ಶರಣರ ವಚನ ಕಟ್ಟುಗಳ ಭವ್ಯ ಮೆರವಣಿಗೆ
Team Udayavani, Sep 8, 2018, 5:32 PM IST
ಧಾರವಾಡ: ಮುರುಘಾ ಮಠದ ಮುರುಘ ರಾಜೇಂದ್ರ ಪ್ರಸಾದ ನಿಲಯ ಶತಮಾನೋತ್ಸವ ಪ್ರಯುಕ್ತ ಬಸವಾದಿ ಶರಣರ ವಚನ ಕಟ್ಟುಗಳ ಭವ್ಯ ಮೆರವಣಿಗೆ ನಗರದ ಕಲಾಭವನದಿಂದ ಮುರುಘಾ ಮಠದವರೆಗೆ ಶುಕ್ರವಾರ ಜರುಗಿತು.
ಸಹಸ್ರಾರು ವಚನಗಳ ಕಟ್ಟುಗಳನ್ನು ಹೊತ್ತು ಬಸವಾದಿ ಶರಣರ ಅನುಯಾಯಿಗಳು, ವಿವಿಧ ಮಠಾಧೀಶರು, ಮಹಿಳೆಯರು, ಶ್ರೀಮಠದ ವಿದ್ಯಾರ್ಥಿಗಳು ನಗರದ ರಸ್ತೆಗಳಲ್ಲಿ ಹೆಜ್ಜೆ ಹಾಕಿದರು. ಕಲಾಭವನದಿಂದ ಮಹಾರಾಣಾ ಪ್ರತಾಪ ಸಿಂಹ ವೃತ್ತ, ಟಿಪ್ಪು ಸುಲ್ತಾನ್ ವೃತ್ತ ಹಾಗೂ ಶಿವಾಜಿ ವೃತ್ತದ ಮೂಲಕ ಮುರುಘಾ ಮಠಕ್ಕೆ ಮೆರವಣಿಗೆ ಸಾಗಿತು. ಆನೆ ಹೊತ್ತ ಅಂಬಾರಿ ಒಳಗೆ ಲಿಂಗೈಕ್ಯ ಮೃತ್ಯುಂಜಯ ಸ್ವಾಮಿಗಳ ಭಾವಚಿತ್ರವಿರಿಸಿ ಮೆರವಣಿಗೆ ಮಾಡಲಾಯಿತು. ಜಾನಪದ ಕಲಾತಂಡಗಳು ಮೆರವಣಿಗೆಗೆ ರಂಗು ತುಂಬಿದವು. ನಗರ ಮಾತ್ರವಲ್ಲದೆ ಗ್ರಾಮೀಣ ಪ್ರದೇಶದಿಂದಲೂ ಜನರು ಪಾಲ್ಗೊಂಡಿದ್ದರು.
ಮನುಕುಲಕ್ಕೆ ವಚನಗಳೇ ದಾರಿ: ಮೆರವಣಿಗೆಗೆ ಚಾಲನೆ ನೀಡಿದ ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಸಹಸ್ರಾರು ಸಂಖ್ಯೆಯಲ್ಲಿ ಬಸವಾದಿ ಶರಣರ ಅನುಯಾಯಿಗಳು ವಚನಗಳನ್ನು ಹೊತ್ತು ಖುಷಿಯಿಂದ ಕುಣಿದಾಡಿದ್ದಾರೆ. ವಚನಗಳು ಮನುಕುಲಕ್ಕೆ ದಾರಿ ತೋರಿದ ಶ್ರೇಷ್ಠ ಬೆಳಕು. 12ನೇ ಶತಮಾನದಿಂದ ನೂರಾರು ಬಸವಾದಿ ಶರಣರು ಕೊಡುಗೆಯಾಗಿ ಕೊಟ್ಟ ವಚನಗಳನ್ನು ರಕ್ಷಿಸಿಕೊಂಡು ಬಂದಿದ್ದು ನಮ್ಮೆಲ್ಲರ ಭಾಗ್ಯ ಎಂದು ಹೇಳಿದರು.
ಶರಣರ ವಚನಗಳು ಮುಂದಿನ ಪೀಳಿಗೆಗೆ ತಲುಪಲಿ. ಅವುಗಳ ಮೌಲ್ಯ ಜನಸಾಮಾನ್ಯರಿಗೂ ತಿಳಿಯಲಿ. ವಚನಗಳ ಸಾರ ಅರಿತು ಜನ ಜೀವಿಸಲಿ ಎಂಬ ಸದುದೇªಶದಿಂದ ವಚನಗಳ ಕಟ್ಟುಗಳನ್ನು ತಲೆ ಮೇಲೆ ಹೊತ್ತು ಸಾಂಕೇತಿಕ ಮೆರವಣಿಗೆ ನಡೆಸಿದ್ದೇವೆ. ನಮ್ಮ ನಿರೀಕ್ಷೆಗೂ ಮೀರಿ ಜನ ಭಾಗವಹಿಸಿದ್ದು ಹರ್ಷ ತಂದಿದೆ ಎಂದರು. ಮಾಜಿ ಸಚಿವ ಹಾಗೂ ಮುರುಘಾ ಮಠ ಪ್ರಸಾದ ನಿಲಯದ ಅಧ್ಯಕ್ಷ ವಿನಯ ಕುಲಕರ್ಣಿ, ಮುರಗೋಡ ದುರದುಂಡೇಶ್ವರ ಮಠದ ನೀಲಕಂಠ ಸ್ವಾಮೀಜಿ ಮೊದಲಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ
Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನಪ್ಪನವರ ವಿರುದ್ದ ಬೆಲ್ಲದ್ ಟೀಕೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.