ಗಣಪತಿ ಬಪ್ಪಾ ಮುಂದಿನ ವರ್ಷ ಬಾರಪ್ಪಾ
Team Udayavani, Sep 6, 2017, 12:58 PM IST
ಹುಬ್ಬಳ್ಳಿ: ಗಣಪತಿ ಬಪ್ಪಾ ಮೋರಯಾ…. ಗಜಾನನ ಮಹಾರಾಜ ಕೀ ಜೈ…ಎಂಬ ಘೋಷಣೆಗಳೊಂದಿಗೆ ಚತುರ್ಥಿಯಿಂದ ಹನ್ನೊಂದು ದಿನಗಳ ಕಾಲ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಿಂದ ಪ್ರತಿಷ್ಠಾಪಿತಗೊಂಡಿದ್ದ ವಿಘ್ನ ವಿನಾಶಕ ಗಜಾನನ ಮೂರ್ತಿಗಳ ವಿಸರ್ಜನೆ ಮಂಗಳವಾರ ರಾತ್ರಿ ಶ್ರದ್ಧಾ -ಭಕ್ತಿ ಹಾಗೂ ವಿಜೃಂಭಣೆಯಿಂದ ನಡೆಯಿತು.
ಮಧ್ಯಾಹ್ನದಿಂದಲೇ ಸಾರ್ವಜನಿಕ ಗಣೇಶೋತ್ಸವದ ಮೆರವಣಿಗೆ ಆರಂಭಗೊಂಡರೂ ಬೆಳಗಿನವರೆಗೂ ಸುಮಾರು 300 ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ನಡೆಯಿತು. ಮಹಾಪೂಜೆ, ಗಣಪತಿ ಎದುರಿನ ಹಣ್ಣು, ಕಾಯಿಗಳ ಸವಾಲು ಪೂರ್ಣಗೊಂಡ ನಂತರ ಮೆರವಣಿಗೆ ಮೂಲಕ ಮೂರ್ತಿಗಳನ್ನು ಸಾಗಿಸಲಾಯಿತು.
ಕೇಸರಿ ಶಾಲು, ಪಟಗಾ ಸುತ್ತಿಕೊಂಡ ಭಕ್ತರು ಮೆರವಣಿಗೆಯಲ್ಲಿ ಸಂಭ್ರಮದಿಂದ ಪಾಲ್ಗೊಂಡರು. ಮೆರವಣಿಗೆಯುದ್ದಕ್ಕೂ ಪಟಾಕಿಗಳನ್ನು ಸಿಡಿಸುತ್ತ, ಸಂಗೀತಕ್ಕೆ ನರ್ತಿಸುತ್ತ ಸಂಭ್ರಮದಿಂದ ಗಣೇಶನನ್ನು ಬೀಳ್ಕೊಡಲಾಯಿತು.
ಡಿಜೆ ಅಬ್ಬರ: ಡಿಜೆ ಸಂಗೀತ ವ್ಯವಸ್ಥೆಯಿಂದ ಭಕ್ತರಿಗೆ ಖುಷಿಯಾಯಿತಾದರೂ ಸಾರ್ವಜನಿಕರಿಗೆ ತೊಂದರೆಯಾಯಿತು. ಸ್ಪರ್ಧೆಗಿಳಿದವರಂತೆ ಸೌಂಡ್ ಬಾಕ್‌ಗಳನ್ನು ಟ್ರ್ಯಾಕ್ಟರ್ ಟ್ರೇಲರ್‌ನಲ್ಲಿ ಒಂದರ ಮೇಲೊಂದರಂತೆ ಸೇರಿಸಿ ಅಬ್ಬರದ ಸಂಗೀತದ ಮಧ್ಯೆ ಮೆರವಣಿಗೆ ನಡೆಯಿತು.
