ಸಿನಿ ಮಹಲ್‌ನಲ್ಲಿ ಜಿಎಸ್‌ಟಿ.. ಉಳಿದೆಡೆಯೆಲ್ಲ ಬರೀ ಚೀಟಿ..!


Team Udayavani, Jul 5, 2017, 1:02 PM IST

hub1.jpg

ಧಾರವಾಡ: ಒಂದು ದೇಶ, ಒಂದೇ ತೆರಿಗೆ ಘೋಷ ವಾಕ್ಯದೊಂದಿಗೆ ನಾಲ್ಕು ದಿನಗಳ ಹಿಂದೆ ದೇಶಾದ್ಯಂತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ವಿಧಿಸಿದ್ದು, ಜಿಲ್ಲೆಯಲ್ಲಿನ ವಾಣಿಜ್ಯ ಚಟುವಟಿಕೆಗಳಲ್ಲಿ ಇನ್ನೂ ಗೋಚರಿಸುತ್ತಿಲ್ಲ. 

ಹೋಟೆಲ್‌ ತಿಂಡಿ, ಆಹಾರ ಪದಾರ್ಥಗಳು ಸೇರಿದಂತೆ ಕೆಲವು ವಸ್ತುಗಳ ಬೆಲೆಯಲ್ಲಿ ತಕ್ಕಮಟ್ಟಿನ ಏರಿಕೆಯಾಗುತ್ತದೆ ಎನ್ನುವ ಚರ್ಚೆಯ ಮಧ್ಯೆಯೇ ಜಿಎಸ್‌ಟಿ ಜಾರಿಯಾಗಿದ್ದು, ಸದ್ಯಕ್ಕಂತೂ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಜಿಲ್ಲೆಯ ವ್ಯಾಪ್ತಿಯಲ್ಲಿನ ಚಿತ್ರಮಂದಿರಗಳು, ಮಹಲ್‌ ಗಳನ್ನು ಹೊರತು ಪಡಿಸಿದರೆ ಇತರೆ ವಾಣಿಜ್ಯಚಟುವಟಿಕೆಗಳಲ್ಲಿ ಜಿಎಸ್‌ಟಿ ಜಾರಿಯ ತೀವ್ರ ಪರಿಣಾಮ ಎದ್ದು ಕಾಣುತ್ತಿಲ್ಲ. 

ರಾಜ್ಯದಲ್ಲಿಯೇ ಎರಡನೇ ಅತೀ  ದೊಡ್ಡ  ಗರ ಹುಬ್ಬಳ್ಳಿ-ಧಾರವಾಡ ಅವಳಿನಗರ ಮುಂಬೈ ಮತ್ತು ಪುಣೆಯ ಪ್ರಭಾವ ಇರುವುದರಿಂದ ಇಲ್ಲಿನ ವಾಣಿಜ್ಯ ಚಟುವಟಿಕೆಗಳು ಚುರುಕಾಗಿಯೇ ನಡೆಯುತ್ತವೆ. ಆದರೆ ಸದ್ಯಕ್ಕಂತೂ ಜಿಎಸ್‌ಟಿ ಅಧಿಕೃತ ಜಾರಿಯ ಪರಿಣಾಮಗಳು ಮಧ್ಯಮ ಗಾತ್ರದ ಹೋಟೆಲ್‌ ಮತ್ತು ಲಾಡ್ಜ್ ಬಿಲ್‌ಗ‌ಳಲ್ಲಿಯಾಗಲಿ, ಇನ್ನಿತರ ವಸ್ತುಗಳ ಖರೀದಿಯಲ್ಲಿಯಾಗಲಿ ಗೋಚರಿಸುತ್ತಿಲ್ಲ. 

