ಸರಕು ಸಾಗಣೆಯಲ್ಲಿ ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗಕ್ಕೆ ಏಳನೇ ಸ್ಥಾನ
Team Udayavani, Apr 11, 2017, 3:24 PM IST
ಹುಬ್ಬಳ್ಳಿ: ಸರಕು ಸಾಗಣೆಯಲ್ಲಿ ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗ ರಾಷ್ಟ್ರಮಟ್ಟದಲ್ಲಿ 7ನೇ ಸ್ಥಾನ ಪಡೆದುಕೊಂಡಿದೆ ಎಂದು ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಎ.ಕೆ. ಗುಪ್ತಾ ಹೇಳಿದರು. ಚಾಲುಕ್ಯ ರೈಲ್ವೆ ಇನ್ಸ್‌ಟಿಟ್ಯೂಟ್‌ನಲ್ಲಿ ಸೋಮವಾರ ನಡೆದ 62ನೇ ರೈಲ್ವೆ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
2016-17ನೇ ಸಾಲಿನಲ್ಲಿ ನೈಋತ್ಯ ರೈಲ್ವೆ 44.2 ಮಿಲಿಯನ್ ಟನ್ ಸರಕು ಸಾಗಣೆ ಮಾಡಿದ್ದು, ಇದು ಕಳೆದ ವರ್ಷದ ಸರಕು ಸಾಗಣೆಗಿಂತ ಶೇ.5ರಷ್ಟು ಹೆಚ್ಚಾಗಿದೆ. ಕಳೆದ 0 ವರ್ಷಗಳಲ್ಲಿಯೇ ಗರಿಷ್ಠ ಪ್ರಮಾಣದ ಸರಕು ಸಾಗಣೆ ನಡೆದಿದೆ ಎಂದರು. 2016-17ನೇ ಸಾಲಿನಲ್ಲಿ ನೈಋತ್ಯ ರೈಲ್ವೆಯ ರೈಲುಗಳಲ್ಲಿ 193 ಮಿಲಿಯನ್ ಜನರು ಪ್ರಯಾಣಿಸಿದ್ದು, ಇದು ಕಳೆದ ವರ್ಷದ ಪ್ರಯಾಣಿಕರ ಸಂಖ್ಯೆಗಿಂತ ಶೇ.2ರಷ್ಟು ಹೆಚ್ಚಾಗಿದೆ.
ಪ್ರಯಾಣಿಕರ ಸಂಚಾರದಿಂದಾಗಿ 1,929 ಕೋಟಿ ರೂ. ಆದಾಯ ಗಳಿಸಿದೆ ಎಂದರು. ಭಾರತೀಯ ರೈಲ್ವೆಯಲ್ಲಿ ಸಮಯ ನಿಖರತೆಗೆ ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗ (ಶೇ.97) 3ನೇ ಸ್ಥಾನ ಪಡೆದುಕೊಂಡಿದೆ. ಕಳೆದ ವಿತ್ತೀಯ ವರ್ಷದಲ್ಲಿ 12 ಜೋಡಿ ರೈಲುಗಳ ಸೇವೆ ಆರಂಭಿಸಲಾಗಿದ್ದು, ಪ್ರಯಾಣಿಕರ ದಟ್ಟಣೆ ಸಂದರ್ಭಗಳಲ್ಲಿ 3,228 ವಿಶೇಷ ರೈಲುಗಳನ್ನು ಓಡಿಸಲಾಗಿದೆ, 2,235 ಹೆಚ್ಚುವರಿ ಕೋಚ್‌ಗಳನ್ನು ಜೋಡಿಸಲಾಗಿದೆ ಎಂದರು.
2016-17ನೇ ಸಾಲಿನಲ್ಲಿ 210 ಕಿ.ಮೀ. ನೂತನ ರೈಲು ಮಾರ್ಗ ನಿರ್ಮಿಸಲಾಗಿದ್ದರೆ, 257 ಕಿ.ಮೀ. ಮಾರ್ಗವನ್ನು ಇಲೆಕ್ಟ್ರಿಫಿಕೇಶನ್ ಮಾಡಲಾಗಿದೆ ಎಂದರು. ಹುಬ್ಬಳ್ಳಿ ಹಾಗೂ ಮೈಸೂರು ವರ್ಕ್‌ಶಾಪ್ ಗಳು 2016-17ನೇ ಸಾಲಿನಲ್ಲಿ ಇಂಟಿಗ್ರೇಟೆಡ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಪ್ರಮಾಣಪತ್ರ ಪಡೆದುಕೊಂಡಿವೆ.
ನೈಋತ್ಯ ರೈಲ್ವೆ ಸ್ವತ್ಛತೆಯಲ್ಲಿ ದ್ವಿತೀಯ ಅತ್ಯುತ್ತಮ ವಲಯ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇದೇ ಅವಧಿಯಲ್ಲಿ ಆರ್‌ಆರ್‌ಬಿ ಹಾಗೂ ಆರ್‌ಸಿಬಿ ಮೂಲಕ 1907 ಜನರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದರು. ಉತ್ತಮ ಸಾಧನೆ ಮಾಡಿದ ಸಿಬ್ಬಂದಿಯನ್ನು ಇದೇ ಸಂದರ್ಭದಲ್ಲಿ ಸತ್ಕರಿಸಲಾಯಿತು.
