![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, May 11, 2018, 5:29 PM IST
ತಾವರಗೇರಾ: ರಡ್ಡಿ ಸಮಾಜದ ಕುಲದೇವತೆ ಮಹಾಸಾದ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು ಹೋಬಳಿಯಾದ್ಯಂತ ಸರಳವಾಗಿ ಆಚರಿಸಲಾಯಿತು.
ತಾವರಗೇರಾ ಪಟ್ಟಣ ಸೇರಿದಂತೆ ವಿವಿಧ ಸರಕಾರಿ ಕಚೇರಿಗಳು ಹಾಗೂ ಖಾಸಗಿ ಸಂಘ ಸಂಸ್ಥೆಗಳಲ್ಲಿ ಗುರುವಾರ ಮಲ್ಲಮ್ಮ ಜಯಂತಿ ಆಚರಿಸಲಾಯಿತು. ಪಟ್ಟಣದ ನಾಡ ಕಚೇರಿಯಲ್ಲಿ ಹೇಮರಡ್ಡಿ ಮಲ್ಲಮ್ಮ ಅವರ ಭಾವಚಿತ್ರಕ್ಕೆ ನಾಡ ತಹಸೀಲ್ದಾರ ಹಸನಸಾಬ ಗುಳೇದಗುಡ್ಡ ಅವರು ಪೂಜೆ ಸಲ್ಲಿಸುವ ಮೂಲಕ ಜಯಂತಿಯನ್ನು ಆಚರಿಸಿದರು. ಈ ಸಂದರ್ಭದಲ್ಲಿ ಗ್ರಾಮಲೆಕ್ಕಿಗರಾದ ಸೂರ್ಯಕಾಂತ ನಾಯಕ, ಶಾಂತಣ್ಣ, ಸಿಬ್ಬಂದಿಗಳಾದ ಕನಕಪ್ಪ ಸಿದ್ದಾಪೂರ, ಮುರ್ತುಜಾಸಾಬ ನಾಡಗೌಡ, ರೇಣುಕಮ್ಮ, ಮಲ್ಲಪ್ಪ, ಸಂಜೀವ, ವಿಜಯಕುಮಾರ, ವಿಶ್ವನಾಥ, ಸಂತೋಷ ಇದ್ದರು.
ಪಟ್ಟಣದ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಹೇಮರಡ್ಡಿ ಮಲ್ಲಮ್ಮ ಅವರ ಭಾವಚಿತ್ರಕ್ಕೆ ಮುಖ್ಯಾ ಧಿಕಾರಿ ಎಸ್.ಸಿ. ಸೂಗೂರು ಪೂಜೆ ಸಲ್ಲಿಸುವ ಮೂಲಕ ಜಯಂತಿ ಆಚರಿಸಿದರು. ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಶ್ಯಾಮಮೂರ್ತಿ ಕಟ್ಟಿಮನಿ, ಮುರ್ತುಜಾಸಾಬ, ಅಮರೇಶ, ಸೇರಿದಂತೆ ಇನ್ನಿತರರಿದ್ದರು.
ಸಮೀಪದ ಜುಮಲಾಪೂರ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಶಿವಶರಣೆ ಮಲ್ಲಮ್ಮನವರ ಭಾವಚಿತ್ರಕ್ಕೆ ಹೂಮಾಲೆ ಹಾಕುವುದರ ಮೂಲಕ ಗ್ರಾಪಂ ಬಿಲ್ ಕಲೆಕ್ಟರ್ ಗುರಪ್ಪ ಪೂಜೆ ಸಲ್ಲಿಸಿದರು. ಸಿಬ್ಬಂದಿ ಶರಣಬಸವರಾಜ, ಲಕ್ಷ್ಮಣ ಇದ್ದರು. ಸ್ಥಳೀಯ ಪೊಲೀಸ್ ಠಾಣೆ, ಸರಕಾರಿ ಆಸ್ಪತ್ರೆ, ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಸೇರಿದಂತೆ ವಿವಿಧ ಖಾಸಗಿ ಕಚೇರಿಗಳಲ್ಲಿ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು.
ಕುಷ್ಟಗಿ: ಮಹಾಸಾದ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು ಗುರುವಾರ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಚುನಾವಣೆಯ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಯಿತು. ಇದೇ ವೇಳೆ ಹೇಮರಡ್ಡಿ ಮಲ್ಲಮ್ಮ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಭಕ್ತಿ ಪೂರ್ವಕ ನಮನ ಸಲ್ಲಿಸಲಾಯಿತು. ವೀರಶೈವ ರಡ್ಡಿ ಸಮಾಜದ ಅಧ್ಯಕ್ಷಶರಣಗೌಡ ಪಾಟೀಲ, ನಿವೃತ್ತ ಪಿಎಸ್‌ಐ ಸೋಮನಗೌಡ ಪಾಟೀಲ, ಮಲ್ಲಪ್ಪ ಕುರ್ನಾಳ, ನಿವೃತ್ತ ಇಇ ಎಸ್.ಕೆ.ಪಾಟೀಲ, ಕಂದಾಯ ಇಲಾಖೆಯ ಶರಣಯ್ಯ ನಿಡಗುಂದಿಮಠ, ಶಿರಸ್ತೆದಾರ ಸತೀಶ, ರಜನೀಕಾಂತ ಕೆಂಗಾರಿ ಮತ್ತಿತರಿದ್ದರು.
Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’
ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ
Dharwad: ಪಂ.ಮನಸೂರ ಸಂಗೀತ ಪಾಠ ಶಾಲೆ ಮತ್ತೆ ಆರಂಭ; ಜಿಲ್ಲಾಧಿಕಾರಿ ದಿವ್ಯ ಪ್ರಭು
Hubli: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89.99 ಲಕ್ಷ ರೂ ಪೊಲೀಸ್ ವಶಕ್ಕೆ
ED summons: ಸಿದ್ದರಾಮಯ್ಯ ಪತ್ನಿ ಪಾರ್ವತಿ, ಬೈರತಿ ಸುರೇಶಗೆ ತಾತ್ಕಾಲಿಕ ರಿಲೀಫ್
You seem to have an Ad Blocker on.
To continue reading, please turn it off or whitelist Udayavani.