ಮಳೆ ಅಬ್ಬರ; ಹುಬ್ಬಳ್ಳಿ ಜನಜೀವನ ತತ್ತರ
| ಒಂದೂವರೆ ತಾಸು ವರುಣನ ಆಟ | ಬಡಾವಣೆಗಳ ಜನರ ಪರದಾಟ | ಮನೆಗೆ ನೀರು ನುಗ್ಗಿ ಗೋಳಾಟ
Team Udayavani, Jun 24, 2019, 8:33 AM IST
ಹುಬ್ಬಳ್ಳಿ: ದಾಜಿಬಾನ ಪೇಟೆಯಲ್ಲಿ ರಸ್ತೆಯಲ್ಲಿ ಹರಿದ ನೀರು.
ಹುಬ್ಬಳ್ಳಿ: ನಗರದಲ್ಲಿ ರವಿವಾರ ಮಧ್ಯಾಹ್ನ ರಭಸದ ಮಳೆ ಸುರಿದ ಪರಿಣಾಮ ಹಲವು ಮನೆಗಳಿಗೆ ನೀರು ನುಗ್ಗಿದ್ದು, ಹಲವೆಡೆ ಮರಗಳು ಬಿದ್ದು ರಸ್ತೆ ಸಂಚಾರಕ್ಕೆ ವ್ಯತ್ಯಯವಾಯಿತು.
ಮಧ್ಯಾಹ್ನ 1:45ರ ಸುಮಾರಿಗೆ ಆರಂಭಗೊಂಡ ಮಳೆ 3 ಗಂಟೆವರೆಗೆ ಜೋರಾಗಿ ಸುರಿಯಿತು. ನಂತರ ಸಂಜೆ 5 ಗಂಟೆವರೆಗೂ ತುಂತುರು ಮಳೆಯಾಯಿತು. ಗುಡಿಹಾಳ ರಸ್ತೆಯಲ್ಲಿ ಹಾಗೂ ಕೆ.ಬಿ. ನಗರದ 2ನೇ ಕ್ರಾಸ್‌ನಲ್ಲಿ 2 ಮರಗಳು ಮನೆಯ ಮೇಲೆ ಬಿದ್ದಿದ್ದು, ಮಳೆ ನಿಂತ ಮೇಲೆ ಅವನ್ನು ತೆರವುಗೊಳಿಲಾಯಿತು.
ನಗರದ ನ್ಯೂ ಕಾಟನ್ ಮಾರ್ಕೆಟ್ ಸಮೀಪದ ವಾಣಿಜ್ಯ ಸಂಕೀರ್ಣದಲ್ಲಿ ನೀರು ನುಗ್ಗಿ ತೊಂದರೆ ಉಂಟಾಯಿತು. ದಾಜಿಬಾನ ಪೇಟೆ, ಕೊಪ್ಪಿಕರ ರಸ್ತೆಯ ಕೆಲ ವಾಣಿಜ್ಯ ಮಳಿಗೆಗಳ ಅಂಡರ್‌ಗ್ರೌಂಡ್ ಮಳಿಗೆಯಲ್ಲಿ ಮಳೆ ನೀರು ನುಗ್ಗಿತ್ತು. ಅಂಗಡಿಕಾರರು ನೀರನ್ನು ಹೊರತೆಗೆಯಲು ಹರಸಾಹಸ ಮಾಡುತ್ತಿದ್ದುದು ಕಂಡುಬಂತು. ಪಂಪ್‌ಗ್ಳನ್ನು ಬಳಕೆ ಮಾಡಿಕೊಂಡು ನೀರು ಹೊರತೆಗೆಯಲಾಯಿತು. ಆದರೆ ಕೆಲವೆಡೆ ವಿದ್ಯುತ್ ಸಂಪರ್ಕ ಇಲ್ಲದ್ದರಿಂದ ಅಂಗಡಿಕಾರರು ಪರದಾಡಬೇಕಾಯಿತು.
