ಹು-ಧಾ ನಗರ ಸಾರಿಗೆ ಸದ್ಯದಲ್ಲೇ ನೇಪಥ್ಯಕ್ಕೆ 


Team Udayavani, Oct 21, 2018, 5:05 PM IST

21-october-21.gif

ಹುಬ್ಬಳ್ಳಿ: ಆರು ದಶಕಗಳಿಂದ ಅವಳಿ ನಗರದ ಸಂಪರ್ಕ ಕೊಂಡಿಯಾಗಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಗರ ಸಾರಿಗೆ ಬಸ್‌ಗಳ ಸೇವೆ ಇನ್ನು ನೆನಪು ಮಾತ್ರ. ತ್ವರಿತ ಬಸ್‌ ಸಾರಿಗೆ (ಬಿಆರ್‌ಟಿಎಸ್‌) ಸೇವೆ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆಗೊಳ್ಳುತ್ತಿದ್ದಂತೆ ಈ ಬಸ್‌ಗಳ ಸೇವೆ ನೇಪಥ್ಯಕ್ಕೆ ಸರಿಯಲಿದೆ.

ಶೇ.78 ಜನರು ‘ನಗರ ಸಾರಿಗೆ’ ನೆಚ್ಚಿಕೊಂಡಿದ್ದರು. ಬೆಳಗ್ಗೆ 4 ಗಂಟೆಯಿಂದ ರಸ್ತೆಗಿಳಿಯುವ ಬಸ್‌ಗಳು ಮಧ್ಯರಾತ್ರಿ 12:45 ರವರೆಗೂ ಅವಳಿ ನಗರದ ಜನರಿಗೆ ಸಾರಿಗೆ ಸೇವೆ ನೀಡುತ್ತಿವೆ. 108 ಬಸ್‌ ರದ್ದು: ಬಿಆರ್‌ಟಿಎಸ್‌ ಪೂರ್ಣಪ್ರಮಾಣದಲ್ಲಿ ಕಾರ್ಯಾರಂಭ ಮಾಡುವ ಕಾಲ ಸಮೀಪಿಸುತ್ತಿದೆ. ಹಿಂದೆ ನಿರ್ಧರಿಸಿದಂತೆ ನ. 1ಕ್ಕೆ ಬಸ್‌ ಸಂಚಾರ ಆರಂಭವಾದರೆ ಅವಳಿ ನಗರದ ನಡುವೆ ಸಾರಿಗೆ ಸೇವೆ ನೀಡುತ್ತಿರುವ 108 ವಾಯವ್ಯ ಸಾರಿಗೆ ಸಂಸ್ಥೆಯ ಬಸ್‌ಗಳು ಸಂಚಾರ ನಿಲ್ಲಿಸಲಿವೆ. ಈ ಬಸ್‌ಗಳ ಮಾರ್ಗ ಪರವಾನಗಿ ಆಧಾರದ ಮೇಲೆ ಬಿಆರ್‌ಟಿಎಸ್‌ ಬಸ್‌ಗಳು ಸಂಚಾರ ಮಾಡಲಿವೆ.

ನಿತ್ಯ 30 ಸಾವಿರ ಕಿಮೀ: 108 ಬಸ್‌ಗಳು ನಿತ್ಯವೂ ಹು-ಧಾ ನಡುವೆ ಸುಮಾರು 660 ಟ್ರಿಪ್‌ ಗಳ ಸೇವೆ ನೀಡುತ್ತಿವೆ. ಪ್ರಯಾಣಿಕರ ಅಗತ್ಯತೆ ಹಾಗೂ ಬೇಡಿಕೆ ಮೇರೆಗೆ 100, 101, 102, 103, 104, 105 ಹೆಸರಿನ ಮೇಲೆ ಬಸ್‌ ಸೇವೆ ನೀಡಲಾಗುತ್ತಿದೆ. 660 ಟ್ರಿಪ್‌ ಗಳು ಮೂಲಕ ಪ್ರತಿನಿತ್ಯ 108 ಬಸ್‌ಗಳು ಸರಾಸರಿ 30 ಸಾವಿರ ಕಿಮೀ ಸಂಚಾರ ಮಾಡುತ್ತಿವೆ. ಅವಳಿ ನಗರದ ನಡುವೆ ಪ್ರತಿ ಒಂದೂವರೆ ನಿಮಿಷಕ್ಕೊಂದು ಬಸ್‌ ಸಂಚರಿಸುತ್ತಿದೆ. ಹಿಂದೆ ಇದಕ್ಕಿಂದ ಹೆಚ್ಚಿನ ಬಸ್‌ಗಳು ಅವಳಿ ನಗರದ ನಡುವೆ ಸಂಚಾರ ಮಾಡುತ್ತಿದ್ದವು.

