಲಿಸಿಯೇ ಪೂರ್ಣ ಪ್ರಮಾಣದಲ್ಲಿ ಸರಿಯಾಗಿದ್ದರೆ ಮಾತ್ರವಷ್ಟೇ ಸ್ವೀಕರಿಸುವಂತೆ ಈಗಾಗಲೇ ಶಾಲಾ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ಒಂದು ವೇಳೆ ಲೋಷಗಳು ಕಂಡು ಬಂದರೆ ಸ್ವೀಕರಿಸದಂತೆ ತಿಳಿಸಲಾಗಿದ್ದು, ಶಾಲಾ ಮುಖ್ಯಸ್ಥರಿಂದ ಸ್ವೀಕಾರ ಪ್ರತಿ ನೀಡದ ಹೊರತು ಬೈಸಿಕಲ್‌ ಪೂರೈಸಿದ ಕಂಪನಿಗೆ ಬಿಲ್‌ ಪಾವತಿ ಆಗದು. – ಗಜಾನನ ಮನ್ನಿಕೇರಿ, ಡಿಡಿಪಿಐ, ಧಾರವಾಡ

 

-ಶಶಿಧರ್‌ ಬುದ್ನಿ

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

prahlad jo shi

Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು‌ ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ

ಹೊಸ ವರ್ಷದ ಕೊಡುಗೆ: ಬೈಸಿಕಲ್‌ ಉತ್ತೇಜನಕ್ಕೆ ಉಚಿತ ರೈಡ್‌

ಹೊಸ ವರ್ಷದ ಕೊಡುಗೆ: ಬೈಸಿಕಲ್‌ ಉತ್ತೇಜನಕ್ಕೆ ಉಚಿತ ರೈಡ್‌

Laxmi Hebbalkar  ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ

Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ

Hubballi

Hubballi: ಹಳೇ ವೈಷಮ್ಯದಿಂದ ಸಹಚರರೊಂದಿಗೆ ಸೇರಿ ಹಲ್ಲೆ; ವ್ಯಕ್ತಿ ಮೃತ್ಯು

Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ

Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.