ನಿಯಮ ಪಾಲನೆಗೆ ಹಿಂದೇಟು..
Team Udayavani, May 19, 2017, 3:21 PM IST
ಹುಬ್ಬಳ್ಳಿ: ಕೇಂದ್ರ ಪೆಟ್ರೋಲಿಯಂ ಇಲಾಖೆಯು ಪೆಟ್ರೋಲ್ ಬಂಕ್ ಗಳಲ್ಲಿ ಕಡ್ಡಾಯವಾಗಿ ಕನಿಷ್ಠ ಹತ್ತು ಸೌಲಭ್ಯಗಳಿರಬೇಕೆಂಬ ನಿಯಮವನ್ನೆನೋ ಮಾಡಿದೆ. ಆದರೆ ರಾಜ್ಯದಲ್ಲಿನ ಬಹುತೇಕ ಪೆಟ್ರೋಲಿಯಂ ಕಂಪೆನಿಗಳ ಪೆಟ್ರೋಲ್ ಬಂಕ್‌ಗಳಲ್ಲಿ ಸೌಲಭ್ಯಗಳೇ ಇಲ್ಲವಾಗಿವೆ. ಪೆಟ್ರೋಲ್ ಬಂಕ್‌ಗಳಲ್ಲಿ ವಾಹನ ಚಕ್ರಗಳಿಗೆ ಉಚಿತವಾಗಿ ಗಾಳಿ (ಹವಾ) ತುಂಬಬೇಕು.
ಕುಡಿಯುವ ನೀರು ಕಲ್ಪಿಸಬೇಕು. ಪ್ರಥಮ ಚಿಕಿತ್ಸೆಗೆ ಫಸ್ಟ್ ಏಯ್ಡ ಬಾಕ್ಸ್ , ದೂರು ಪೆಟ್ಟಿಗೆ (ಕಂಪ್ಲೇಂಟ್ ಬಾಕ್ಸ್), ಉಚಿತ ಶೌಚಾಲಯ ವ್ಯವಸ್ಥೆ, ಫೈರ್ ಎಕ್ಸ್‌ಟಿಂಗ್ಯುಶರ್‌ಗಳು, ಮರಳು ತುಂಬಿದ ಬಕೆಟ್‌ಗಳು ಇರಬೇಕು. ಇಂಧನ ಬೆಲೆಗಳು ಹಾಗೂ ಬಂಕ್ ಕಾರ್ಯನಿರ್ವಹಿಸುವ ಸಮಯ ಸೂಚಿಸುವ ಫಲಕಗಳು ಇರಬೇಕು.
ಪೆಟ್ರೋಲ್ ಬಂಕ್ ಮಾಲಕರ ಹೆಸರು, ಫೋನ್ ನಂಬರ್, ಇತರೆ ವಿವರಗಳ ಜೊತೆಗೆ ಆ ಬಂಕ್‌ನ ಪರವಾನಗಿ ವಿವರ ತಿಳಿಸುವ ಫಲಕ ಹಾಕಿರಬೇಕು. ಇಂಧನ ಗುಣಮಟ್ಟ ಪರೀಕ್ಷಿಸಲು ಯಾವುದೇ ಪೆಟ್ರೋಲ್ ಬಂಕ್‌ನಲ್ಲಾದರೂ μಲ್ಟರ್ ಪೇಪರ್ ಟೆಸ್ಟ್ ಡೆನ್ಸಿಟಿ ಪರೀಕ್ಷೆ ಏರ್ಪಡಿಸುವುದು ಅವರ ಕರ್ತವ್ಯ.
ಡೆನ್ಸಿಟಿ ಚೆಕ್ ಮಾಡಲು 500 ಎಂಎಲ್ ಸಾಮರ್ಥ್ಯವುಳ್ಳ ಜಾರ್, ಹೈಡ್ರೋಮೀಟರ್, ಥರ್ಮಾಮೀಟರ್ ಬೇಕಾಗುತ್ತದೆ. ಅವುಗಳನ್ನು ಪೆಟ್ರೋಲ್ ಬಂಕ್ ಮಾಲಕರು ಇರಿಸಬೇಕಾಗಿದೆ. ಬಂಕ್‌ಗಳಲ್ಲಿ ತುಂಬಿಸುವ ಇಂಧನ ಸರಿಯಾದ ಪ್ರಮಾಣದಲ್ಲಿ ಬರುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಬಂಕ್ ಗಳಲ್ಲಿ ಐದು ಲೀಟರ್ ಸಾಮರ್ಥ್ಯವುಳ್ಳ ಜಾರ್‌ಗಳನ್ನು ಇಟ್ಟಿರಬೇಕು.
