ಬಿಕೋ ಎನ್ನುತ್ತಿದೆ ಹುಬ್ಬಳ್ಳಿ ಎಪಿಎಂಸಿ
Team Udayavani, May 16, 2021, 10:05 AM IST
ಹುಬ್ಬಳ್ಳಿ: ರಾಜ್ಯ ಸರಕಾರ ಕೋವಿಡ್-19ರ 2ನೇ ಅಲೆ ವ್ಯಾಪಿಸುವುದನ್ನು ತಡೆಗಟ್ಟಲು ಜಾರಿಗೊಳಿಸಿದ ಕರ್ಫ್ಯೂ ಸಂದರ್ಭದಲ್ಲಿನ ಕಟ್ಟುನಿಟ್ಟಾದ ಮಾರ್ಗಸೂಚಿಗಳಿಂದ ಇಲ್ಲಿನ ಎಪಿಎಂಸಿಯ ಪ್ರಾಂಗಣ ವ್ಯಾಪಾರಸ್ಥರು ಹಾಗೂ ಖರೀದಿದಾರರಿಲ್ಲದೆ ಭಣಗುಡುತ್ತಿದೆ. ರೈತರು ತಂದ ಉತ್ಪನ್ನಗಳು ಖರೀದಿಯಾಗದೆ ಹಾಳಾಗುತ್ತಿವೆ.
ಜನತಾ ಕರ್ಫ್ಯೂ ಸಂದರ್ಭದಲ್ಲಿ ಇಲ್ಲಿನ ಎಪಿಎಂಸಿಯಲ್ಲಿ ತರಕಾರಿ, ಹಣ್ಣು, ದಿನಸಿ, ಕಾಳುಕಡಿ ಹಾಗೂ ಕಿರಾಣಿ ವ್ಯಾಪಾರ ಸಗಟು ಜತೆ ಚಿಲ್ಲರೆಯಾಗಿ ಮಾರಾಟಮಾಡಲಾಗುತ್ತಿತ್ತು. ಆದರೆ ಕೊರೊನಾಅಲೆ ನಿಯಂತ್ರಿಸಲು ಸರಕಾರ 2ನೇಹಂತದ ಕರ್ಫ್ಯೂ ವೇಳೆ ಕಠಿಣ ಕ್ರಮಕೈಗೊಂಡಿದ್ದರಿಂದ ಹಾಗೂ ಕಟ್ಟುನಿಟ್ಟಾದಹೊಸ ಮಾರ್ಗಸೂಚಿ ಜಾರಿಗೊಳಿಸಿದ್ದರಿಂದಚಿಲ್ಲರೆ ವ್ಯಾಪಾರ ಸಂಪೂರ್ಣ ಸ್ಥಗಿತ ಗೊಳಿಸಲಾಗಿದೆ.
ಅಲ್ಲದೆ ಎಪಿಎಂಸಿಗೆ ಅನಗತ್ಯವಾಗಿ ಆಗಮಿಸುವವರಿಗೆ ಪ್ರವೇಶಕೊಡುತ್ತಿಲ್ಲ. ಟ್ರೇಡ್ ಲೈಸನ್ಸ್ ಹೊಂದಿದ ವ್ಯಾಪಾರಸ್ಥರು, ವ್ಯಾಪಾರ-ವಹಿವಾಟುನಡೆಸುತ್ತಿರುವ ದಲ್ಲಾಳಿಗಳು, ಗುರುತಿನ ಚೀಟಿ ಹೊಂದಿದ ಖರೀದಿದಾರರು ಹಾಗೂ ಹಮಾಲರಿಗೆ ಮಾತ್ರ ಎಪಿಎಂಸಿ ಪ್ರಾಂಗಣದಲ್ಲಿ ಪ್ರವೇಶಿಸಲು ಅನುಮತಿ ನೀಡಲಾಗುತ್ತಿದೆ. ಇನ್ನುಳಿದವರ ಪ್ರವೇಶ ಸಂಪೂರ್ಣ ನಿರ್ಬಂಧಿಸಲಾಗಿದೆ. ಹೀಗಾಗಿ ಎಪಿಎಂಸಿ ಪ್ರಾಂಗಣವು ವ್ಯಾಪಾರಸ್ಥರು, ದಲ್ಲಾಳಿಗಳು, ರೈತರು, ಮಾರಾಟಗಾರರು, ಖರೀದಿದಾರರು ಇಲ್ಲದೆ ಭಣಗುಡುತ್ತಿದೆ.
