ಏಷ್ಯಾದ 2ನೇ ಅತಿದೊಡ್ಡ ಮಾರುಕಟ್ಟೆ ಸ್ಥಿತಿ ಗಂಭೀರ
Team Udayavani, Mar 10, 2021, 5:20 PM IST
| ಶುಲ್ಕ ಕಡಿತ ಹಿನ್ನೆಲೆ; ಅರ್ಧಕ್ಕರ್ಧ ಇಳಿದ ಎಪಿಎಂಸಿ ಆದಾಯ | ಸೆಸ್ ಥೈಲಿ ಹಗುರ-ಹೆಚ್ಚಿದ ನಿರ್ವಹಣೆಯ ಭಾರ
ಹುಬ್ಬಳ್ಳಿ: ರಾಜ್ಯ ಸರಕಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ)ಗಳ ಅಧಿಕಾರ ವ್ಯಾಪ್ತಿ ಹಾಗೂ ಮಾರುಕಟ್ಟೆ ಶುಲ್ಕ ಕಡಿತಗೊಳಿಸಿದ್ದರಿಂದ ಎಪಿಎಂಸಿಗಳ ಆದಾಯ ಅರ್ಧಕ್ಕರ್ಧ ಇಳಿದಿದೆ. ಹೀಗಾಗಿ ಮೂಲಸೌಕರ್ಯಗಳ ನಿರ್ವಹಣೆದುಸ್ತರವಾಗಿದೆ. ಏಷ್ಯಾದ ಎರಡನೇಅತಿದೊಡ್ಡ ಮಾರುಕಟ್ಟೆ ಎಂಬ ಖ್ಯಾತಿ ಹೊಂದಿದ ಇಲ್ಲಿನ ಅಮರಗೋಳದ ಶ್ರೀ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಆರ್ಥಿಕ ಸ್ಥಿತಿ ಗಂಭೀರವಾಗತೊಡಗಿದೆ.
ರಾಜ್ಯ ಸರಕಾರ ಶೇ.1.50 ಇದ್ದ ಎಪಿಎಂಸಿ ಮಾರುಕಟ್ಟೆ ಶುಲ್ಕ(ಸೆಸ್)ವನ್ನು ಶೇ. 0.60ಕ್ಕೆಕಡಿತಗೊಳಿಸಿದ್ದು, ಇದರಿಂದ ಎಪಿಎಂಸಿಯಆದಾಯಕ್ಕೆ ಭಾರಿ ಹೊಡೆತಬಿದ್ದಿದೆ. ಜೊತೆಗೆ ಎಪಿಎಂಸಿ ಹೊರಗಡೆ ವ್ಯಾಪಾರ ಮಾಡಿದರೆ ಸೆಸ್ ಇಲ್ಲವಾಗಿದೆ. ಬಿಲ್ ಹಾಕಿದರೆ ಮಾತ್ರ ಕೆಲವರು ಸೆಸ್ ಕಟ್ಟುತ್ತಿದ್ದಾರೆ. ಹೀಗಾಗಿ ಎಪಿಎಂಸಿಯ ಆದಾಯದಲ್ಲಿ ಶೇ. 50ಕ್ಕೂಅಧಿಕ ಕಡಿತವಾಗಿದ್ದು, ಇದರಿಂದ ನಿರ್ವಹಣೆ ಮಾಡುವುದೇ ತುಂಬಾ ಕಷ್ಟವಾಗುತ್ತಿದೆ. ಸರಕಾರ ಎಪಿಎಂಸಿಗಳ ಆದಾಯ ಹೆಚ್ಚಳಕ್ಕೆ ಮುಂದಾಗದಿದ್ದರೆ ಹಾಗೂ ವಿಶೇಷ ಅನುದಾನ ನೀಡದಿದ್ದರೆ ಮುಂದಿನ ದಿನಗಳಲ್ಲಿಎಪಿಎಂಸಿಗಳು ಬಾಗಿಲು ಮುಚ್ಚಉವುದರಲ್ಲಿ ಸಂದೇಹವಿಲ್ಲ. ಈಗಾಗಲೇ ಆರ್ಥಿಕ ತೊಂದರೆಯಿಂದಾಗಿ ಉದ್ಯೋಗಿಗಳನ್ನುಕಡಿತಗೊಳಿಸುತ್ತಿದ್ದು, ಭದ್ರತಾ ಸಿಬ್ಬಂದಿ ಇನ್ನಿತರರನ್ನು ಕಡಿಮೆಗೊಳಿಸಲಾಗುತ್ತಿದೆ.
ಇದೇ ಸ್ಥಿತಿ ಮುಂದುವರಿದರೆ ನಿತ್ಯದ ಆಡಳಿತ ನಿರ್ವಹಣೆಗೂ ತೊಂದರೆ ತಪ್ಪಿದ್ದಲ್ಲ ಎನ್ನುವಂತಾಗಿದೆ. ತರಕಾರಿ, ಉಳ್ಳಾಗಡ್ಡಿ,ಆಲೂಗಡ್ಡೆಯ ಠೊಕ ವ್ಯಾಪಾರವು ಎಪಿಎಂಸಿಯಲ್ಲಿಯೇ ನಡೆದಿರುವುದರಿಂದ ಬಳಕೆದಾರರ ಶುಲ್ಕದಲ್ಲಿ ತಕ್ಕಮಟ್ಟಿನಲ್ಲಿ ಆದಾಯ ಬರುತ್ತಿದೆ. ಆದರೆ ಮಾರುಕಟ್ಟೆಶುಲ್ಕದಲ್ಲಿನ ಆದಾಯ ಗಣನೀಯವಾಗಿ ಕುಂಠಿತಗೊಂಡಿದ್ದರಿಂದ ಎಪಿಎಂಸಿ ನಿರ್ವಹಣೆ ಮಾಡುವುದು ಆಡಳಿತ ವರ್ಗಕ್ಕೆ ಕಷ್ಟಕರವಾಗಿದೆ.
