ಮಿಡತೆ-ಬಸವನಹುಳು ಕಾಟ

ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಚಟುವಟಿಕೆ ಜೋರು

Team Udayavani, Jun 10, 2021, 5:09 PM IST

9hub-dwd3

ಧಾರವಾಡ: ಮುಂಗಾರು ಹಂಗಾಮು ಚಟುವಟಿಕೆ ಜೋರಾಗಿದ್ದು, ಇದೀಗ ಮುಂಗಾರಿನ ಬೆಳೆಗಳಲ್ಲಿ ಮಿಡತೆ ಹಾಗೂ ಬಸವನ ಹುಳುಗಳ ಹಾವಳಿ ಕಂಡು ಬಂದಿದೆ.

ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ತಜ್ಞರು, ಧಾರವಾಡ ತಾಲೂಕಿನ ಅಮ್ಮಿನಬಾವಿ ಹಾಗೂ ಮರೇವಾಡ ಗ್ರಾಮಗಳ ವ್ಯಾಪ್ತಿಯಲ್ಲಿ ಹೆಸರು, ಉದ್ದು ಮತ್ತು ಸೋಯಾ, ಅವರೆ ಕ್ಷೇತ್ರ ವೀಕ್ಷಣೆ ಮಾಡಿದಾಗ ಪತ್ತೆಯಾಗಿದೆ.

ಬಿತ್ತನೆಯಾದ 10 ದಿನಗಳ ನಂತರ ಬೆಳೆಗಳು ಎರಡೆಲೆ ಬೆಳೆದಿದ್ದು, ಆರಂಭದಲ್ಲಿ ಮಿಡತೆ ಕಾಟ ಕಾಣಿಸಿಕೊಂಡಿದೆ. ಸದ್ಯಕ್ಕೆ ಮಿಡತೆ ಬಾಧೆ ಕಡಿಮೆ ಇದೆ. ಜೂ. 5 ರಂದು ಸುರಿದ ಭಾರೀ ಮಳೆಯಿಂದ ಮೇ ತಿಂಗಳ ಕೊನೆಯ ವಾರದಲ್ಲಿ ಬಿತ್ತಿದ ಬೆಳೆಗಳ ತಾಕಿನಲ್ಲಿ ಮಳೆಯ ರಭಸಕ್ಕೆ ಮೇಲ್ಮಣ್ಣು ಗಟ್ಟಿಯಾಗಿ ಹೆಪ್ಪುಗಟ್ಟಿದಂತಾಗಿದೆ. ಬೆಳೆಗಳು ಲವಲವಿಕೆಗೊಂಡಿಲ್ಲ. ನಂತರ ಸಣ್ಣ ಮಳೆಯಾದಾಗ ಮತ್ತೆ ಚೇತರಿಕೆ ಕಾಣಲಿವೆ. ಮುಂಗಾರು ಬೆಳೆಗಳಲ್ಲಿ ಅಲ್ಲಲ್ಲಿ ಸ್ವಲ್ಪ ಮಟ್ಟಿಗೆ ಬಸವನ ಹುಳುವಿನ ಬಾಧೆ ಕಾಣಿಸಿಕೊಂಡಿದೆ.

ಮಿಡತೆಯ ನಿರ್ವಹಣೆ: ಬೀಜ ಬಿತ್ತಿದ ಬಳಿಕ ಒಣ ಹವೆ ಮುಂದುವರಿದಾಗ ಮಿಡತೆಗಳ ಹಾವಳಿ ಕಂಡು ಬರುತ್ತದೆ. ಮೇಲಿಂದ ಮೇಲೆ ಮಳೆಯಾಗುತ್ತಿದ್ದರೆ ಮಿಡತೆಗಳ ಬಾಧೆ ಇರಲ್ಲ. ಇದರ ನಿರ್ವಹಣೆಗಾಗಿ ಬದುಗಳಲ್ಲಿನ ಕಸ ಕಳೆ ತೆಗೆದು ಸ್ವತ್ಛವಾಗಿಡಬೇಕು. ಬೀಜ ಬಿತ್ತುವ ಮುಂಚೆ ಹೊಲದ ಸುತ್ತಲೂ ಒಂದು ಅಡಿ ಕಾಲುವೆ ಮಾಡುವುದರಿಂದ ಪೀಡೆಗಳು ಹೊಲದೊಳಗೆ ಬರುವುದನ್ನು ತಡೆಗಟ್ಟಬಹುದು. ಬದುಗಳ ಮೇಲೆ ಶೇ. 2ರ ಮೆಲಾಥಿಯನ್‌ ಅಥವಾ ಶೇ. 4 ರ ಫೆನ್ವಾಲರೇಟ್‌ ಅಥವಾ ಶೇ 1.5ರ ಕ್ವಿನಾಲಫಾಸ್‌ ಹುಡಿ ರೂಪದ ಕೀಟನಾಶಕಗಳನ್ನು ಧೂಳಿಕರಿಸಬೇಕು. ಹೊಲದ ಸುತ್ತಲೂ ಕಾಲುವೆಯಲ್ಲಿ ಮೇಲೆ ತಿಳಿಸಿದ ಕೀಟನಾಶಕಗಳ ಪುಡಿಧೂಳೀಕರಿಸಬೇಕೆಂದು ತಜ್ಞರು ಸಲಹೆ ನೀಡಿದ್ದಾರೆ.

