ಹಂಪಿಯಲ್ಲಿ ಕಂಡ ಹನಾಲು ಗುಬ್ಬಿ!
Team Udayavani, May 4, 2018, 4:31 PM IST
ಕುಷ್ಟಗಿ: ಹಿಮಾಲಯದ ಕಾಡುಗಳಲ್ಲಿ ವಾಸವಿರುವ, ಅಪರೂಪದ ಹನಾಲು ಗುಬ್ಬಿ(ಇಂಡಿಯನ್ ಪಿಟ್ಟಾ) ಹೊಸಪೇಟೆ ತಾಲೂಕಿನ ಹಂಪಿ ಪ್ರದೇಶದಲ್ಲಿ ಕಂಡು ಬಂದಿದೆ.
ಹಿಮಾಲಯದ ಕಾಡುಗಳಲ್ಲಿರುವ ಮರಗಳಲ್ಲಿ ವಾಸವಿರುವ ಈ ಹಕ್ಕಿ ಮರದ ಕೊಂಬೆಗಳಲ್ಲಿ ಕೂರುವುದೇ ಅಪರೂಪ. ಸಾಧಾರಣವಾಗಿ ನೆಲದ ಮೇಲೆ ಕುಪ್ಪಳಿಸಿ, ಕುಪ್ಪಳಿಸಿ ಓಡಾಡುವ ಈ ಗುಬ್ಬಿ ತನ್ನ ಚೋಟುದ್ದ ಬಾಲವನ್ನು ಲಯಬದ್ಧವಾಗಿ ಕುಣಿಸುತ್ತದೆ. ಬೆಳಗಿನ ನಸುಕಿನ ಹಾಗೂ ಸಂಜೆ ಸಮಯದಲ್ಲಿ ವಿಟ್ಟಿ ಎಂದು ಮೆಲುದನಿಯಲ್ಲಿ ಕೂಗುತ್ತದೆ. ನೆಲ ಕೆದಕುತ್ತಾ, ತರಗೆಲೆಗಳನ್ನು ಎತ್ತಿ ಹಾಕುತ್ತ ಹುಳು ಹುಪ್ಪಡಿ ಹಿಡಿದು ತಿನ್ನುತ್ತದೆ.
ಹಿಮಾಲಯ ಪ್ರದೇಶದಲ್ಲಿ ಮೇ ತಿಂಗಳಿನಿಂದ ಆಗಸ್ಟ್ ತಿಂಗಳಿನಲ್ಲಿ ಹುಲ್ಲು ಕಡ್ಡಿಗಳನ್ನು ಒಟ್ಟು ಮಾಡಿ ಸಾಧಾರಣ ಎತ್ತರದ ಮರಗಳ ಮೇಲೆ ಗೂಡು ಕಟ್ಟುತ್ತದೆ. ದಕ್ಷಿಣ ಭಾರತ ಕಾಡುಗಳಲ್ಲಿ ಇದು ಗೂಡು ಕಟ್ಟುವುದು ಅಪರೂಪ. ಈ ಪಕ್ಷಿ ಭಾರತ, ಬಾಂಗ್ಲಾ, ಸಿಲೋನ್ ಭಾಗದಲ್ಲಿ ಕಂಡು ಬರುತ್ತದೆ.
