ಬಲಿಗೆ ಕಾದಿದೆ ಮತ್ತೂಂದು ಕಾಮಗಾರಿ?
ಕಾಮಗಾರಿ ಆರಂಭಕ್ಕೆ ಇನ್ನಷ್ಟು ಭದ್ರತಾ ಕ್ರಮಕ್ಕೆ ಸಂಬಂಧಿಸಿದವರು ಮುಂದಾಗಬೇಕಿದೆ
Team Udayavani, Oct 9, 2020, 4:50 PM IST
ಹುಬ್ಬಳ್ಳಿ: ಕೋರ್ಟ್ ವೃತ್ತದ ಬಳಿ ಇತ್ತೀಚೆಗೆ ಲಾರಿಯೊಂದು ಉರುಳಿಬಿದ್ದಿತ್ತು.
ಹುಬ್ಬಳ್ಳಿ: ಸ್ಮಾರ್ಟ್‌ಸಿಟಿ ಯೋಜನೆಯಡಿ ಇಂದಿರಾ ಗಾಜಿನ ಮನೆ ಆವರಣದಲ್ಲಿ ಕೈಗೊಂಡಿರುವ ಕಾಮಗಾರಿ ಬಾಲಕಿಯೊಬ್ಬಳ ಬಲಿ ಪಡೆದಿದೆ. ಇಲ್ಲಿನ ಕೋರ್ಟ್ ವೃತ್ತದ ಬಳಿ ಸ್ಮಾರ್ಟ್ ಸಿಟಿಯಡಿ ಕೈಗೊಂಡ ಬಹುಪಯೋಗಿ ಕಾರುನಿಲುಗಡೆ ಕಾಮಗಾರಿ ಆಳವಾದ ತಗ್ಗು ತೆಗೆದಿದ್ದು ಬಿಟ್ಟರೆ ಬೇರಾವ ಕಾಮಗಾರಿ ಆಗಿಲ್ಲ. ಇಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ, ಭಾರೀ ಅನಾಹುತ ಸಂಭವಿಸುವುದು ಗ್ಯಾರೆಂಟಿ.
ಬಹುಪಯೋಗಿ ಕಾರು ನಿಲುಗಡೆ ಕಟ್ಟಡ ನಿರ್ಮಾಣ ಕಾರ್ಯ ಆರಂಭಶೂರತನತೋರಿದ್ದು ಬಿಟ್ಟರೆ ಬೇರೇನೂ ಆಗಿಲ್ಲ. ಕಟ್ಟಡ ನಿರ್ಮಾಣಕ್ಕಾಗಿ ದೊಡ್ಡ ತಗ್ಗು ತೆಗೆಯಲಾಗಿದ್ದು,ಅದಕ್ಕೆ ಹೊಂದಿಕೊಂಡೇ ಹುಬ್ಬಳ್ಳಿ-ಹೊಸಪೇಟೆಹೆದ್ದಾರಿ ಇದ್ದು, ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಕಾಮಗಾರಿ ಸ್ಥಳದಲ್ಲಿ ಸುತ್ತಲೂತಗಡುಗಳನ್ನು ನಿಲ್ಲಿಸಿದ್ದು ಬಿಟ್ಟರೆ ಹೆಚ್ಚಿನ ಸುರಕ್ಷತೆ ಕ್ರಮ ಇಲ್ಲವಾಗಿದ್ದು, ಯಾವುದಾದರೂ ವಾಹನನಿಯಂತ್ರಣ ಕಳೆದುಕೊಂಡು ತಗ್ಗಿಗೆ ಬಿದ್ದರೆ ಆಗುವ ಅನಾಹುತ ದೊಡ್ಡ ಮಟ್ಟದ್ದಾಗಿಯೇ ಇರುತ್ತದೆ.
