ಮೋಜಿನ ಕಟ್ಟೆ ಈ ಮಾರುಕಟ್ಟೆ

•ಅನೈತಿಕ ಚಟುವಟಿಕೆ ತಾಣ•ಪುಂಡ ಪೋಕರಿಗಳ ಅಡ್ಡೆ

Team Udayavani, Jul 27, 2019, 8:02 AM IST

hubali-01

ಧಾರವಾಡ: ಕುಡಿಯುವ ನೀರಿನ ಘಟಕ ಹಾಗೂ ಕ್ಯಾಂಟೀನ್‌ ಬಂದ್‌ ಆಗಿರುವ ಸ್ಥಳದಲ್ಲಿಯೇ ಮೂತ್ರ ವಿಸರ್ಜನೆ.

ಧಾರವಾಡ: ಸುಭದ್ರವಾದ ಕಾಂಪೌಂಡ್‌ ಇಲ್ಲದ ಕಾರಣ ಅನೈತಿಕ ಚಟುವಟಿಕೆಗಳಿಗೆ ಇದುವೇ ತಾಣ. ಅಲ್ಲಲ್ಲಿ ಶುಚಿತ್ವದ ಕೊರತೆ. ಪೋಕರಿಗಳ ಅಡ್ಡೆಯಾಗಿರುವ ಇಲ್ಲಿ ರಾತ್ರಿ ಹೊತ್ತು ಎಣ್ಣೆ ಪಾರ್ಟಿ ಗದ್ದಲ. ಹೀಗಾಗಿ ಪ್ರತಿನಿತ್ಯ ಬೆಳಗ್ಗೆ ವಾಯುವಿಹಾರಿಗಳ ಕಣ್ಣಿಗೆ ಮದ್ಯದ ಬಾಟಲಿಗಳು ರಾರಾಜಿಸುತ್ತಿವೆ.

ಇದು ಮುರುಘಾ ಮಠದ ಶಿವಯೋಗಿ ಮಹಾಂತಪ್ಪಗಳ ಹೆಸರಿನಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಶ್ರೀ ಮಹಾಂತ ಸ್ವಾಮಿಗಳ ಮಾರುಕಟ್ಟೆ ಪ್ರಾಂಗಣದ ದುಸ್ಥಿತಿ. ಶಿವಾಜಿ ವೃತ್ತದ ಹಳೇ ಎಪಿಎಂಸಿಯಿಂದ ಹೊಸ ಎಪಿಎಂಸಿಗೆ ಸ್ಥಳಾಂತರ ಆಗಿ ಐದು ವರ್ಷಗಳೇ ಸಂದಿವೆ. ಮುರುಘಾ ಮಠದ ಹಿಂಬದಿಯೇ ಹೊಸದಾಗಿ ಸುಸಜ್ಜಿತವಾಗಿ ರೂಪಗೊಂಡ ಮಾರುಕಟ್ಟೆಗೆ ಮಹಾಂತ ಸ್ವಾಮಿಗಳ ಹೆಸರನ್ನೂ ಇಡಲಾಗಿದ್ದು, ಇಂತಹ ಪುಣ್ಯಪುರುಷರ ಹೆಸರಿನ ಈ ಪ್ರಾಂಗಣ ಅನೈತಿಕ ಚಟುವಟಿಕೆಗಳ ತಾಣವಾಗಿ ಬದಲಾಗುತ್ತಿರುವುದು ಈ ಭಾಗದ ಜನರಿಗೂ ನೋವುಂಟು ಮಾಡಿದೆ.

