ಐಟಿ ಪಾರ್ಕ್ ಕಟ್ಟಡ ಅರ್ಧದಷ್ಟು ಖಾಲಿ
| ಐಐಐಟಿ ಕಚೇರಿಯೂ ಸ್ಥಳಾಂತರ | ಸೌಲಭ್ಯ-ನಿರ್ವಹಣೆ ಕೊರತೆ | ಈಡೇರದ ಉದ್ದೇಶ
Team Udayavani, Jan 2, 2021, 1:25 PM IST
ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಮಾಹಿತಿ ತಂತ್ರಜ್ಞಾನ ಉದ್ಯಮ ಬೆಳವಣಿಗೆ ಉತ್ತೇಜನ ಉದ್ದೇಶದೊಂದಿಗೆ ನಗರದಲ್ಲಿ ತಲೆ ಎತ್ತಿದ್ದ ಐಟಿ ಪಾರ್ಕ್ ಕಟ್ಟಡ ಇದೀಗ ಅರ್ಧದಷ್ಟು ಖಾಲಿ ಖಾಲಿಯಾಗಿ ಉಳಿದಿದೆ.
ಈ ಭಾಗದಲ್ಲಿ ಐಟಿ ಉದ್ಯಮ ಬೆಳೆಯಬೇಕು, ಪದವೀಧರರ ವಲಸೆ ತಡೆಯಬೇಕು, ಇನ್ಫೋಸಿಸ್ ಕಂಪೆನಿ ಹುಬ್ಬಳ್ಳಿ ಶಾಖೆ ಆರಂಭಿಸಬೇಕು, ಕೊರೊನಾ ಇನ್ನಿತರ ಕಾರಣಗಳಿಂದಾಗಿ ಬೆಂಗಳೂರು, ಮುಂಬೈ ಇನ್ನಿತರ ಕಡೆಯಲ್ಲಿರುವ ಉತ್ತರ ಕರ್ನಾಟಕದ ಐಟಿ ಉದ್ಯೋಗಿ-ಉದ್ಯಮಾಸಕ್ತರು ಈ ಕಡೆ ಮರಳುವಂತಾಗಬೇಕು ಎಂಬ ಅನಿಸಿಕೆಗಳನಡುವೆಯೇ ಐಟಿ ಪಾರ್ಕ್ ಕಟ್ಟಡ ಸೌಲಭ್ಯಗಳಕೊರತೆಯಿಂದ ನರಳುತ್ತಿದೆ. ಇದ್ದ ಒಂದಿಷ್ಟು ಕಂಪೆನಿ, ಸಂಸ್ಥೆಗಳು ಹೊರಹೋಗಿದ್ದು, ಶೇ.50 ಖಾಲಿ ಉಳಿಯುವಂತಾಗಿದೆ.
ಐಟಿ ಉದ್ಯಮಕ್ಕೆ ಹೆಚ್ಚು ಉತ್ತೇಜನ ನೀಡುವ ಮೂಲಕ ಬೆಂಗಳೂರಿಗೆ ವಿಶ್ವಮಟ್ಟದಲ್ಲಿ ಸಿಲಿಕಾನ್ ಸಿಟಿ ಇಮೇಜ್ ತಂದುಕೊಡುವಲ್ಲಿ ಎಸ್.ಎಂ. ಕೃಷ್ಣ ನೇತೃತ್ವದ ಸರ್ಕಾರ ಮಹತ್ವದ ಯತ್ನಗಳನ್ನು ಕೈಗೊಂಡಿತ್ತು. ಅದರ ಭಾಗವಾಗಿಯೇ ಅಂದುಸರ್ಕಾರ ಉತ್ತರ ಕರ್ನಾಟಕದಲ್ಲಿ ಐಟಿ ಅಭಿವೃದ್ಧಿ ಉದ್ದೇಶದೊಂದಿಗೆ ಹುಬ್ಬಳ್ಳಿಯಲ್ಲಿ ಐಟಿ ಪಾರ್ಕ್ ಕಟ್ಟಡ ನಿರ್ಮಾಣ ಮಾಡಿತ್ತು.
ಇಲ್ಲಿನ ಪಾಲಿಕೆ ಈಜುಕೊಳದ ಪಕ್ಕದಲ್ಲಿನಸುಮಾರು 3.2 ಎಕರೆ ಜಾಗದಲ್ಲಿ 2.65 ಲಕ್ಷ ಚದರ ಅಡಿಯಲ್ಲಿ ಬಹುಮಹಡಿ ಭವ್ಯ ಕಟ್ಟಡ ನಿರ್ಮಾಣಗೊಂಡಿತ್ತು. ಆದರೆ, ಐಟಿ ಕಂಪೆನಿಗಳು ನಿರೀಕ್ಷಿತ ರೀತಿಯಲ್ಲಿ ಉತ್ತರಮುಖೀ ಆಗದ್ದರಿಂದಾಗಿ ಐಟಿ ಪಾರ್ಕ್ ನಿರ್ವಹಣೆಯೂ ಸಾಧ್ಯವಾಗದೆ, ಐಟಿ ಹೊರತಾದ ಕಾರ್ಯಗಳಿಗೆ ಕಟ್ಟಡ ನೀಡಲಾಯಿತು.