ಈ ಹಕ್ಕಿ ಮೈನಾ ಗಾತ್ರದ್ದಾಗಿದ್ದು, ಹಳದಿ ಎದೆ, ನೀಲಿ ಪಟ್ಟೆಗಳ ಹಸಿರು ರೆಕ್ಕೆ, ಬಾಲದ ಕೆಳಗೆ ರಕ್ತ ಕೆಂಪನೆಯ ಬಣ್ಣ, ಹಾರುವಾಗ ಬಿಳಿ ಪಟ್ಟೆ ಪ್ರಧಾನವಾಗಿ ಕಾಣುತ್ತಿರುವುದರಿಂದ ಈ ಹಕ್ಕಿಗೆ ನವರಂಗ ಎಂತಲೂ ಕರೆಯುವುದುಂಟು. ಮೇ ತಿಂಗಳಿನಲ್ಲಿ ಹಿಮಾಲಯದ ಕಾಡುಗಳಲ್ಲಿ ಇರಬೇಕಾದ ಹನಾಲು ಗುಬ್ಬಿ ಹಂಪೆಯ ಕಲ್ಲು ಬಂಡೆಗಳ ಪರಿಸರದಲ್ಲಿ ಇರುವುದು ಇನ್ನಷ್ಟು ಅಪರೂಪ ಎನಿಸಿದೆ ಎನ್ನುತ್ತಾರೆ ಪಕ್ಷಿ ಛಾಯಾಗ್ರಾಹಕ, ಬಾಗಲಕೋಟೆ ಜಿಪಂ ಹಣಕಾಸು ಇಲಾಖೆಯಲ್ಲಿ ಹಿರಿಯ ಉಪನಿರ್ದೇಶಕರಾಗಿ ಸೇವೆಯಲ್ಲಿರುವ ಅಮೀನ್ ಅತ್ತಾರ.
ಮೇ.1ರಂದು ತಾವು ಮತ್ತೋರ್ವ ಛಾಯಾಗ್ರಾಹಕ ಹನಮಂತ ಹರ್ಲಾಪುರ ಅವರೊಂದಿಗೆ ಕ್ಯಾಮೆರಾದೊಂದಿಗೆ ತಿರುಗಾಟದಲ್ಲಿದ್ದಾಗ, ಹಂಪಿಯ ಪಂಪಯ್ಯಸ್ವಾಮಿ ಮಳಿಮಠ ಅವರ ತೋಟದಲ್ಲಿ ಕಂಡ ಕ್ಷಣವೇ ಫೋಟೋ ಕ್ಲಿಕ್ಕಿಸಲಾಯಿತು. ಇನ್ನಷ್ಟು ಛಾಯಾಚಿತ್ರಗಳ ಸೆರೆಗೆ ಯತ್ನಿಸಿದಾಗ ಅದು ಕಣ್ಮರೆಯಾಯಿತು. ಈ ಪಕ್ಷಿ ನಮ್ಮ ಕ್ಯಾಮರಾದಲ್ಲಿ ಸೆರೆ ಸಿಕ್ಕಿರುವುದು ಜೀವಮಾನದ ಅವಿಸ್ಮರಣೀಯ ಕ್ಷಣ ಎನ್ನುತ್ತಾರೆ ಛಾಯಾಗ್ರಾಹಕ ಅಮೀನ್.
ಮಂಜುನಾಥ ಮಹಾಲಿಂಗಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಸರ್ಕಾರ ಮತ್ತು ವಿಜಯೇಂದ್ರ ನಡುವೆ ಉತ್ತಮ ಅಡ್ಜಸ್ಟ್‌ಮೆಂಟ್ ಇದೆ: ಯತ್ನಾಳ್ ಆರೋಪ
Hubli: ಕಸದ ವಾಹನಕ್ಕೆ ಸ್ಕೂಟಿ ಡಿಕ್ಕಿ: ಓರ್ವ ವಿದ್ಯಾರ್ಥಿ ಸಾವು, ಮತ್ತೋರ್ವ ಗಂಭೀರ
BJP ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಗೊತ್ತಿಲ್ಲ: ಸಚಿವ ಜೋಶಿ
BJP ರಾಜ್ಯಾಧ್ಯಕ್ಷರ ನೇಮಕ ಹೈಕಮಾಂಡ್ ನಿರ್ಧಾರ: ಅರವಿಂದ ಬೆಲ್ಲದ
Hubli: ಮೀಟರ್ ಬಡ್ಡಿಗೆ ಮನನೊಂದು ಲಾರಿ ಚಕ್ರದಡಿ ಬಿದ್ದು ವ್ಯಕ್ತಿ ಆತ್ಮಹ*ತ್ಯೆ
MUST WATCH
ಹೊಸ ಸೇರ್ಪಡೆ
Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ
Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!
Padubidri: ಸ್ಕೂಟಿಗೆ ಈಚರ್ ವಾಹನ ಢಿಕ್ಕಿ; ಸವಾರನಿಗೆ ಗಾಯ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.