ಯುವಕರು ಅಬ್ಬರದ ಸಂಗೀತವನ್ನು ಇಷ್ಟಪಟ್ಟರೆ, ಪಕ್ಕಕ್ಕೆ ನಿಂತವರೊಂದಿಗೆ ಮಾತನಾಡಲೂ ಕಷ್ಟ ಪಡುವಂಥ ಸ್ಥಿತಿ ನಿರ್ಮಾಣವಾಗಿತ್ತು. ಜನರು ಅಂಗಡಿ, ಮನೆಗಳ ಮುಂದೆ ನಿಂತು ಮೆರವಣಿಗೆ ವೀಕ್ಷಿಸಿದರು. ಮೆರವಣಿಗೆ ಮುಂದೆ ಸಾಗುವಂತೆ ಮಾಡಲು ಪೊಲೀಸರು ಗಣೇಶೋತ್ಸವ ಸಮಿತಿಯವರ ಮನವೊಲಿಸುತ್ತಿದ್ದುದು ಕಂಡು ಬಂತು.
ಎರಡು ಕಡೆ ವಿಸರ್ಜನೆ: ಸಾರ್ವಜನಿಕ ಗಣೇಶ ಮೂರ್ತಿಗಳಿಗೆ ಈ ಬಾರಿ ಎರಡು ಕಡೆ ವ್ಯವಸ್ಥೆ ಮಾಡಲಾಗಿತ್ತು. ಗಾಜಿನ ಮನೆಯ ಪಕ್ಕದ ಬಾವಿ, ಹೊಸೂರಿನ ಟ್ಯಾಂಕ್ ಪಾಲಿಕೆ ವತಿಯಿಂದ ವ್ಯವಸ್ಥೆ ಮಾಡಲಾಗಿತ್ತು. ಉಣಕಲ್ಲ ಸುತ್ತಮುತ್ತಲಿನ ಭಾಗದವರು ಉಣಕಲ್ಲ ಕೆರೆಯಲ್ಲಿ ಗಣಪತಿ ಮೂರ್ತಿಗಳ ವಿಸರ್ಜನೆ ಮಾಡಿದರು.
ಕಳೆದ ಬಾರಿ ಕಪಿಲಾ ಬಾವಿ ಹಾಗೂ ಶ್ರೀನಗರ ಬಾವಿಯಲ್ಲೂ ಗಣೇಶನ ವಿಸರ್ಜಣೆ ಮಾಡಲಾಗಿತ್ತು. ಆದರೆ ಈ ಬಾರಿ ನೀರಿಲ್ಲದ ಕಾರಣ ಎಲ್ಲರೂ ಗ್ಲಾಸ್ ಹೌಸ್ ಬಾವಿ ಹಾಗೂ ಹೊಸೂರ ನವೀಕೃತ ನೀರಿನ ಟ್ಯಾಂಕ್‌ನಲ್ಲಿ ಗಣೇಶ ವಿಸರ್ಜನೆ ಮಾಡಲಾಯಿತು.
ನಗರದ ವಿವಿಧ ಪ್ರದೇಶಗಳಲ್ಲಿ ಪ್ರತಿಷ್ಠಾಪನೆಗೊಂಡಿದ್ದ ಗಣೇಶನ ಮೂರ್ತಿಗಳು ದುರ್ಗದ ಬಯಲು, ಬ್ರಾಡ್ ವೇ, ಮೇದಾರ ಓಣಿ, ದಾಜಿಬಾನ ಪೇಟೆ, ಸಂಗೊಳ್ಳಿ ರಾಯಣ್ಣ ವೃತ್ತ, ಚನ್ನಮ್ಮ ವೃತ್ತ, ಬಸವ ವನದ ಮೂಲಕ ವಿಸರ್ಜನೆಗೆ ತೆರಳಿದವು. ಬುಧವಾರ ಬೆಳಗ್ಗೆವರೆಗೂ ಗಣೇಶಮೂರ್ತಿಗಳು ವಿಸರ್ಜನೆಗೊಂಡವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್ ಲಾಡ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.