ಹು-ಧಾ ಪಾಲಿಕೆ ಚುನಾವಣೆಗೆ ಅಖಾಡ ಸ್ಪಷ್ಟ; ಇನ್ನೇನಿದ್ದರೂ ಮತ ಸಮರ

82 ಸ್ಥಾನಗಳಿಗೆ 420 ಅಭ್ಯರ್ಥಿಗಳ ಕಾದಾಟ ಕೈ-ಕಮಲದಲ್ಲಿ ಮುಂದುವರಿದ ಬಂಡಾಯ ಬಿಸಿ

Team Udayavani, Aug 27, 2021, 3:01 PM IST

vhntyhty

ವರದಿ: ಅಮರೇಗೌಡ ಗೋನವಾರ

ಹುಬ್ಬಳ್ಳಿ: ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಟಿಕೆಟ್‌ ಪಡೆಯುವಿಕೆ ಸರ್ಕಸ್‌, ನಾಮಪತ್ರ ಹಿಂಪಡೆಯುವಿಕೆ ಸಂಧಾನ, ಒತ್ತಡ ಯತ್ನ ಮುಗಿದಿದೆ. ಎದುರಾಳಿಗಳನ್ನು ಸ್ಪರ್ಧೆಯಿಂದ ನಿವೃತ್ತಿಗೊಳಿಸುವುದು ಹೊರತು ಪಡಿಸಿ ಸ್ಪರ್ಧಾ ಕಣ ಸ್ಪಷ್ಟ ರೂಪ ಪಡೆದಿದೆ. ಇನ್ನೇನಿದ್ದರೂ ಮತ ಸಮರ ಮಾತ್ರ.

ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಹಲವು ಕಡೆಗಳಲ್ಲಿ ಬಂಡಾಯದ ಬಿಸಿ ಮುಂದುವರಿದಿದೆ. ಬಂಡಾಯ ಅಭ್ಯರ್ಥಿಗಳ ನಾಮಪತ್ರ ಹಿಂತೆಗೆಯುವಂತೆ ಮಾಡುವ ಎರಡು ಪಕ್ಷಗಳ ಮುಖಂಡರು ನಡೆಸಿದ ಯತ್ನಗಳು ವಿಫಲವಾಗಿದ್ದು, ಕೆಲವೊಂದು ವಾರ್ಡ್‌ಗಳಲ್ಲಿ ಎರಡು ಪಕ್ಷಗಳ ಅಧಿಕೃತ ಅಭ್ಯರ್ಥಿಗಳಿಗೆ ಅಡ್ಡಿಯಾಗುವ ಆತಂಕ ಎದುರಾಗಿದೆ. ಈ ಬಾರಿಯ ಪಾಲಿಕೆ ಚುನಾವಣೆಗೆ ಕಳೆದ ಬಾರಿಗೆ ಹೋಲಿಸಿದರೆ ಪಕ್ಷಗಳ ಸಂಖ್ಯೆಯೂ ಹೆಚ್ಚಳವಾಗಿದೆ.  ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌, ಬಿಎಸ್‌ಪಿ, ಎಡಪಕ್ಷಗಳ ಜತೆಗೆ ಆಮ್‌ಆದ್ಮಿ ಪಕ, ಎ‌Ò ಐಎಂಐಎಂ, ಕರ್ನಾಟಕ ರಾಷ್ಟ್ರ ಸಮಿತಿ, ಉತ್ತಮ ಪ್ರಜಾಕೀಯ, ಕರ್ನಾಟಕ ಜನಸೇನಾ ಶಕ್ತಿ, ಕರ್ನಾಟಕ ಶಿವಸೇನಾ, ಆರ್‌ಪಿಐ, ಎಸ್‌ ಡಿಪಿಐ ಪಕ್ಷಗಳ ಅಭ್ಯರ್ಥಿಗಳು ಕಣಕ್ಕಿಳಿದಿದ್ದು, ಪಕ್ಷೇತರರು ಅನೇಕ ಕಡೆ ಸ್ಪರ್ಧೆಗಿಳಿದಿದ್ದಾರೆ.