ಗ್ರಾಹಕರು ಇಂಧನ ತುಂಬಿಸಿಕೊಂಡ ನಂತರ ತಪ್ಪದೆ ಬಿಲ್ ಪಡೆದುಕೊಳ್ಳಬೇಕು. ಇದರಿಂದ ಬಂಕ್‌ನವರು ಏನಾದರೂ ಮೋಸ ಮಾಡಿದರೆ ಅವರ ಮೇಲೆ ದೂರು ಸಲ್ಲಿಸಲು ಸಾಧ್ಯವಾಗುತ್ತದೆ. ಗ್ರಾಹಕರು ತಮಗೆ ಎದುರಾಗುವ ಯಾವುದೇ ಸಮಸ್ಯೆಗಳನ್ನು ಮೊದಲು ಪೆಟ್ರೋಲ್ ಬಂಕ್ ಮಾಲಕರಿಗೆ ಇಲ್ಲವೆ ಆ ಕಂಪನಿ ಜೊತೆ ಪರಿಹರಿಸಿಕೊಳ್ಳಬೇಕು.
ಒಂದು ವೇಳೆ ಅದು ಈಡೇರದಿದ್ದರೆ ಕೇಂದ್ರಿಕೃತ ಕುಂದು-ಕೊರತೆ ನಿವಾರಣೆ ಮತ್ತು ನಿರ್ವಹಣೆ ವ್ಯವಸ್ಥೆ (ಸಿಪಿಜಿಆರ್‌ಎಎಂಎಸ್) ವೆಬ್‌ಸೈಟ್‌ನಲ್ಲಿ ದೂರು ಸಲ್ಲಿಸಬಹುದು ಎಂಬ 10 ಕಡ್ಡಾಯ ನಿಯಮಾವಳಿಗಳಿವೆ. ಅವಳಿ ನಗರದಲ್ಲಿ ಸುಮಾರು 200ಕ್ಕೂ ಅಧಿಕ ಪೆಟ್ರೋಲ್ ಬಂಕ್‌ಗಳಿವೆ. ಆದರೆ ಬಹುತೇಕ ಕಂಪನಿಗಳ ಪೆಟ್ರೋಲ್ ಬಂಕ್‌ಗಳು ಈ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸುತ್ತಿಲ್ಲ.
ವಾಹನಗಳಿಗೆ ಪೆಟ್ರೋಲ್, ಡೀಸೆಲ್ ಮಾತ್ರ ಹಾಕುತ್ತಿವೆ. ಹೊರತಾಗಿ ಗ್ರಾಹಕರಿಗೆ ಕನಿಷ್ಠ ಸೌಲಭ್ಯಗಳಾದ ಶೌಚಾಲಯ, ಕುಡಿಯುವ ನೀರು, ಗಾಳಿ ವ್ಯವಸ್ಥೆ ಕೂಡ ನೀಡುತ್ತಿಲ್ಲ. ಗ್ರಾಹಕರು ವಾಹನಕ್ಕೆ ಹವಾ ಹಾಕಿ ಎಂದರೆ, ಯಂತ್ರ ಕೆಟ್ಟಿದೆ, ಏರ್ ಕಂಪ್ರಸರ್‌ಯಿಲ್ಲ, ಕೆಲಸಗಾರನಿಲ್ಲ ಎಂಬ ಸಬೂಬು ಹೇಳುತ್ತಾರೆ. ಕೆಲವೊಂದು ಕಡೆ ಹವಾ ಹಾಕಲು ಹಣ ಪಡೆಯಲಾಗುತ್ತದೆ.
ಹವಾಯಂತ್ರ ಕೆಟ್ಟು ಹೋಗಿವೆ: ನಗರದಲ್ಲಿರುವ ಭಾರತ ಪೆಟ್ರೋಲಿಯಂ, ಹಿಂದೂಸ್ತಾನ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಕಾರ್ಪೋರೇಶನ್ ಕಂಪನಿಯ ಬಹುತೇಕ ಪೆಟ್ರೋಲ್ ಬಂಕ್‌ಗಳಲ್ಲಿ ಕುಡಿಯುವ ನೀರು, ಶೌಚಾಲಯಗಳಿಲ್ಲ ಹಾಗೂ ಹವಾ ಹಾಕುವ ಯಂತ್ರಗಳು ಹೆಸರಿಗೆ ಮಾತ್ರ ಇವೆ. ಅವು ಕೆಟ್ಟು ಹೋಗಿ ಹಲವು ತಿಂಗಳುಗಳೇ ಆಗಿವೆ.
ಅವುಗಳ ದುರಸ್ತಿ ಮಾಡಿಸುವ ಸಾಹಸಕ್ಕೆ ಪೆಟ್ರೋಲ್ ಬಂಕ್‌ಗಳ ಮಾಲಕರು ಮುಂದಾಗಿಲ್ಲ. ಇನ್ನು ಹಳೆಯ ಪಿ.ಬಿ. ರಸ್ತೆಯ ಬಂಕಾಪುರ ಚೌಕ್ ಸಮೀಪದ ಇಂದಿರಾ ನಗರ ಬಳಿಯಿರುವ ಪೆಟ್ರೋಲ್ ಬಂಕ್‌ನಲ್ಲೊಂದರಲ್ಲಿ ಹವಾ ಯಂತ್ರ ಕೈಕೊಟ್ಟು ತಿಂಗಳುಗಳೇ ಗತಿಸಿವೆ.
* ಶಿವಶಂಕರ ಕಂಠಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್ ನಿಂದ ಹಲ್ಲೆ
Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ
By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್ ವೈ
MUST WATCH
ಹೊಸ ಸೇರ್ಪಡೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.