ಡಬ್ಟಾ ಅಂಗಡಿ ಜೊತೆ ಸ್ಪರ್ಧೆ: ಅವಳಿ ನಗರದಲ್ಲಿನ ಹೋಟೆಲ್‌ಗ‌ಳು ಹೆಚ್ಚು ಕಡಿಮೆ ತಿಂಡಿ, ಊಟ ಮತ್ತು ಬಾರ್‌ ಜೊತೆಗಿನ ರೆಸ್ಟೋರೆಂಟ್‌ಗಳೇ ಇವೆ. ಇವುಗಳಲ್ಲಿ ಮಾತ್ರ ಇನ್ನು ದರಪಟ್ಟಿಯಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಯಾವ ತಿಂಡಿ-ಪಾನೀಯದ ಬೆಲೆಗಳಲ್ಲೂ ವ್ಯತ್ಯಾಸವಾಗಿಲ್ಲ ಮತ್ತು ಅಧಿಕೃತವಾಗಿ ಜಿಎಸ್‌ಟಿ ನಮೂದು ಕೂಡ ಗುತ್ತಿಲ್ಲ.

ಆದರೆ ಈ ಪೈಕಿ ಕೆಲವು ಸುವಿಹಾರಿ ಹೋಟೆಲ್‌ ಗಳಿದ್ದು, ಅಲ್ಲಿನ ಬಿಲ್ಲಿಂಗ್‌ ಯಂತ್ರಗಳಲ್ಲಿ ಜಿಎಸ್‌ಟಿ ತೆರಿಗೆ ನಮೂದಿಸುವ ತಂತ್ರ ಇನ್ನುಅಳವಡಿಕೆಯಾಗಬೇಕಿದೆ. ಜಿಎಸ್‌ಟಿ ಜಾರಿಗೂ ಮುಂಚೆ ಶೇ.4 ರಷ್ಟು ವ್ಯಾಟ್‌ ತೆರಿಗೆ ಇತ್ತು. ಇದೀಗ ಜಿಎಸ್‌ಟಿ ಹೋಟೆಲ್‌ಗ‌ಳ ಮೇಲೆ ಶೇ.12 ರಷ್ಟು ಕರಭಾರ ಹಾಕುತ್ತಿದ್ದು,

ಈ ಬಗ್ಗೆ ಇದ್ದಕ್ಕಿದ್ದಂತೆ ಬೆಲೆ ಹೆಚ್ಚಿಸಲು ಆಗುತ್ತಿಲ್ಲ. ಅಷ್ಟೇಯಲ್ಲ, ರಸ್ತೆ ಬದಿಯಲ್ಲಿರುವ ಡಬ್ಟಾ ಹೋಟೆಲ್‌ಗ‌ಳು ಮತ್ತು ಮೊಬೈಲ್‌ ಹೋಟೆಲ್‌ ಗಳ (ಮೋಟಾರ್‌ಗಳಲ್ಲಿ ಓಡಾಡಿಕೊಂಡಿರುವ) ಜೊತೆಗೆ ನಾವು ಇದೀಗ ಸ್ಪರ್ಧೆ ಮಾಡಬೇಕಿದೆ. ನಮಗೆ ತೆರಿಗೆ ಹೆಚ್ಚಳದಿಂದ ತಿಂಡಿ ಬೆಲೆ ಹೆಚ್ಚಾಗುತ್ತದೆ.

ಆದರೆ ಡಬ್ಟಾ ಅಂಗಡಿಗಳಲ್ಲಿ ಕಡಿಮೆ ಬೆಲೆಗೆ ತಿಂಡಿ ಸಿಕ್ಕರೆ ಅದು ನಮ್ಮ ವ್ಯಾಪಾರಕ್ಕೆ ಹೊಡೆತ ಬೀಳುತ್ತದೆ. ಅದಲ್ಲದೇ ಈವರೆಗೂ ವಾರ್ಷಿಕ 20 ಲಕ್ಷ ರೂ. ವಹಿವಾಟು ನಡೆಸುವ ಹೋಟೆಲ್‌ಗ‌ಳಿಗೆ ತೆರಿಗೆ ಇತ್ತು. ಇದರ ಮಿತಿ ಹೆಚ್ಚಳವಾಗದೇ ಹೋದರೆ ಸಣ್ಣ ಹೋಟೆಲ್‌ಗ‌ಳಿಗೆ ಇದು ಕೊಂಚ ತೊಂದರೆಯಾಗುತ್ತದೆ ಎನ್ನುತ್ತಿದ್ದಾರೆ ಹೋಟೆಲ್‌ ಮಾಲೀಕರು. 