ಇತ್ತೀಚೆಗಷ್ಟೇ ಕೋರ್ಟ್ ವೃತ್ತದ ತಿರುವಿನಲ್ಲಿ ಭಾರಿ ಗಾತ್ರದ ಲಾರಿಯೊಂದು ಉರುಳಿ ಬಿದ್ದಿದ್ದು,ಕೇವಲ ಐದು ಅಡಿ ಅಂತರದಲ್ಲಿ ಸುಮಾರು 20 ಅಡಿಯಷ್ಟು ಆಳವಿರುವ ತಗ್ಗಿಗೆ ಬೀಳುವುದು ತಪ್ಪಿದೆ. ಮುಂದಿನ ದಿನಗಳಲ್ಲಿ ಅದ್ಯಾವ ಅನಾಹುತ ಕಾದಿದೆಯೋ ಎಂಬುದು ಅನೇಕರ ಆತಂಕವಾಗಿದೆ.ಗರ ಬಡಿದ ಯೋಜನೆ: ಹುಬ್ಬಳ್ಳಿಯಲ್ಲಿ ಮಿನಿ ವಿಧಾನಸೌಧ ಕಟ್ಟಡ ಉದ್ಘಾಟನೆಗೊಂಡ ಬಳಿಕ ವಾಹನ ನಿಲುಗಡೆ ಅವಕಾಶ ಇಲ್ಲವಾಗಿದೆ ಎಂಬ ಆಕ್ಷೇಪ ಹಿನ್ನೆಲೆಯಲ್ಲಿ, ಕೋರ್ಟ್ ವೃತ್ತದ ಬಳಿಯ ಜಾಗದಲ್ಲಿ ನಿಲುಗಡೆ ಅವಕಾಶ ಕಲ್ಪಿಸುವ ಉದ್ದೇಶದೊಂದಿಗೆ ಅಲ್ಲಿದ್ದ ಲೋಕೋಪಯೋಗಿ ಇಲಾಖೆ ಕಟ್ಟಡವನ್ನು ತೆರವುಗೊಳಿಸಲಾಗಿತ್ತು. ನಂತರ ಪಾಲಿಕೆ ಇದೇ ಜಾಗದಲ್ಲಿ ಬಹುಪಯೋಗಿ ಸಣ್ಣ ವಾಹನಗಳ ನಿಲುಗಡೆ ಕಟ್ಟಡ ನಿರ್ಮಾಣಕ್ಕೆ ಮುಂದಾಗಿತ್ತು.
ಬಹುಪಯೋಗಿ ವಾಹನ ನಿಲುಗಡೆ ಕಟ್ಟಡ ನಿರ್ಮಾಣ ನಿಟ್ಟಿನಲ್ಲಿ ಮಹಾನಗರ ಪಾಲಿಕೆ 2008-09ರಲ್ಲಿ ಅಂದಾಜು 47 ಕೋಟಿ ರೂ.ವೆಚ್ಚದಕಾಮಗಾರಿಗೆ ಟೆಂಡರ್ ಕರೆದಿತ್ತು. ಹೈದರಾಬಾದ್, ಕೊಲ್ಕತ್ತ ಮೂಲದ ಕಂಪೆನಿಗಳು ಆಸಕ್ತಿ ತೋರಿದ್ದವಾದರೂ, ಸಮೀಕ್ಷೆ ನಂತರ ಯೋಜನೆ ನಿರೀಕ್ಷಿತ ಯಶಸ್ಸು ಸಾಧ್ಯವಾಗದೆಂಬ ಉದ್ದೇಶದೊಂದಿಗೆ ಯೋಜನೆಯಿಂದ ಹಿಂದೆ ಸರಿದಿದ್ದವು. ಯಾರೂ ಮುಂದೆ ಬಾರದ ಹಿನ್ನೆಲೆಯಲ್ಲಿ ಯೋಜನೆ ಅಲ್ಲಿಗೆ ಸ್ಥಗಿತಗೊಂಡಿತ್ತು.
ಪಿಪಿಪಿ ಮಾದರಿ: ಅವಳಿನಗರ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾದ ನಂತರ ಬಹುಪಯೋಗಿ ಕಾರುಗಳ ನಿಲುಗಡೆ ಕಟ್ಟಡ ಮತ್ತೆ ಚಾಲ್ತಿಗೆ ಬಂದಿತ್ತು. ಅಂದಾಜು 50 ಕೋಟಿ ರೂ. ವೆಚ್ಚದ ಯೋಜನೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಕೈಗೊಳ್ಳಲು ಟೆಂಡರ್ ಕರೆಯಲಾಗಿತ್ತು. ಇದಕ್ಕೆ ಹುಬ್ಬಳ್ಳಿಯ ಶೇಜವಾಡಕರ್ ಎಂಟರ್‌ಪ್ರೈಸಸ್‌ನವರು ಒಬ್ಬರೇ ಬಿಡ್ ಮಾಡಿದ್ದರಿಂದ ಅವರಿಗೆ 2019ರಲ್ಲಿ ಕಾಮಗಾರಿ ಗುತ್ತಿಗೆ ನೀಡಲಾಗಿತ್ತು.ಗುತ್ತಿಗೆದಾರರು 40 ಕೋಟಿ ರೂ. ಭರಿಸಬೇಕು, ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ 10 ಕೋಟಿ ರೂ. ವಿನಿಯೋಗಕ್ಕೆ ಯೋಜಿಸಲಾಗಿತ್ತು. 24 ತಿಂಗಳೊಳಗೆ ಕಾಮಗಾರಿ ಪೂರ್ಣಕ್ಕೆ ಸೂಚಿಸಲಾಗಿತ್ತು. ಅದರಂತೆ 2021ರ ಫೆಬ್ರವರಿಗೆ ಕಾಮಗಾರಿ ಮುಗಿಯಬೇಕಿದೆ.