ಹುಬ್ಬಳ್ಳಿಗೆ ಸಮಗ್ರ ವೀರಾಗ್ರಣಿ: ಹುಬ್ಬಳ್ಳಿವಿಭಾಗ ಸಮಗ್ರ ವೀರಾಗ್ರಣಿ ಪ್ರಶಸ್ತಿಗೆ ಭಾಜನಗೊಂಡಿತು. ಅಕೌಂಟ್ಸ್ ಎಫಿಸಿಯನ್ಸಿ ಶೀಲ್ಡ್-ಹುಬ್ಬಳ್ಳಿ ಡಿವಿಜನ್; ಕಮರ್ಶಿಯಲ್ ಎಫಿಸಿಯನ್ಸಿ ಶೀಲ್ಡ್-ಬೆಂಗಳೂರು ಡಿವಿಜನ್; ಎಲೆಕ್ಟ್ರಿಕಲ್ ಎಫಿಸಿಯನ್ಸಿ ಶೀಲ್ಡ್-ಬೆಂಗಳೂರು ಡಿವಿಜನ್;
ಎಂಜಿನಿಯರಿಂಗ್ ಎಫಿಸಿಯನ್ಸಿ ಶೀಲ್ಡ್-ಹುಬ್ಬಳ್ಳಿ ಡಿವಿಜನ್; ಮೆಕ್ಯಾನಿಕಲ್ ಎಫಿಸಿಯನ್ಸಿ ಶೀಲ್ಡ್-ಹುಬ್ಬಳ್ಳಿ ಡಿವಿಜನ್; ಮೆಡಿಕಲ್ ಎಫಿಸಿಯನ್ಸಿ ಶೀಲ್ಡ್-ಮೈಸೂರು ಡಿವಿಜನ್; ಆಪರೇಟಿಂಗ್ ಎಫಿಸಿಯನ್ಸಿ ಶೀಲ್ಡ್- ಹುಬ್ಬಳ್ಳಿ ಡಿವಿಜನ್. ಪರ್ಸನಲ್ ಎಫಿಸಿಯನ್ಸಿ ಶೀಲ್ಡ್-ಹುಬ್ಬಳ್ಳಿ ಡಿವಿಜನ್; ಸೆಕ್ಯುರಿಟಿ ಎಫಿಸಿಯನ್ಸಿ ಶೀಲ್ಡ್- ಹುಬ್ಬಳ್ಳಿ ಡಿವಿಜನ್;
ಎಸ್ ಆ್ಯಂಡ್ ಟಿ ಎಫಿಸಿಯನ್ಸಿ ಶೀಲ್ಡ್-ಬೆಂಗಳೂರು ಡಿವಿಜನ್; ಸ್ಟೋರ್ ಎಫಿಸಿಯನ್ಸಿ ಶೀಲ್ಡ್-ಜನರಲ್ ಸ್ಟೋರ್ ಡೀಪೊ ಹುಬ್ಬಳ್ಳಿ; ಇಂಟರ್ ಡಿವಿಜನಲ್ ಸೇಫಿr ಶೀಲ್ಡ್-ಮೈಸೂರು ಡಿವಿಜನ್; ಇಂಟರ್ ಡಿವಿಜನಲ್ ರಾಜಭಾಷಾ ರೋಲಿಂಗ್ ಶೀಲ್ಡ್-ಹುಬ್ಬಳ್ಳಿ ಡಿವಿಜನ್; ವಕ್ ìಶಾಪ್ ಎಫಿಸಿಯನ್ಸಿ ಶೀಲ್ಡ್-ಮೈಸೂರು ವಕ್ ìಶಾಪ್.
ಬೆಸ್ಟ್ ಪರ್ಫಾರ್ಮಿಂಗ್ ಕನ್‌ಸ್ಟ್ರಕ್ಷನ್ ಯುನಿಟ್-ಡೆಪ್ಯುಟಿ ಸಿಇ /ವೆಸ್ಟ್/ 11/ಬಿಎನ್‌ಸಿ ಯುನಿಟ್; ಬೆಸ್ಟ್ ಮೆಂಟೇನ್x ರನ್ನಿಂಗ್ ರೂಮ್- ಎಸ್‌ಬಿಎಚ್‌ಆರ್ ಮೈಸೂರು ಡಿವಿಜನ್; ಬೆಸ್ಟ್ ಮೆಂಟೇನ್x ಸ್ಟೇಶನ್ (ಮೇಜರ್)-ಹುಬ್ಬಳ್ಳಿ ಸ್ಟೇಶನ್ ಹುಬ್ಬಳ್ಳಿ ಡಿವಿಜನ್; ಬೆಸ್ಟ್ ಮೆಂಟೇನ್x ಸ್ಟೇಶನ್ (ಮೈನರ್)-ಕಡೂರ ಸ್ಟೇಶನ್, ಮೈಸೂರು ಡಿವಿಜನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.