ಕೋವಿಡ್-19 ಹೊರತಾದ ಆರೋಗ್ಯ ಸಮೀಕ್ಷೆ: ಧಾರವಾಡ ರಾಜ್ಯಕ್ಕೆ ಫಸ್ಟ್
Team Udayavani, May 16, 2020, 8:53 AM IST
ಹುಬ್ಬಳ್ಳಿ: ಕೋವಿಡ್ -19 ಹೊರತಾದ ಇತರೆ ಆರೋಗ್ಯ ಸಮಸ್ಯೆಗಳ ಕುರಿತಾಗಿ ಸಮೀಕ್ಷೆ, ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ಧಾರವಾಡ ಜಿಲ್ಲೆ ರಾಜ್ಯಕ್ಕೆ ಮೊದಲ ಸ್ಥಾನದಲ್ಲಿದೆ. ಜಿಲ್ಲಾಡಳಿತದ ಮುತುವರ್ಜಿ, ಸಮೀಕ್ಷಾ ತಂಡಗಳ ಸಮರ್ಪಕ ಕಾರ್ಯನಿರ್ವಹಣೆಯಿಂದ ಇದುವರೆಗೆ ಜಿಲ್ಲೆಯಲ್ಲಿ ಶೇಕಡಾ 72.88ರಷ್ಟು ಸಾಧನೆ ತೋರಲಾಗಿದೆ.
ಬೆಂಗಳೂರು ಸೇರಿದಂತೆ ಅನೇಕ ಜಿಲ್ಲೆಗಳು ಶೇ.25ರಷ್ಟು ಸಮೀಕ್ಷಾ ಸಾಧನೆ ತೋರಿಲ್ಲ. ಆದರೆ, ಕೇವಲ ಐದು ಜಿಲ್ಲೆಗಳು ಮಾತ್ರ ಶೇ.50ಕ್ಕಿಂತ ಹೆಚ್ಚಿನ ಸಾಧನೆ ತೋರಿವೆ. ಇದರಲ್ಲಿ ಧಾರವಾಡ ಜಿಲ್ಲೆ ಮಾತ್ರ ಅತ್ಯಧಿಕ ಸಾಧನೆ ತೋರುವ ಮೂಲಕ ರಾಜ್ಯಕ್ಕೆ ಮೊದಲ ಸ್ಥಾನದಲ್ಲಿದೆ. ಕೋವಿಡ್-19 ಅಬ್ಬರದಲ್ಲಿ ಇತರೆ ವ್ಯಾದಿ, ಆರೋಗ್ಯ ಕಾಳಜಿ ಹಾಗೂ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ತೋರದೇ ಆಯಾ ಜಿಲ್ಲೆಗಳಲ್ಲಿ ಈ ಕುರಿತು ಸಮೀಕ್ಷೆ, ಅಗತ್ಯ ಮಾಹಿತಿ ಸಂಗ್ರಹಿಸುವುದಲ್ಲದೇ, ಫಾಲೋಅಪ್ ಮಾಡುವ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಶಿಕ್ಷಕರು ಇನ್ನಿತರ ಇಲಾಖೆ ಸಿಬ್ಬಂದಿ ಒಳಗೊಂಡ ತಂಡ ರಚಿಸಲಾಗಿದ್ದು, ಈ ತಂಡ ಮನೆ-ಮನೆಗೆ ತೆರಳಿ ಆರೋಗ್ಯ ಕುರಿತು ಮಾಹಿತಿ ಸಂಗ್ರಹಿಸಲಿದೆ.
