ಚೆಂದ ಕಳೆದುಕೊಂಡಿದೆ ಚಿಟಗುಪ್ಪಿ ಪಾರ್ಕ್
Team Udayavani, Apr 25, 2019, 1:42 PM IST
ಹೆಸರಿಗೆ ಮಾತ್ರ ಇದೊಂದು ಉದ್ಯಾನವಾಗಿ ಉಳಿದುಕೊಂಡಿದ್ದು, ಅಂದದ ಗಿಡಗಳಿಲ್ಲ. ಹಸಿರಂತೂ ಕಾಣುವುದೇ ಇಲ್ಲ. ನಗರದ ಕೇಂದ್ರ ಭಾಗದಲ್ಲಿ ಇಂದಿರಾ ಗಾಜಿನಮನೆ ಉದ್ಯಾನ ಹೊರತುಪಡಿಸಿದರೆ ಮತ್ತೂಂದು ಉದ್ಯಾನವಿಲ್ಲ. ಮಹಾನಗರ ಪಾಲಿಕೆ ಕೇಂದ್ರ ಕಚೇರಿ, ನಗರದ ಇತಿಹಾಸ ಹೇಳುವ ಚಿಟಗುಪ್ಪಿ ಆಸ್ಪತ್ರೆ, ಸಂಸದರ ಕಚೇರಿ, ಪಾಲಿಕೆ ಆಯುಕ್ತರ ನಿವಾಸ ಇಲ್ಲೇ ಇದ್ದರೂ ಪುರಾತನ ಉದ್ಯಾನ ಉಳಿಸಿಕೊಳ್ಳುವ ಇಚ್ಛಾಶಕ್ತಿ ಯಾರಲ್ಲೂ ಇಲ್ಲ. ಹೀಗಾಗಿ ಪಾಲಿಕೆ ದಿವ್ಯ ನಿರ್ಲಕ್ಷ್ಯ ಪರಿಣಾಮ ಉದ್ಯಾನಕ್ಕಿಂತ ಇತರೆ ಕಾರ್ಯಗಳಿಗೆ ಇದು ಬಳಕೆಯಾಗುತ್ತಿದ್ದು, ಪಾಲಿಕೆ ಆಯುಕ್ತರ, ಅಧಿಕಾರಿಗಳ ಕಣ್ಣೆದುರೆ ಚಿಟಗುಪ್ಪಿ ಉದ್ಯಾನ ವಾಹನಗಳ ನಿಲುಗಡೆಯ ತಾಣವಾಗುತ್ತಿದೆ.
ಪಾರ್ಕಿಂಗ್ ಸ್ಥಳವಾಗುತ್ತಿದೆ: ಬಿಆರ್‌ಟಿಎಸ್ ರಸ್ತೆ ಅಗಲೀಕರಣಕ್ಕಾಗಿ ಪಾಲಿಕೆಯ ಕಾಂಪೌಡ್ ತೆರವುಗೊಳಿಸಿದ ನಂತರದಿಂದ ಈ ಉದ್ಯಾನ ಪಾರ್ಕಿಂಗ್ ಸ್ಥಳವಾಗಿ ರೂಪಗೊಂಡಿದೆ. ವಾಹನ ಓಡಾಟಕ್ಕೆ ಅಕ್ರಮವಾಗಿ ಪ್ರವೇಶ ದ್ವಾರ ಕೂಡ ಮಾಡಲಾಗಿದೆ. ದೊಡ್ಡ ಕಾಂಪೌಂಡ್, ಮಹಾದ್ವಾರ ನಿರ್ಮಿಸಿದ ಪಾಲಿಕೆ ಅಧಿಕಾರಿಗಳು ಉದ್ಯಾನದ ಕಾಂಪೌಂಡ್ ನಿರ್ಮಾಣ ಮಾಡದಿರುವುದು ವಾಹನಗಳ ನಿಲುಗಡೆಗೆ ಅನುವು ಮಾಡಿಕೊಟ್ಟಂತಾಗಿದೆ. ಪಾಲಿಕೆ ಅಧಿಕಾರಿಗಳ ಹಾಗೂ ಸಿಬ್ಬಂದಿಯ ವಾಹನಗಳ ನಿಲುಗಡೆಯ ಸ್ಥಳವಾಗಿ ಮಾರ್ಪಟ್ಟಿದೆ. ಇನ್ನೂ ಬೇರೆಡೆಗೆ ತೆರಳುವವರು ಕಾರುಗಳನ್ನು ನಿಲ್ಲಿಸುತ್ತಿದ್ದಾರೆ. ಇದಕ್ಕಾಗಿ ಓರ್ವ ಭದ್ರತಾ ಸಿಬ್ಬಂದಿಯೂ ಕೆಲಸ ನಿರ್ವಹಿಸುತ್ತಿರುವುದು ಪಾಲಿಕೆ ಮೂರಾಬಿಟ್ಟಿಯ ಕೆಲಸಕ್ಕೆ ಹಿಡಿದ ಕೈಗನ್ನಡಿಯಾಗಿದೆ. ವಾಹನಗಳ ಓಡಾಟದಿಂದ ಉದ್ಯಾನದ ಒಂದು ಭಾಗ ಸಂಪೂರ್ಣ ಹಾಳಾಗಿದೆ.