ಸ್ವಾಗತ ಕೋರುವ ಮದ್ಯದ ಬಾಟಲಿಗಳು: ಎಪಿಎಂಸಿ ಪ್ರಾಂಗಣದಲ್ಲಿ ದಿನನಿತ್ಯ ಬೆಳಗ್ಗೆ ಹಿರಿಯ ಜೀವಗಳು ವಾಯುವಿಹಾರ ಮಾಡುತ್ತಾರೆ. ಆದರೆ ಅವರನ್ನು ಇಲ್ಲಿ ಸ್ವಾಗತಿಸುವುದು ಬಳಕೆ ಮಾಡಿ ಬಿಸಾಕಿದ ನಿರೋಧ, ಮದ್ಯದ ಬಾಟಲಿಗಳು! ರಾತ್ರಿ ಹೊತ್ತು ಪೋಕರಿಗೆ ಅಡ್ಡೆಯಾಗಿರುವ ಇಲ್ಲಿ ತಡರಾತ್ರಿವರೆಗೂ ಗದ್ದಲ, ಪಾರ್ಟಿ ಯಾವುದೇ ವಿಘ್ನಗಳಿಲ್ಲದೇ ಸಾಗುತ್ತದೆ. ಪ್ರಾಂಗಣದ ಭದ್ರತಾ ಸಿಬ್ಬಂದಿಯೂ ಅವರೊಂದಿಗೆ ಕೈ ಜೋಡಿಸಿದ್ದಾರೆಂಬ ಆರೋಪಗಳು ಇವೆ. ಕಳೆದ ಒಂದು ವರ್ಷದಲ್ಲಿ 2-3 ಶವಗಳು ಪ್ರಾಂಗಣದಲ್ಲಿಯೇ ಪತ್ತೆಯಾಗಿದ್ದು, ಇವೆಲ್ಲ ಕೊಲೆ ಎಂಬ ಆರೋಪವೂ ಕೇಳಿಬಂದಿದೆ.

ಸುಭದ್ರ ಕಾಂಪೌಂಡ್‌ ಇಲ್ಲ: ಸುಮಾರು 32 ಎಕರೆ ವ್ಯಾಪ್ತಿಯಲ್ಲಿರುವ ಮಾರುಕಟ್ಟೆಗೆ ಸುಭದ್ರವಾದ ಕಾಂಪೌಂಡ್‌ ಇಲ್ಲ. ಪ್ರಾಂಗಣದ ಮುಖ್ಯದ್ವಾರದ ಬಳಿಯ ಗೋಡೆ ಹೊರತುಪಡಿಸಿ ಉಳಿದ ಗೋಡೆಗಳನ್ನು ಸಂಚಾರದ ನೆಪದಲ್ಲಿ ಒಡೆಯಲಾಗಿದೆ. ಇನ್ನೂ ಕಮಲಾಪುರದತ್ತ ಪ್ರಾಂಗಣಕ್ಕೆ ಗೋಡೆಗಳೇ ಇಲ್ಲ. ಅಲ್ಲಿಯೇ ದೊಡ್ಡ ದೊಡ್ಡ ಕಾಳು ದಾಸ್ತಾನು ಘಟಕಗಳಿದ್ದು, ಇದರಿಂದ ಅಭದ್ರತೆ ಸೃಷ್ಟಿಯಾಗಿದೆ. ಅಲ್ಲದೇ 90 ಕಾಳು ವ್ಯಾಪಾರಸ್ಥರು ಸಹ ತಮಗೆ ನೀಡಿರುವ ನಿವೇಶನದಲ್ಲಿ ಕಟ್ಟಡ ನಿರ್ಮಿಸಿಕೊಂಡು ಸ್ಥಳಾಂತರ ಆಗಿ ವಹಿವಾಟು ಆರಂಭಿಸಿದ್ದಾರೆ. ಆದರೆ ಅವರಿಗೆಲ್ಲ ಸುಭದ್ರ ಕಾಂಪೌಂಡ್‌ ಕೊರತೆಯಿಂದ ಅಭದ್ರತೆ ಎದುರಾಗಿದೆ. ಕಾಂಪೌಂಡ್‌ ಇಲ್ಲದ್ದರಿಂದಲೇ ಅನೈತಿಕ ಚಟುವಟಿಕೆಗಳು ಹೆಚ್ಚಾಗಿವೆ ಎಂಬುದು ಬಹಿರಂಗ ಸತ್ಯ.

