ಜನಸಾಮಾನ್ಯರಿಗೆ ರಾಜ್ಯ ಇಬ್ಭಾಗ ಬೇಕಿಲ್ಲ : ಪ್ರೊ| ಭಾವಿಕಟಿ
Team Udayavani, Aug 1, 2018, 5:11 PM IST
ಗಂಗಾವತಿ (ಗಂಡುಗಲಿ ಕುಮಾರರಾಮ): ರಾಜಕಾರಣಿಗಳಿಗೆ ಬೇಕಾಗಿರುವ ರಾಜ್ಯದ ಇಬ್ಭಾಗ ಸಾಮಾನ್ಯರಿಗೆ ಬೇಕಿಲ್ಲ ಎಂದು ಪ್ರೊ| ಲಲಿತಾ ಭಾವಿಕಟ್ಟಿ ಹೇಳಿದರು. ಅವರು ಸಾಹಿತ್ಯ ಸಮ್ಮೇಳನದ ಪ್ರಥಮ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿ ಮಾತನಾಡಿದರು. ಅರಳಿ ನಾಗಭೂಷಣ ತಮ್ಮ ಕವಿತೆಯ ಮೂಲಕ ಪ್ರತಿಯೊಬ್ಬ ಭೂಮಿ, ಗಾಳಿ, ನೀರು ಸೇರಿ ಪ್ರಕೃತಿಯಂತೆ ಕ್ಷಮೆ ಗುಣವನ್ನು ಮನುಷ್ಯ ಅಳವಡಿಸಿಕೊಳ್ಳಲು ಮನವಿ ಮಾಡಿದರು.
ಹೆಬ್ಟಾಳ ನಾಗಭೂಷಣ ಶಿವಾಚಾರ್ಯರು ಚಂದ್ರ-ಸೂರ್ಯಗ್ರಹಣದ ಸಂದರ್ಭದಲ್ಲಿ ಜ್ಯೋತಿಷಿಗಳು ಸೇರಿ ಕೆಲವರು ಜನರ ಅಮಾಯಕತೆಯನ್ನು ದುರುಪಯೋಗ ಮಾಡಿಕೊಂಡು ಮೌಡ್ಯ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವ ಭರವಸೆ ನೀಡಿ ಈಗ ವಿಳಂಬ ಮಾಡುತ್ತಿರುವ ಸಿಎಂ ಕುಮಾರಸ್ವಾಮಿ ಅವರನ್ನು ಎಚ್ಚರಿಸುವ ಕವಿತೆ ಓದುವ ಮೂಲಕ ಪ್ರೇಕ್ಷಕರ ಗಮನ ಸೆಳೆದರು.
ಪ್ರಗತಿಪರ ಚಿಂತಕ ರಮೇಶ ಗಬ್ಬೂರು ತಮ್ಮ ಕವಿತೆಯಲ್ಲಿ ಅಗ್ರಹಾರದಲ್ಲಿ ಅಕ್ಷರ ಕಲಿಸುತ್ತಾರೆ. ಬಹುಸಂಖ್ಯಾತರು ಅನ್ನಕ್ಕಾಗಿ ಹೋರಾಟ ನಡೆಸುತ್ತಾರೆ ಎಂಬ ಕವನ ವಾಚನ ಮಾಡಿ ಶತಮಾನಗಳಿಂದ ದೇಶದಲ್ಲಿ ನಡೆಯುತ್ತಿರುವ ಜಾತಿ ಬೇಧಭಾವ ಮತ್ತು ಮೇಲು ಕೀಳು ಎಣಿಸುತ್ತ ಶೋಷಿತ ಕೆಳ ವರ್ಗದವರಿಗೆ ಶಿಕ್ಷಣದಿಂದ ಹೇಗೆ ವಂಚಿತರನ್ನಾಗಿ ಮಾಡಿದ್ದಾರೆ ಎಂಬ ಮಾಹಿತಿ ನೀಡಿ ಶೋಷಿತರ ಧ್ವನಿಯಾದರು.
ಶಿಕ್ಷಕ ವಿಜಯ ವೈದ್ಯ ಬುದ್ಧ ಸ್ಟೈಲ್ ಕವಿತೆಯಲ್ಲಿ ಯುದ್ಧ ಸನ್ನಿವೇಶ ಹಾಗೂ ಅಣು ಬಾಂಬುಗಳ ಕುರಿತು ಮಾನವ ರಕ್ತಪಾತದ ಬಗ್ಗೆ ಹೇಳಿದರು. ಕವಯಿತ್ರಿ ಸಲಿಮಾಮಂಗಳೂರು ಗಂಗಾವತಿಯಲ್ಲಿ ಕದಡಿರುವ ಕೋಮು ಸೌಹಾರ್ದ ಮತ್ತು ಪರಿಹಾರ ಸೂಚಿಸುವವರು ನಾವೇ ಎಂಬ ಕುರಿತು ಕವಿತೆ ರಚನೆ ಮಾಡಿ ಗಂಗಾವತಿ ಜನರ ಬಗ್ಗೆ ಕಳಕಳಿ ವ್ಯಕ್ತಪಡಿದರು.
