ಹೋಟೆಲ್ ಕ್ವಾರಂಟೈನ್ ದರ ನಿಗದಿ
ಉಪಹಾರ-ಊಟ ಸೇರಿ ದಿನಕ್ಕೆ 700 ರೂ.
Team Udayavani, May 16, 2020, 4:11 AM IST
ಹುಬ್ಬಳ್ಳಿ: ಹೊರ ರಾಜ್ಯಗಳಿಂದ ಆಗಮಿಸುವ ಜನರಲ್ಲಿ ಯಾವುದೇ ರೋಗ ಲಕ್ಷಣ ಹೊಂದಿಲ್ಲದೇ ಇರುವವರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸುವುದು ಕಡ್ಡಾಯವಾಗಿದೆ. ಸ್ವಂತ ವೆಚ್ಚದಲ್ಲಿ ಕ್ವಾರೆಂಟೈನ್‌ಗೆ ಮುಂದಾಗುವವರಿಗೆ ಜಿಲ್ಲಾಡಳಿತ ಅವಳಿ ನಗರದ ಹೋಟೆಲ್‌ಗಳ ದರ ನಿಗದಿ ಮಾಡಿ, ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶ ಹೊರಡಿಸಿದ್ದಾರೆ.
ಇತ್ತೀಚೆಗೆ ಧಾರವಾಡದಲ್ಲಿ ನಡೆದ ಹೋಟೆಲ್ ಮಾಲೀಕರ ಸಂಘದ ಪದಾಧಿಕಾರಿಗಳೊಂದಿಗಿನ ಸಭೆಯಲ್ಲಿ ಚರ್ಚಿಸಿ ಈ ದರಗಳನ್ನು ಕ್ವಾರಂಟೈನ್ ಸೌಲಭ್ಯಕ್ಕೆ ನಿಗದಿಗೊಳಿಸಲಾಗಿದೆ. ನಾನ್ ಎಸಿ ಕೊಠಡಿಗಳಲ್ಲಿ ಒಬ್ಬರಿಗೆ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟ ಸೇರಿ ದಿನವೊಂದಕ್ಕೆ 700ರೂ. ನಿಗದಿ ಮಾಡಲಾಗಿದೆ. ಇಬ್ಬರು ಶೇರಿಂಗ್ ಆಧಾರದಲ್ಲಿ ಒಂದೇ ಕೊಠಡಿಯಲ್ಲಿ ಇದ್ದರೆ 1000ರೂ. ಹಾಗೂ ಎಸಿ ಕೊಠಡಿಯಲ್ಲಿ ಶೇರಿಂಗ್ ಆಧಾರದಲ್ಲಿ ಇಬ್ಬರಿಗೆ ದಿನವೊಂದಕ್ಕೆ 1500ರೂ. ನಿಗದಿ ಪಡಿಸಲಾಗಿದೆ.
ಕಡಿಮೆ ದರದ ಹೋಟೆಲ್‌ಗಳು: ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟ ಸೇರಿ ದಿನವೊಂದಕ್ಕೆ ಒಬ್ಬರಿಗೆ 500ರೂ. ಹಾಗೂ ಇಬ್ಬರಿಗೆ ಶೇರಿಂಗ್ ಆಧಾರದಲ್ಲಿ 700ರೂ. ದರ ನಿಗದಿ ಪಡಿಸಲಾಗಿದೆ. ಹೋಟೆಲ್‌ಗಳ ಮಾಲೀಕರು ತಮ್ಮ ಹೋಟೆಲ್ ವಿಳಾಸ, ಲಭ್ಯ ಇರುವ ಕೊಠಡಿಗಳ ವರ್ಗಿಕರಣ ಮುಂತಾದವುಗಳ ಮಾಹಿತಿ ಮತ್ತು ತಮ್ಮ ಹೋಟೆಲ್‌ಗಳಲ್ಲಿ ಕ್ವಾರಂಟೈನ್ ಅಡಿ ತಂಗುವವರ ಕುರಿತು ಪೂರ್ಣ ವಿವರಗಳನ್ನು ಧಾರವಾಡ ಜಿಲ್ಲಾಧಿಕಾರಿ ಕಚೇರಿಗೆ ಒದಗಿಸಬೇಕು ಎಂದು ಸೂಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್ ಲಾಡ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.