ಹೊನ್ನಾಪೂರ-ಅರವಟಗಿ ಗ್ರಾಪಂಗಳಿಗೆ ಅವಿರೋಧ ಆಯ್ಕೆ
Team Udayavani, Feb 4, 2021, 2:39 PM IST
ಅಳ್ನಾವರ: ತಾಲೂಕಿನ ನಾಲ್ಕು ಗ್ರಾಪಂಗಳ ಮೊದಲು 30 ತಿಂಗಳ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಬುಧವಾರ ಶಾಂತಿಯುತವಾಗಿ ನಡೆಯಿತು.
ಮಹಿಳಾ ಮೀಸಲಿದ್ದ ಹೊನ್ನಾಪೂರ ಮತ್ತು ಅರವಟಗಿ ಎರಡೂ ಗ್ರಾಪಂಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಪುರುಷ ಸ್ಥಾನಕ್ಕೆ ಮೀಸಲಿದ್ದ ಕಡಬಗಟ್ಟಿ ಮತ್ತು ಬೆಣಚಿ ಪಂಚಾಯಿತಿಗಳಿಗೆ ಚುನಾವಣೆ ನಡೆಯಿತು. ನಾಲ್ಕು ಗ್ರಾಮ ಪಂಚಾಯಿತಿಗಳ ಉಪಾಧ್ಯಕ್ಷ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು ವಿಶೇಷ. ಅರವಟಗಿ ಗ್ರಾಮ ಪಂಚಾಯಿತಿ: 14 ಸ್ಥಾನ ಬಲಾಬಲದ ಅ ವರ್ಗ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಅಮಿನಾಭಿ ಲಾಲಸಾಬ ಕಾಶಿನಗುಂಟಿ ಹಾಗೂ ಸಾಮಾನ್ಯ ವರ್ಗಕ್ಕೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಅಶೋಕ ಜೊಡಟ್ಟಿಯವರ ಅವಿರೋಧ ಆಯ್ಕೆಯಾದರು. ಅಧ್ಯಕ್ಷೆ ಅಮಿನಾಬಿ ಅವರು ಈಚೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕೂಡಾಸದಸ್ಯರಾಗಿ ಅವಿರೋಧ ಆಯ್ಕೆಯಾಗಿದ್ದರು.
ಎರಡು ಸ್ಥಾನಕ್ಕೆ ತಲಾ ಒಂದೊಂದು ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಚುನಾವಣಾಧಿಕಾರಿ ಪಿ.ಜಿ.ಜಾನಮಟ್ಟಿ ಈ ಆಯ್ಕೆ ಘೋಷಿಸಿದರು. ತಹಶೀಲ್ದಾರ್ ಅಮರೇಶ ಪಮ್ಮಾರ ಭೇಟಿ ನೀಡಿದ್ದರು. ಪಿಡಿಒ ಅಪ್ಪಣ್ಣ ಬೀಡಿಕರ, ಆಡಳಿತಾಧಿ ಕಾರಿ ಗಿರೀಶ ಕೋರಿ, ಎಸ್.ಎಫ್ ಸೋಜ ಇದ್ದರು.
ಹೊನ್ನಾಪೂರ: 12 ಸ್ಥಾನ ಬಲಾಬಲದ ಸಾಮಾನ್ಯ ವರ್ಗಕ್ಕೆ ಮೀಸಲಾದ ಅಧ್ಯಕ್ಷ ಸ್ಥಾನ ಖತುಜಾ ಮುಕು¤ಂಸಾಬ ಡೊನಸಾಲ, ಅ ವರ್ಗಕ್ಕೆ ಮೀಸಲಾದ ಉಪಾಧ್ಯಕ್ಷ ಸ್ಥಾನ ಮಹ್ಮದಫಾರುಕ, ಬಾಬುಸಾಬ ಅಂಬಡಗಟ್ಟಿ ಅವಿರೋಧ ಆಯ್ಕೆಯಾದರೆಂದು ಸಚುನಾವಣಾಧಿಕಾರಿ ಪ್ರಕಾಶ ಹಾಲವರ ಘೋಷಿಸಿದರು.