ಸುಮಾರು 45ಕ್ಕೂ ಹೆಚ್ಚು ಕವಿ, ಕವಯಿತ್ರಿಗಳು ಪ್ರೇಮ-ಪ್ರಣಯ, ಪ್ರತೇಕ ರಾಜ್ಯ, ತುಂಗಭದ್ರಾ ಸೇರಿ ಹಲವು ವಿಷಯಗಳ ಕುರಿತು ಕವಿತೆಗಳ ವಾಚನ ಮಾಡಿದರು. ಸಾಹಿತಿ ನಿಜಲಿಂಗಪ್ಪ ಮೆಣಸಗಿ, ಡಾ|ನಾರಾಯಣ ಕಂದಗಲ್, ಮುಖಂಡರಾದ ದೇವಪ್ಪ ಕಾಮದೊಡ್ಡಿ, ಅಮರೇಗೌಡ್ರು, ಜೋಗದ ಹನುಮಂತಪ್ಪ, ದರೋಜಿ ಶ್ರೀರಂಗ, ಜಗದೀಶಪ್ಪ ಸಿಂಗನಾಳ, ಜಗನ್ನಾಥ ಆಲಂಪಲ್ಲಿ, ಜಿ. ಶ್ರೀಧರ ಕವಿಗೋಷ್ಠಿಯಲ್ಲಿದ್ದರು.
ಅಖಂಡ ಕರ್ನಾಟಕವೇ ಕನ್ನಡಿಗರ ಹೆಮ್ಮೆ: ಪ್ರಾಣೇಶ
ಗಂಗಾವತಿ: ಅಖಂಡ ಕರ್ನಾಟಕವೇ ಕನ್ನಡಿಗರ ಹೆಮ್ಮೆಯಾಗಿದೆ. ಪ್ರತ್ಯೇಕ ರಾಜ್ಯ ರಚನೆಯಾಗಬಾರದು ಎಂದು ಹಾಸ್ಯ ಭಾಷಣಕಾರ ಬಿ.ಪ್ರಾಣೇಶ ಹೇಳಿದರು. ಅವರು ಸಾಹಿತ್ಯ ಸಮ್ಮೇಳನದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಕೇಕ್ ಕತ್ತರಿಸಿದರೆ ಎಲ್ಲರೂ ತಿನ್ನುತ್ತಾರೆ. ಹಾಗೇ ಇದ್ದರೆ ತಿನ್ನುವುದು ಕಷ್ಟ. ಕರ್ನಾಟಕ ಕೇಕ್ ಇದ್ದಂತೆ. ಇದನ್ನು ಕತ್ತರಿಸುವವರು ಜನರಿಂದ ತಿರಸ್ಕಾರಗೊಳ್ಳಲಿದ್ದಾರೆ. ಅಖಂಡತೆಯಲ್ಲಿ ಎಲ್ಲರ ಸುಖ ಅಡಗಿದೆ. ಪ್ರತ್ಯೇಕತೆಯಲ್ಲಿ ಕೆಲವರ ಹಿತ ಅಡಗಿದೆ. ಸಂಘಟನೆಗಳು ಪ್ರತ್ಯೇಕತೆ ಕೂಗನ್ನು ಕೈಬಿಡಬೇಕು. ಅಭಿವೃದ್ಧಿಗಾಗಿ ಶಾಸನ ಸಭೆಗಳಲ್ಲಿ ಜನಪ್ರತಿನಿಧಿಗಳು ಕೇಳಬೇಕು. ಅದನ್ನು ಬಿಟ್ಟು ಪ್ರತ್ಯೇಕ ರಾಜ್ಯ ಬೇಡ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Weather: ರಾಜ್ಯದ ಮೂರು ನಗರದಲ್ಲಿ ಹವಾಮಾನ ರಾಡಾರ್ ಸ್ಥಾಪನೆ: ಕೇಂದ್ರ ಸಚಿವ ಜೋಶಿ
BSY POCSO Case: ಜ.10ಕ್ಕೆ ವಿಚಾರಣೆ ಮುಂದೂಡಿದ ಧಾರವಾಡ ಹೈಕೋರ್ಟ್
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
ಹೊಸ ವರ್ಷದ ಕೊಡುಗೆ: ಬೈಸಿಕಲ್ ಉತ್ತೇಜನಕ್ಕೆ ಉಚಿತ ರೈಡ್
Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.