ಯೋಜನೆಯ ಶಂಕುಸ್ಥಾಪನೆ ಸಂದರ್ಭದಲ್ಲಿ ಗುತ್ತಿಗೆದಾರರು 24 ತಿಂಗಳು ಅಲ್ಲ 18 ತಿಂಗಳಲ್ಲಿಯೇ ಕಾಮಗಾರಿ ಪೂರ್ಣಗೊಳಿಸುವುದಾಗಿ ಘೋಷಿಸಿದ್ದರು. ಆದರೆ, ಸರಿಸುಮಾರು ಒಂದು ವರ್ಷ ಎಂಟು ತಿಂಗಳು ಕಳೆಯುತ್ತ ಬಂದರೂ, 20 ಅಡಿಗಿಂತ ಹೆಚ್ಚಿನ ಆಳದ ತಗ್ಗು ತೆಗೆದು, ಮಣ್ಣು ಮಾರಾಟವಾಗಿದ್ದು ಬಿಟ್ಟರೆ ಬೇರಾವ ಕಾಮಗಾರಿ ಪ್ರಗತಿ ಆದಂತೆ ಕಾಣುತ್ತಿಲ್ಲ. ಕಾಮಗಾರಿ ಮುಂದುವರಿಕೆಗೆ ಗುತ್ತಿಗೆದಾರರುಆಸಕ್ತಿ ತೋರುತ್ತಿಲ್ಲ ಎಂಬ ವಾದ ಒಂದು ಕಡೆಯಾದರೆ, ಯೋಜನೆಗೆ ಸಂಬಂಧಿಸಿದಂತೆ ಅಗತ್ಯವಿನ್ಯಾಸ ನೀಡುವಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಇಂಜಿನಿಯರ್‌ಗಳು ಉತ್ಸುಕತೆ ತೋರುತ್ತಿಲ್ಲವೆಂಬ ಆರೋಪವೂ ಕೇಳಿ ಬರುತ್ತಿದೆ.
ಪಾಲಿಕೆಗೆ 63ಲಕ್ಷ ರೂ. ಆದಾಯ: ಬಹುಪಯೋಗಿ ಕಾರು ನಿಲುಗಡೆ ಕಟ್ಟಡದ ಬೇಸ್ ಮೆಂಟ್‌ನಲ್ಲಿ ಮೂರು ಮಹಡಿ ಸೇರಿದಂತೆ ಒಟ್ಟು ಐದು ಅಂತಸ್ತಿನ ಕಟ್ಟಡ ಆಗಿದೆ ಎನ್ನಲಾಗುತ್ತಿದ್ದು, ಇದರಲ್ಲಿ ಸುಮಾರು 375 ಕಾರುಗಳು ನಿಲುಗಡೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಅದೇ ರೀತಿ ವಿವಿಧ ವಾಣಿಜ್ಯ ಕಟ್ಟಡಗಳು ಸೇರಿ ದಂತೆ ಮಾಲ್‌ಗಳು ಸಹ ಇದರಲ್ಲಿ ಬರುತ್ತವೆ. ಕಟ್ಟಡ ನಿರ್ಮಾಣ ಹಾಗೂ ನಿರ್ವಹಣೆಗೆ ಗುತ್ತಿಗೆದಾರರಿಗೆ 30 ವರ್ಷಗಳ ಲೀಸ್ ನೀಡಲಾಗಿದೆ.