ನಾಯಕರ ಯತ್ನ ವಿಫಲ: ಪಾಲಿಕೆ ಚುನಾವಣೆಯಲ್ಲಿ ಟಿಕೆಟ್‌ ದೊರೆಯದ ಸಿಟ್ಟಿಗೆ ಕೆಲವರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿರಬಹುದು. ಅವರು ನಮ್ಮದೇ ಪಕ್ಷದವರಾಗಿದ್ದು, ಅವರನ್ನು ಕರೆದು ಚರ್ಚಿಸುತ್ತೇವೆ. ತಿಳಿ ಹೇಳುತ್ತೇವೆ, ಪಕ್ಷದಲ್ಲಿ ಮುಂದುವರಿಯುವ, ನಾಮಪತ್ರ ಹಿಂಪಡೆಯುವ ನಿಟ್ಟಿನಲ್ಲಿ ಮನವೊಲಿಸುವುದಾಗಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರು ಹೇಳಿದ್ದರಾದರೂ, ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಗುರುವಾರ ನಿರೀಕ್ಷಿತ ರೀತಿಯಲ್ಲಿ ಬಂಡಾಯ ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯದೆ ಪಕ್ಷದ ಆದೇಶ ಧಿಕ್ಕರಿಸಿ ಕಣದಲ್ಲುಳಿದಿದ್ದಾರೆ.

ಬಂಡಾಯ ಅಭ್ಯರ್ಥಿಗಳನ್ನು ಕಣದಿಂದ ಹಿಂದೆ ಸರಿಯುವಂತೆ ಮಾಡಲೇಬೇಕೆಂದು ಅಧಿಕೃತ ಅಭ್ಯರ್ಥಿಗಳು ತಮ್ಮ ಪಕ್ಷಗಳ ನಾಯಕರ ಬೆನ್ನು ಬಿದ್ದಿದ್ದರು. ಬಂಡಾಯ ಅಭ್ಯರ್ಥಿಗಳು ಪಡೆಯುವ ಪ್ರತಿ ಮತವೂ ತಮ್ಮದೇ ಬಿಟ್ಟಿಯದ್ದಾಗಿದ್ದು, ಇದರಿಂದ ಎದುರಾಳಿಗಳಿಗೆ ಲಾಭ ಮಾಡಿ ಕೊಡಲಿದೆ. ಹೇಗಾದರೂ ಮಾಡಿ ಬಂಡಾಯ ಅಭ್ಯರ್ಥಿಗಳ ಮನವೊಲಿಕೆ ಇಲ್ಲವೆ ಒತ್ತಡ ತಂದಾದರೂ ನಾಮಪತ್ರ ಹಿಂಪಡೆಯುವಂತೆ ಒತ್ತಾಯಿಸಿದ್ದರು. ವಿಶೇಷವಾಗಿ ಬಿಜೆಪಿಯಲ್ಲಿ ಕಾರ್ಯಕರ್ತರು ಪಕ್ಷದ ಗೆರೆ ದಾಟುವುದು ಕಡಿಮೆ. ಬಂಡಾಯಗಾರರಿಗೆ ಮನವರಿಕೆ ಕಾರ್ಯ ಮಾಡುತ್ತಿದ್ದು, ಬಹುತೇಕರು ನಾಮಪತ್ರ ಹಿಂಪಡೆಯುವ ವಿಶ್ವಾಸವಿದೆ ಎಂದು ನಾಯಕರು ಹೇಳಿದ್ದರು. ಅಷ್ಟೇ ಅಲ್ಲ ಎಲ್ಲ ರೀತಿಯ ಕಸರತ್ತುಗಳಿಗೆ ಮುಂದಾಗಿದ್ದರಾದರೂ ಬಂಡಾಯವಾಗಿ ಸ್ಪರ್ಧಿಸಿರುವ ಅನೇಕರು ನಾಯಕರ ಸಂಪರ್ಕಕ್ಕೂ ಸಿಗದೆ ಮೊಬೈಲ್‌ಸ್ವಿಚ್‌ ಆಫ್‌ ಮಾಡಿದ್ದರು ಎನ್ನಲಾಗಿದೆ.

