ಹೋಮ್ ಗಾರ್ಡ್ಸ್ ಸೇವೆ ಸ್ಮರಣೀಯ: ಎಸ್ಪಿ
ಗೃಹರಕ್ಷಕರ ಕೊಡುಗೆಯೂ ಅತ್ಯಂತ ಪ್ರಮುಖ ಅಂಶವಾಗಿದೆ.
Team Udayavani, Dec 10, 2021, 5:49 PM IST
ಧಾರವಾಡ: ಪೊಲೀಸ್ ಇಲಾಖೆಯೊಂದಿಗೆ ಹೋಮ್ ಗಾರ್ಡ್‌ಗಳ ಬದ್ಧತೆಯ ಸೇವೆ ಸ್ಮರಣೀಯವಾಗಿದ್ದು, ಅವರಿಗೆ ಇಲಾಖೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧವಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ.ಕೃಷ್ಣಕಾಂತ ಹೇಳಿದರು.
ನಗರದಲ್ಲಿ ಗೃಹರಕ್ಷಕ ದಳದ ವತಿಯಿಂದ ಜಿಲ್ಲಾ ಗೃಹರಕ್ಷಕ ದಳದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ 59ನೇ ಅಖೀಲ ಭಾರತ ಗೃಹರಕ್ಷಕ ದಳದ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗೃಹರಕ್ಷಕದಳದ ಸಿಬ್ಬಂದಿ ತಮ್ಮ ಕರ್ತವ್ಯವನ್ನು ಪ್ರಾಮಾಣಿಕ ಹಾಗೂ ನಿಷ್ಠೆಯಿಂದ ಮಾಡುತ್ತಾರೆ.
ಪೊಲೀಸ್ ಸಿಬ್ಬಂದಿ ಕಡಿಮೆ ಇದ್ದಾಗ ಇಲಾಖೆಗೆ ಗೃಹರಕ್ಷಕದಳದ ಸಿಬ್ಬಂದಿ ಹಾಜರಾತಿಯಿಂದ ಧೈರ್ಯ ಬರುತ್ತದೆ. ಗೃಹರಕ್ಷಕ ಸಿಬ್ಬಂದಿ ಸಮವಸ್ತ್ರ ಹಾಕಿಕೊಂಡು ಸಮಾಜದ ರಕ್ಷಣೆಯ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿರುವುದು ಹೆಮ್ಮೆಯ ವಿಷಯ ಎಂದರು. ಕಳೆದ ವರ್ಷ ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಕೊರೊನಾ ವಾರಿಯರ್ಸ್ ಆಗಿ ಕರ್ತವ್ಯಗೈದ ಸೇವೆ ಶ್ಲಾಘನೀಯವಾಗಿದೆ. ವೈಯಕ್ತಿಕವಾಗಿ ಸಮಸ್ಯೆಗಳಿದ್ದರೆ ನೇರವಾಗಿ ಬಂದು ಭೇಟಿಯಾಗಬಹುದು. ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಗೃಹರಕ್ಷಕ ಸಿಬ್ಬಂದಿಗೆ ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿವೈಎಸ್‌ಪಿ ಹಾಗೂ ಗೃಹರಕ್ಷಕದಳದ ಶಿವಾನಂದ ಚನ್ನಬಸಪ್ಪನವರ ಮಾತನಾಡಿ, 59 ವರ್ಷಗಳ ಇತಿಹಾಸ ಹಿಂದಿರುಗಿ ನೋಡಿದರೆ ಬಡ ರಾಷ್ಟ್ರವಾಗಿದ್ದ ನಮ್ಮ ದೇಶ ಅಭಿವೃದ್ಧಿ ಹೊಂದಲು ಅನೇಕರು ಅನೇಕ ರೀತಿಯಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅದರಲ್ಲಿ ಗೃಹರಕ್ಷಕರ ಕೊಡುಗೆಯೂ ಅತ್ಯಂತ ಪ್ರಮುಖ ಅಂಶವಾಗಿದೆ. ಮುಂಬರುವ ದಿನಗಳಲ್ಲಿ ಗೃಹರಕ್ಷಕರು ಸರ್ಕಾರದ ಭಾಗವಾಗುವ ಸಾಧ್ಯತೆಗಳಿವೆ
ಎಂದರು.
ಜಿಲ್ಲಾ ಗೃಹರಕ್ಷಕದಳ ನಿವೃತ್ತ ಡೆಪ್ಯುಟಿ ಕಮಾಂಡರ್ ಬಿ.ಆರ್. ಕಂದಗಲ್ ಪ್ರಾಸ್ತಾವಿಕ ಮಾತನಾಡಿದರು. ಸ್ಟಾಫ್ ಆಫೀಸರ್ ಡಾ| ಎಂ.ಎ. ಮುಮ್ಮಿಗಟ್ಟಿ ವರದಿ ವಾಚನ ಮಾಡಿದರು. ಜಿಲ್ಲಾ ಗೃಹರಕ್ಷಕ ದಳದ ಮಾಜಿ ಕಮಾಂಡೆಂಟ್ ಸತೀಶ್ ಕುಮಾರ ಪಾಟೀಲ, ಗೃಹರಕ್ಷಕದಳದ ಸಹಾಯಕ ಬೋಧಕರಾದ ಟಿ.ಎ. ಬಾದಾಮಿ, ಆರ್.ಎಚ್. ಶಾಂತಗೇರಿ, ಜಿಲ್ಲಾ ಗೃಹರಕ್ಷಕದಳದ ಘಟಕಾ ಧಿಕಾರಿಗಳಾದ ಅಶೋಕ ಬಿ.ಗೌಡರ್, ಪ್ಲಟೂನ್ ಕಮಾಂಡರ್ ವಾದಿರಾಜ
ದೇಶಪಾಂಡೆ, ಸ್ಟಾಫ್ ಆಫೀಸರ್ ಹಾಗೂ ಜಿಲ್ಲೆಯ ಪೌರರಕ್ಷಣಾ ಚೀಫ್ ವಾರ್ಡನ್ ಸತೀಶ ಇರಕಲ್, ಜಿಲ್ಲಾ ಗೃಹರಕ್ಷಕದಳದ ಸಹಾಯಕ ಆಡಳಿತಾಧಿಕಾರಿ ಸತೀಶ್ ನಾಯಕ, ಸೆಕ್ಷನ್ ಲೀಡರ್ ಪ್ರಶಾಂತ ಲೋಕಾಪುರ, ಗೃಹರಕ್ಷಕ ಮತ್ತು ಗೃಹರಕ್ಷಕಿ ಸಿಬ್ಬಂದಿ ಇದ್ದರು. ಮುಖ್ಯಮಂತ್ರಿ ಪದಕ ಪಡೆದ 6 ಗೃಹರಕ್ಷಕರಿಗೆ ಹಾಗೂ ಅಧಿಕಾರಿಗಳಿಗೆ ನೆನಪಿನ ಕಾಣಿಗೆ ನೀಡಿ ಸನ್ಮಾನಿಸಲಾಯಿತು. ಡಾ| ಪ್ರಕಾಶ ಪವಾಡಶೆಟ್ಟಿ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Dharwad: ವಾಗ್ವಾದ ನಡೆದು ಎರಡು ಸುತ್ತು ಫೈರಿಂಗ್: ನಾಲ್ವರು ವಶಕ್ಕೆ
Waqf Land Issue: ಯಾವುದೇ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ: ಡಿಕೆ ಶಿವಕುಮಾರ್
MUST WATCH
ಹೊಸ ಸೇರ್ಪಡೆ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.