ಸರ್ಕಾರಿ ಅಧಿಕಾರಿಗಳಿಂದಲೇ ಮರಕ್ಕೆ ಕೊಡಲಿ
Team Udayavani, Feb 17, 2020, 11:25 AM IST
ಸಾಂಧರ್ಬಿಕ ಚಿತ್ರ
ಧಾರವಾಡ: ಕೆಸಿಡಿ ಸರ್ಕಲ್ ಬಳಿಯ ಪಿಡಿಬ್ಲ್ಯೂ ಡಿ ಕ್ವಾರ್ಟರ್ಸ್‌ನಲ್ಲಿ ಪರವಾನಗಿ ಇಲ್ಲದೇ 50 ವರ್ಷಗಳಷ್ಟು ಹಳೆಯದಾದ ಹುಣಸೆ ಮರವೊಂದನ್ನು ಅಧಿಕಾರಿಗಳು ಕಡಿದು ಹಾಕಿದ್ದಾರೆ. ಪಿಡಿಬ್ಲ್ಯೂಡಿ ಅಧಿಕಾರಿಯೊಬ್ಬರು ತಮ್ಮ ಮನೆ ಸೌಂದರ್ಯೀಕರಣಕ್ಕಾಗಿ ಇಲ್ಲಿನ ಎರಡು ಮರಗಳನ್ನು ಕಡಿಯಲು ಯೋಜಿಸಿದ್ದರು. ಒಂದು ಮರವನ್ನು ಈಗಾಗಲೇ ಕಡಿದು ಹಾಕಿದ್ದು ಇನ್ನೊಂದು ಮರಕ್ಕೂ ಈಗಾಗಲೇ ಕೊಡಲಿಯಿಂದ ಕತ್ತರಿಸುವ ಮಾರ್ಗಸೂಚಿ ಹಾಕಿದ್ದಾರೆ.
ಧಾರವಾಡದ ಹೃದಯ ಭಾಗದಲ್ಲಿ 50-100 ವರ್ಷಗಳಷ್ಟು ಹಳೆಯದಾದ ಕೆಲವೇ ಕೆಲವು ಮರಗಳು ಇವೆ. ಈ ಪೈಕಿ ಹುಣಸಿ ಮರಗಳು ಕೆಲವು ಮಾತ್ರ. ಈಗಾಗಲೇ ಬೇರೆ ಬೇರೆ ಕಾರಣಗಳಿಗಾಗಿ ಈ ಭಾಗದಲ್ಲಿ ನೂರಕ್ಕೂ ಹೆಚ್ಚು ಗಿಡಮರಗಳನ್ನು ಕಡಿದು ಹಾಕಲಾಗಿದೆ. ಅಳಿದುಳಿದ ಗಿಡಮರಗಳನ್ನು ಸರ್ಕಾರಿ ಅಧಿಕಾರಿಗಳೇ ಕಡಿದು ಹಾಕಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಿಂದೆ ಕೆಸಿಡಿ ವೃತ್ತದಲ್ಲಿ ವಾಹನ ಕಂಪನಿಯೊಂದು ಸಣ್ಣ ಗಿಡವನ್ನು ಕಡಿದು ಹಾಕಿದಾಗ ಪರಿಸರ ಹೋರಾಟಗಾರರು ತೀವ್ರ ಹೋರಾಟ ನಡೆಸಿ ಕಂಪನಿಯಿಂದ ದಂಡ ಹಾಕಿಸಲಾಗಿತ್ತು. ಇದೀಗ ಸರ್ಕಾರಿ ಅಧಿಕಾರಿಗಳೇ ಸರ್ಕಾರದ ಜಾಗದಲ್ಲಿನ ದೈತ್ಯ ಮರವೊಂದನ್ನು ಕಡಿದು ಹಾಕಿರುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಧಾರವಾಡ: ಅವಸಾನದತ್ತ ಶತಮಾನದ ಕೆಲಗೇರಿ ಕೆರೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
BJP ಡಬಲ್ ಗೇಮ್; ವಕ್ಫ್ ಆಸ್ತಿ ರಕ್ಷಣೆ ಬಗ್ಗೆ ಬಿಜೆಪಿ ಪ್ರಣಾಳಿಕೆಯಲ್ಲಿ ಉಲ್ಲೇಖ: ಸಿದ್ದು
Hubli: ಅಪ್ರಾಪ್ತೆಯೊಂದಿಗೆ ಅನುಚಿತ ವರ್ತನೆ: ಮುಖ್ಯ ಪೇದೆ ವಿರುದ್ದ ಪೋಕ್ಸೋ ಕೇಸ್
Hubli: ಹಣಕಾಸು ಆಯೋಗದ ಅನ್ಯಾಯದ ಬಗ್ಗೆ ಬಿಜೆಪಿಯರಿಂದ ಮೌನ: ಸಿದ್ದರಾಮಯ್ಯ ಕಿಡಿ
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.