ಕಿರಾಣಿ ಕನ್‌ಫ್ಯೂಷನ್‌: ಇನ್ನು ಜಿಎಸ್‌ಟಿ ಜಾರಿಯಿಂದ ದಿನಸಿ ಧಾನ್ಯಗಳ ಬೆಲೆಯಲ್ಲೂ ಕೊಂಚ ಏರಿಕೆ ಸುಳಿವು ಇದ್ದರೂ, ಪ್ಯಾಕೇಟ್‌ ಮಾಡಿ ಮಾರಾಟ ಮಾಡುವ ದೊಡ್ಡ ಮಹಲ್‌ಗ‌ಳು ಮತ್ತು ದೊಡ್ಡ ದಿನಸಿ ಅಂಗಡಿಗಳಲ್ಲಿ ಅದು ಕೂಡ ಇನ್ನೂ ಜಾರಿಯಾಗಿಲ್ಲ. ಜಿಲ್ಲೆಯಲ್ಲಿನ ಮೋರ್‌, ರಿಲಾಯನ್ಸ್‌ ಪ್ರೇಶ್‌ ಮತ್ತು ಸ್ಥಳೀಯ ಪ್ರಸಿದ್ಧಿ ಪಡೆದ ಕಿರಾಣಿ ಅಂಗಡಿಗಳಲ್ಲಿ ಇನ್ನೂ ದಿನಸಿ ಧಾನ್ಯಗಳ ಬೆಲೆಯಲ್ಲಿ ಜಿಎಸ್‌ಟಿ ಸದ್ದು ಮಾಡಿಲ್ಲ.

ಎಲ್ಲಕ್ಕಿಂತ ಹೆಚ್ಚಾಗಿ ಜಿಎಸ್‌ಟಿ ಯಾವ ದವಸ-ಧಾನ್ಯಕ್ಕೆ ಎಷ್ಟು ಪ್ರಮಾಣದಲ್ಲಿ ಅಳವಡಿಕೆಯಾಗಲಿದೆ ಎನ್ನುವ ಬಗ್ಗೆಯೇ ವ್ಯಾಪಾರಸ್ಥರಲ್ಲಿ ಗೊಂದಲವಿದೆ. ಅಷ್ಟೇಯಲ್ಲ, ಸಣ್ಣ ದಿನಸಿ ಅಂಗಡಿಗಳು, ಬಿಡಿ ದಿನಸಿ ವ್ಯಾಪಾರಿಗಳಂತೂ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. 

ಚಿನ್ನದ್ದು ಇಬ್ಭಾಗ ದರ: ಚಿನ್ನದ ಮೇಲೆ ಜಿಎಸ್‌ಟಿ ನೇರವಾಗಿ ಶೇ.3 ರಷ್ಟು ಅಳವಡಿಕೆಯಾಗಲಿದ್ದು, ಹಾಲ್‌ಮಾರ್ಕ್‌ ಚಿನ್ನಕ್ಕೆ ಮಾತ್ರ ಇದು ಅನ್ವಯವಾಗಲಿದೆ. ಅಂದರೆ ಬ್ರಾಂಡೆಡ್‌ ಮಳಿಗೆಗಳಲ್ಲಿನ ಬಿಲ್ಲಿಂಗ್‌ ವ್ಯವಸ್ಥೆಯಲ್ಲಿ ಈಗಾಗಲೇ ಜಿಎಸ್‌ಟಿ ಜಾರಿಯಾಗಿದೆ. ಆದರೆ ಗ್ರಾಮೀಣ ಪ್ರದೇಶದ ಚಿನ್ನ ಖರೀದಿದಾರರ ಹೆಚ್ಚು ಅಂಗಡಿಗಳಲ್ಲಿ ಜಿಎಸ್‌ಟಿ ಸದ್ದೇ ಇಲ್ಲ.