ಉದ್ಯೋಗಿಗಳ ಕಡಿತ :
ಎಪಿಎಂಸಿ ತನ್ನ ಆದಾಯ ಕಡಿತಸರಿದೂಗಿಸಿಕೊಳ್ಳಲು ಹಾಗೂ ನಿರ್ವಹಣೆಮಾಡುವ ನಿಟ್ಟಿನಲ್ಲಿ ಸಿಬ್ಬಂದಿ ಕಡಿತಮಾಡಿದೆ. ಭದ್ರತಾ ಏಜೆನ್ಸಿ ಹಾಗೂಸಹಾಯಕ ಸಿಬ್ಬಂದಿ ಕಡಿತಗೊಳಿಸಿದೆ.
ಜೊತೆಗೆ ಭದ್ರತಾ ಸಿಬ್ಬಂದಿ, ಸ್ವತ್ಛತಾ ಸಿಬ್ಬಂದಿ,ಡಾಟಾ ಎಂಟ್ರಿ ಸೇರಿದಂತೆ ವಿದ್ಯುತ್,ನೀರು ನಿರ್ವಹಣೆಯ ಹೊರ ಗುತ್ತಿಗೆ ಸಿಬ್ಬಂದಿಯನ್ನೂ ಕೈಬಿಡಲಾಗಿದೆ.
ಅಕ್ಕಿ-ಗೋಧಿ ಸೆಸ್ ಕೂಡ ಇಲ್ಲ :
ಸರಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಪ್ರಮುಖವಾಗಿ ಅಕ್ಕಿ ಮತ್ತು ಗೋ ದಿಯ ಸೆಸ್ ಎಪಿಎಂಸಿಗೆಬರುತ್ತಿತ್ತು. ಅದು ಸಹ ನಿಂತಿದೆ. ಭಾರತ ಆಹಾರನಿಗಮ (ಎಫ್‌ಸಿಐ)ದ ಗೋದಾಮುಗಳಲ್ಲಿಇರಿಸಲಾಗುತ್ತಿದ್ದ ಅಕ್ಕಿ ಮತ್ತು ಗೋ ದಿಯನ್ನು ವಿವಿಧ ಜಿಲ್ಲೆಗಳಿಗೆ ಸರಬರಾಜು ಮಾಡಲಾಗುತ್ತಿತ್ತು. ಇವು ಸಂಬಂಧಪಟ್ಟಎಪಿಎಂಸಿಗಳಿಗೆ ಬರುತ್ತಿದ್ದವು. ಅದಕ್ಕೂ ಖೋತಾಆಗಿದೆ. ಇದರಿಂದಾಗಿ ಎಪಿಎಂಸಿಗೆ ಬರುತ್ತಿದ್ದ ಆದಾಯಕ್ಕೆ ದೊಡ್ಡ ಹೊಡೆತ ಬಿದ್ದಿದೆ.
ಎಪಿಎಂಸಿ ಮಾರುಕಟ್ಟೆ ಶುಲ್ಕ ಹಾಗೂ ಅಧಿಕಾರ ವ್ಯಾಪ್ತಿ ಕಡಿತದಿಂದ ಆದಾಯ ಅರ್ಧಕ್ಕರ್ಧ ಕುಸಿದಿದೆ. ಇದರಿಂದ ನಿರ್ವಹಣೆ ಮಾಡುವುದೇ ಕಷ್ಟವಾಗಿದೆ. ರಾಜ್ಯಸರಕಾರವು ಎಪಿಎಂಸಿಯಲ್ಲಿ ಸ್ವಚ್ಛತೆಯನ್ನು ಮಹಾನಗರ ಪಾಲಿಕೆಯಿಂದ, ನೀರು ಸರಬರಾಜು ಜಲಮಂಡಳಿಯಿಂದ ಹಾಗೂವಿದ್ಯುತ್ ನಿರ್ವಹಣೆಯನ್ನು ಹೆಸ್ಕಾಂನಿಂದ ಮಾಡಿಕೊಟ್ಟರೆ ಅನುಕೂಲವಾಗುತ್ತದೆ. ಸರಕಾರಕ್ಕೆ ಮನವಿ ಮಾಡಲಾಗಿದ್ದು, ಯಾವ ನಿರ್ಧಾರ ಕೈಗೊಳ್ಳುತ್ತದೆ ನೋಡಬೇಕು. – ಡಾ| ಕೆ. ಕೊಂಡಿಗೌಡ, ಪ್ರಭಾರ ಕಾರ್ಯದರ್ಶಿ, ಎಪಿಎಂಸಿ ಹುಬ್ಬಳ್ಳಿ
– ಶಿವಶಂಕರ ಕಂಠಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.