ರಂಗೇರುತ್ತಿದೆ ನಗರಸಭೆ ಚುನಾವಣೆ
Team Udayavani, Aug 24, 2018, 4:06 PM IST
ಕೊಪ್ಪಳ: ನಗರ, ಸ್ಥಳೀಯ ಸಂಸ್ಥೆಗಳ ಚುನಾವಣೆಯು ಭರ್ಜರಿ ರಂಗು ಪಡೆದಿದ್ದು, ಅದರಲ್ಲೂ ಕೊಪ್ಪಳ ನಗರಸಭೆಯ 31 ವಾರ್ಡ್‌ಗಳಲ್ಲಿ ರಾಜಕೀಯ ರಂಗು ಜೋರಾಗಿದೆ. ಮುಂಬರುವ ಲೋಕಸಭೆ ಚುನಾವಣೆ ದೂರದೃಷ್ಟಿಯಿಂದಾಗಿ ಶಾಸಕ, ಸಂಸದರೇ ಅಭ್ಯರ್ಥಿಗಳ ಗೆಲುವಿಗಾಗಿ ಅಖಾಡಕ್ಕಿಳಿದಿದ್ದಾರೆ. ಕಾಂಗ್ರೆಸ್ ಮಣಿಸಲು ಬಿಜೆಪಿ ಪ್ಲಾನ್ ಮಾಡಿಕೊಂಡಿದ್ದು, ದಳವೂ ಎದ್ದು ನಿಂತು ಕೈ ಎತ್ತಲು ಸಜ್ಜಾಗಿದೆ.
ನಗರಸಭೆ ಚುನಾವಣೆ ಶಾಸಕ, ಸಂಸದರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದಾರೆ. ಹಿಂದೆ 20 ವರ್ಷ ಕೊಪ್ಪಳದಲ್ಲಿ ದರ್ಬಾರ್ ನಡೆಸಿದ್ದ ಸಂಸದ ಸಂಗಣ್ಣ ಕರಡಿ ಹೇಗಾದರೂ ಮಾಡಿ ನಗರಸಭೆಯಲ್ಲಿ ಕಮಲದ ಭಾವುಟ ಹಾರಿಸಬೇಕೆನ್ನುವ ಸಿದ್ಧತೆಯಲ್ಲಿದ್ದಾರೆ.
ಕಳೆದ ಅವಧಿಗೆ 31 ವಾರ್ಡ್‌ಗಳ ಪೈಕಿ ಕಾಂಗ್ರೆಸ್ -13, ಬಿಜೆಪಿ-11, ಜೆಡಿಎಸ್-03, ಪಕ್ಷೇತರ-03 ಹಾಗೂ ಬಿಎಸ್‌ಆರ್-01ರಲ್ಲಿ ಗೆಲವು ಸಾಧಿಸಿದ್ದವು. ಸ್ಪಷ್ಟ ಬಹುಮತ ಬಾರದ ಕಾರಣ ಈ ಹಿಂದೆಯೇ ಕಮಲಕ್ಕೆ ಅಧಿ ಕಾರ ತಪ್ಪಿಸಲು ಕಾಂಗ್ರೆಸ್‌ನ 13 ಸದಸ್ಯರು ಜೆಡಿಎಸ್‌ನ ಮೂವರು ಸದಸ್ಯರ ಜೊತೆಗೆ ಓರ್ವ ಪಕ್ಷೇತರ ಸದಸ್ಯರನ್ನೂ ಒಳಗೊಂಡದಂತೆ ನಗರಸಭೆಯಲ್ಲಿ ಬಹುಮತ ಸಾ ಧಿಸಿ ಅಧಿಕಾರ ಅನುಭವಿಸಿತ್ತು. ಕಮಲ ಏನೆಲ್ಲಾ ಪ್ರಯತ್ನ ನಡೆಸಿದರೂ ಕೊನೆಗೆ ಅಧಿಕಾರಕ್ಕೆ ಬರಲೇ ಇಲ್ಲ. ಆ ವೇಳೆ ಬಿಜೆಪಿ ಅಷ್ಟೊಂದು ತಲೆಕೆಡಿಸಿಕೊಳ್ಳಲಿಲ್ಲ. ಕೊನೆಗೂ ಬಿಜೆಪಿ ವಿರೋಧ ಪಕ್ಷವಾಗಿಯೇ ಉಳಿಯಿತು.