ವ್ಯವಸ್ಥಿತ ತಂತ್ರಗಾರಿಕೆ!: ಚಿಟಗುಪ್ಪಿ ಎನ್ನುವ ದೊಡ್ಡ ಕುಟುಂಬ ಈ ಜಾಗವನ್ನು ಆಸ್ಪತ್ರೆ ಹಾಗೂ ಉದ್ಯಾನಕ್ಕಾಗಿ ದಾನ ಮಾಡಿದ್ದರು. 1980 ದಶಕದ ಸುಮಾರಿಗೆ ಸಿದ್ಧಾರೂಢಮಠದ ಬಳಿಯಲ್ಲಿ ಈ ಕುಟುಂಬ ದಾನ ನೀಡಿದ್ದ ಜಾಗವನ್ನು ಅಂದಿನ ಪಾಲಿಕೆ ಆಯುಕ್ತರೊಬ್ಬರು ಖಾಸಗಿ ವ್ಯಕ್ತಿಗೆ ಮಾರಾಟ ಮಾಡಿದ್ದು ನಗರದ ಜನತೆಗೆ ತಿಳಿದಿರುವ ಸಂಗತಿಯಾಗಿದೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಈ ಜಾಗವನ್ನು ಮಾರಾಟ ಮಾಡಲು ಸಾಧ್ಯವಿಲ್ಲದ ಪರಿಣಾಮ ಸಾರ್ವಜನಿಕರ ಉಪಯೋಗಕ್ಕಾಗಿ ಎನ್ನುವ ಹೆಸರನಲ್ಲಿ ಈಗಾಗಲೇ ಹವಾಮಾನ ಇಲಾಖೆಯ ಕೇಂದ್ರ, ಹೊಟೇಲ್, ಜೈವಿಕ ಅನಿಲ ಉತ್ಪಾದನಾ ಘಟಕ, ಕುಡಿಯುವ ನೀರಿನ ಘಟಕ, ಶಿವಾಜಿ ಪ್ರತಿಮೆ ಸ್ಥಾಪನೆ, ಗುಜರಿ ಸಾಮಗ್ರಿಗಳ ಸಂಗ್ರಹ ಸ್ಥಳ ಸೇರಿದಂತೆ ವಿವಿಧ ಕಾರ್ಯಗಳಿಗೆ ಹಂತಹಂತವಾಗಿ ಹಂಚಿಕೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಇಡೀ ಉದ್ಯಾನ ಖಾಸಗಿಯವರ ಪಾಲಾದರೂ ಅಚ್ಚರಿಪಡಬೇಕಿಲ್ಲ.
ಪಾಲಿಕೆಯ ದಿವ್ಯ ನಿರ್ಲಕ್ಷ್ಯ: ಪಾಲಿಕೆ ಆಯುಕ್ತ, ಮಹಾಪೌರರಿಂದ ಹಿಡಿದು ಯಾರಿಗೂ ಈ ಉದ್ಯಾನದ ಕಾಳಜಿ ಬೇಡವಾಗಿದೆ. ಪಾಲಿಕೆ ಕೇಂದ್ರ ಕಚೇರಿ ಪಕ್ಕದಲ್ಲಿನ ಉದ್ಯಾನದ ಪರಿಸ್ಥಿತಿಯೇ ಹೀಗಿರುವಾಗ ಇನ್ನು ಉಳಿದ ಉದ್ಯಾನವನಗಳ ದುಸ್ಥಿತಿ ಕಲ್ಪನೆ ಮಾಡಿಕೊಳ್ಳಲು ಅಸಾಧ್ಯ. ಪ್ರತಿ ವರ್ಷ ಉದ್ಯಾನಗಳ ನಿರ್ವಹಣೆಗೆ ಕೋಟಿಗಟ್ಟಲೆ ಹಣ ಸುರಿಯಲಾಗುತ್ತದೆ. ಇವುಗಳ ನಿರ್ವಹಣೆಗೆ ತೋಟಗಾರಿಕೆ ವಿಭಾಗ ಇರುವುದು ದಂಡಕ್ಕೆ ಎಂಬಂತಾಗಿದೆ. ಇವರ ದಿವ್ಯ ನಿರ್ಲಕ್ಷ ಪರಿಣಾಮ ನಗರದ ಮೊದಲ ಉದ್ಯಾನ ಇಂದು ಕುಡುಕರ, ವೇಶ್ಯಾವಾಟಿಕೆ ತಾಣವಾಗುತ್ತಿದೆ. ಕೊಳಗಳು ಕಸದ ತೊಟ್ಟಿಯಾಗಿ ಗಬ್ಬು ನಾರುತ್ತಿವೆ. ವಿವಿಧ ಯೋಜನೆಗಳ ಹೆಸರಲ್ಲಿ ಬೇಕಾಬಿಟ್ಟಿಯಾಗಿ ಉದ್ಯಾನದ ಜಾಗ ಬಿಕರಿಯಾಗುತ್ತಿದೆ.
ಚಿಟಗುಪ್ಪಿ ಉದ್ಯಾನವನ್ನು ಬೇಕಾಬಿಟ್ಟಿ ಬಳಕೆಯಿಂದ ಮುಕ್ತಿಗೊಳಿಸುವ ಕಾರ್ಯ ಅಧಿಕಾರಿಗಳಿಂದ ಆಗಬೇಕಿದ್ದು, ಸ್ಮಾರ್ಟ್ ಸಿಟಿ ಯೋಜನೆಯನ್ನು ಕೇವಲ ಕಾಂಕ್ರೀಟೀಕರಣಕ್ಕೆ ಮಾತ್ರ ಸೀಮಿತಗೊಳಿಸದೆ ಇಂತಹ ಉದ್ಯಾನಗಳ ಅಭಿವೃದ್ಧಿಗೆ ಚಿಂತನೆಯಾಗಬೇಕು ಎಂಬುವುದು ಸಾರ್ವಜನಿಕರ ಒತ್ತಾಯವಾಗಿದೆ.
• ಡಾ| ಪಾಂಡುರಂಗ ಪಾಟೀಲ, ಮಾಜಿ ಮಹಾಪೌರರು
• ವಿ.ಎಂ.ಸೋಮಶೇಖರ, ವಾಯುವಿಹಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.