Hubli; ಹಿಂದೂಗಳ ಹಳೇ ಅಯೋಧ್ಯೆ ಕೇಸ್‌ಗೆ ಮರು ಜೀವ; ವಿವಾದ
ರಾಮ ಮಂದಿರ ಸಂಭ್ರಮದ ನಡುವೆ ಹೊಸ ಬಿಕ್ಕಟ್ಟು
Team Udayavani, Jan 2, 2024, 1:25 AM IST
ಹುಬ್ಬಳ್ಳಿ/ಬೆಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಮುಹೂರ್ತ ಸನ್ನಿಹಿತ ವಾಗಿರುವಂತೆಯೇ ಹುಬ್ಬಳ್ಳಿಯಲ್ಲಿ 31 ವರ್ಷಗಳ ಹಿಂದೆ ನಡೆದಿದ್ದ ಅಯೋಧ್ಯೆ ಸಂಬಂಧಿತ ಗಲಭೆ ಪ್ರಕರಣಕ್ಕೆ ಮರುಜೀವ ಬಂದಿದ್ದು, ವ್ಯಕ್ತಿಯೊಬ್ಬರನ್ನು ಪೊಲೀಸರು ಬಂಧಿಸಿ ರುವುದು ವಿವಾದಕ್ಕೆ ಕಾರಣವಾಗಿದೆ.
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿಯೇ ಹಿಂದೂ ಕಾರ್ಯಕರ್ತರ ವಿರುದ್ಧ ರಾಜ್ಯದ ಕಾಂಗ್ರೆಸ್ ಸರಕಾರ ಇಂತಹ ಕ್ರಮಕ್ಕೆ ಮುಂದಾಗಿದೆ ಎಂದು ಹಿಂದೂ ಸಂಘಟನೆಗಳು, ಬಿಜೆಪಿ ವಾದಿಸಿವೆ. ಅದನ್ನು ಒಪ್ಪದ ರಾಜ್ಯ ಸರಕಾರ ಮತ್ತು ಪೊಲೀಸ್ ಇಲಾಖೆಗಳು ಹಳೇ ಪ್ರಕರಣಗಳ ಆರೋಪಿಗಳ ಪತ್ತೆ ಭಾಗವಾಗಿ ಈ ಬಂಧನ ನಡೆದಿದ್ದು, ಇದೊಂದು ಸಾಮಾನ್ಯ ಪ್ರಕ್ರಿಯೆ, ಇದರಲ್ಲಿ ವಿಶೇಷ ಇಲ್ಲ ಎಂದು ಸಮಜಾಯಿಷಿ ನೀಡಿವೆ.
ಏನಿದು ಘಟನೆ?
ದೇಶದ ಇತರ ಸ್ಥಳಗಳಂತೆ ಹುಬ್ಬಳ್ಳಿ ಯಲ್ಲಿಯೂ ಅಯೋಧ್ಯೆ ಘಟನೆ ಪ್ರತಿಧ್ವನಿಸಿತ್ತು. ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 13 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಪೊಲೀಸ್ ಮೂಲಗಳ ಪ್ರಕಾರ ಪ್ರಕರಣದಲ್ಲಿ ಐವರು ವಿಚಾರಣೆ ಎದುರಿಸಿ ಕೇಸ್ ಖುಲಾಸೆ ಮಾಡಿಕೊಂಡಿದ್ದರು. 2006ರಲ್ಲಿ ಪ್ರಕರಣವನ್ನು ಕೋರ್ಟ್ ದೀರ್ಘಾವಧಿ ಪ್ರಕರಣ ಎಂದು ಪರಿಗಣಿಸಿತ್ತು. ಉಳಿದ 8 ಜನರಲ್ಲಿ ಐವರು ಮೃತಪಟ್ಟಿದ್ದು, ಇನ್ನುಳಿದ ಮೂವರ ವಿರುದ್ಧ ಪೊಲೀಸರು ಈಗ ಕ್ರಮಕ್ಕೆ ಮುಂದಾಗಿದ್ದಾರೆ.
ಡಿ. 18ರಂದು ಒಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಇನ್ನೊಬ್ಬ ವ್ಯಕ್ತಿ ಅನಾರೋಗ್ಯ ಪೀಡಿತನಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಸುಧಾರಣೆಯ ಅನಂತರ ಹಾಜರಾಗುವಂತೆ ಸೂಚಿಸಲಾಗಿದೆ ಎನ್ನಲಾಗಿದೆ. ಡಿ. 29ರಂದು ಶ್ರೀಕಾಂತ ಪೂಜಾರನನ್ನು ಬಂಧಿಸಲಾಗಿದ್ದು, ಅವರಿಗೆ ಜಾಮೀನು ದೊರೆಯದೆ ನ್ಯಾಯಾಂಗ ವಶದಲ್ಲಿ ಇರಿಸಲಾಗಿದೆ.