ಲೋಕಸಭೆಗೆ ಕಣ್ಣು: ಮುಂದೆ ಲೋಕಸಭಾ ಚುನಾವಣೆ ಎದುರಾಗಲಿದೆ. ಹಾಲಿ ಸಂಸದರಿಗೆ ಈ ಸ್ಥಳೀಯ ಸಂಸ್ಥೆಗಳ ಚುನಾವಣೆಯು ಅಳಿವು-ಉಳಿವಿನ ಪ್ರಶ್ನೆಯಾಗಲಿದೆ. ಎರಡು ಬಾರಿ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರವೇ ಸಂಸದ ಸಂಗಣ್ಣ ಕರಡಿ ಅವರಿಗೆ ಮತ ಕೊಡುವಲ್ಲಿ ಹಿಂದೇಟಾಗಿದೆ. ಇದನ್ನರಿತ ಸಂಸದರು ಪ್ರತಿ ವಾರ್ಡಿನಲ್ಲೂ ಸುತ್ತಾಡಿ ಕೈಗೆ ಫೈಟ್ ಕೊಡುವ ಅಭ್ಯರ್ಥಿಗಳನ್ನು ಹುಡುಕಾಡಿ ಟಿಕೆಟ್ ನೀಡಿದ್ದಾರೆ. ಆದರೆ ಇದರಿಂದ ಬಿಜೆಪಿ ಪಾಳೆಯದಲ್ಲಿಯೇ ಕೆಲವು ಅಸಮಾಧಾನದ ಹೊಗೆ ಶುರುವಾಗಿದೆ. ಪಕ್ಷದಲ್ಲಿ ನಿಷ್ಠಾವಂತರಿದ್ದರೂ ನಮಗೆ ಟಿಕೆಟ್ ಕೊಡಲಿಲ್ಲ. ನಿನ್ನೆ ಮೊನ್ನೆ ಬಂದವರಿಗೆ ಮನ್ನಣೆ ದೊರೆಯುತ್ತಿದೆ ಎನ್ನುವ ವೇದನೆ ನಿಷ್ಠಾವಂತರಲ್ಲಿ ಕಾಣಿಸಿಕೊಂಡಿದ್ದು, ಕೆಲವು ವಾರ್ಡ್‌ನಲ್ಲಿ ಪಕ್ಷದ ಟಿಕೆಟ್ ಕೈ ತಪ್ಪಿದ್ದಕ್ಕೆ ಬಂಡಾಯದ ಬಾವುಟ ಹಾರಿಸಿ ನಾಮಪತ್ರ ಸಲ್ಲಿಸಿದ್ದಾರೆ. ಇದು ಬಿಜೆಪಿ ಪಾಳೆಯದಲ್ಲಿ ತಳಮಳ ಶುರು ಮಾಡಿದೆ.
ಇನ್ನೂ ಬಿಜೆಪಿ ಲೆಕ್ಕಾಚಾರ ನೋಡಿಕೊಂಡೆ ಕಾಂಗ್ರೆಸ್ ತನ್ನದೇ ಲೆಕ್ಕಾಚಾರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇಲ್ಲಿಯೂ ಬಂಡಾಯದ ಬಿಸಿ ಗೋಚರವಾಗಿದೆ. ಕೆಲವು ವಾರ್ಡ್‌ಗಳು ಮೀಸಲಾತಿ ಬದಲಾದ ಹಿನ್ನೆಲೆಯಲ್ಲಿ ಹಾಲಿ ಸದಸ್ಯರ ಸ್ಥಾನಪಲ್ಲಟವಾಗಿವೆ. ಕಾಂಗ್ರೆಸ್‌ನ ಮಹೇಂದ್ರ ಛೋಪ್ರಾ, ಮುತ್ತು ಕುಷ್ಟಗಿ, ಅಮ್ಜದ್ ಪಟೇಲ್, ರಾಮಣ್ಣ ಹದ್ದೀನ್ ಸೇರಿದಂತೆ ಹಾಲಿ ಸದಸ್ಯರು ಬೇರೆ ವಾರ್ಡಿನಿಂದ ಸ್ಪರ್ಧಿಸಿದ್ದಾರೆ. ಕಳೆದ ಅವಧಿಯಲ್ಲಿ ಬಿಜೆಪಿಯಿಂದ ಗೆದ್ದಿದ್ದ ಸದಸ್ಯರು ಕೊನೆಗೆ ಈ ಬಾರಿ ಕೈ ಟಿಕೆಟ್ ಪಡೆದಿದ್ದರೆ, ಕೆಲವರು ಕಾಂಗ್ರೆಸ್ ಸದಸ್ಯರು ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸಿದ್ದಾರೆ. ಇವರ ಮಧ್ಯೆ ಜೆಡಿಎಸ್ ಅಸ್ತಿತ್ವಕ್ಕಾಗಿ ಹೋರಾಟ ನಡೆಸಿದೆ. ಮೀಸಲಾತಿ ಸ್ಥಾನಪಲ್ಲಟ ದಳಕ್ಕೆ ತಲೆನೋವಾಗಿ ಪರಿಣಮಿಸಿದೆ. ಮುಂದೆ ಅತಂತ್ರವಾದರೂ ಕೈ-ದಳ ಮೇಲಾದರೂ ಅಚ್ಚರಿ ಪಡುವಂತಿಲ್ಲ. ಚುನಾವಣೆ ಶಾಸಕ, ಸಂಸದರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಕಾಂಗ್ರೆಸ್ ನಾನಾ ಕಸರತ್ತು ನಡೆಸಿ, ಬಹುಮತ ಸಾಧಿಸಲು ರಾಜಕೀಯ ರಣತಂತ್ರ ಎಣೆದಿದ್ದರೆ, ಬಿಜೆಪಿ ಅಧಿಕಾರದ ಗದ್ದುಗೆಗೆ ವಾರ್ಡ್ ನಲ್ಲಿ ಓಡಾಟ ನಡೆಸಿ, ಪಕ್ಕಾ ಕಟ್ಟಾಳುಗಳನ್ನು ಕಣಕ್ಕಿಳಿಸಿದೆ. ದಳವೂ ಎದ್ದು ನಿಲ್ಲಲು ಪ್ರಯತ್ನ ಮಾಡುತ್ತಿದೆ.
ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ 31 ವಾರ್ಡ್ ಗಳಿದ್ದು, 30534 ಪುರುಷರು, 30936 ಮಹಿಳೆಯರು, 6 ಇತರರು ಸೇರಿದಂತೆ ಒಟ್ಟಾರೆ 61476 ಮತದಾರರಿದ್ದಾರೆ.
ಸ್ಥಳೀಯ ಚುನಾವಣೆ ಅಂದ ಮೇಲೆ ಎಲ್ಲರೂ ಟಿಕೆಟ್ ಕೊಡಿ ಎಂದು ಕೇಳುತ್ತಾರೆ. ಆದರೆ ಗೆಲ್ಲುವ ಅಭ್ಯರ್ಥಿಗಳಿಗೆ ನಾವು ಟಿಕೆಟ್ ಕೊಡಬೇಕಾಗುತ್ತದೆ. ನಮ್ಮಲ್ಲಿ ಈ ಬಾರಿ ಅಂತಹ ಬಂಡಾಯವೇನೂ ಇಲ್ಲ. ಸಣ್ಣಪುಟ್ಟ ಸಮಸ್ಯೆಗಳಿದ್ದರೂ ಎಲ್ಲವೂ ಸರಿಹೋಗಲಿದೆ. ನಗರಸಭೆಯಲ್ಲಿ ನಾವು ಬಹುಮತ ಪಡೆಯಲಿದ್ದೇವೆ.
. ಸಂಗಣ್ಣ ಕರಡಿ, ಸಂಸದ, ಕೊಪ್ಪಳ.
ಆಡಳಿತ ಪಕ್ಷ ಎಂದ ಮೇಲೆ ಟಿಕೆಟ್ ಕೇಳುವವರ ಸಂಖ್ಯೆ ಹೆಚ್ಚಿರುತ್ತೆ. ಟಿಕೆಟ್ ಸಿಗದಿದ್ದಾಗ ಬಂಡಾಯ ಏಳುವುದು ಸಹಜ. ಆದರೂ ನಾವು ಈ ಬಾರಿ 22ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದ್ದೇವೆ. ಪಕ್ಷ ತೊರೆದು ಹೋದವರ ಸ್ಥಿತಿ ಮುಂದೆ ಗೊತ್ತಾಗಲಿದೆ. ನಮ್ಮದೆ ಬಹುಮತ ಬರಲಿದೆ.
.ಬಸವರಾಜ ಹಿಟ್ನಾಳ,
ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಕೊಪ್ಪಳ.
ಪಕ್ಷದ ಹೈಕಮಾಂಡ್ ಸೂಚನೆಯಂತೆ ಕೊಪ್ಪಳ ನಗರಸಭೆಗೆ 21 ವಾರ್ಡ್‌ಗಳಲ್ಲಿ ನಾವು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ. 15-16 ಸ್ಥಾನಗಳನ್ನು ನಾವು ಗೆಲ್ಲಲಿದ್ದೇವೆ. ಹಾಲಿ ಮೂವರು ಸದಸ್ಯರು ಸ್ಪರ್ಧೆಗಳಿದಿದ್ದು, ಏಲ್ಲಿಯೂ ಯಾರೊಂದಿಗೂ ಸ್ಥಳೀಯ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿಲ್ಲ.
.ವೀರೇಶ ಮಹಾಂತಯ್ಯನಮಠ,
ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ, ಕೊಪ್ಪಳ.
ದತ್ತು ಕಮ್ಮಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Chhattisgarh: ಐಇಡಿ ಸ್ಫೋ*ಟ: ಪೊಲೀಸ್ ಸಿಬ್ಬಂದಿಗೆ ಗಾಯ
Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು
Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.