ಅರ್ಧದಷ್ಟು ಖಾಲಿ: ಐಟಿ ಪಾರ್ಕ್ ನಿರ್ಮಾಣದ ಕೆಲ ವರ್ಷಗಳ ನಂತರಗಳಲ್ಲಿ ಸಣ್ಣ ಪುಟ್ಟ ಐಟಿ ಉದ್ಯಮಗಳು ಹಾಗೂ ಐಟಿ ನವೋದ್ಯಮಿಗಳು ಹುಬ್ಬಳ್ಳಿಯಲ್ಲಿ ಐಟಿ ಉದ್ಯಮಕ್ಕೆ ಮುಂದಾದರಾದರೂ, ಐಟಿ ಪಾರ್ಕ್‌ನಲ್ಲಿಅವರಿಗೆ ಸ್ಥಳಾವಕಾಶ ದೊರೆಯದಾಗಿತ್ತು.ಜಾಗವಿಲ್ಲದೆ ಕೆಲವರು ಖಾಸಗಿ ಕಟ್ಟಡ ಇಲ್ಲವೆ ಮನೆಗಳಲ್ಲಿಯೇ ಸಣ್ಣದಾದ ಕಚೇರಿಗಳನ್ನುಆರಂಭಿಸಿ ಉದ್ಯಮ ಆರಂಭಿಸಿದ್ದರು. ಇದೀಗ ಐಟಿ ಪಾರ್ಕ್ ಕಟ್ಟಡದಲ್ಲಿದ್ದ ಐಐಐಟಿ ಕಚೇರಿ ಬೇರೆ ಕಡೆ ಸ್ಥಳಾಂತರಗೊಂಡಿದ್ದರಿಂದ, ದೊಡ್ಡ ಪ್ರಮಾಣದ ಕಚೇರಿ ಖಾಲಿಯಾಗಿದೆ. ಇದೇ ಕಟ್ಟಡದಲ್ಲಿ ಇದ್ದ ಸರಳ ವಾಸ್ತು ಕಚೇರಿ ಸೇರಿದಂತೆ ಕೆಲವೊಂದು ಸಣ್ಣ ಪುಟ್ಟ ಕಚೇರಿಗಳು ಸಹ ಖಾಲಿ ಮಾಡಿದ್ದು, ಐಟಿ ಪಾರ್ಕ್ ಕಟ್ಟಡದ ಅರ್ಧದಷ್ಟು ಖಾಲಿಯಾಗಿ ಉಳಿದಿದೆ.
ಬಾಡಿಗೆ ದುಬಾರಿ?: ಐಟಿ ಪಾರ್ಕ್ ಕಟ್ಟಡದಲ್ಲಿ ಸಮರ್ಪಕ ನಿರ್ವಹಣೆ ಕೊರತೆ ಗೋಚರಿಸುತ್ತದೆ. ಆದರೆ, ಕಟ್ಟಡದಲ್ಲಿ ಬಾಡಿಗೆ ಮಾತ್ರ ಪ್ರತಿ ಚದರ ಅಡಿಗೆ 24 ರೂ. ನಿಗದಿ ಪಡಿಸಿರುವುದು, ಸಮರ್ಪಕಸೌಲಭ್ಯಗಳು ಇಲ್ಲದಿರುವ ಹಿನ್ನೆಲೆಯಲ್ಲಿ ಐಟಿ ಉದ್ಯಮಿಗಳು ಕಟ್ಟಡದಲ್ಲಿ ಕಚೇರಿ ಆರಂಭಕ್ಕೆಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ.ಸರಕಾರದಿಂದ ಕೋಟ್ಯಂತರ ರೂ. ವೆಚ್ಚದಲ್ಲಿನಿರ್ಮಾಣಗೊಂಡಿರುವ ಐಟಿ ಪಾರ್ಕ್ ನಿರ್ವಹಣೆಜತೆಗೆ ವಿವಿಧ ಸೌಲಭ್ಯಗಳ ನೀಡಿಕೆಯೊಂದಿಗೆ ಐಟಿ ಉದ್ಯಮಿಗಳನ್ನು ಆಕರ್ಷಿಸುವ ಯತ್ನಕ್ಕೆಮುಂದಾಗಬೇಕಾಗಿದೆ. ಕೋವಿಡ್-19 ಹಿನ್ನೆಲೆಯಲ್ಲಿಬೆಂಗಳೂರು, ಮುಂಬೈ ಇನ್ನಿತರ ಕಡೆಯ ಉತ್ತರ ಕರ್ನಾಟಕದ ಐಟಿ ಉದ್ಯೋಗಿಗಳು, ಉದ್ಯಮಿಗಳು ಹಾಗೂ ನವೋದ್ಯಮಿಗಳು ಈ ಭಾಗದಲ್ಲಿ ಉದ್ಯಮ ಆರಂಭಕ್ಕೆ ಆಸಕ್ತಿತೋರುತ್ತಿದ್ದು, ಅಂತಹವರನ್ನು ಆಕರ್ಷಿಸುವ ನಿಟ್ಟಿನಲ್ಲಿ ಗಂಭೀರ ಯತ್ನಗಳು ನಡೆಯಬೇಕಾಗಿದೆ ಎಂಬುದು ಹಲವರ ಅನಿಸಿಕೆಯಾಗಿದೆ.