ಸ್ಪರ್ಧಾ ಕಣದಲ್ಲಿ ಬಿಜೆಪಿಗೆ ಸುಮಾರು 9 ಜನ ಬಂಡಾಯ ಅಭ್ಯರ್ಥಿಗಳ ಬಿಸಿ ತಾಗಿದ್ದು, ಸುಮಾರು 13 ಜನ ಬಂಡಾಯ ಅಭ್ಯರ್ಥಿಗಳು ಪಕ್ಷದ ಸೂಚನೆ ಪಾಲಿಸಿ ನಾಮಪತ್ರ ಹಿಂಪಡೆದಿದ್ದಾರೆಂಬುದು ಬಿಜೆಪಿ ಹೇಳಿಕೆ. ಮಾಜಿ ಮಹಾಪೌರ ಮಂಜುಳಾ ಅಕ್ಕೂರ, ಮಾಜಿ ಉಪ ಮಹಾಪೌರ ಲಕ್ಷ್ಮೀ ಉಪ್ಪಾರ, ಪಾಲಿಕೆ ಮಾಜಿ ಸದಸ್ಯ ಹೂವಪ್ಪ ದಾಯಗೋಡಿ, ಮಂಜು ನಡಟ್ಟಿ, ವಿಜಯಕುಮಾರ, ಮಂಜುನಾಥ, ಯಶೋಧಾ ಗಂಡಗಾಳೇಕರ, ಸಂತೋಷ ಶೆಟ್ಟಿ ಅವರುಸ್ಪರ್ಧೆಯಲ್ಲಿಮುಂದುವರಿದಿರುವುದು ಬಿಜೆಪಿ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ.