ವಾಹನಗಳ ಓಡಾಟ, ಜನರ ಸಂಚಾರವಿಲ್ಲದೆ ಮಾರುಕಟ್ಟೆ ಮತ್ತು ರಸ್ತೆಗಳು ಬಿಕೋ ಎನ್ನುತ್ತಿವೆ. ಬೆಳಗ್ಗೆ 9:30 ಗಂಟೆಯಾದರೆ ಸಾಕು ಮಾರುಕಟ್ಟೆಯಲ್ಲಿನ ಜನರು-ವ್ಯಾಪಾರಸ್ಥರುತಮ್ಮ ಅಂಗಡಿ ಬಂದ್ ಮಾಡಿ ಮನೆಯತ್ತ ತೆರಳುತ್ತಿದ್ದಾರೆ. ಸ್ವಲ್ಪ ಸಮಯವಾದರೆ ಸಾಕು ಪೊಲೀಸರು ಹಿಡಿದು ದಂಡ ಹಾಕುತ್ತಿದ್ದಾರೆ. ಈ ಭಯಕ್ಕಾಗಿ ಜನರು ಬೇಗನೆ ವ್ಯಾಪಾರ-ವಹಿವಾಟು ಬಂದ್ ಮಾಡುತ್ತಿದ್ದಾರೆ.
ತಡರಾತ್ರಿಯೇ ವ್ಯಾಪಾರ: ಸರಕಾರ ಜಾರಿಗೊಳಿಸಿರುವ ಕರ್ಫ್ಯೂ ಸಂದರ್ಭದಲ್ಲಿಬೆಳಗ್ಗೆ 6:00ರಿಂದ 10:00 ಗಂಟೆವರೆಗೆ ಅಗತ್ಯ ವಸ್ತುಗಳ ವ್ಯಾಪಾರಮತ್ತು ಖರೀದಿಗೆ ಸರಕಾರ ಅವಕಾಶಕಲ್ಪಿಸಿದೆ. ಹೀಗಾಗಿ ರೈತರು ತಮ್ಮ ಕೃಷಿ ಹುಟ್ಟುವಳಿಗಳನ್ನು ಮತ್ತು ತರಕಾರಿಯನ್ನು ಎಪಿಎಂಸಿಗೆ ತಲುಪಿಸಲು ಸಮಯಾವಕಾಶಸಿಗುತ್ತಿಲ್ಲ. ಕಾರಣ ಅವರು ರಾತ್ರಿಯೇ ತಮ್ಮ ಉತ್ಪನ್ನಗಳನ್ನು ಎಪಿಎಂಸಿಗೆ ತರುತ್ತಿದ್ದಾರೆ. ಜತೆಗೆ ಕಾರವಾರ, ಯಲ್ಲಾಪೂರ ಸೇರಿದಂತೆಇನ್ನಿತರೆ ಭಾಗಗಳಲ್ಲಿನ ದೂರದ ಊರುಗಳವ್ಯಾಪಾರಸ್ಥರು ತಮ್ಮ ತಮ್ಮ ವಾಹನಗಳಲ್ಲಿತಡರಾತ್ರಿಯೇ ಆಗಮಿಸಿ ಅಗತ್ಯ ವಸ್ತುಗಳನ್ನುಖರೀದಿಸಿ ಬೆಳಗ್ಗೆ 7:00 ಗಂಟೆಯೊಳಗೆ ತಮ್ಮ ಊರಿಗೆ ಹೋಗುತ್ತಿದ್ದಾರೆಂದು ಕೆಲ ವ್ಯಾಪಾರಿಗಳು ಹೇಳುತ್ತಾರೆ.
ರಾಶಿ ರಾಶಿಯಾಗಿ ಬಿದ್ದ ಕಾಯಿಪಲ್ಲೆ: ಅಗತ್ಯ ವಸ್ತುಗಳ ವ್ಯಾಪಾರ-ವಹಿವಾಟಿಗೆ ಬೆಳಗ್ಗೆ 10:00 ಗಂಟೆವರೆಗೆ ಸರಕಾರ ಅವಕಾಶ ಕಲ್ಪಿಸಿದೆ ಏನೋ? ಆದರೆ ಚಿಲ್ಲರೆ ವ್ಯಾಪಾರಕ್ಕೆ ಎಪಿಎಂಸಿಯಲ್ಲಿ ಅವಕಾಶ ಕೊಟ್ಟಿಲ್ಲದ್ದರಿಂದ ಹೊರಗಿನವರು ಖರೀದಿಸಲು ಅಷ್ಟಾಗಿ ಬರುತ್ತಿಲ್ಲ. ರೈತರು ತಾವು ಬೆಳೆದ ಬೆಳೆ ಹೊಲದಲ್ಲೂ ಬಿಡುವಂತಿಲ್ಲ. ಹೀಗಾಗಿ ಅನಿವಾರ್ಯವಾಗಿ ಎಪಿಎಂಸಿಗೆ ತಮ್ಮ ಉತ್ಪನ್ನ ತರುತ್ತಿದ್ದಾರೆ.ಆದರೂ ಇಲ್ಲೂ ಮಾರಾಟವಾಗದೆ ಹಾಳಾಗುತ್ತಿದೆ. ಕೈಗೆ ಬಂದ ದರಕ್ಕೆ ಕೊಟ್ಟರೂ ಖರೀದಿಸುವವರು ಇಲ್ಲದಂತಾಗಿದ್ದು, ಕೊನೆಗೆ ಮಾರುಕಟ್ಟೆಯಲ್ಲಿಯೇ ಬಿಟ್ಟು ಹೋಗುತ್ತಿದ್ದಾರೆ. ವಾಹನ ಬಾಡಿಗೆ ಮಾಡಿಕೊಂಡು ಬಂದದ್ದಕ್ಕೂ ಖರ್ಚು ಗಿಟ್ಟಿಸದೆ ನಷ್ಟ ಮಾಡಿಕೊಂಡು ಹೋಗುವಂತಾಗಿದೆ ಎನ್ನುತ್ತಿದ್ದಾರೆ ರೈತರು.
ಟೆಂಡರ್ ಪ್ರಕ್ರಿಯೆ ಬಂದ್:
ಕರ್ಫ್ಯೂ ಅವಧಿಯಲ್ಲಿ ಸರಕಾರದ ಮಾರ್ಗಸೂಚಿಯಂತೆ ಎಪಿಎಂಸಿ ಪ್ರಾಂಗಣದಲ್ಲಿ ಕುರಿ, ಜಾನುವಾರುಸಂತೆ, ಒಣಮೆಣಸಿನಕಾಯಿ ಹುಟ್ಟುವಳಿ ಟೆಂಡರ್ ಪ್ರಕ್ರಿಯೆ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಉಳ್ಳಾಗಡ್ಡೆ-ಆಲೂಗಡ್ಡೆ ಸೇರಿದಂತೆ ರೈತರ ಇನ್ನಿತರೆ ಉತ್ಪನ್ನಗಳ ಟೆಂಡರ್ ಪ್ರಕ್ರಿಯೆ ಬೆಳಗ್ಗೆ 9:00 ಗಂಟೆಯೊಳಗೆ ಮುಗಿಯುತ್ತಿದೆ.ತರಕಾರಿ ಚಿಲ್ಲರೆ ವ್ಯಾಪಾರ ಸಂಪೂರ್ಣಬಂದ್ ಮಾಡಲಾಗಿದೆ. ಕಾಳು-ಕಡಿ, ಉಳ್ಳಾಗಡ್ಡೆ-ಆಲೂಗಡ್ಡೆ ವ್ಯಾಪಾರಸ್ಥರು ಸಹ ಸರಕಾರ ನಿಗದಿಪಡಿಸಿದ ಅವಧಿಯೊಳಗೆ ತಮ್ಮೆಲ್ಲ ವ್ಯಾಪಾರ-ವಹಿವಾಟು ನಡೆಸಬೇಕೆಂದಿರುವುದರಿಂದ ಬೆಳಗ್ಗೆ 9:30ಗಂಟೆಯೊಳಗೆ ಮುಗಿಸುತ್ತಿದ್ದಾರೆ. ತರಕಾರಿ ವ್ಯಾಪಾರಿಗಳು ಚಿಲ್ಲರೆ ವ್ಯಾಪಾರ ಮಾಡಿದರೆಅಂತಹ ವ್ಯಾಪಾರಸ್ಥರನ್ನು ಎಪಿಎಂಸಿಯವರುಗುರುತಿಸಿ ದಂಡ ಹಾಕುತ್ತಿದ್ದಾರೆ. ಹೀಗಾಗಿಯಾವ ವ್ಯಾಪಾರಸ್ಥರು ಚಿಲ್ಲರೆ ವ್ಯಾಪಾರಕ್ಕೆ ಮುಂದಾಗುತ್ತಿಲ್ಲ.