ಫೀಡರ್‌ ಸೇವೆಗೆ ಬಳಕೆ: ಅವಳಿ ನಗರ ಸಾರಿಗೆ ವ್ಯವಸ್ಥೆಯಲ್ಲಿರುವ 108 ಬಸ್‌ಗಳ ಪೈಕಿ ಒಂದಿಷ್ಟು ವಾಹನಗಳು ಗುಜರಿ ಸಾಲಿಗೆ ಸೇರಲಿದ್ದು, ಉತ್ತಮ ಬಸ್‌ಗಳನ್ನು ಬಿಆರ್‌ಟಿಎಸ್‌ ಸಾರಿಗೆ ವ್ಯವಸ್ಥೆಗೆ ಪೂರಕವಾಗಿಫೀಡರ್‌ ಸೇವೆಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಗಟ್ಟಿಮುಟ್ಟಾದ ಬಸ್‌ಗಳನ್ನು ಗುರುತಿಸಿ ಈಗಾಗಲೇ ಜಿಪಿಎಸ್‌ ಅಳವಡಿಸಲಾಗಿದೆ.

ಪ್ರತ್ಯೇಕ ಘಟಕವೂ ಸ್ಥಗಿತ: ಅವಳಿ ನಗರದ ಸಾರಿಗೆ ವ್ಯವಸ್ಥೆ ಪರಿಣಾಮಕಾರಿಯಾಗಿ ನಿರ್ವಹಿಸುವ ನಿಟ್ಟಿನಲ್ಲಿ ಕೇಂದ್ರ ಬಸ್‌ ನಿಲ್ದಾಣ (ಸಿಬಿಎಸ್‌) ಎಂದು ಆರಂಭಿಸಲಾಯಿತು. ಆಗ ಪ್ರತ್ಯೇಕವಾಗಿ 19 ಬಸ್‌ಗಳ ಮೂಲಕ ಕಾರ್ಯಾಚರಣೆ ಆರಂಭಿಸಲಾಯಿತು. ಗ್ರಾಮೀಣ ಘಟಕ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಮಾಡಲಾಗುತ್ತಿತ್ತು. 1994ರಲ್ಲಿ ಪ್ರತ್ಯೇಕ ನಗರ ಸಾರಿಗೆ ಘಟಕ-2 ಸ್ಥಾಪನೆ ಮಾಡಲಾಯಿತು. ಅಲ್ಲಿಂದ ಹು-ಧಾ ನಗರ ಸಾರಿಗೆ ಸೇವೆಗೆ ಪ್ರತ್ಯೇಕ ಘಟಕದ ಮೂಲಕ ಸೇವೆ ನೀಡಲಾರಂಭಿಸಿತು. ಸುದೀರ್ಘ‌ 24 ವರ್ಷಗಳ ಕಾಲ ಪರಿಣಾಮಕಾರಿ ಸೇವೆ ನೀಡಿದ ಹೊಸೂರಿನಲ್ಲಿರುವ 2ನೇ ನಗರ ಘಟಕವೂ ಇದೀಗ ಸ್ಥಗಿತಗೊಳ್ಳಲಿದೆ. ಘಟಕದ ಕಟ್ಟಡ ತೆರವುಗೊಳಿಸಿ ವಾಣಿಜ್ಯ ಉದ್ದೇಶ ಅಥವಾ ಖಾಸಗಿ ವಾಹನಗಳ ಪಾರ್ಕಿಂಗ್‌ ವ್ಯವಸ್ಥೆಗೆ ಬಳಸುವ ಯೋಜನೆಯಿದೆ.

ಹೆಚ್ಚಲಿದೆ ಸಾರಿಗೆ ಸೇವೆ
ವಾಯವ್ಯ ಸಾರಿಗೆ ಸಂಸ್ಥೆಯ 108 ಬಸ್‌ಗಳ 660 ಟ್ರಿಪ್‌ ಗಳಿಂದ ಸರಾಸರಿ 1.5 ನಿಮಿಷಕ್ಕೊಂದು ಬಸ್‌ ಅವಳಿ ನಗರ ಮಧ್ಯೆ ಸಾರಿಗೆಗೆ ಲಭ್ಯವಿದೆ. ಇದೀಗ ಬಿಆರ್‌ಟಿಎಸ್‌ನ 130 ಬಸ್‌ಗಳು ಇರುವುದರಿಂದ ಬಸ್‌ನ ಲಭ್ಯತೆ ಸರಾಸರಿ ಸಮಯ ಮತ್ತಷ್ಟು ಕಡಿಮೆಯಾಗಲಿದೆ. ಪ್ರತ್ಯೇಕ ಕಾರಿಡಾರ್‌ ವ್ಯವಸ್ಥೆ, ಸಮರ್ಪಕ ಟ್ರಾಫಿಕ್‌ ಸಿಗ್ನಲ್‌ ವ್ಯವಸ್ಥೆ ಇರುವುದರಿಂದ ತ್ವರಿತ ಸಾರಿಗೆ ಜನರಿಗೆ ದೊರೆಯಲಿದೆ. ರಸ್ತೆ ರೈಲು ಎಂದು ಕರೆಯುತ್ತಿದ್ದ ಆರ್ಟಿಕ್ಯುಲೇಟೆಡ್‌ ಬಸ್‌ ಗಳು ಕೂಡ ರಸ್ತೆಗಿಳಿಯಲಿವೆ.