ಅಧಿಕೃತ ಅಭ್ಯರ್ಥಿಗಳು ಏನಾದೀತೆಂಬ ಆತಂಕಕ್ಕೊಳಗಾಗುವಂತೆ ಮಾಡಿದೆ. ಕಾಂಗ್ರೆಸ್‌ಗೆ 8 ಅಭ್ಯರ್ಥಿಗಳು ಬಂಡಾಯ ಸಾರಿದ್ದಾರೆ. ಪಕ್ಷದ ನಾಯಕರ ಒತ್ತಡವನ್ನು ಲೆಕ್ಕಿಸದೆ ಪಾಲಿಕೆ ಮಾಜಿ ಸದಸ್ಯ ಗಣೇಶ ಟಗರಗುಂಟಿ ಪಕ್ಷೇತರ ಸದಸ್ಯರಾಗಿ ಕಣದಲ್ಲಿ ಉಳಿದಿರುವುದು, ವಾರ್ಡ್‌ 71ರ ಕಾಂಗ್ರೆಸ್‌ಅಧಿಕೃತ ಅಭ್ಯರ್ಥಿಗೆ ಆತಂಕ ಮೂಡಿಸತೊಡಗಿದೆ ಎನ್ನಲಾಗಿದೆ. ಅದೇ ರೀತಿ ವಾರ್ಡ್‌ 52ರಲ್ಲಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಚೇತನ ಹಿರೇಕೆರೂರು ಪಕ್ಷೇತರರಾಗಿಕಣದಲ್ಲಿದ್ದು,ಕಾಂಗ್ರೆಸ್‌ಅಭ್ಯರ್ಥಿ ಪ್ರಕಾಶ ಕ್ಯಾರಕಟ್ಟಿ ಹೆಚ್ಚು ಬೆವರಿಳಿಸಬೇಕಿದೆ. ಉಳಿದಂತೆ ಚಂದ್ರಿಕಾ ಮೇಸ್ತ್ರಿ, ಶಫಿ ಯಾದಗಿರಿ, ಶೋಭಾ ಕಮತರ, ರಶೀದ್‌ಖಾನ್‌, ಹೇಮಲತಾ ಹಿರೇಮಠ ಅವರ ಪಕ್ಷೇತರರಾಗಿ ಕಣದಲ್ಲುಳಿದಿರುವುದು ಕಾಂಗ್ರೆಸ್‌ ಅಧಿಕೃತ ಅಭ್ಯರ್ಥಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ನಾಮಪತ್ರ ಸಲ್ಲಿಸುವ ಸಂದರ್ಭದಲ್ಲೇ ಪಾಲಿಕೆ ಆವರಣದಲ್ಲೇ ಪಕ್ಷದ ಅಭ್ಯರ್ಥಿಯೊಬ್ಬರನ್ನು ತಡೆದಿದ್ದ ರಾಷ್ಟ್ರೀಯ ಪಕ್ಷವೊಂದರ ಮಹಾನಗರ ಜಿಲ್ಲಾಧ್ಯಕ್ಷರು ನಾಮಪತ್ರ ಸಲ್ಲಿಕೆ ಬೇಡ ಎಂದು ಹಣದ ಬೇಡಿಕೆ ಮುಂದಿರಿಸಿದ್ದರು ಎನ್ನಲಾಗಿದೆ. ಅದೇ ರೀತಿ ಹುಬ್ಬಳ್ಳಿಯ ಎರಡು ಪ್ರತಿಷ್ಠಿತ ವಾರ್ಡ್‍ಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸದ ರೀತಿಯಲ್ಲಿ ತೀವ್ರ ಒತ್ತಡ ತರಲಾಗಿತ್ತು ಎನ್ನಲಾಗಿದೆ. ವಾರ್ಡ್‌ವೊಂದರ ಅಭ್ಯರ್ಥಿ ಅವಿರೋಧ ಆಯ್ಕೆಗೆಂದು ಶತಾಯಗತಾಯ ಯತ್ನಿಸಿದ್ದು, ಕಾಂಗ್ರೆಸ್‌ನಿಂದ ನಾಮಪತ್ರ ಸಲ್ಲಿಸಲಿದ್ದಾರೆಂಬ ಅಭ್ಯರ್ಥಿ ಮೇಲೆ ತೀವ್ರ ಒತ್ತಡ ತಂದು ಟಿಕೆಟ್‌ ಪಡೆಯದಂತೆ ಮಾಡಿದ್ದರೆನ್ನಲಾಗಿದೆ. ಕೊನೆಗೂ ಅವಿರೋಧ ಆಯ್ಕೆಗೆ ಅವಕಾಶ ಕೊಡದ ರೀತಿಯಲ್ಲಿ ಕಾಂಗ್ರೆಸ್‌  ಪಕ್ಷ ಹೊರಗಿನವರು ಹಾಗೂ ಸ್ಥಳೀಯರೊಬ್ಬರನ್ನು ಎರಡು ವಾರ್ಡ್‌ಗಳಿಗೆ ಅಭ್ಯರ್ಥಿಯಾಗಿಸಿದ್ದು, ನಾಮಪತ್ರ ಸಲ್ಲಿಕೆ ದಿನದಿಂದಲೇ ಆ ಇಬ್ಬರು ಅಭ್ಯರ್ಥಿಗಳನ್ನು ‌ ಬೇರೆ ಕಡೆ ಇರಿಸಲಾಗಿತ್ತು ಎನ್ನಲಾಗಿದೆ. ನಾಮಪತ್ರ ಸಲ್ಲಿಸದಂತೆ, ನಾಮಪತ್ರ ಹಿಂಪಡೆಯುವಂತೆ ಅಭ್ಯರ್ಥಿ ಅಷ್ಟೇ ಅಲ್ಲ ಅವರ ‌ ಕುಟುಂಬದವರು, ಸಂಬಂಧಿಕರ ಮೇಲೂ ಒತ್ತಡ ತರುವ ಯತ್ನಗಳು ನಡೆದಿವೆ ಎಂದು ಹೇಳಲಾಗುತ್ತಿದೆ. ಜತೆಗೆ ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿಗೆ ಹಣದ ‌ ಆಮಿಷ ತೋರಲಾಗಿತ್ತು, ಒತ್ತಡ ತಂದು ಬೆದರಿಕೆ ಹಾಕಲಾಗಿತ್ತೆಂದು ಆ ಪಕ್ಷ ಮುಖಂಡರೇ ಆರೋಪಿಸಿದ್ದರು. ಇಷ್ಟೆಲ್ಲಾ ಬೆಳವಣಿಗೆಗಳ ನಡುವೆಯೂ ಎಲ್ಲಿಯೂ ಅವಿರೋಧಕ್ಕೆ ಅವಕಾಶವಾಗಿಲ್ಲ.