ಏನೇನು ಸಮೀಕ್ಷೆ: ಕೋವಿಡ್-19 ಆತಂಕದ ಹಿನ್ನೆಲೆಯಲ್ಲಿ ಲಾಕ್‌ಡೌನ್‌ನಿಂದಾಗಿ ಜನರು ಹೊರಬರುವುದು ಇಲ್ಲವಾಯಿತಲ್ಲದೇ, ಕೋವಿಡ್ -19 ಶಂಕಿತರು, ಸೋಂಕಿತರು ಚಿಕಿತ್ಸೆಗೆ ತೆರಳಿದರು. ಆದರೆ, ಇತರೆ ಸಣ್ಣಪುಟ್ಟ ಹಾಗೂ ಗಂಭೀರ ಸ್ವರೂಪದ ವ್ಯಾದಿ ಇದ್ದವರು, ಆರೋಗ್ಯ ಸೌಲಭ್ಯ ಅಗತ್ಯ ಇದ್ದವರು ಆಸ್ಪತ್ರೆಗೆ ಹೋದರೆ ಎಲ್ಲಿ ಕೋವಿಡ್-19 ಪರೀಕ್ಷೆಗೆ ಒಳಪಡಿಸುತ್ತಾರೋ, ಕ್ವಾರೆಂಟೈನ್‌ನಲ್ಲಿ ಇಡುತ್ತಾರೋ ಎನ್ನುವ ಆತಂಕಕ್ಕೆ ಒಳಗಾಗಿ ಸಣ್ಣಪುಟ್ಟ ಸಮಸ್ಯೆಗಳಿದ್ದರೂ ಮೌನಕ್ಕೆ ಜಾರಿದ್ದು ಇದೆ. ಇಂತಹವರನ್ನು ಗುರುತಿಸುವ, ಅವರಿಗೆ ಅಗತ್ಯ ನೆರವು ಕಲ್ಪಿಸುವ ನಿಟ್ಟಿನಲ್ಲಿ ಸರಕಾರ ಈ ಕ್ರಮಕ್ಕೆಮುಂದಾಗಿತ್ತು.
ಕೋವಿಡ್-19 ಅಲ್ಲದೇ ಜ್ವರ, ಅಪೌಷ್ಟಿಕತೆ, ಕ್ಷಯರೋಗ, ಕುಷ್ಠರೋಗ, ಎಚ್‌ಐವಿ, ಏಡ್ಸ್, ಮಧುಮೇಹ, ರಕ್ತದೊತ್ತಡ, ಗರ್ಭಿಣಿಯರು ಹಾಗೂ ಬಾಣಂತಿಯರ ಆರೋಗ್ಯ, ನವಜಾತ ಶಿಶುಗಳ ಆರೋಗ್ಯ, ಹಿರಿಯ ನಾಗರಿಕರ ಆರೋಗ್ಯ ಹೀಗೆ ವಿವಿಧ ವಿಷಯಗಳ ಕುರಿತಾಗಿ ಮನೆ-ಮನೆಗೆ ತೆರಳಿ ಸಮೀಕ್ಷೆ ನಡೆಸುವ ಮೂಲಕ ಮಾಹಿತಿ ಸಂಗ್ರಹಿಸಲು ಸೂಚಿಸಲಾಗಿತ್ತು.
ಜತೆಗೆ ಸಮೀಕ್ಷೆ ವೇಳೆ ವಿದೇಶ-ಬೇರೆ ರಾಜ್ಯಗಳಿಂದ ಬಂದವರು, ಜ್ವರದ ಜತೆಗೆ ಕೆಮ್ಮು-ನೆಗಡಿ, ಶ್ವಾಸಕೋಶ ತೊಂದರೆಯಿಂದ ಬಳಲುತ್ತಿದ್ದವರ ಬಗ್ಗೆ ಕಂಡು ಬಂದರೆ ಅಂತಹವರನ್ನು ಕೋವಿಡ್-19 ಪರೀಕ್ಷೆಗೆ ಶಿಫಾರಸು ಮಾಡುವುದು, ಗರ್ಭಿಣಿಯರ ನೋಂದಣಿ, ತಾಯಿ ಕಾರ್ಡ್, ಚುಚ್ಚು ಮದ್ದು ಕಾರ್ಡ್ ವಿತರಣೆ ಇನ್ನಿತರ ಕಾರ್ಯಗಳ ಬಗ್ಗೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚಿಸಲಾಗಿತ್ತು.
ಧಾರವಾಡ ಟಾಪ್: ಕೋವಿಡ್-19 ಹೊರತಾದ ಇತರೆ ಆರೋಗ್ಯ ಸಮಸ್ಯೆ-ಸೌಲಭ್ಯಗಳ ಕುರಿತಾಗಿ ಕೈಗೊಂಡ ಸಮೀಕ್ಷೆಯಲ್ಲಿ ರಾಜ್ಯದ ಐದು ಜಿಲ್ಲೆಗಳು ಟಾಪ್ ಐದರ ಸಾಧನೆ ತೋರಿವೆ. ಧಾರವಾಡ ಜಿಲ್ಲೆಯಲ್ಲಿ ಸುಮಾರು 4,71,567 ಕುಟುಂಬಗಳಿದ್ದು, ಇದರಲ್ಲಿ 3,43,682 ಕುಟುಂಬಗಳ ಸಮೀಕ್ಷೆ ಕೈಗೊಳ್ಳಲಾಗಿದೆ. ಹಿರಿಯ ನಾಗರಿಕರು, ವಿವಿಧ ಆರೋಗ್ಯ ಸಮಸ್ಯೆ ಇದ್ದವರು, ಬಾಣಂತಿಯರು, ಗರ್ಭಿಣಿಯರು, ಅಪೌಷ್ಟಿಕತೆಯಿಂದ ಬಳಲುವ ಮಕ್ಕಳ ಕುರಿತಾಗಿ ಮಾಹಿತಿ ಸಂಗ್ರಹ ಹಾಗೂ ಫಾಲೊಅಪ್ ಕೈಗೊಳ್ಳಲಾಗಿದ್ದು, ಒಟ್ಟಾರೆ ಶೇ.72.88ರಷ್ಟು ಸಾಧನೆ ತೋರಲಾಗಿದೆ. ಬಾಗಲಕೋಟೆ ಜಿಲ್ಲೆ ಶೇ.69.88, ತುಮಕೂರು ಶೇ.56.75, ಕೊಪ್ಪಳ ಶೇ.54.31, ಚಿಕ್ಕಮಗಳೂರು ಶೇ.54.20ರಷ್ಟು ಸಾಧನೆ ತೋರಿವೆ. ಹಾಸನ ಜಿಲ್ಲೆ ಶೇ.44.77ರಷ್ಟು ಸಾಧನೆ ತೋರಿದ್ದರೆ ಉಳಿದ ಜಿಲ್ಲೆಗಳು ಶೇ.0.34ರಿಂದ ಶೇ.34.16 ಒಳಗಿನ ಸಮೀಕ್ಷಾ ಸಾಧನೆ ತೋರಿವೆ.
ಜಿಲ್ಲಾಧಿಕಾರಿ ವಿಶೇಷ ಮುತುವರ್ಜಿ : ಕೋವಿಡ್-19 ಹೊರತಾದ ಇತರೆ ವ್ಯಾದಿಗಳು, ಆರೋಗ್ಯ ಸೌಲಭ್ಯ ಹಾಗೂ ಸಮಸ್ಯೆಗಳ ಕುರಿತಾಗಿ ಸಮೀಕ್ಷೆ ಕೈಗೊಳ್ಳುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್ ವಿಶೇಷ ಮುತುವರ್ಜಿ ವಹಿಸಿದ್ದಲ್ಲದೆ, ಸಮೀಕ್ಷೆಗೆ ನಿಯೋಜಿಸಿದ್ದ ತಂಡಗಳು ಕೆಲವೊಂದು ಅಡ್ಡಿ ಆತಂಕಗಳನ್ನು ಲೆಕ್ಕಿಸದೆ ಚುರುಕಿನ ಕಾರ್ಯ ನಿರ್ವಹಿಸಿದ್ದರಿಂದ ರಾಜ್ಯದಲ್ಲಿಯೇ ಉತ್ತಮ ಸಾಧನೆ ಸಾಧ್ಯವಾಗಿದೆ. ಏಪ್ರಿಲ್ 16ರಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಕಾರ್ಯಪಡೆ ಸಭೆ ನಡೆಸಿದ್ದ ಜಿಲ್ಲಾಧಿಕಾರಿ ದೀಪಾ ಚೋಳನ್, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಂದ ಜಿಲ್ಲೆಯ ಪ್ರತಿ ಮನೆಗೂ ತೆರಳಿ ಆರೋಗ್ಯ ಸಮೀಕ್ಷೆ ಕೈಗೊಳ್ಳುವಂತೆ ಸೂಚಿಸಿದ್ದರು. ಜಿಲ್ಲೆಯಲ್ಲಿ ಸುಮಾರು 1,025 ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಈ ಕಾರ್ಯಕ್ಕೆ ಮುಂದಾಗುವಂತೆ ಸೂಚಿಸಲಾಗಿತ್ತು. ಧಾರವಾಡ ಜಿಲ್ಲೆಯಲ್ಲಿ ಸುಮಾರು 196 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಆರೋಗ್ಯ ಇಲಾಖೆಯ ಪೌಷ್ಟಿಕ ಪುನರ್ವಸತಿ ಕೇಂದ್ರದಲ್ಲಿ ಅವರನ್ನು ದಾಖಲಿಕೊಂಡು ಅವರ ಆರೋಗ್ಯ ಸುಧಾರಣೆಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿತ್ತು. ಅದೇ ರೀತಿ ಜಿಲ್ಲೆಯಲ್ಲಿ ಸುಮಾರು 171 ಕ್ಷಯ ರೋಗಿಗಳು ಇದ್ದು, ಅವರ ಚಿಕಿತ್ಸೆಗೆ ನಿರಂತರ ಸಂಪರ್ಕಕ್ಕೆ ತಿಳಿಸಲಾಗಿತ್ತು. ಜಿಲ್ಲೆಯಲ್ಲಿ 91 ಕುಷ್ಠರೋಗ ಪೀಡಿತರು ಇದ್ದು ಅವರಿಗೆ ಹಾಗೂ ಎಚ್‌ಐವಿ, ಏಡ್ಸ್ ಪೀಡಿತರಿಗೆ ಅಗತ್ಯ ಚಿಕಿತ್ಸೆಗೆ ಕ್ರಮ ಕೈಗೊಳ್ಳಬೇಕು. ಮಧುಮೇಹ ಪೀಡಿತರು, ಅಧಿಕರಕ್ತದೊತ್ತಡ, ಕ್ಯಾನ್ಸರ್ ಪೀಡಿತರಿಗೆ ಒಂದು ತಿಂಗಳ ಔಷಧಿ ನೀಡಿಕೆಗೆ ಸೂಚಿಸಲಾಗಿತ್ತು. ಜಿಲ್ಲೆಯಲ್ಲಿ 125 ಜನ ಹಿಮೋಫಿಲಿಯಾ, 56 ಜನರು ತಲಸ್ಸಿಮಿಯಾ ಸಮಸ್ಯೆಗಳಿಂದ ಬಳಲುತ್ತಿದ್ದು, ಅವರಿಗೆ ಅಗತ್ಯ ಚಿಕಿತ್ಸೆಗೆ ಸೂಚಿಸಲಾಗಿತ್ತು. ಬಾಣಂತಿಯರು, ಗರ್ಭಿಣಿಯರಿಗೆ, ಮಕ್ಕಳಿಗೆ ಸೌಲಭ್ಯ ಒದಗಿಸಲು ಆಶಾ-ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CID Inquiry: ಪರಿಷತ್‌ನಲ್ಲಿ ನಡೆದ ಘಟನೆ ಎಂದು ಉಲ್ಲೇಖಿಸಿದ್ದು ತಪ್ಪು: ಬಸವರಾಜ ಹೊರಟ್ಟಿ
ಜೋಶಿ ಅವರಿಗೆ ನನ್ನ ಸಾಮರ್ಥ್ಯ ಗೊತ್ತಿಲ್ಲ… ಅಸಮರ್ಥ ಹೇಳಿಕೆಗೆ ತಿರುಗೇಟು ನೀಡಿದ ಪರಮೇಶ್ವರ್
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.