ದಾಜಿಬಾನ ಪೇಟೆ ಹಾಗೂ ಕೊಪ್ಪಿಕರ ರಸ್ತೆಯಲ್ಲಿ ಮಳೆ ನೀರಿನ ರಭಸಕ್ಕೆ ರಸ್ತೆ ಪಕ್ಕ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳು ಕೊಚ್ಚಿಕೊಂಡು ಸ್ವಲ್ಪ ದೂರ ಹೋಗಿರುವುದು ವರದಿಯಾಗಿದೆ. ರಸ್ತೆ ಪಕ್ಕದ ಸಣ್ಣ ಅಂಗಡಿಗಳಿಗೆ ನೀರು ನುಗ್ಗಿದ್ದರಿಂದ ವ್ಯಾಪಾರಿಗಳು ಸರಕುಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲು ಯತ್ನಿಸುತ್ತಿದ್ದುದು ಕಂಡುಬಂತು.
ಗಣೇಶ ನಗರ, ಸದರಸೋಫಾ, ಮದನಿ ಕಾಲೋನಿ, ಪಾಟೀಲ ಗಲ್ಲಿ, ಪಡದಯ್ಯನಹಕ್ಕಲ, ಬಮ್ಮಾಪುರ ಓಣಿ, ಎಸ್.ಎಂ. ಕೃಷ್ಣ ನಗರ, ನೇಕಾರ ನಗರ ಸೇರಿದಂತೆ ಹಲವು ಬಡಾವಣೆಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದ್ದರಿಂದ ಜನರು ಸರಂಜಾಮುಗಳನ್ನು ರಕ್ಷಿಸಿಕೊಳ್ಳುವಲ್ಲಿ ನಿರತರಾಗಿದ್ದರು. ರಾಜಕಾಲುವೆ ಪಕ್ಕದ ಕೊಳಚೆ ಪ್ರದೇಶಗಳಿಗೂ ಮಳೆ ನೀರು ನುಗ್ಗಿದ್ದು ವರದಿಯಾಗಿದೆ. ಅಲ್ಲದೇ ಜಗದೀಶ ನಗರದಲ್ಲಿ ವಿಮಾನ ನಿಲ್ದಾಣದ ಆವರಣ ಗೋಡೆ ಎರಡು ಕಡೆ ಕುಸಿದ ಘಟನೆಯೂ ನಡೆದಿದೆ.
ಹುಬ್ಬಳ್ಳಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿಯೂ ಮಳೆಯಾಗಿದ್ದು, ಮುಂಗಾರು ಬಿತ್ತನೆಗೆ ಹಿಂದೇಟು ಹಾಕಿದ್ದ ರೈತರಲ್ಲಿ ಈಗ ಆಶಾಭಾವನೆ ಮೂಡಿದೆ.
•ಜಲಪಾತ್ರೆಯಾದ ವಾಣಿಜ್ಯ ಸಂಕೀರ್ಣಗಳ ತಳ
•ಮುಂಗಾರು ಬಿತ್ತನೆಗೆ ಕಾದಿದ್ದ ರೈತರಲ್ಲಿ ಸಂತಸ
•ಹೊಳೆಯಂತಾದ ರಸ್ತೆ-ಕೊಚ್ಚಿ ಹೋದ ಬೈಕ್
•ಮನೆಗಳ ಮೇಲೆ ಎರಗಿದ ಮರಗಳು; ತೆರವು
•ನೂರಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು
•ನೀರನ್ನು ಹೊರಹಾಕಲು ಜನರ ಹರಸಾಹಸ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಧಾರವಾಡ: ಅವಸಾನದತ್ತ ಶತಮಾನದ ಕೆಲಗೇರಿ ಕೆರೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
BJP ಡಬಲ್ ಗೇಮ್; ವಕ್ಫ್ ಆಸ್ತಿ ರಕ್ಷಣೆ ಬಗ್ಗೆ ಬಿಜೆಪಿ ಪ್ರಣಾಳಿಕೆಯಲ್ಲಿ ಉಲ್ಲೇಖ: ಸಿದ್ದು
Hubli: ಅಪ್ರಾಪ್ತೆಯೊಂದಿಗೆ ಅನುಚಿತ ವರ್ತನೆ: ಮುಖ್ಯ ಪೇದೆ ವಿರುದ್ದ ಪೋಕ್ಸೋ ಕೇಸ್
Hubli: ಹಣಕಾಸು ಆಯೋಗದ ಅನ್ಯಾಯದ ಬಗ್ಗೆ ಬಿಜೆಪಿಯರಿಂದ ಮೌನ: ಸಿದ್ದರಾಮಯ್ಯ ಕಿಡಿ
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.