ಇನ್ನೇನಿದ್ದರೂ ಮತಯುದ್ಧ: ಪಾಲಿಕೆ ಚುನಾವಣೆ ಅಖಾಡ ಗು‌ ರುವಾರದಿಂದ ಸ್ಪಷ್ಟ ರೂಪ ಪಡೆದಿದೆ. ಇನ್ನೇನಿದ್ದರೂ ಮತ ಯುದ್ಧ ಮಾತ್ರ. ಈಗಾಗಲೇ ಅನೇಕ ಅಭ್ಯರ್ಥಿಗಳು ಮನೆ, ಮನೆ ಪ್ರಚಾರ ಆರಂಭಿಸಿದ್ದಾರೆ. ಚುನಾವಣಾ ತಂತ್ರಗಾರಿಕೆ ಶುರುವಿಟ್ಟುಕೊಂಡಿದ್ದಾರೆ. ಯಾವ ಅಭ್ಯರ್ಥಿಯಿಂದ ತನಗೆ ಮತ ನಷ್ಟ ಆಗಲಿದೆ ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದು, ಅದನ್ನು ಹೇಗೆ ನಿಭಾಯಿಸಬೇಕು, ಇರುವ ಸವಾಲುಗಳನ್ನು ಮೆಟ್ಟಿ ನಿಂತು ಗೆಲುವು ತಮ್ಮದಾಗಿಸಬೇಕೆಂಬ ಕಾರ್ಯತಂತ್ರ ರೂಪಿಸುವಲ್ಲಿ ತೊಡಗಿದ್ದಾರೆ. ಮತದಾನಕ್ಕೆಉಳಿದಿರುವುದುಕೇವಲ 8 ದಿನ ಮಾತ್ರ ಬಾಕಿ ಇದೆ ಅಷ್ಟರೊಳಗೆ ಅಭ್ಯರ್ಥಿಗಳು ವಾರ್ಡ್‌ನಲ್ಲಿ ಮತದಾರರ ಓಲೈಕೆ ಕಾರ್ಯ ಮಾಡ ‌ಬೇಕಿದೆ. ಪಾಲಿಕೆ ಚುನಾವಣೆಯಲ್ಲಿ ಪಕ್ಷಗಳು ‌ ಅಧಿಕೃತ ‌ ಅಭ್ಯರ್ಥಿಗಳನ್ನು ಹೊರತು ಪಡಿಸಿದರೆ ಉಳಿದ ಅಭ್ಯರ್ಥಿಗಳಿಗೆ ಚಿಹ್ನೆಗಳು ವಿಭಿನ್ನವಾಗಿರುತ್ತವೆ. ಅವುಗಳನ್ನು ಮತ‌ದಾರರಿಗೆ ಪರಿಚಯಿಸಬೇಕಾಗುತ್ತದೆ. ವಿಶೇಷವಾಗಿ ಬಂಡಾಯ ಸಾರಿ ಪಕ್ಷೇತ‌ರರಾಗಿ ಸ್ಪರ್ಧಿಸಿರುವವರಿಗೆ ಈ ಸಮಸ್ಯೆ ಹೆಚ್ಚಿನ ರೀತಿಯಲ್ಲಿ ಕಾಡಲಿದೆ. ಹೊಸದಾಗಿ ಪಕ್ಷೇತರರಾಗಿ ಸ್ಪರ್ಧಿಸುವವರಿಗೆ ಚಿಹ್ನೆತೊಂದರೆ ಹೆಚ್ಚಿಗೆ ಕಾಡದು. ಆದರೆ ಈಗಾಗಲೇ ಪಾಲಿಕೆಗೆ ಪಕ್ಷದ ಚಿಹ್ನೆಯಡಿ ಆಯ್ಕೆಯಾಗಿ ಇದೀಗ ಪಕ್ಷೇತರರಾಗಿ ಸ್ಪರ್ಧಿಸುವವರು ಮತದಾರರಿಗೆ ಈ ಬಾರಿ ತಮ್ಮ ಚಿಹ್ನೆ ಹಿಂದಿನದಲ್ಲ ಹೊಸದಾದ ಈ ಚಿಹ್ನೆ ಎಂದು ಮನವರಿಕೆ ಮಾಡಿಕೊಡುವುದು ಕಷ್ಟವಾಗಲಿದೆ. ಇದಕ್ಕಾಗಿ ಸಾಕಷ್ಟು ಶ್ರಮಿಸಬೇಕಿದೆ. ಜನರ ಮನ‌ ದೊಳಗೆ ಹೊಸ ಚಿಹ್ನೆಯ ಅಚ್ಚೊತ್ತಬೇಕಿದೆ.