ಈಡೇರದ ಕಿಯೋನೆಕ್ಸ್ ಎಂಡಿ ಭರವಸೆ :
ಇತ್ತೀಚೆಗೆ ಹುಬ್ಬಳ್ಳಿಗೆ ಆಗಮಿಸಿದ್ದ ಕಿಯೋನೆಕ್ಸ್ ವ್ಯವಸ್ಥಾಪಕನಿರ್ದೇಶಕ ಸಿದ್ರಾಮಪ್ಪ ಅವರು, ಐಟಿ ಪಾರ್ಕ್‌ನಲ್ಲಿ ಗಬ್ಬೆದ್ದು ನಾರುತ್ತಿರುವ ಶೌಚಾಲಯ, ಸಮರ್ಪಕ ನಿರ್ವಹಣೆ ಇಲ್ಲದಿರುವುದುಇನ್ನಿತರ ಸಮಸ್ಯೆಗಳನ್ನುಖುದ್ದಾಗಿ ವೀಕ್ಷಿಸಿದ್ದರು. ದುರಸ್ತಿ ಹಾಗೂ ಸುಧಾರಣೆ ಕ್ರಮದಭರವಸೆ ನೀಡಿದ್ದು, ಅದಿನ್ನೂ ಜಾರಿಯಾಗಬೇಕಾಗಿದೆ.
ಮತ್ತೂಂದು ಐಟಿ ಪಾರ್ಕ್‌ಗೆ ಚಿಂತನೆ? :
ಗೋಕುಲ ರಸ್ತೆಯ ಅರ್ಜುನ ವಿಹಾರದಲ್ಲಿ ಕಿಯೋನೆಕ್ಸ್‌ಗೆ ನೀಡಲಾದ ಸುಮಾರು 1 ಎಕರೆ ಭೂಮಿ ಇದ್ದು, ಅಲ್ಲಿ ಮತ್ತೂಂದು ಐಟಿ ಪಾರ್ಕ್ ಅನ್ನು ಸುಸಜ್ಜಿತರೀತಿಯಲ್ಲಿ ನಿರ್ಮಾಣ ಮಾಡಬೇಕು ಎಂಬುದು ಕೆಲಐಟಿ ಉದ್ಯಮಿಗಳ ಪ್ರಸ್ತಾವನೆಯಾಗಿದೆ. ಇನ್ನೊಂದು ಐಟಿ ಪಾರ್ಕ್ ನಿರ್ಮಾಣ ಕುರಿತಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ ಹಾಗೂ ಕಿಯೋನೆಕ್ಸ್ ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೂ ತರಲಾಗಿದ್ದು, ಸದ್ಯದ ಸ್ಥಿತಿಯಲ್ಲಿ ಕಟ್ಟಡ ನಿರ್ಮಾಣಕಷ್ಟಸಾಧ್ಯವಾಗಿದೆ. ಖಾಸಗಿ ಸಹಭಾಗಿತ್ವದಲ್ಲಿನಿರ್ಮಾಣಕ್ಕೆ ಮುಂದಾದರೂ ಕೋವಿಡ್-19ಹೊಡೆತದ ಹಿನ್ನೆಲೆಯಲ್ಲಿ ಖಾಸಗಿ ಪಾಲುದಾರರುಮುಂದಾಗುವ ಸಾಧ್ಯತೆ ಕಡಿಮೆ ಇದೆ ಎಂದು ಹೇಳಲಾಗುತ್ತಿದೆ.
-ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.