ಬಂದಾಗಿರುವ ಕ್ಯಾಂಟೀನ್‌: ಪ್ರಾಂಗಣದ ಆವರಣದಲ್ಲಿ ಕುಡಿಯುವ ನೀರಿನ ಘಟಕ ಕಟ್ಟಲಾಗಿದ್ದು, ಈವರೆಗೆ ಅಲ್ಲಿಂದ ಒಂದು ಹನಿ ನೀರೂ ಆಚೆ ಬಂದಿಲ್ಲ. ಇದರ ಬಳಿಯೇ ಕ್ಯಾಂಟೀನ್‌ ನಿರ್ಮಾಣ ಮಾಡಲಾಗಿದ್ದು, ಸದಾಕಾಲ ಬಂದ್‌ ಆಗಿದೆ. ಇವೆರಡೂ ದಯನೀಯ ಸ್ಥಿತಿಗೆ ಬಂದು ನಿಂತಿವೆ. ಪ್ರಾಂಗಣದ ಕಾಳು ವ್ಯಾಪಾರಸ್ಥರ ಬಳಿ ಕೆಲಸ ಮಾಡುವ ಹಮಾಲಿ ಕಾರ್ಮಿಕರಿಗೆ ಅಷ್ಟೇ ಅಲ್ಲ ಕಾಳು ಮಾರಾಟ ಮಾಡಲು ಬರುವ ರೈತರಿಗೂ ಇದರಿಂದ ತೊಂದರೆ ಆಗುತ್ತಲಿದೆ. ಇನ್ನೂ ಆಡಳಿತ ಕಚೇರಿ ಬಳಿಯೇ ಇರುವ ಎರಡು ಶೌಚಾಲಯಗಳನ್ನು ಬಂದ್‌ ಮಾಡಿದ್ದು, ಜನರು ಪ್ರಾಂಗಣದ ಸಿಕ್ಕ ಸಿಕ್ಕಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ.

ಹರಾಜು ಕಟ್ಟೆಯೀಗ ದನದ ಕೊಟ್ಟಿಗೆ!: ಕಾಯಿಪಲ್ಲೆ ವ್ಯಾಪಾರಸ್ಥರು ಸ್ಥಳಾಂತರ ಆಗದ ಕಾರಣ ಪ್ರಾಂಗಣದಲ್ಲಿ ನಿರ್ಮಿಸಿದ ಹರಾಜು ಕಟ್ಟೆ ಖಾಲಿಯಿದ್ದು, ಕೆಲವರು ತಮ್ಮ ದನಗಳನ್ನು ಕಟ್ಟಿ ಕೊಟ್ಟಿಗೆಯನ್ನಾಗಿ ಬದಲಾಯಿಸಿಕೊಂಡಿದ್ದಾರೆ. ಇನ್ನೂ ಮಾರುಕಟ್ಟೆ ಮುಖ್ಯದ್ವಾರದ ಬಲಬದಿ ಕೆಲ ಮಳಿಗೆಗಳನ್ನು ನಿರ್ಮಿಸಿ ಟೆಂಡರ್‌ ಕರೆದು ಬಾಡಿಗೆ ನೀಡಲಾಗಿತ್ತು. ಆದರೆ ಯಾರೂ ಮಳಿಗೆ ಆರಂಭ ಮಾಡದ ಕಾರಣ ನೋಟಿಸ್‌ ನೀಡಿ ಮರಳಿ ಪಡೆಯಲಾಗಿದೆ. ಸದಾ ಬಾಗಿಲು ಮುಚ್ಚಿರುವ ಮಳಿಗೆಗಳ ಪುನಾರಂಭದ ಜೊತೆಗೆ ಹರಾಜು ಕಟ್ಟೆಯಲ್ಲಿನ ದನದ ಕೊಟ್ಟಿಗೆ ತೆರವುಗೊಳಿಸುವತ್ತ ಎಪಿಎಂಸಿ ಆಡಳಿತ ಮಂಡಳಿ ಲಕ್ಷ್ಯ ವಹಿಸಬೇಕಿದೆ.