ಟಾಪ್ ನ್ಯೂಸ್

BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್

BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್

Bhalla,-VK-Singh-Gov.

New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ

CTRavi

Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ

ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ 10, ದೆಹಲಿಯಲ್ಲಿ 11 ಮಂದಿ ಸೆರೆ

Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ

England; ಬೆನ್‌ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್‌ ಟ್ರೋಫಿಗೆ ಅಲಭ್ಯ

England; ಬೆನ್‌ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್‌ ಟ್ರೋಫಿಗೆ ಅಲಭ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

k

Udupi: ಭಾರತೀಯ ಸಂಸ್ಕೃತಿ ಮತ್ತು ಭಗವದ್ಗೀತೆ ಕುರಿತು ಕೆ.ಪಿ.ಪುತ್ತೂರಾಯ ಉಪನ್ಯಾಸ

ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗದ್ಗೀತೆಯ ಪ್ರಸ್ತುತತೆ ವಿಶೇಷ ಸಂವಾದ

ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗವದ್ಗೀತೆ ಪ್ರಸ್ತುತತೆಯ ವಿಶೇಷ ಸಂವಾದ

CTRavi

Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ

15-crime

Bailhongal: ಅನೈತಿಕ ಸಂಬಂಧದ ಹಿನ್ನೆಲೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ; ಆರೋಪಿ ಪರಾರಿ

14-padubidri

Dec. 29: ಪಡುಬಿದ್ರಿಯಲ್ಲಿ ಅಂತರ್‌ರಾಜ್ಯ ಬಂಟ ಕ್ರೀಡೋತ್ಸವ – ಎಂಆರ್‌ಜಿ ಟ್ರೋಫಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

k

Udupi: ಭಾರತೀಯ ಸಂಸ್ಕೃತಿ ಮತ್ತು ಭಗವದ್ಗೀತೆ ಕುರಿತು ಕೆ.ಪಿ.ಪುತ್ತೂರಾಯ ಉಪನ್ಯಾಸ

BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್

BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್

ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗದ್ಗೀತೆಯ ಪ್ರಸ್ತುತತೆ ವಿಶೇಷ ಸಂವಾದ

ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗವದ್ಗೀತೆ ಪ್ರಸ್ತುತತೆಯ ವಿಶೇಷ ಸಂವಾದ

Bhalla,-VK-Singh-Gov.

New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ

CTRavi

Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.