ಲಾಕ್‌ಡೌನ್ ವೇಳೆ ಎಪಿಎಂಸಿ ಪ್ರಾಂಗಣದಲ್ಲಿ ಯಾರಿಗೂ ಪಾಸ್ ಕೊಟ್ಟಿಲ್ಲ. ವ್ಯಾಪಾರಸ್ಥರಿಗೆ ಅವರು ಹೊಂದಿದ್ದ ಅಂಗಡಿಯ ಲೈಸನ್ಸ್ ಮೇಲೆ ಅಟೆಸ್ಟೆಡ್ ಮಾಡಿ ಗುರುತಿನ ಚೀಟಿ ನೀಡಲಾಗಿದೆ. ಹಮಾಲರಿಗೆ ಹಮಾಲಿಕಾರ್ಮಿಕರ ಸಂಘದಿಂದ ಗುರುತಿನ ಚೀಟಿ ವಿತರಿಸಲಾಗಿದೆ.ತರಕಾರಿ ಚಿಲ್ಲರೆ ವ್ಯಾಪಾರಕ್ಕೆ ಅವಕಾಶ ಕೊಟ್ಟಿಲ್ಲ. ಅನಗತ್ಯವಾಗಿ ಆಗಮಿಸುವವರಿಗೆ ಪ್ರವೇಶ ನಿರ್ಬಂ ಧಿಸಲಾಗಿದೆ. ಕೊರೊನಾ ಅಲೆ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.– ಅರವಿಂದ ಪಿ. ಪಾಟೀಲ, ಸಹಾಯಕ ಕಾರ್ಯದರ್ಶಿ, ಎಪಿಎಂಸಿ
ವ್ಯಾಪಾರದ ಜತೆ ಕೊರೊನಾ ಬಗ್ಗೆ ಜಾಗೃತಿ ವಹಿಸಬೇಕಿದೆ. ಸರಕಾರದ ಮಾರ್ಗಸೂಚಿ ಪಾಲಿಸಬೇಕಿದೆ. ಜನತಾ ಕರ್ಫ್ಯೂ ಸಮಯದಲ್ಲಿ ಶೇ. 50 ವ್ಯಾಪಾರವಿತ್ತು. ಇದೀಗ ಶೇ. 25 ವ್ಯಾಪಾರ-ವಹಿವಾಟು ಆಗುತ್ತಿದೆ. ಸಂಜೆವರೆಗೂ ಲೋಡಿಂಗ್, ಅನ್‌ಲೋಡಿಂಗ್ ಮಾಡಬಹುದೆಂದು ಪೊಲೀಸ್ ಆಯುಕ್ತರು ಹೇಳಿದ್ದರು. ಬೆಳಗ್ಗೆ 10 ಗಂಟೆ ನಂತರ ಯಾರಿಗೂ ಓಡಾಡಲು ಬಿಡುತ್ತಿಲ್ಲ. ಹೀಗಾಗಿ ಹಮಾಲರು ಬೇರೆ ಪ್ರದೇಶಗಳಿಂದ ಎಪಿಎಂಸಿಗೆ ಬರಲು ಕಷ್ಟವಾಗುತ್ತಿದೆ. ವ್ಯಾಪಾರಸ್ಥರು 10 ಗಂಟೆಯೊಳಗೆ ಅಂಗಡಿಗಳನ್ನು ಬಂದ್ ಮಾಡುತ್ತಿದ್ದಾರೆ.– ಶಿವಾನಂದ ಸಣ್ಣಕ್ಕಿ, ಕಿರಾಣಿ ವರ್ತಕರ ಸಂಘದ ಅಧ್ಯಕ್ಷ, ಎಪಿಎಂಸಿ
- ಶಿವಶಂಕರ ಕಂಠಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.