ಕಸ ವಿಲೇವಾರಿ ಅಸಮರ್ಪಕ: ಪಪಂ ಸದಸ್ಯರ ಆಕ್ರೋಶ
Team Udayavani, Jun 8, 2018, 5:48 PM IST
ಯಲ್ಲಾಪುರ: ಪಟ್ಟಣದ ತಾ.ಪಂ ಸಭಾ ಭವನದಲ್ಲಿ ಪ.ಪಂ ಸಾಮಾನ್ಯ ಸಭೆ ಗುರುವಾರ ಅಧ್ಯಕ್ಷ ಶಿರೀಷ ಪ್ರಭು ಅಧ್ಯಕ್ಷತೆಯಲ್ಲಿ ನಡೆಯಿತು. ಗಟಾರದ ನೈರ್ಮಲ್ಯತೆ ಕುರಿತು ಮತ್ತು ಅಸಮರ್ಪಕ ಕಸ ವಿಲೇವಾರಿ ಬಗ್ಗೆ ಹೆಚ್ಚಿನ ಸಮಯ ಚರ್ಚೆ ನಡೆದು, ಪ.ಪಂ ಮುಖ್ಯಾಧಿಕಾರಿ ಮತ್ತು ನೌಕರರನ್ನು ಸದಸ್ಯರು ತೀವ್ರ ತರಾಟೆಗೆ ತೆಗೆದುಕೊಂಡರು.
ಗಟಾರದಿಂದ ರಸ್ತೆ ಮೇಲೆ ಹಾಕಿದ ಕಸ ತಿಂಗಳಾದರೂ ವಿಲೇವಾರಿಯಾಗುತ್ತಿಲ್ಲ. ಅದನ್ನೂ ಸದಸ್ಯರೇ ಗಮನಕ್ಕೆ ತರಬೇಕು. ಕಳೆದ 5 ವರ್ಷದಿಂದ ಇದೇ ನಡೆಯುತ್ತಿದೆ ಎಂದು ಸದಸ್ಯರಾದ ಆರತಿ ನಾಯ್ಕ, ಯೋಗೇಶ ಹಿರೇಮಠ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಮಹೇಂದ್ರ ತಿಮ್ಮಾನಿ ಇನ್ನು ಮುಂದೆ ಸಮರ್ಪಕ ರೀತಿಯಲ್ಲಿ ಕಸ ವಿಲೇವಾರಿ ನಡೆಸುವಂತೆ ಸಂಬಂಧಪಟ್ಟವರಿಗೆ ಸೂಚಿಸಿದರು.
ಪೌರಕಾರ್ಮಿಕರ ಕೊರತೆಯಿದ್ದು, 15 ಕಾರ್ಮಿಕರನ್ನು ಹೆಚ್ಚುವರಿಯಾಗಿ ತೆಗೆದುಕೊಳ್ಳುವ ಬಗ್ಗೆ ಟೆಂಡರ್ ಕರೆಯಲಾಗಿದೆ ಎಂದೂ ತಿಳಿಸಿದರು.
ಅಂಗಡಿ ಲೈಸನ್ಸ್ ನವೀಕರಣದ ಬಗ್ಗೆ ಹತ್ತಾರು ಬಾರಿ ಕಾಗದಪತ್ರಕ್ಕಾಗಿ ಅಲೆದಾಡಿ ಸತಾಯಿಸಲಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಸಹಸ್ರಳ್ಳಿ ವಾರ್ಡಿಗೆ ಯಾವುದೇ ಅಭಿವೃದ್ಧಿ ಅನುದಾನ, ಕಾಮಗಾರಿ ನೀಡಿಲ್ಲ. ಈ ಬಗ್ಗೆ ಕೇಳಿದರೆ ಅದು ಗ್ರಾ.ಪಂ. ಗೆ ಸೇರ್ಪಡೆಯಾಗಲಿದೆ, ಪ.ಪಂನಿಂದ ಬೇರ್ಪಟ್ಟಿದೆ ಎಂದು ಹೇಳಲಾಗುತ್ತಿದೆ. ಆದರೆ ಸ್ಥಳೀಯರು ತಮ್ಮ ಅಹವಾಲನ್ನು ಎಲ್ಲಿ ಸಲ್ಲಿಸಬೇಕೆಂಬುದು ಪ್ರಶ್ನೆಯಾಗಿ ಉಳಿದಿದೆ ಎಂದು ಸಹಸ್ರಳ್ಳಿ ವಾರ್ಡ್ ಸದಸ್ಯ ವಿಶ್ವನಾಥ ಅಡಿಕೆಸರ ಆಕ್ರೋಶ ವ್ಯಕ್ತಪಡಿಸಿದರು. ಸಹಸ್ರಳ್ಳಿ ವಾರ್ಡ್ ಗ್ರಾ.ಪಂಗೆ ಸೇರಿದ ಬಗ್ಗೆ ಅಧಿಕೃತ ಆದೇಶ ಇನ್ನೂ ಬಂದಿಲ್ಲ. ಈ ಗೊಂದಲದಲ್ಲಿಯೇ ಎರಡು ಕ್ರಿಯಾಯೋಜನೆಯಲ್ಲಿ ವಾರ್ಡಿಗೆ ಯಾವುದೇ ಅಭಿವೃದ್ಧಿ ಕಾಮಗಾರಿ ನೀಡಿಲ್ಲ. ಹೀಗಿದ್ದ ಮೇಲೆ ನಮ್ಮ ಸದಸ್ಯತ್ವ ರದ್ದು ಮಾಡಿ. ಒಂದು ವೇಳೆ ಗ್ರಾ.ಪಂಗೆ ಸೇರ್ಪಡೆಯಾದರೂ ಎರಕನಬೈಲ್, ಕಾಂಬಳೆಕೇರಿ ಮಜರೆಗಳು ಪ.ಪಂಗೇ ಉಳಿಯುತ್ತದೆ. ಹೀಗಿದ್ದೂ
ತಾರತಮ್ಯವೇಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 2-3 ತಿಂಗಳ ಜಮಾ ಖರ್ಚು ವಿವರವನ್ನು ಇಂಗ್ಲಿಷ್ ಭಾಷೆಯಲ್ಲಿ ನೀಡಿರುವ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ರವಿಚಂದ್ರ ನಾಯ್ಕ, ಕನ್ನಡಕ್ಕೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದರು. ಇದಕ್ಕೆ ಎಲ್ಲ ಸದಸ್ಯರು ಬೆಂಬಲಿಸಿ, ಮುಂದಿನ ಸಭೆಗಳಲ್ಲಿ ಕನ್ನಡದಲ್ಲಿಯೇ ಮಾಹಿತಿ ನೀಡುವಂತೆ ಸಿಬ್ಬಂದಿಗೆ ಸೂಚಿಸಿದರು.
ಹಸಿ ಕಸವನ್ನು ಗೊಬ್ಬರವಾಗಿ ಪರಿವರ್ತಿಸಿದ್ದು, ಕಡಿಮೆ ದರದಲ್ಲಿ ರೈತರು ಅಗತ್ಯವಿದ್ದರೆ ಖರೀದಿಸಬಹುದು.
ಮಹೇಂದ್ರ ತಿಮ್ಮಾನಿ ಮುಖ್ಯಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ
Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನಪ್ಪನವರ ವಿರುದ್ದ ಬೆಲ್ಲದ್ ಟೀಕೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.