14 ರೈಲ್ವೇ ನಿಲ್ದಾಣಗಳಿಗೆ ತೆರಳಲು ಕೋವಿಡ್ ಕೇರ್ ಸೆಂಟರ್ ಸಜ್ಜು
Team Udayavani, May 8, 2020, 3:31 PM IST
ಸಾಂದರ್ಭಿಕ ಚಿತ್ರ
ಹುಬ್ಬಳ್ಳಿ: ಕೊರೊನಾ ಸೋಂಕಿತರಿಗೆ ಚಿಕಿತ್ಸೆಗೆಂದು ಭಾರತೀಯ ರೈಲ್ವೆ ಸಚಿವಾಲಯ ಸೂಚನೆ ಮೇರೆಗೆ ನೈರುತ್ಯ ರೈಲ್ವೆ ವಲಯ ಒಟ್ಟು 320 ರೈಲ್ವೆ ಬೋಗಿಗಳನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿದ್ದು, ಎಲ್ಲ ಬೋಗಿಗಳು ಆಯಾ ವಲಯ ವ್ಯಾಪ್ತಿಗೆ ತೆರಳಲು ಮುಂದಾಗಿವೆ.
ಕೋವಿಡ್ ಕೇರ್ ಸೆಂಟರ್‌ಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಲಹೆ ಮೇರೆಗೆ ರೂಪಿಸಲಾಗಿದೆ. ರೈಲ್ವೆ ಮಂಡಳಿ ನೈರುತ್ಯ ರೈಲ್ವೆ ವಲಯಕ್ಕೆ 312 ಕೋವಿಡ್ ಕೇರ್ ಸೆಂಟರ್ ರೂಪನೆಗೆ ಸೂಚಿಸಿತ್ತು. ಆದರೆ, 320 ಸೆಂಟರ್ ಗಳನ್ನು ತಯಾರಿಸಲಾಗಿದೆ. ರಾಜ್ಯ ಸರಕಾರದ ಬೇಡಿಕೆಯಂತೆ ಕೊರೊನಾ ಸೋಂಕಿತರ ಚಿಕಿತ್ಸೆಗೆ ಬಳಕೆಯಾಗುವ ಸರ್ವ ಸನ್ನದ್ಧ ಬೋಗಿಗಳನ್ನು ನೀಡಲಾಗುತ್ತದೆ. ನೈರುತ್ಯ ರೈಲ್ವೆ ವಲಯ ವ್ಯಾಪ್ತಿಯ ರಾಜ್ಯದ 14 ರೈಲ್ವೆ ನಿಲ್ದಾಣಗಳಿಗೆ ಈ ವಿಶೇಷ ಬೋಗಿಗಳನ್ನು ಕಳುಹಿಸಬಹುದಾಗಿದೆ. ಆಯಾ ಜಿಲ್ಲಾಡಳಿತಗಳು ಇವುಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ನೈರುತ್ಯ ರೈಲ್ವೆ ವಲಯ ವ್ಯಾಪ್ತಿಯ ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಯಶವಂತಪುರ, ಹರಿಹರ, ಶಿವಮೊಗ್ಗ ನಗರ, ಹೊಸಪೇಟೆ, ಹಾಸನ, ಅರಸಿಕೆರೆ, ಬಾಗಲಕೋಟೆ, ತಾಳಗುಪ್ಪ, ವಿಜಯಪುರ, ಬೆಳಗಾವಿ, ವಾಸ್ಕೋ-ಡ-ಗಾಮ ನಿಲ್ದಾಣಗಳಲಿ ಈ ವಿಶೇಷ ಬೋಗಿಗಳನ್ನು ನಿಲ್ಲಿಸಬಹುದ್ದಾಗಿದ್ದು, ಆಯಾ ನಿಲ್ದಾಣಗಳಿಗೆ ತೆರಳಲು ಇವು ಸಜ್ಜುಗೊಂಡಿವೆ.
ರಾಜ್ಯ ಸರಕಾರ ಬೇಡಿಕೆ ಮೇರೆಗೆ ಮಾತ್ರ ವಲಯ ವ್ಯಾಪ್ತಿಯ 14 ರೈಲ್ವೆ ನಿಲ್ದಾಣಗಳಲ್ಲಿ ಯಾವುದಕ್ಕೆ ಹೇಳಿದರೆ ಅಲ್ಲಿಗೆ ವಿಶೇಷ ಬೋಗಿಗಳನ್ನು ಕಳುಹಿಸಲಾಗುತ್ತದೆ. ಆಯಾ ಜಿಲ್ಲಾಡಳಿತಗಳು ಸೂಚನೆ ಮೇರೆಗೆ ಇವುಗಳನ್ನು ಕಳುಹಿಸಲಾಗುತ್ತದೆ. ಜತೆಗೆ ಸರಕಾರ ಬೇಡಿಕೆ ಸಲ್ಲಿಸಿದಲ್ಲಿ, ತುರ್ತು ಸ್ಥಿತಿಯಲ್ಲಿ ಕೋವಿಡ್ ಕೇರ್ ಸೆಂಟರ್ ಜತೆಗೆ ಹುಬ್ಬಳ್ಳಿ, ಬೆಂಗಳೂರು, ಮೈಸೂರು, ಯಶವಂತಪುರಕ್ಕೆ ವೈದ್ಯಕೀಯ ಸಿಬ್ಬಂದಿ ನೀಡಲು ನೈರುತ್ಯ ರೈಲ್ವೆ ವಲಯ ಸಿದ್ಧ ಇದ್ದು, ಇನ್ನುಳಿದ ನಿಲ್ದಾಣಗಳಿಗೆ ರಾಜ್ಯ ಸರಕಾರವೇ ಆರೋಗ್ಯ ಸಿಬ್ಬಂದಿಯನ್ನು ನಿಯೋಜಿಸಬೇಕಾಗಿದೆ. ಬೋಗಿಗೆ ಆರ್‌ಪಿಎಫ್ ಭದ್ರತೆ ಒದಗಿಸಲಾಗುತ್ತದೆ ಎಂದು ನೈರುತ್ಯ ರೈಲ್ವೆ ವಲಯ ಕಚೇರಿ ಪ್ರಕಟನೆಯಲ್ಲಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.