ಸುಭದ್ರ ಕಾಂಪೌಂಡ್‌ ಕಟ್ಟಲು ಕ್ರಿಯಾಯೋಜನೆ ಒಳಗಡೆ ಅನುಮೋದನೆ ಪಡೆದಿದ್ದು, ಕಾಂಪೌಂಡ್‌ ಗೋಡೆಯ ಮೇಲೆ ತಂತಿ ಸಹ ಅಳವಡಿಸಲಾಗುವುದು. ಇದು ಸಾಕಾರಗೊಂಡರೆ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಬೀಳಲಿದೆ. ಇದರೊಂದಿಗೆ ಈಗಿರುವ ಭದ್ರತಾ ಸಿಬ್ಬಂದಿಯನ್ನೂ ಬದಲಾವಣೆ ಮಾಡುತ್ತೇವೆ.•ಮಹಾವೀರ ಜೈನ್‌, ಅಧ್ಯಕ್ಷ, ಎಪಿಎಂಸಿ, ಧಾರವಾಡ

 

•ಶಶಿಧರ್‌ ಬುದ್ನಿ

ಟಾಪ್ ನ್ಯೂಸ್

Launch of Bharat Brand-2: Wheat flour at 30, kg. 34 for rice

Bharat Brand: ಭಾರತ್‌ ಬ್ರ್ಯಾಂಡ್‌-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಧಾರವಾಡ: ಅವಸಾನದತ್ತ ಶತಮಾನದ ಕೆಲಗೇರಿ ಕೆರೆ

ಧಾರವಾಡ: ಅವಸಾನದತ್ತ ಶತಮಾನದ ಕೆಲಗೇರಿ ಕೆರೆ

MUDA Case: ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ ಸಿದ್ದರಾಮಯ್ಯ

MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ

BJP ಡಬಲ್‌ ಗೇಮ್‌; ವಕ್ಫ್ ಆಸ್ತಿ ರಕ್ಷಣೆ ಬಗ್ಗೆ ಬಿಜೆಪಿ ಪ್ರಣಾಳಿಕೆಯಲ್ಲಿ ಉಲ್ಲೇಖ: ಸಿದ್ದು

BJP ಡಬಲ್‌ ಗೇಮ್‌; ವಕ್ಫ್ ಆಸ್ತಿ ರಕ್ಷಣೆ ಬಗ್ಗೆ ಬಿಜೆಪಿ ಪ್ರಣಾಳಿಕೆಯಲ್ಲಿ ಉಲ್ಲೇಖ: ಸಿದ್ದು

Hubli: ಅಪ್ರಾಪ್ತೆಯೊಂದಿಗೆ ಅನುಚಿತ ವರ್ತನೆ: ಮುಖ್ಯ ಪೇದೆ ವಿರುದ್ದ ಪೋಕ್ಸೋ ಕೇಸ್

Hubli: ಅಪ್ರಾಪ್ತೆಯೊಂದಿಗೆ ಅನುಚಿತ ವರ್ತನೆ: ಮುಖ್ಯ ಪೇದೆ ವಿರುದ್ದ ಪೋಕ್ಸೋ ಕೇಸ್

siddaramaiah

Hubli: ಹಣಕಾಸು ಆಯೋಗದ ಅನ್ಯಾಯದ ಬಗ್ಗೆ ಬಿಜೆಪಿಯರಿಂದ ಮೌನ: ಸಿದ್ದರಾಮಯ್ಯ ಕಿಡಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Launch of Bharat Brand-2: Wheat flour at 30, kg. 34 for rice

Bharat Brand: ಭಾರತ್‌ ಬ್ರ್ಯಾಂಡ್‌-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Kanaka-Award

Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.