ಕಾರಣ ಇಲ್ಲಿ ಪ್ಯೂರಿಟಿ ವಿಚಾರ ಬಂದಾಗ ಹಾಲ್‌ಮಾರ್ಕ್‌ ಚಿನ್ನ ಶೇ.90ಕ್ಕಿಂತ ಹೆಚ್ಚು ಶುದ್ಧತೆ ಹೊಂದಿದ್ದನ್ನು ವರ್ತಕರೇ ಗ್ರಾಹಕರಿಗೆ ಹೇಳಿ ಜಿಎಸ್‌ಟಿ ಅನ್ವಯಗೊಳಿಸುತ್ತಾರೆ. ಆದರೆ ಹಳ್ಳಿಗರ ತೊಲೆ ಬಂಗಾರದ ಲೆಕ್ಕದಲ್ಲಿ ಶುದ್ಧತೆ ಶೇ.85ರಷ್ಟು ಮಾತ್ರ ಇದ್ದು ಇಲ್ಲಿ ಜಿಎಸ್‌ಟಿ ಅಳವಡಿಕೆ ಸದ್ಯಕ್ಕೆ ಆಗುತ್ತಿಲ್ಲ ಎನ್ನುತ್ತಾರೆ ಚಿನ್ನದ ವ್ಯಾಪಾರಿ ಆರ್‌.ಎನ್‌.ರಾಯಕರ್‌. 

* ಬಸವರಾಜ್‌ ಹೊಂಗಲ್‌ 

ಟಾಪ್ ನ್ಯೂಸ್

Belagavi-Sess

Legislative House: ಶಾಸನಸಭೆಯೊಳಗೆ ಪೊಲೀಸ್‌ ಪ್ರವೇಶಕ್ಕಿಲ್ಲ ಅವಕಾಶ: ತಜ್ಞರು

1-eewqew

Christmas; ಪ್ರಭು ಕ್ರಿಸ್ತನ ಸ್ವಾಗತಕ್ಕೆ ಕರಾವಳಿ ಸಡಗರದಿಂದ ಸಜ್ಜು

Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!

Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!

HD-Kumaraswmy

Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್‌.ಡಿ.ಕುಮಾರಸ್ವಾಮಿ

1-koteshwara

Koteshwara: ಟಯರ್‌ಗೆ ಗಾಳಿ ತುಂಬುತ್ತಿದ್ದ ವೇಳೆ ಸ್ಫೋ*ಟಗೊಂಡು ಯುವಕ ಗಂಭೀರ; ಕಾರಣಗಳೇನು?

2nd ODI: ವನಿತಾ ಏಕದಿನ ಸರಣಿ: ಇಂದು ಭಾರತ-ವಿಂಡೀಸ್‌ 2ನೇ ಪಂದ್ಯ

2nd ODI: ವನಿತಾ ಏಕದಿನ ಸರಣಿ: ಇಂದು ಭಾರತ-ವಿಂಡೀಸ್‌ 2ನೇ ಪಂದ್ಯ

Enforcement Directorate: ಕ್ರಿಮಿನಲ್‌ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ

Enforcement Directorate: ಕ್ರಿಮಿನಲ್‌ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Alnavar: ಟಿಟಿ- ಕ್ಯಾಂಟರ್‌ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು

Alnavar: ಟಿಟಿ- ಕ್ಯಾಂಟರ್‌ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು

ಪ್ರಹ್ಲಾದ ಜೋಶಿ

Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ

hubli-fire-incident-at-ayyappa-camp-nine-devotees-seriously-injured

Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ

Joshi

ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

Battery theft at Dharwad District Collector’s Office

Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Belagavi-Sess

Legislative House: ಶಾಸನಸಭೆಯೊಳಗೆ ಪೊಲೀಸ್‌ ಪ್ರವೇಶಕ್ಕಿಲ್ಲ ಅವಕಾಶ: ತಜ್ಞರು

1-eewqew

Christmas; ಪ್ರಭು ಕ್ರಿಸ್ತನ ಸ್ವಾಗತಕ್ಕೆ ಕರಾವಳಿ ಸಡಗರದಿಂದ ಸಜ್ಜು

Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!

Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!

HD-Kumaraswmy

Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್‌.ಡಿ.ಕುಮಾರಸ್ವಾಮಿ

1-koteshwara

Koteshwara: ಟಯರ್‌ಗೆ ಗಾಳಿ ತುಂಬುತ್ತಿದ್ದ ವೇಳೆ ಸ್ಫೋ*ಟಗೊಂಡು ಯುವಕ ಗಂಭೀರ; ಕಾರಣಗಳೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.