25ರಿಂದ ಹುಬ್ಬಳ್ಳಿಯಿಂದ ತಿರುಪತಿಗೆ ವಿಮಾನ
Team Udayavani, Jan 13, 2019, 10:54 AM IST
ಹುಬ್ಬಳ್ಳಿ: ಸಂಜಯ ಘೋಡಾವತ್ ಗ್ರುಪ್ ಒಡೆತನದ ಸ್ಟಾರ್ ಏರ್ ಕಂಪೆನಿ ಪ್ರತಿದಿನ ಹುಬ್ಬಳ್ಳಿಯಿಂದ ತಿರುಪತಿ, ಬೆಂಗಳೂರಿಗೆ ತನ್ನ ವಿಮಾನಯಾನ ಸೇವೆಯನ್ನು ಜ. 25ರಿಂದ ಹಾಗೂ ಬೆಂಗಳೂರಿನಿಂದ ಬೆಳಗಾವಿಗೆ ಫೆ. 5ರಿಂದ ಆರಂಭಿಸಲಿದ್ದು, ಈಗಾಗಲೇ ಬುಕ್ಕಿಂಗ್ ಕೂಡ ಶುರು ಮಾಡಿದೆ.
ಸ್ಟಾರ್ ಏರ್‌ಲೈನ್ಸ್ ಕಂಪನಿಯು ಉಡಾನ್ ಯೋಜನೆಯಡಿ ಪ್ರಾದೇಶಿಕ ಸಂಪರ್ಕ ಸೇವೆ (ಆರ್‌ಸಿಎಸ್) ಅನುಸಾರ ಹುಬ್ಬಳ್ಳಿಯಿಂದ ತಿರುಪತಿ, ಬೆಂಗಳೂರಿಗೆ ಹಾಗೂ ಬೆಂಗಳೂರಿನಿಂದ ಬೆಳಗಾವಿಗೆ ವಾರದ ಎಲ್ಲಾ ದಿನಗಳಲ್ಲೂ ವಿಮಾನಯಾನ ಸೇವೆ ಒದಗಿಸಲಿದೆ. ಕಂಪನಿಯು ಈಗಾಗಲೇ ಬೆಂಗಳೂರಿನಿಂದ ಹುಬ್ಬಳ್ಳಿ ಹಾಗೂ ಹುಬ್ಬಳ್ಳಿಯಿಂದ ತಿರುಪತಿಗೆ ಪ್ರಾಯೋಗಿಕ ಹಾರಾಟವನ್ನು ಎರಡು ಬಾರಿ ಮಾಡಿದೆ ಎಂದು ತಿಳಿದುಬಂದಿದೆ.
ಸ್ಟಾರ್ ಏರ್‌ನ ಇಎಂಬಿ-145 ಏರ್‌ಕ್ರಾಫ್ಟ್ ವಿಮಾನ ಜ. 25ರಿಂದ ಪ್ರತಿದಿನ ಮಂಗಳವಾರ ಹೊರತುಪಡಿಸಿ ಇನ್ನುಳಿದ ದಿನಗಳಂದು ಬೆಂಗಳೂರು-ಹುಬ್ಬಳ್ಳಿ (ಫ್ಲೆ ೖಟ್ ಸಂಖ್ಯೆ ಓಜಿ-101) ವಿಮಾನವು ಬೆಳಗ್ಗೆ 7:35 ಗಂಟೆಗೆ ಬೆಂಗಳೂರಿನಿಂದ ಹೊರಟು 8:35 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ. ಹುಬ್ಬಳ್ಳಿ-ತಿರುಪತಿ (ಓಜಿ-103) ವಿಮಾನ ಬೆಳಗ್ಗೆ 8:55 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು 10 ಗಂಟೆಗೆ ತಿರುಪತಿ ತಲುಪಲಿದೆ. ತಿರುಪತಿ-ಹುಬ್ಬಳ್ಳಿ (ಓಜಿ-104) ವಿಮಾನ ಬೆಳಗ್ಗೆ 10:20 ಗಂಟೆಗೆ ತಿರುಪತಿಯಿಂದ ಹೊರಟು 11:25 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ. ಹುಬ್ಬಳ್ಳಿ-ಬೆಂಗಳೂರು (ಓಜಿ-102) ವಿಮಾನವು ಬೆಳಗ್ಗೆ 11:45 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು ಮಧ್ಯಾಹ್ನ 12:45 ಗಂಟೆಗೆ ಬೆಂಗಳೂರು ತಲುಪಲಿದೆ.
ಫೆ. 5ರಿಂದ ಬೆಂಗಳೂರು-ಬೆಳಗಾವಿ (ಓಜಿ-105) ವಿಮಾನವು ಮಧ್ಯಾಹ್ನ 1:25 ಗಂಟೆಗೆ ಬೆಂಗಳೂರಿನಿಂದ ಹೊರಟು 2:30 ಗಂಟೆಗೆ ಬೆಳಗಾವಿಗೆ ಆಗಮಿಸಲಿದೆ. 3 ಗಂಟೆಗೆ ಬೆಳಗಾವಿಯಿಂದ (ಓಜಿ-106) ಹೊರಟು ಸಂಜೆ 4:05 ಗಂಟೆಗೆ ಬೆಂಗಳೂರು ತಲುಪಲಿದೆ.
