ಪಂ| ಪಂಚಾಕ್ಷರಿ ಗವಾಯಿ ಹೆಸರಿನಲ್ಲಿ ಪ್ರಶಸ್ತಿ ನೀಡಿ
Team Udayavani, Jun 13, 2018, 5:04 PM IST
ಧಾರವಾಡ: ಸರ್ಕಾರ ಪಂ| ಪಂಚಾಕ್ಷರಿ ಗವಾಯಿಗಳ ಹೆಸರಿನಲ್ಲಿ ಪ್ರತಿ ವರ್ಷ ಪ್ರಶಸ್ತಿ ನೀಡಬೇಕು ಎಂದು ಬಸವ ಶಾಂತಿ ಮಿಶನ್ ಅಧ್ಯಕ್ಷ ಮಹಾದೇವ ಹೊರಟ್ಟಿ ಹೇಳಿದರು. ನಗರದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಡಾ| ಪುಟ್ಟರಾಜ ಗವಾಯಿ ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ಗಾನಯೋಗಿ ಪಂ| ಪಂಚಾಕ್ಷರಿ ಗವಾಯಿಗಳ 74ನೇ ಸ್ಮ„ತಿ ಸಂಗೀತೋತ್ಸವದಲ್ಲಿ ಅವರು ಮಾತನಾಡಿದರು.
ಪಂ| ಪಂಚಾಕ್ಷರಿ ಗವಾಯಿಗಳು ಸಂಗೀತ ಕ್ಷೇತ್ರದಲ್ಲಿ ಶಾಶ್ವತವಾದ ಹೆಜ್ಜೆ ಇಟ್ಟಿದ್ದಾರೆ. ಅವರ ಶಿಷ್ಯವೃಂದ ದೇಶ-ವಿದೇಶದಲ್ಲಿ ಹೆಸರು ಮಾಡಿದೆ. ಪಂ| ಪಂಚಾಕ್ಷರಿ ಗವಾಯಿಗಳ ಹೆಸರಿನಲ್ಲಿ ಪ್ರಶಸ್ತಿ ನೀಡುವ ಮೂಲಕ ಅವರ ಸಂಗೀತ ಸೇವೆಗೆ ಗೌರವ ಕೊಡುವ ಕೆಲಸ ಆಗಬೇಕು ಎಂದರು. ನರರೋಗ ವೈದ್ಯ ಡಾ| ಎಸ್.ಪಿ. ಬಳಿಗಾರ ಸಂಗೀತೋತ್ಸವ ಉದ್ಘಾಟಿಸಿ ಮಾತನಾಡಿದರು. ಮಾನ್ವಿಯ ವಿರೂಪಾಕ್ಷಯ್ಯ ವಂದಲಿ ಗಾಯನ ಹಾಗೂ ಪುಣೆಯ ರಯೀಸ್ ಬಾಲೇಖಾನ್ ಸಿತಾರ ವಾದನ ಪ್ರಸ್ತುತ ಪಡಿಸಿದರು. ಗುರುಪ್ರಸಾದ ಹೆಗಡೆ ಸಂವಾದಿನಿ, ಡಾ| ರವಿಕಿರಣ ನಾಕೋಡ, ಕೇಶವ ಜೋಶಿ ತಬಲಾದಲ್ಲಿ ಸಾಥ್ ನೀಡಿದರು.
ಡಾ| ಪುಟ್ಟರಾಜ ಗವಾಯಿ ಪ್ರತಿಷ್ಠಾನದ ಉಪಾಧ್ಯಕ್ಷ ಶಂಕರ ಕುಂಬಿ ಸ್ವಾಗತಿಸಿದರು. ಕಾರ್ಯದರ್ಶಿ ಪಂ| ಎಂ. ವೆಂಕಟೇಶಕುಮಾರ, ಬಿ.ಎಸ್. ಮಠ, ಡಾ| ಶಾಂತಾರಾಮ ಹೆಗಡೆ, ಡಾ| ಮಲ್ಲಿಕಾರ್ಜುನ ತರ್ಲಘಟ್ಟ, ಡಾ| ವೀರಣ್ಣಾ ಹೂಗಾರ, ಸುಜಾತಾ ಗೂರವ (ಕಮ್ಮಾರ) ಇದ್ದರು. ಅರ್ಜುನ ವಠಾರ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್ ಲಾಡ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
KLE Technological University: ಮುರುಗೇಶ್ ನಿರಾಣಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.