ಉಗ್ರ ಹೋರಾಟ: ವಿಎಚ್‌ಪಿ
ಕರಸೇವಕರು ಹಾಗೂ ಹಿಂದೂಪರ ಕಾರ್ಯಕರ್ತರಿಗೆ ರಾಜ್ಯದ ಕಾಂಗ್ರೆಸ್ ಸರಕಾರ ಉದ್ದೇಶಪೂರ್ವಕವಾಗಿ ಕಿರುಕುಳ ನೀಡಲು ಮುಂದಾಗಿದೆ. ಸುಮಾರು 31 ವರ್ಷಗಳ ಅನಂತರ ಕೇಸ್ ಕೆದಕಿ, ಶ್ರೀರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿಯೇ ಹಿಂದೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸುತ್ತಿರುವುದು ಹಿಂದೂ ಕಾರ್ಯಕರ್ತರನ್ನು ಹೆದರಿಸುವ ಕೆಲಸವಾಗಿದೆ. ಇದಕ್ಕೆ ಹೆದರುವ ಮಾತೇ ಇಲ್ಲ. ಶ್ರೀಕಾಂತ ಪೂಜಾರ ಪರವಾಗಿ ನಿಲ್ಲುತ್ತೇವೆ. ಹಿಂದೂ ವಿರೋಧಿ ನೀತಿ ಖಂಡಿಸಿ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ವಿಹಿಂಪ ಹೇಳಿದೆ.
ಹಳೆಯ ಪ್ರಕರಣ
ಗಳನ್ನು ಇತ್ಯರ್ಥಗೊಳಿಸಲು ಪೊಲೀಸರಿಗೆ ಸೂಚನೆ ನೀಡ ಲಾಗಿತ್ತು. ಉದ್ದೇಶಪೂರ್ವಕವಾಗಿ ಯಾರನ್ನೂ ಗುರಿ ಮಾಡಿಲ್ಲ. ಅವು ಗಳನ್ನು ಇತ್ಯರ್ಥಪಡಿಸುವಾಗ ಆಕಸ್ಮಿಕ ವಾಗಿ ಈ ಪ್ರಕರಣವೂ ಬಂದಿದೆ. ಬಿಜೆಪಿಯವರು ಅದರ ಬಗ್ಗೆ ರಾಜ ಕೀಯ ಮಾಡುವುದು ಸರಿಯಲ್ಲ.
-ಡಾ| ಪರಮೇಶ್ವರ, ಗೃಹ ಸಚಿವ
30 ವರ್ಷದ ಹಳೆಯ
ಕೇಸ್‌ಗಳನ್ನು ಕೆದಕಿ ಹಿಂದೂ ಗಳನ್ನು ರಾಜ್ಯ ಸರಕಾರ ಗುರಿ ಮಾಡುತ್ತಿದೆ. ರಾಮ ಮಂದಿರ ಆಗಬೇಕೆಂಬ ಹೋರಾಟದಲ್ಲಿ ನಾನು ಭಾಗವಹಿಸಿದ್ದೆ. ನನ್ನನ್ನೂ ಬಂಧಿಸುತ್ತೀರಾ?
-ಆರ್. ಅಶೋಕ್, ವಿಪಕ್ಷ ನಾಯಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಮೈಕ್ರೋಫೈನಾನ್ಸ್ ಸಾಲ ಮೋಸ ಪ್ರಕರಣ ತನಿಖೆಗೆ ಮೂರು ತಂಡ ರಚನೆ: ಸತೀಶ ಜಾರಕಿಹೊಳಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಿ: ಜನಾರ್ದನ ರೆಡ್ಡಿ
ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ: ಖರ್ಗೆ ಹೆಸರು ಅನಗತ್ಯವಾಗಿ ತರಲಾಗಿದೆ; ಚೆನ್ನಾರೆಡ್ಡಿ
Hubballi: ಬಂಧಿಸಲು ಹೋದ ಪೊಲೀಸರ ಮೇಲೆ ದಾಳಿ… ಆರೋಪಿ ಕಾಲಿಗೆ ಗುಂಡೇಟು
Hubballi: ಸಿಲಿಂಡರ್ ಸ್ಫೋಟ ಪ್ರಕರಣ… ಮತ್ತೋರ್ವ ಕೊನೆಯುಸಿರು, ಮೃತರ ಸಂಖ್ಯೆ 8ಕ್ಕೆ ಏರಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kottigehara:ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ನೆಲಸಮ,ಕೆಲಸಕ್ಕೆ ಹೋಗಿದ್ದರಿಂದ ಮನೆಮಂದಿ ಪಾರು
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು
ಸಂಸ್ಕೃತ ಕಾಲೇಜಿನ 120ರ ಸಂಭ್ರಮದಲ್ಲಿ ಹಳೆ ವಿದ್ಯಾರ್ಥಿಗಳು ಒಟ್ಟಾಗಲಿ: ವಿ| ಪ್ರಸನ್ನಾಚಾರ್ಯ
Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.