ಹೀಗಿದೆ ಇತಿಹಾಸ
ಅವಳಿ ನಗರ ಸಾರಿಗೆ ಸೇವೆಗಾಗಿ ಅಂದಿನ ಮೈಸೂರು ರಾಜ್ಯ ಸಾರಿಗೆ ಸಂದರ್ಭದಲ್ಲಿ 120 ಬಸ್‌ಗಳಿಗೆ ಸಾರಿಗೆ ಇಲಾಖೆಯಿಂದ ಮಾರ್ಗ ಪರವಾನಗಿ ನೀಡಲಾಗಿತ್ತು. ಹುಬ್ಬಳ್ಳಿ ಹಾಗೂ ಧಾರವಾಡ ನಗರದಿಂದ ಪ್ರತ್ಯೇಕವಾಗಿ ಬಸ್‌ಗಳ ಸಂಚಾರ ಇತ್ತು. ದಿನದ 24 ಗಂಟೆಯೂ ಸಾರಿಗೆ ದೊರೆಯುತ್ತಿತ್ತು. 1983 ರಲ್ಲಿ ಬೆಂಗಳೂರಿನಲ್ಲಿ ನಡೆದ ಘಟನೆಯಿಂದ ಮಧ್ಯರಾತ್ರಿಯ ನಗರ ಸಾರಿಗೆ ರದ್ದು ಪಡಿಸಲಾಯಿತು. 1977ರಲ್ಲಿ ಅವಳಿ ನಗರದ ನಡುವೆ 90 ಪೈಸೆ ಟಿಕೆಟ್‌ ದರವಿತ್ತು. ರಸ್ತೆ ರೈಲು (ಆರ್ಟಿಕ್ಯುಲೇಟೆಡ್‌ ) ಬಸ್‌ ಗಳಿದ್ದವು. ಇತ್ತೀಚಿನ ವರ್ಷಗಳಲ್ಲಿ ಸರಕಾರದ ತಪ್ಪು ನಿರ್ಧಾರಗಳಿಂದ ನಗರ ಸಾರಿಗೆ ಸಾಕಷ್ಟು ನಷ್ಟಕ್ಕೆ ಜಾರಿದೆ ಎಂದು ನಿವೃತ್ತ ಸಿಬ್ಬಂದಿಯೊಬ್ಬರು ಇತಿಹಾಸ ಮೆಲಕು ಹಾಕುತ್ತಾರೆ.

ಹಿಂದಿನ ನಿರ್ಧಾರದಂತೆ ಅವಳಿ ನಗರದ ನಡುವೆ ಓಡಾಡುತ್ತಿರುವ ವಾಯವ್ಯ ಸಾರಿಗೆ ಬಸ್‌ಗಳನ್ನು ಬಿಆರ್‌ಟಿಎಸ್‌ ಸಾರಿಗೆ ಸೇವೆಗೆ ಪೂರಕವಾಗಿ ಫೀಡರ್‌ ಸೇವೆಗೆ ಬಳಸಿಕೊಳ್ಳಲಾಗುವುದು. ಸೇವೆಗೆ ಉತ್ತಮವಾಗಿರುವ ಬಸ್‌ ಗಳಿಗೆ ಈಗಾಗಲೇ ಜಿಪಿಎಸ್‌ ಕೂಡ ಅಳವಡಿಸಲಾಗಿದೆ.
ರಾಜೇಂದ್ರ ಚೋಳನ್‌,
ಎಂಡಿ, ವಾಕರಸಾಸಂ

ಹೇಮರಡ್ಡಿ ಸೈದಾಪುರ 

ಟಾಪ್ ನ್ಯೂಸ್

Murder-Represent

Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

NH Highway works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

NH Highway Works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

ಗೀತಾರ್ಥ ಚಿಂತನೆ 106: ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌

Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

11-kundagol’

Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ

vijayendra

Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್‌ ಕಾರ್ಡ್‌ ರದ್ದು: ವಿಜಯೇಂದ್ರ ಆರೋಪ

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Murder-Represent

Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

NH Highway works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

NH Highway Works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ

Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.