ಕಟ್ಟಡ ಪೂರ್ಣಗೊಂಡ ನಂತರ ಕಟ್ಟಡದಲ್ಲಿ ವಾಹನ ನಿಲುಗಡೆ ಶುಲ್ಕ ಹಾಗೂ ಮಾಲ್ ಇನ್ನಿತರೆವಾಣಿಜ್ಯ ಕಟ್ಟಡಗಳಿಂದ ಬರುವ ಆದಾಯದಲ್ಲಿ ಮಹಾನಗರ ಪಾಲಿಕೆಗೆ ವಾರ್ಷಿಕ 63ಲಕ್ಷ ರೂ.ಗಳನ್ನು ನೀಡಬೇಕು. ಪ್ರತಿ ಮೂರು ವರ್ಷಕ್ಕೊಮ್ಮೆ ಶೇ.20 ದರ ಹೆಚ್ಚಳದ ಆಧಾರದಲ್ಲಿ ಪಾಲಿಕೆಗೆ ಹಣ ನೀಡಬೇಕಿದೆ. ಉಳಿದ ಆದಾಯವನ್ನು ಗುತ್ತಿಗೆದಾರರು ಪಡೆಯಬಹುದಾಗಿದೆ.
ಅಂದುಕೊಂಡಂತೆ ಯೋಜನೆ ಕಾಮಗಾರಿ ಕೈಗೊಂಡಿದ್ದರೆ, 2021ರ ಫೆಬ್ರವರಿ ವೇಳೆಗೆ ಬಹು ಪಯೋಗಿ ಕಾರು ನಿಲುಗಡೆ ಕಟ್ಟಡ ಉದ್ಘಾಟನೆಗೊಂಡು, ಮಾರ್ಚ್‌ನಿಂದ ಪಾಲಿಕೆಗೆ ಆದಾಯ ಶುರುವಾಗಬೇಕಿತ್ತು. ಫೆಬ್ರವರಿ ಬರಲು ಇನ್ನು ನಾಲ್ಕು ತಿಂಗಳು ಮಾತ್ರ ಬಾಕಿ ಇದ್ದರೂ, ತಗ್ಗು ತೆಗೆದಿದ್ದು ಬಿಟ್ಟರೆ ಬೇರೆ ಕಾಮಗಾರಿ ಆರಂಭವಾಗಿಲ್ಲ.
ಅನಾಹುತಕ್ಕೂ ಮೊದಲೇ ಎಚ್ಚೆತ್ತುಕೊಳ್ಳಬೇಕಿದೆ : ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಮಳೆ ನೀರು ಸಂಗ್ರಹಕ್ಕೆಂದು ತೆಗೆದಿದ್ದ ಗುಂಡಿ ಕಾಮಗಾರಿಗೆ ಸೂಕ್ತ ಭದ್ರತೆ ಇಲ್ಲದೆ ಕಾರಣ ಆಟವಾಡಲು ತೆರಳಿದ್ದ ಮೂವರು ಮಕ್ಕಳು ಗುಂಡಿಗೆ ಬಿದ್ದಿದ್ದರಾದರೂ, ಇಬ್ಬರು ಮಕ್ಕಳನ್ನು ರಕ್ಷಿಸಲಾಗಿದ್ದು, ಒಬ್ಬ ಬಾಲಕಿ ಮೃತಪಟ್ಟಿದ್ದಳು. ಆದರೆ, ಕೋರ್ಟ್ ವೃತ್ತದ ಬಳಿ ನಿರ್ಮಾಣ ಹಂತದಲ್ಲಿರುವ ಬಹುಪಯೋಗಿ ಕಾರು ನಿಲುಗಡೆ ಕಟ್ಟಡ ಜಾಗದಲ್ಲಿ ಆಳವಾದ ತಗ್ಗು ತೆಗೆಯಲಾಗಿದ್ದು, ಸೂಕ್ತ ಭದ್ರತಾ ವ್ಯವಸ್ಥೆ ಇಲ್ಲವಾಗಿದೆ. ತಡರಾತ್ರಿ ವೇಳೆ ಇಲ್ಲವೆ ಬೆಳಗಿನ ವೇಳೆ ವಾಹನ ಒಂದಿಷ್ಟು ಲಯ ತಪ್ಪಿ ಆಳವಾದ ತಗ್ಗಿಗೆ ಬಿದ್ದರೆ ದೊಡ್ಡ ಅನಾಹುತವೇ ಘಟಿಸಲಿದ್ದು, ಕಾಮಗಾರಿ ಆರಂಭಕ್ಕೆ ಇನ್ನಷ್ಟು ಭದ್ರತಾ ಕ್ರಮಕ್ಕೆ ಸಂಬಂಧಿಸಿದವರು ಮುಂದಾಗಬೇಕಿದೆ.
-ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.