ಗುಡಗೇರಿ ಗ್ರಾಮಸ್ಥರು ವಿರೋಧಿಸಿದ್ರೂ ಮದ್ಯದಂಗಡಿ ಆರಂಭ
Team Udayavani, May 7, 2020, 1:37 PM IST
ಕುಂದಗೋಳ: ತಾಲೂಕಿನ ಗುಡಗೇರಿ ಗ್ರಾಮದಲ್ಲಿ ಬುಧವಾರ ಪ್ರತಿಭಟನಾಕಾರರೊಂದಿಗೆ ತಾಲೂಕಾಡಳಿತ ಸಭೆ ನಡೆಸಿತು. ಎಲ್ಲರ ಮನವೊಲಿಸಿದ ನಂತರ ತಾತ್ಕಾಲಿಕ ಬಂದ್ ಮಾಡಲಾಗಿದ್ದ ಎರಡು ಮದ್ಯದ ಅಂಗಡಿಗಳನ್ನು ಪುನಃ ಆರಂಭಿಸಲಾಯಿತು.
ಗುಡಗೇರಿ ಪೊಲೀಸ್ ಠಾಣೆ ಆವರಣದಲ್ಲಿ ಧಾರವಾಡ ಗ್ರಾಮೀಣ ಡಿವೈಎಸ್‌ಪಿ ರವಿ ನಾಯಕ್ ಹಾಗೂ ತಹಶೀಲ್ದಾರ್ ಬಸವರಾಜ ಮೇಳವಂಕಿ ಅವರ ನೇತೃತ್ವದಲ್ಲಿ ಗ್ರಾಮಸ್ಥರೊಂದಿಗೆ ಸಭೆ ನಡೆಯಿತು. ಈ ವೇಳೆ ಡಿವೈಎಸ್‌ಪಿ ರವಿ ನಾಯಕ್ ಮಾತನಾಡಿ, ಲೈಸೆನ್ಸ್ ಹೊಂದಿರುವ ಅಂಗಡಿಗಳನ್ನು ತಕ್ಷಣದಿಂದಲೇ ಬಂದ್ ಮಾಡಲು ಆಗುವುದಿಲ್ಲ. ಲಾಕ್‌ಡೌನ್ ತೆರವುಗೊಂಡ ನಂತರ ನಿಮ್ಮ ಮುಂದಿನ ನಿಲುವು ಕೈಗೊಳ್ಳಬಹುದು. ಈಗ ಯಾವುದೇ ಶಾಂತಿಭಂಗ ಆಗದಂತೆ ತಾವೆಲ್ಲರೂ ಸಹಕರಿಸಬೇಕು ಎಂದರು. ಮೇ 17ರ ನಂತ ರ ಆದರೂ ಸಹ ಮದ್ಯ ಬಂದ್ ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಗ್ರಾಪಂ ಅಧ್ಯಕ್ಷ ಚನ್ನಬಸನಗೌಡ ಚಿಕ್ಕಗೌಡ್ರ, ಬಸನಗೌಡ ಕರೆಹೊಳಲಪ್ಪಗೌಡ್ರ, ವಿ.ಡಿ .ಹಿರೇಗೌಡ್ರ, ಗಂಗಾಧರ ಧರೆಣ್ಣವರ, ಮಲ್ಲನಗೌಡ ಯತ್ನಳ್ಳಿ, ನಾಗರಾಜ ಬೂದಿಹಾಳ, ಸಂಪತ್ ತಿಮ್ಮನಗೌಡ್ರ, ಹನಮಂತಗೌಡ ಭಮ್ಮನಗೌಡ್ರ ಹಾಗೂ ಸಿಪಿಐ ಬಸವರಾಜ ಕಲ್ಲಮ್ಮನವರ, ಪಿಎಸ್‌ಐ ನವೀನ್ ಜಕ್ಕಲಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ಹೊಸ ಸೇರ್ಪಡೆ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.