Hubli; ಅಯ್ಯಪ್ಪ ಶಿಬಿರ ಅಗ್ನಿ ಆಕಸ್ಮಿಕ ಪ್ರಕರಣ; ಆರಕ್ಕೇರಿದ ಸಾವಿನ ಸಂಖ್ಯೆ
Team Udayavani, Dec 29, 2024, 1:11 PM IST
ಹುಬ್ಬಳ್ಳಿ: ನಗರದ ಅಚ್ಚವ್ವನ ಕಾಲೋನಿಯಲ್ಲಿ ನಡೆದಿದ್ದ ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದ ಒಂಭತ್ತು ಅಯ್ಯಪ್ಪಸ್ವಾಮಿ ಮಾಲಾಧಾರಿಗಳಲ್ಲಿ ರವಿವಾರ ಮತ್ತಿಬ್ಬರು ಗಾಯಾಳುಗಳು ಮೃತಪಟ್ಟಿದ್ದು, ಆ ಮೂಲಕ ಮೃತರ ಸಂಖ್ಯೆ ಆರಕ್ಕೆ ಏರಿದಂತಾಗಿದೆ.
ಕೆಎಂಸಿಆರ್ಐನಲ್ಲಿ ವಾರ್ಡ್ ಬಾಯ್ ಆಗಿದ್ದ ಧಾರವಾಡ ಸತ್ತೂರ ಆಶ್ರಯ ಕಾಲೋನಿಯ ಶಂಕರ ಪರಶುರಾಮ ಚವ್ಹಾಣ (29) ಹಾಗೂ ಸಾಯಿನಗರ ಅಚ್ಚವ್ವನ ಕಾಲೋನಿಯ ಮಂಜುನಾಥ ಸಂಜಯ ವಾಗ್ಮೋಡೆ (18) ಕೊನೆಯುಸಿರೆಳೆದಿದ್ದಾರೆ.
ಶಂಕರನು ತಂದೆ-ತಾಯಿ ಕಳೆದುಕೊಂಡಿದ್ದು, ಈತನು ಚಿಕ್ಕಮ್ಮನ ಬಳಿ ವಾಸಿಸುತ್ತಿದ್ದ. ವಿದ್ಯಾರ್ಥಿಯಾಗಿರುವ ಮಂಜುನಾಥ ಸೇರಿ ಮೊದಲ ಬಾರಿಗೆ ಅಯ್ಯಪ್ಪಸ್ವಾಮಿ ಕನ್ಯಾ ಮಾಲೆ ಧರಿಸಿದ್ದರು.
ಕಳೆದ ರವಿವಾರ ನಡೆದಿದ್ದ ಈ ಘಟನೆಯಲ್ಲಿ ಈಗಾಗಾಲೇ ನಾಲ್ವರು ಮಾಲಾಧಾರಿಗಳು ಮೃತಪಟ್ಟಿದ್ದಾರೆ. ರವಿವಾರ ತಡರಾತ್ರಿ 1:30 ಗಂಟೆಗೆ ಶಂಕರ ಹಾಗೂ ಬೆಳಗ್ಗೆ 10:15 ಗಂಟೆಗೆ ಮಂಜುನಾಥ ಮೃತಪಟ್ಟಿದ್ದು, ಆ ಮೂಲಕ ಗಾಯಾಳುಗಳ ಸಾವಿನ ಸಂಖ್ಯೆ ಆರಕ್ಕೇರಿದೆ. ಇನ್ನೂ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಬಾಲಕ ವಿನಾಯಕ ಬಾರಕೇರ ಎಂಬಾತ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ
Hubballi: ಬಂಧಿಸಲು ಹೋದ ಪೊಲೀಸರ ಮೇಲೆ ದಾಳಿ… ಆರೋಪಿ ಕಾಲಿಗೆ ಗುಂಡೇಟು
Hubballi: ಸಿಲಿಂಡರ್ ಸ್ಫೋಟ ಪ್ರಕರಣ… ಮತ್ತೋರ್ವ ಕೊನೆಯುಸಿರು, ಮೃತರ ಸಂಖ್ಯೆ 8ಕ್ಕೆ ಏರಿಕೆ
ದಕ್ಷಿಣ ಭಾರತದ ಕುಸ್ತಿ ಚಾಂಪಿಯನ್ಶಿಪ್: ಚಿನ್ನ ಗೆದ್ದ ಧಾರವಾಡದ ಹಳ್ಳಿ ಪೈಲ್ವಾನ್
Dharwad; ನಾಲಿಗೆ ಹರಿಬಿಡುವ ನಾಯಕರ ಮೇಲೆ ಕ್ರಮ ಆಗಬೇಕು: ಶಾಸಕ ಬೆಲ್ಲದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ISRO: ಜನವರಿ ತಿಂಗಳಲ್ಲಿ 100ನೇ ಉಡಾವಣೆ
Mangaluru: ಅಪರಾಧಿ ಹಿತೇಶ್ ಶೆಟ್ಟಿಗಾರ್ಗೆ ಮರಣ ದಂಡನೆ ಶಿಕ್ಷೆ
BJP ರಾಜ್ಯಾಧ್ಯಕ್ಷ ಪಟ್ಟ ಗುಪ್ತ ಸಮರ ಆರಂಭ! ಸ್ಥಾನ ಉಳಿಸಿಕೊಳ್ಳಲು ಬಿವೈವಿ ಕಸರತ್ತು
Covid Vaccine: ಪತ್ನಿ ಕೊಂದಿದ್ದವನ ಪತ್ತೆಗೆ ನೆರವಾದ ಕೋವಿಡ್ ಲಸಿಕೆ!
ಹೊಸ ವರ್ಷಕ್ಕೆ ಪುಷ್ಪಾಲಂಕೃತ ಧರ್ಮಸ್ಥಳ: ಒಂದು ಟನ್ ಹಣ್ಣು, ವಿವಿಧ ಬಗೆಯ ಹೂಗಳಿಂದ ಸಿಂಗಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.