ಬಸವನಹುಳು: ಈ ಜೀವಿಯು ನಿಶಾಚರಿಯಾಗಿದ್ದು, ರಾತ್ರಿ ಹೊತ್ತಿನಲ್ಲಿ ಬೆಳೆಯನ್ನು ಬಾಧಿಸುತ್ತದೆ. ಹಗಲು ಹೊತ್ತಿನಲ್ಲಿ ಬದುಗಳಲ್ಲಿ, ಕಸದ ಗುಂಪುಗಳ ಕೆಳಗಡೆ ಆಶ್ರಯಿಸುತ್ತದೆ. ಕೆಲವೊಮ್ಮೆ ಮೋಡ ಕವಿದ ವಾತಾವರಣ,ತುಂತುರು ಮಳೆಯಿದ್ದಾಗ ದಿನವಿಡೀ ಬೆಳೆ ತಿನ್ನುತ್ತದೆ. ಇದರ ಬಾಧೆ ಬೆಳೆಯ ಆರಂಭಿಕ ಹಂತದಲ್ಲಿ (ಬೆಳೆಯ 10-15 ದಿನಗಳವರೆಗೆ) ಹೆಚ್ಚು ಕಂಡು ಬರುತ್ತದೆ. (ಬೆಳೆಯ 10-15 ದಿನಗಳವರೆಗೆ) ತದನಂತರ ಕಾಂಡವು ಗಡುಸಾದಾಗ ಈ ಕೀಟದ ಬಾಧೆ ಇರಲ್ಲ. ಇದರ ನಿರ್ವಹಣೆಗೆ ಹೊಲದ ಸುತ್ತಲೂ ಇರುವ ಬದುಗಳನ್ನು ಸ್ವತ್ಛಗೊಳಿಸಬೇಕು. ಬದುವಿನ ಸುತ್ತಲೂ ಅಲ್ಲಲ್ಲಿ ಕಸದ ಗುಂಪೆ ಹಾಕಿ ಅದರಲ್ಲಿ ಶೇ 2.5 ರ ಮೆಟಾಲ್ಡಿಹೆಲ್ಡ್‌ -ಶಂಕುಹುಳು ನಾಶಕದ ಬಿಲ್ಲೆಗಳನ್ನು ಹಾಕುವುದರಿಂದ ಹುಳುಗಳು ಆಕರ್ಷಿಸಿ ಸಾಯುತ್ತವೆ.

ಬದುವಿನ ಸುತ್ತಲೂ ಅರ್ಧ ಅಡಿ ಅಂಗಲ ಪುಡಿರೂಪದ ಕೀಟನಾಶಕಗಳಾದ ಮೆಲಾಥಿಯನ್‌/ ಕ್ವಿನಾಲಫಾಸ್‌/ ಫೆನ್ವಲರೇಟ್‌ ಧೂಳೀಕರಿಸಬೇಕು ಎಂದು ತಜ್ಞರ ತಂಡವು ರೈತರಿಗೆ ಸಲಹೆ ನೀಡಿದೆ.

ಟಾಪ್ ನ್ಯೂಸ್

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Kambala: ಡಿ.28-29ರಂದು 8ನೇ ವರ್ಷದ “ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

de

Mangaluru: ವೆನ್ಲಾಕ್‌ನಲ್ಲಿ ಅಪರಿಚಿತ ಶವ

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

Kambala: ಡಿ.28-29ರಂದು 8ನೇ ವರ್ಷದ “ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

de

Mangaluru: ವೆನ್ಲಾಕ್‌ನಲ್ಲಿ ಅಪರಿಚಿತ ಶವ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.