Hubli: ರಾಡ್ ಬಿದ್ದು ಎಎಸ್‌ಐ ಸಾವು ಪ್ರಕರಣದಲ್ಲಿ ಕಾಮಗಾರಿ ಕಂಪನಿಯ 11 ಜನರ ಬಂಧನ
Team Udayavani, Sep 16, 2024, 2:40 PM IST
ಹುಬ್ಬಳ್ಳಿ: ನಗರದ ಹಳೆಯ ಕೋರ್ಟ್ ವೃತ್ತದಲ್ಲಿ ಮೇಲ್ಸೇತುವೆ ಕಾಮಗಾರಿ ವೇಳೆ ಕಬ್ಬಿಣದ ರಾಡ್ ಬಿದ್ದು ಮೃತಪಟ್ಟ ಎಎಸ್‌ಐ ಪ್ರಕರಣಕ್ಕೆ ಸಂಬಂಧಿಸಿ ಉಪನಗರ ಪೊಲೀಸರು ಗುತ್ತಿಗೆ ಕಂಪನಿಯ 11 ಜನರನ್ನು ಬಂಧಿಸಿದ್ದಾರೆ.
ಝಂಡು ಕನ್‌ಸ್ಟ್ರಕ್ಷನ್ ಕಂಪನಿಯ ನೌಕರರಾದ ಸುಪರ್‌ವೈಜರ್ ಹರ್ಷಾ ಹೊಸಗಾಣಿಗೇರ, ಲೈಜನಿಂಗ್ ಇಂಜಿನಿಯರ್ ಜಿತೇಂದ್ರಪಾಲ ಶರ್ಮಾ, ಇಂಜಿನಿಯರ್ ಭೂಪೇಂದರ ಪಾಲ್, ಕ್ರೇನ್ ಚಾಲಕ ಅಸ್ಲಂ ಅಲಿ, ನೌಕರರಾದ ಮೊಹಮ್ಮದ ಇಮಾದರೂ, ಮೊಹಮ್ಮದ ಮಸೂದರ ರೆಹಮಾನ, ಸಬೀಬ ಶೇಖ, ರಿಜಾವುಲ್ ಹಕ್, ಶಮೀಮ ಶೇಖ, ಮೊಹಮ್ಮದ ಆರೀಫ, ಲೇಬರ್ ಕಾಂಟ್ರಾಕ್ಟರ್ ಮೊಹಮ್ಮದ ರಬಿವುಲ್ ಹಕ್ ಬಂಧಿತರಾಗಿದ್ದಾರೆ. ಈ ಅವಘಡಕ್ಕೆ ಸಂಬಂಧಿಸಿ ಇನ್ನೂ ಕೆಲವರನ್ನು ಪೊಲೀಸರು ವಶಕ್ಕೆ ಪಡೆಯುವುದು ಬಾಕಿ ಇದೆ.
ಸೆ. 10ರಂದು ಕರ್ತವ್ಯಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದ ಉಪನಗರ ಠಾಣೆ ಎಎಸ್‌ಐ, ಧಾರವಾಡ ಸತ್ತೂರಿನ ರಾರಾಜಿನಗರ ನಿವಾಸಿ ನಾಬಿರಾಜ ಜಯಪಾಲ ದಯಣ್ಣವರ (59) ಅವರ ತಲೆಯ ಮೇಲೆ ಕಬ್ಬಿಣದ ರಾಡ್ ಬಿದ್ದು ತೀವ್ರ ಗಾಯಗೊಂಡಿದ್ದರು. ಚಿಕಿತ್ಸೆ ಫಲಿಸದೆ ರವಿವಾರ ಬೆಳಗಿನ ಜಾವ ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಗುತ್ತಿಗೆ ಕಂಪನಿಯ ನೌಕರರು ಮೇಲ್ಸೇತುವೆ ಕಾಮಗಾರಿ ಸ್ಥಳದಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಪಾಲಿಸದೆ ಇದ್ದುದರಿಂದ ಸೇತುವೆ ಮೇಲೆ ಕಬ್ಬಿಣದ ಬಾರ್ ಗಳನ್ನು ಸಾಗಿಸುತ್ತಿದ್ದಾಗ ನೌಕರರ ನಿರ್ಲಕ್ಷ್ಯದಿಂದ ಕಬ್ಬಿಣದ ಬಾರ್ ಎಎಸ್ಐ ಅವರ ತಲೆಯ ಮೇಲೆ ಬಿದ್ದು, ಅವರ ಹೆಲ್ಮೆಟ್ ಒಡೆದು ತಲೆಗೆ ಬಲವಾದ ಗಾಯವಾಗಿತ್ತು.
ಈ ಅವಘಡಕ್ಕೆ ಸಂಬಂಧಿಸಿ ಕಾಮಗಾರಿಯ ಗುತ್ತಿಗೆದಾರ ಝಂಡು ಕನ್‌ಸ್ಟ್ರಕ್ಷನ್ ಕಂಪನಿಯ ಎಂಡಿ ಸೇರಿದಂತೆ 19ಕ್ಕೂ ಹೆಚ್ಚು ಜನರ ವಿರುದ್ಧ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್; ಜೈಲು ಪಾಲಾಗ್ತಾರಾ ಕ್ರಿಕೆಟಿಗ
Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ
M. Chinnaswamy ಸ್ಟಾಂಡ್‌ಗೆ ಶಾಂತಾ ರಂಗಸ್ವಾಮಿ ಹೆಸರಿಡಲು ಯಾಕೆ ಹಿಂದೇಟು? ಏನಿದು ವಿವಾದ?
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mangaluru: ಸಹಬಾಳ್ವೆ ಬೆಸೆಯುತ್ತಿದೆ ‘ಕುಸ್ವಾರ್’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.