ಬೆಣಚಿ: 9 ಸ್ಥಾನ ಬಲಾಬಲದ ಗ್ರಾಮ ಪಂಚಾಯಿತಿಗೆ ಸಸಾಮಾನ್ಯ ವರ್ಗಕ್ಕೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಸಂದೀಪ ಭಗವಂತಗೌಡ ಪಾಟೀಲ, ಮಲ್ಲನಗೌಡ ಪಾಟೀಲ ಮಧ್ಯೆ ಸ್ಪರ್ಧೆ ನಡೆದು ಒಂದು ಮತದ ಅಂತರದಿಂದ ಸಂದೀಪ ಪಾಟೀಲ ವಿಜೇತರಾದರು. ಸಂದೀಪ ಪಾಟೀಲರಿಗೆ 5 ಮತ ಹಾಗೂ ಮಲ್ಲನಗೌಡ ಅವರಿಗೆ 4 ಮತ ಬಿದ್ದವು ಎಂದು ಚುನಾವಣಾಕಾರಿ ನಾಗರಾಜ ಗುರ್ಲಹೂಸೂರ ತಿಳಿಸಿದ್ದಾರೆ. ಅ ವರ್ಗಕ್ಕೆ ಮಹಿಳಾ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಗಂಗವ್ವ ಮಾರುತಿ ಮುಷ್ಟಗಿ ಅವಿರೋಧ ಆಯ್ಕೆಯಾದರು.
ಇದನ್ನೂ ಓದಿ : ವರೂರು ಗ್ರಾಪಂನಲ್ಲಿ ದಂಪತಿ ದರ್ಬಾರ್
ಕಡಬಗಟ್ಟಿ: 12 ಸ್ಥಾನ ಬಲಾಬಲದ ಗ್ರಾಮ ಪಂಚಾಯಿತಿಗೆ ಅ ವರ್ಗಕ್ಕೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಹುಲಿಕೇರಿ ಗ್ರಾಮದ ರಾಸೂಲಸಾಬ ಪೀರಸಾಬ ಡೆಂಕೆವಾಲೆ, ದಸಗೀರ ಹುನಶಿಕಟ್ಟಿ ಸ್ಪರ್ಧಿಸಿದ್ದರು. ಎರಡು ಮತಗಳ ಅಂತರದಿಂದ ಡಂಕೆವಾಲೆ ವಿಜೇತರಾದರು. ಸಾಮಾನ್ಯ ಮಹಿಳಾ ಸ್ಥಾನಕ್ಕೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ರೂಪಾ ಪ್ರವೀಣ ಕೋಟಿ ಅವಿರೋಧವಾಗಿ ಆಯ್ಕೆಯಾದರೆಂದು ಚುನಾವಣಾಧಿಕಾರಿ ಶ್ರೀಪಾಲ ಕುರಕುರಿ ತಿಳಿಸಿದ್ದಾರೆ.
ಫಲಿತಾಂಶ ಘೋಷಣೆ ಆದ ನಂತರ ಅಭಿಮಾನಿಗಳು ಗುಲಾಲ ಹಾಕಿ, ಸಿಹಿ ಹಂಚಿ ಸಂಭ್ರಮಿಸಿದರು. ಅರವಟಗಿ ಗ್ರಾಪಂ ಅಧ್ಯಕ್ಷೆ ಅಮೀನಾಭಿ ಕಾಶಿನಗುಂಟಿ ಮಾತನಾಡಿ, ಸರ್ವ ಸದಸ್ಯರ ಸಹಕಾರದಿಂದ ಗ್ರಾಮಗಳ ಸಮಗ್ರ ಸಅಭ್ಯುದಯಕ್ಕೆ ಶ್ರಮಿಸಿ ಮಾದರಿ ಪಂಚಾಯ್ತಿ ಮಾಡಲು ದುಡಿಯುವೆ ಎಂದರು.
ಬೆಣಚಿ ಗ್ರಾಪಂ ಅಧ್ಯಕ್ಷ ಸಂದೀಪ ಪಾಟೀಲ ಮಾತನಾಡಿ, ಬಡವರಿಗೆ ಸೂರು ಒದಗಿಸಲು, ಕುಡಿಯುವ ನೀರಿನ ಸಮರ್ಪಕ ಪೂರೈಕೆ, ರಸ್ತೆ, ಚರಂಡಿ ನಿರ್ಮಾಣ ಹಾಗೂ ಸ್ವತ್ಛತೆ ಆದ್ಯತೆ ನೀಡುವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Haryana: 11 ವರ್ಷ ಕಾನೂನು ಸಮರ-3 ಕೋಟಿ ರೂ. ಜೀವನಾಂಶ; 44 ವರ್ಷದ ದಾಂಪತ್ಯ ಅಂತ್ಯ!
Beguru Colony Movie: ಟೀಸರ್‌ನಲ್ಲಿ ಬೇಗೂರು ಕಾಲೋನಿ
ಸಾಕಿದ ನಾಯಿಗಾಗಿ ಬಾಯ್ ಫ್ರೆಂಡ್ ಜತೆ ಬ್ರೇಕಪ್ ಮಾಡಿಕೊಂಡ ಬಿಗ್ ಬಾಸ್ ಮಾಜಿ ಸ್ಪರ್ಧಿ
Udupi: ಅಂಬಲಪಾಡಿ ಓವರ್‌ಪಾಸ್ ಕಾಮಗಾರಿ ಆರಂಭ
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.