ಪ್ರತಿ ಸೋಮವಾರ ಬೆಂಗಳೂರು-ಹುಬ್ಬಳ್ಳಿ (ಓಜಿ-101) ವಿಮಾನ ಬೆಳಗ್ಗೆ 9:40 ಗಂಟೆಗೆ ಬೆಂಗಳೂರಿನಿಂದ ಹೊರಟು 10:40 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ. ಹುಬ್ಬಳ್ಳಿ-ತಿರುಪತಿ (ಓಜಿ-103) ವಿಮಾನವು ಬೆಳಗ್ಗೆ 11:20 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು ಮಧ್ಯಾಹ್ನ 12:25 ಗಂಟೆಗೆ ತಿರುಪತಿ ತಲುಪಲಿದೆ. ತಿರುಪತಿ-ಹುಬ್ಬಳ್ಳಿ (ಓಜಿ-104) ವಿಮಾನ ಮಧ್ಯಾಹ್ನ 12:55 ಗಂಟೆಗೆ ತಿರುಪತಿಯಿಂದ ಹೊರಟು 2:05 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ. ಹುಬ್ಬಳ್ಳಿ-ಬೆಂಗಳೂರು (ಓಜಿ-102) ವಿಮಾನ ಮಧ್ಯಾಹ್ನ 2:55 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು 3:50 ಗಂಟೆಗೆ ಬೆಂಗಳೂರು ತಲುಪಲಿದೆ.
ಫೆ. 5ರಿಂದ ಬೆಂಗಳೂರು-ಬೆಳಗಾವಿ (ಓಜಿ-105) ವಿಮಾನ ಸಂಜೆ 4:30 ಗಂಟೆಗೆ ಬೆಂಗಳೂರಿನಿಂದ ಹೊರಟು 5:35 ಗಂಟೆಗೆ ಬೆಳಗಾವಿಗೆ ಆಗಮಿಸಲಿದೆ. 6 ಗಂಟೆಗೆ ಬೆಳಗಾವಿಯಿಂದ (ಓಜಿ-106) ಹೊರಟು 7:05 ಗಂಟೆಗೆ ಬೆಂಗಳೂರು ತಲುಪಲಿದೆ.
ವಿಮಾನಯಾನಿಗಳು ಕೆಲ ಷರತ್ತು, ನಿಯಮಗಳೊಂದಿಗೆ 1599 ರೂ. ಆರಂಭಿಕ ದರದೊಂದಿಗೆ ಬೆಂಗಳೂರು, ತಿರುಪತಿ, ಹುಬ್ಬಳ್ಳಿಗೆ ಪ್ರಯಾಣಿಸಬಹುದು.
ಚೆನ್ನೈ, ಬೆಂಗಳೂರು ಸ್ಪೈಸ್ ಜೆಟ್ ಸೇವೆ ಸ್ಥಗಿತ
ಸ್ಪೈಸ್ ಜೆಟ್ ಕಂಪನಿಯವರು ಉಡಾನ್ ಯೋಜನೆಯಡಿ ಹುಬ್ಬಳ್ಳಿ-ಚೆನ್ನೈ ಮತ್ತು ಚೆನ್ನೈ-ಹುಬ್ಬಳ್ಳಿ ಹಾಗೂ ಬೆಂಗಳೂರಿನಿಂದ ಹುಬ್ಬಳ್ಳಿಗೆ ಮತ್ತು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಒದಗಿಸುತ್ತಿದ್ದ ವಿಮಾನಯಾನ ಸೇವೆಯನ್ನು ಜ. 1ರಿಂದ ಕಾರ್ಯಾಚರಣೆಯ ಕಾರಣ ನೀಡಿ ಸ್ಥಗಿತಗೊಳಿಸಿದೆ. ಈ ಮೊದಲು ಕಂಪನಿಯು ಹುಬ್ಬಳ್ಳಿಯಿಂದ ಹೈದರಾಬಾದ್‌ಗೆ ಒದಗಿಸುತ್ತಿದ್ದ ಸೇವೆಯನ್ನು ನವೆಂಬರ್‌ದಲ್ಲಿಯೇ ಸ್ಥಗಿತಗೊಳಿಸಿತ್ತು. ಈಗ ಮತ್ತೆ ಎರಡು ಪ್ರಮುಖ ಪ್ರದೇಶಗಳಿಗೆ ಒದಗಿಸುತ್ತಿದ್ದ ಸೇವೆಯನ್ನು ನಿಲ್ಲಿಸಿದೆ.
•ಶಿವಶಂಕರ ಕಂಠಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.